ವಾಷಿಂಗ್ ಮಷಿನ್ ಇಡಲು, ಬಟ್ಟೆ ಒಗೆಯಲು ವಾಸ್ತು ಟಿಪ್ಸ್

By Suvarna NewsFirst Published Nov 8, 2022, 2:32 PM IST
Highlights

ನಾವು ಮಾಡುವ ಪ್ರತಿಯೊಂದು ಕೆಲಸ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಊಟ, ನಿದ್ರೆ, ಸ್ನಾನದ ಜೊತೆ ಬಟ್ಟೆ ತೊಳೆಯುವ ಸಮಯ ಕೂಡ ಮುಖ್ಯ. ನಿಯಮ ಮೀರಿದ್ರೆ ನಕಾರಾತ್ಮಕ ಶಕ್ತಿಯ ಪ್ರಭಾವಕ್ಕೆ ನಾವು ಒಳಗಾಗಬೇಕಾಗುತ್ತದೆ. 
 

ನಮ್ಮ ಧರ್ಮಗ್ರಂಥಗಳಲ್ಲಿ ಜೀವನಕ್ಕೆ ಅಗತ್ಯವಿರುವ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಅವು ಯಾವಾಗ್ಲೂ ನಮ್ಮ ಸಹಾಯಕ್ಕೆ ಬರಲಿವೆ. ಶಾಸ್ತ್ರಗಳಲ್ಲಿ ಹೇಳಿರುವ ಕೆಲ ವಿಷ್ಯಗಳನ್ನು ಜನರು ಪಾಲನೆ ಮಾಡ್ತಿದ್ದಾರೆ. ಅದ್ರಿಂದ ಲಾಭ ಕೂಡ ಪಡೆಯುತ್ತಿದ್ದಾರೆ. ಶಾಸ್ತ್ರಗಳಲ್ಲಿ ರಾತ್ರಿ ಉಗುರು ತೆಗೆಯಬಾರದು, ತಲೆ ಬಾಚಬಾರದು ಎಂದು ಹೇಳಲಾಗಿದೆ. ಅಡುಗೆ ಮನೆ ಹೇಗಿರಬೇಕು, ದೇವರ ಮನೆ ಹೇಗಿರಬೇಕು ಎಂಬುದರಿಂದ ಹಿಡಿದು ಯಾವಾಗ ಊಟ ಮಾಡ್ಬೇಕು, ಹೇಗೆ ಮಲಗಬೇಕು ಎಂಬೆಲ್ಲ ಸಂಗತಿ ಶಾಸ್ತ್ರದಲ್ಲಿದೆ. 

ಹಿಂದೂ (Hindu) ಧರ್ಮದಲ್ಲಿ ಮನುಷ್ಯನಿಗೆ ಸಂಬಂಧಿಸಿದ ಪ್ರತಿಯೊಂದು ವಿಷ್ಯವನ್ನೂ ಹೇಳಲಾಗಿದೆ ಎಂದ್ಮೇಲೆ ಬಟ್ಟೆ (Clothes) ಯಾವಾಗ ಒಗೆಯಬೇಕು ಎಂಬುದನ್ನು ಹೇಳದೆ ಇರೋಕಾಗುತ್ತಾ? ಶಾಸ್ತ್ರಗಳಲ್ಲಿ ಬಟ್ಟೆ ಒಗೆಯುವ ಬಗ್ಗೆಯೂ ಮಾಹಿತಿ ಇದೆ. ನಾವಿಂದು ಯಾವಾಗ ಬಟ್ಟೆ ತೊಳೆದ್ರೆ ಒಳ್ಳೆಯದು ಎಂಬ ಮಾಹಿತಿಯನ್ನು ನಿಮಗೆ ನೀಡ್ತೇವೆ. ಶಾಸ್ತ್ರಗಳ ಪ್ರಕಾರ, ಯಾವುದೇ ಕೆಲಸವನ್ನು ಮಾಡಲು ಶುಭ ಸಮಯ ಮತ್ತು ದಿನವನ್ನು ನಿಗದಿಪಡಿಸಲಾಗಿದೆ. ಆ ಕೆಲಸವನ್ನು ಉತ್ತಮ ರೀತಿಯಲ್ಲಿ ಮತ್ತು ಸಮಯಕ್ಕೆ ಮಾಡಿದರೆ ಅದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಬಟ್ಟೆ ವಿಷ್ಯದಲ್ಲೂ ಇದು ಸತ್ಯ. ಯೋಗ್ಯವಲ್ಲದ ದಿನ ಬಟ್ಟೆ ತೊಳೆದ್ರೆ ಅನೇಕ ಸಮಸ್ಯೆ ಎದುರಾಗುತ್ತದೆ. ಆರ್ಥಿಕ ನಷ್ಟಕ್ಕೆ ಒಳಗಾಗಬೇಕಾಗುತ್ತದೆ.  

