ಮಹಿಳೆಯರು ತೆಂಗಿನಕಾಯಿ ಒಡೆದ್ರೆ ಮಕ್ಕಳಿಗೆ ಸಮಸ್ಯೆ!

By Suvarna News  |  First Published Aug 3, 2022, 10:28 AM IST

ತೆಂಗಿನಕಾಯಿಯ ನೈವೇದ್ಯವು ಹಿಂದೂ ಧರ್ಮದಲ್ಲಿ ಸಾಮಾನ್ಯವಾಗಿದೆ ಮತ್ತು ಅದನ್ನು ನಂತರ 'ಪ್ರಸಾದ' ಎಂದು ವಿತರಿಸಲಾಗುತ್ತದೆ. ಇದಲ್ಲದೆ ವಾಹನಪೂಜೆ ಮತ್ತಿತರೆ ಶುಭ ಸಂದರ್ಭದಲ್ಲೂ ತೆಂಗಿನಕಾಯಿ ಒಡೆವ ಪದ್ಧತಿ ಇದೆ. ಆದರೆ, ಹೀಗೆ ತೆಂಗಿನಕಾಯಿ ಒಡೆಯುವುದೇಕೆ ಮತ್ತು ಒಡೆಯಲು ಮಹಿಳೆಯರಿಗೆ ಅವಕಾಶವಿಲ್ಲ. ಯಾಕೆ ಗೊತ್ತಾ?


ತೆಂಗಿನಕಾಯಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರ ಹಣ್ಣು ಎಂದು ಪರಿಗಣಿಸಲಾಗಿದೆ. ಪೂಜೆ, ಹವನ ಮತ್ತು ಯಾಗ ಇತ್ಯಾದಿಗಳಲ್ಲಿ ಇದನ್ನು ಬಳಸಲಾಗುತ್ತದೆ ಮತ್ತು ಇತರ ಅನೇಕ ಶುಭ ಕಾರ್ಯಗಳಿಗೆ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಇದಲ್ಲದೆ ತೆಂಗಿನ ನೀರನ್ನು ಅಮೃತದಂತೆ ಪರಿಗಣಿಸಲಾಗುತ್ತದೆ. ಗ್ರಂಥಗಳಲ್ಲಿ ಇದನ್ನು ಶ್ರೀ ಫಲ ಎಂದು ಕರೆಯಲಾಗುತ್ತದೆ. ಆದ್ದರಿಂದ ಇದು ಶ್ರೀ ಅಂದರೆ ಲಕ್ಷ್ಮಿಗೆ ಸಂಬಂಧಿಸಿದೆ. ತೆಂಗಿನಕಾಯಿಯನ್ನು ಮಹಿಳೆಯರು ಒಡೆಯಬಾರದು, ಒಡೆದರೆ ಸಮಸ್ಯೆಯಾಗುತ್ತದೆ ಎಂಬ ನಂಬಿಕೆ ಇದೆ. ಇದು ಯಾಕೆ, ಹೇಗೆ ಎಲ್ಲ ವಿವರಗಳನ್ನು ನೋಡೋಣ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ಹವನದ ನಂತರ ದೇವರು ಮತ್ತು ದೇವತೆಗಳನ್ನು ಮೆಚ್ಚಿಸಲು ಬಲಿಗಳನ್ನು ಅರ್ಪಿಸುವ ಪದ್ಧತಿ ಇತ್ತು. ಯಾವುದೇ ನೆಚ್ಚಿನ ವಿಷಯವನ್ನು ತ್ಯಾಗ ಮಾಡಬೇಕಿತ್ತು. ಈ ಸಂದರ್ಭದಲ್ಲಿ ತೆಂಗಿನಕಾಯಿ ಅರ್ಪಿಸಲು ತೀರ್ಮಾನಿಸಲಾಯಿತು. ತೆಂಗಿನಕಾಯಿಯೇ ಏಕೆ ಆರಿಸಿದರು ನೋಡೋಣ.

Tap to resize

Latest Videos

ಕಲಬೆರಕೆ ಇಲ್ಲದ್ದು(Pure)
ತೆಂಗಿನಕಾಯಿಯನ್ನು ಅರ್ಪಿಸಲು ಪ್ರಮುಖ ಕಾರಣವೆಂದರೆ ಅದು ಮಾನವನು ದೇವತೆಗೆ ಅರ್ಪಿಸಬಹುದಾದ ಅತ್ಯಂತ ಶುದ್ಧ ವಸ್ತುವಾಗಿದೆ. ತೆಂಗಿನಕಾಯಿಯೊಳಗಿನ ನೀರು ಮತ್ತು ಬಿಳಿ ಕಾಯಿ ಮಾತ್ರ ಭಕ್ತ ಭಗವಂತನಿಗೆ ಸಲ್ಲಿಸುವ ಕಲಬೆರಕೆಯಿಲ್ಲದ ನೈವೇದ್ಯವಾಗಿದೆ. ಅದನ್ನು ದೇವರಿಗೆ ಅರ್ಪಿಸುವವರೆಗೆ ಗಟ್ಟಿಯಾದ ಹೊರಕವಚದಿಂದ ಮುಚ್ಚಲ್ಪಟ್ಟಿರುವುದರಿಂದ ಅದು ಮಲಿನವಾಗುವುದಿಲ್ಲ.
ತೆಂಗಿನಕಾಯಿಯನ್ನು ಕಲ್ಪವೃಕ್ಷದ ಫಲವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಅನೇಕ ರೋಗಗಳಿಗೆ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ತೆಂಗಿನ ಗರಿ ಮತ್ತು ನಾರನ್ನು ಸಹ ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಅಲ್ಲದೆ, ತೆಂಗಿನಕಾಯಿ ಧಾರ್ಮಿಕ ದೃಷ್ಟಿಕೋನದಿಂದ ತುಂಬಾ ಪವಿತ್ರವಾಗಿದೆ. ಆದ್ದರಿಂದ, ಇದನ್ನು ಪೂಜೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಇದರೊಂದಿಗೆ ತೆಂಗಿನಕಾಯಿ ಇಷ್ಟಾರ್ಥ ಈಡೇರಿಕೆಗೆ ಸಹಕಾರಿ. ಇಂದಿಗೂ ಪುರುಷರು ಯಾವುದೇ ಶುಭ ಕಾರ್ಯದ ಮೊದಲು ತೆಂಗಿನಕಾಯಿ ಒಡೆಯುತ್ತಾರೆ, ಆದರೆ ಮಹಿಳೆಯರು ಹಾಗೆ ಮಾಡುವುದನ್ನು ನಿಷೇಧಿಸಲಾಗಿದೆ. 

ರಾಜಕೀಯ, ಪ್ರಕೃತಿ ವಿಕೋಪದ ಬಗ್ಗೆ ಭಯಾನಕ ಭವಿಷ್ಯ ನುಡಿದ ಕೋಡಿಮಠ ಶ್ರೀ

ಮಹಿಳೆಯರು ಒಡೆಯಬಾರದು
ವಾಸ್ತವವಾಗಿ ತೆಂಗಿನಕಾಯಿಯನ್ನು ಬೀಜದ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಮಹಿಳೆ(Woman)ಯು ಬೀಜದಿಂದ ಭ್ರೂಣವಾಗಿ ಬೆಳೆವ ಮಗುವಿಗೆ ಜನ್ಮ ನೀಡುತ್ತಾಳೆ. ತೆಂಗಿನಕಾಯಿ ಗರ್ಭಧಾರಣೆಯ ಬಯಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಮಹಿಳೆಯರು ತೆಂಗಿನಕಾಯಿ ಒಡೆದರೆ ಮಗುವಿಗೆ ತೊಂದರೆಯಾಗುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಮಹಿಳೆಯರಿಗೆ ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ.