Latest Videos

ಬಟ್ಟೆ ತೊಳೆಯಲು ಇವು ಸೂಕ್ತ ಸಮಯವಲ್ಲ :

ಗುರುವಾರ (Thursday) ಬಟ್ಟೆ ತೊಳೆಯಬೇಡಿ : ಶಾಸ್ತ್ರಗಳ ಪ್ರಕಾರ, ಗುರುವಾರ ಬಟ್ಟೆ ತೊಳೆಯಲು ಯೋಗ್ಯ ದಿನವಲ್ಲ. ಗುರುವಾರ  ಬಟ್ಟೆ ಒಗೆಯುವುದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಹಾಗೆಯೇ ಸಂತೋಷ (happiness) ಮತ್ತು ಸಮೃದ್ಧಿಯ ನಷ್ಟ ಉಂಟಾಗುತ್ತದೆ ಎಂದು ನಂಬಲಾಗಿದೆ. ಗುರುವನ್ನು ಗುರುವಾರದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಗುರು  ನಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ನೀಡುತ್ತದೆ. ಸಂತೋಷ, ಸಂಪತ್ತಿನ ಸಂಕೇತವಾಗಿದೆ. ಗುರು ಗ್ರಹಕ್ಕೆ ದೇವರ ಸ್ಥಾನಮಾನ ನೀಡಲಾಗಿದೆ. ಗುರು ಗ್ರಹ ಶಾಂತಿಯುತವಾಗಿದ್ದಾಗ ಮಾತ್ರ ನಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ. ಗುರುವಾರ ಬಟ್ಟೆ ಒಗೆಯುವುದನ್ನು ನಿಷೇಧಿಸಲು ಕಾರಣ ಏನೆಂದ್ರೆ  ಬಟ್ಟೆ ಒಗೆಯುವಂತಹ ಕೆಲಸ ಶನಿ ಗ್ರಹದೊಂದಿಗೆ ಸಂಬಂಧಿಸಿದೆ. ಈ ಕಾರಣದಿಂದ ಗುರುವಾರ ಯಾರಾದರೂ ಬಟ್ಟೆ ತೊಳೆದರೆ ಹಣ ನಷ್ಟವಾಗುವ ಸಾಧ್ಯತೆಯಿರುತ್ತದೆ ಎಂದು ನಂಬಲಾಗಿದೆ.

ನವಗ್ರಹಗಳನ್ನೇ ಬಂಧಿಸಿದ್ದ ರಾವಣ! ಆಂಜನೇಯ ಭಕ್ತರಿಗೆ ಶನಿ ಕಾಡದಿರಲು ಇಲ್ಲಿದೆ ಕಾರಣ

ರಾತ್ರಿ ಬಟ್ಟೆ ಒಗೆಯಬೇಡಿ : ಕೆಲಸದ ಒತ್ತಡದಿಂದಾಗಿ ಬೆಳಿಗ್ಗೆ ಬಟ್ಟೆ ತೊಳೆಯಲು ಅನೇಕರಿಗೆ ಆಗುವುದಿಲ್ಲ. ಹಾಗಾಗಿ ರಾತ್ರಿ ಬಟ್ಟೆ ತೊಳೆಯುತ್ತಾರೆ. ಶಾಸ್ತ್ರಗಳ ಪ್ರಕಾರ ರಾತ್ರಿ ಬಟ್ಟೆ ತೊಳೆಯುವುದು ಸೂಕ್ತವಲ್ಲ ಎನ್ನಲಾಗುತ್ತದೆ.ಹಿಂದಿನ ಕಾಲದಲ್ಲಿ ಬೆಳಗಿನ ವ್ಯವಸ್ಥೆ ಇರಲಿಲ್ಲ. ರಾತ್ರಿ ಲೈಟ್ ಇರ್ತಿರಲಿಲ್ಲ. ಕತ್ತಲೆಯಲ್ಲಿ ಬಟ್ಟೆ ಒಗೆಯಬೇಕಿತ್ತು. ಬಟ್ಟೆ ಒಗೆಯುವಾಗ ಬೆಲೆ ಬಾಳುವ ವಸ್ತುಗಳು ಕಳೆದು ಹೋಗುವ ಸಾಧ್ಯತೆಗಳಿರುತ್ತಿತ್ತು. ಕಿಸೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ಹಾಳಾಗುವ ಅಪಾಯವಿತ್ತು. ಹಾಗಾಗಿ ರಾತ್ರಿ ಬಟ್ಟೆ ಒಗೆಯುತ್ತಿರಲಿಲ್ಲ. ಈ ಪದ್ಧತಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ.  

ದಾಂಪತ್ಯ ಸುಖವೇ ಇಲ್ಲ, ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸುಧಾರಿಸುತ್ತೆ ಸಂಬಂಧ!

ರಾತ್ರಿ ಬಟ್ಟೆ ತೊಳೆಯಬಾರದು ಎನ್ನಲು ಇದೊಂದೇ ಕಾರಣವಲ್ಲ. ರಾತ್ರಿ ಬಟ್ಟೆ ತೊಳೆದ ಮೇಲೆ ಅದನ್ನು ಹೊರಗೆ ಒಣ ಹಾಕ್ತೇವೆ. ರಾತ್ರಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತವೆ. ಅದು ಬಟ್ಟೆಗೆ ಸೇರುತ್ತದೆ. ಬೆಳಿಗ್ಗೆ ನಾವು ಆ ಬಟ್ಟೆ ಧರಿಸಿದಾಗ ನೆಗೆಟಿವ್ ಎನರ್ಜಿ ನಮ್ಮ ಮೈ ಸೇರಿ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ರಾತ್ರಿ ಬಟ್ಟೆ ತೊಳೆಯುವುದ್ರಿಂದ ಅದನ್ನು ನಾವು ಬಿಸಿಲಿನಲ್ಲಿ ಒಣ ಹಾಕಲು ಸಾಧ್ಯವಾಗುವುದಿಲ್ಲ. ಯಾವಾಗ್ಲೂ ಬಿಸಿಲು ನೆಗೆಟಿವ್ ಶಕ್ತಿಯನ್ನು ಹೊಡೆದೋಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಬಟ್ಟೆಯನ್ನು ಬೆಳಿಗ್ಗೆ ವಾಶ್ ಮಾಡಿ ಬಿಸಿಲಿಗೆ ಹಾಕ್ಬೇಕು. 

click me!