ವಿಶ್ವಾಮಿತ್ರರ ಸೃಷ್ಟಿ
ಧಾರ್ಮಿಕ ಕಥೆಗಳ ಪ್ರಕಾರ, ಒಮ್ಮೆ ವಿಶ್ವಾಮಿತ್ರರು ಭಗವಾನ್ ಇಂದ್ರನ ಮೇಲೆ ಕೋಪಗೊಂಡು ಪ್ರತ್ಯೇಕ ಸ್ವರ್ಗವನ್ನು ಸೃಷ್ಟಿಸಿದರು. ಆದರೆ ಈ ಸೃಷ್ಟಿ ಸ್ವತಃ ವಿಶ್ವಾಮಿತ್ರರಿಗೇ ಇಷ್ಟವಾಗಲಿಲ್ಲ. ಆಗವರು ಪ್ರತ್ಯೇಕ ಭೂಮಿಯನ್ನು ಮಾಡಲು ನಿರ್ಧರಿಸಿದರು. ಆಗ ತೆಂಗಿನಕಾಯಿಯನ್ನು ಮೊದಲು ಮಾನವ ರೂಪದಲ್ಲಿ ಅವರು ರಚಿಸಿದರು. ಹಾಗಾಗಿ, ತೆಂಗಿನಕಾಯಿಯನ್ನು ಮಾನವ ರೂಪವೆಂದು ಪರಿಗಣಿಸಲಾಗುತ್ತದೆ.

ಅಹಂಕಾರವನ್ನು ಮುರಿಯುವುದು(Breaking of the ego)
ತೆಂಗಿನಕಾಯಿ ಒಡೆಯುವುದು ಅಹಂಕಾರವನ್ನು ಮುರಿಯುವುದನ್ನು ಸಂಕೇತಿಸುತ್ತದೆ. ಮೊದಲೇ ಹೇಳಿದಂತೆ ತೆಂಗಿನಕಾಯಿಯು ಮಾನವ ದೇಹವನ್ನು ಪ್ರತಿನಿಧಿಸುತ್ತದೆ ಮತ್ತು ಭಗವಂತನ ಮುಂದೆ ಅದು ಛಿದ್ರಗೊಳ್ಳುತ್ತದೆ - ಅಂದರೆ ವ್ಯಕ್ತಿಯ 'ಅಹಂ' ಅಥವಾ ಅಹಂಕಾರವನ್ನು ಮುರಿಯುವುದರ ಸಾಂಕೇತಿಕವಾಗಿ, ಸಂಪೂರ್ಣ ಶರಣಾಗತಿಯ ಸೂಚನೆಯಾಗಿ ತೆಂಗಿನಕಾಯಿ ಒಡೆಯಲಾಗುತ್ತದೆ. 

ಈ ರೀತಿ ಅಂಗಾಲಿದ್ದರೆ ಅದೃಷ್ಟವೋ ಅದೃಷ್ಟ

ಗಣೇಶನಿಗೆ ಇಷ್ಟವಾದ ತಿಂಡಿ(Favourite food)
ಯಾವುದೇ ಶುಭ ಕಾರ್ಯಕ್ರಮ ಅಥವಾ ಹೊಸ ಆರಂಭದ ಮೊದಲು ಆವಾಹನೆಗೊಳ್ಳುವ ದೇವರು ಗಣೇಶ. ತೆಂಗಿನಕಾಯಿ ಗಣೇಶನಿಗೆ ಅತ್ಯಂತ ಪ್ರಿಯವಾದ ಆಹಾರಗಳಲ್ಲಿ ಒಂದಾಗಿದೆ. ಗೃಹಪ್ರವೇಶದ ಸಮಯದಲ್ಲಿ, ಹೊಸ ವಾಹನ ಖರೀದಿಸಿದ ನಂತರ ತೆಂಗಿನಕಾಯಿ ಒಡೆಯಲು ಇದೂ ಒಂದು ಕಾರಣವಾಗಿದೆ.
 

click me!