Chandra Grahan 2022 Pregnancy: ಗರ್ಭಿಣಿಯರು ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಿ

By Suvarna NewsFirst Published Nov 8, 2022, 12:31 PM IST
Highlights

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಣ ಅವಧಿಯಲ್ಲಿ ನಮ್ಮ ಸುತ್ತಲಿನ ಎಲ್ಲವುಗಳ ನಕಾರಾತ್ಮಕ ಪರಿಣಾಮ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗರ್ಭಿಣಿಯರು ಈ ಸಮಯದಲ್ಲಿ ಕೆಲವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು.

ವರ್ಷದ ಕೊನೆಯ ಸೂರ್ಯಗ್ರಹಣದ ನಂತರ, ಇದೀಗ ವರ್ಷದ ಕೊನೆಯ ಚಂದ್ರಗ್ರಹಣವು ಮಂಗಳವಾರ, ನವೆಂಬರ್ 08ರಂದು ಸಂಭವಿಸಲಿದೆ. ಅಕ್ಟೋಬರ್ 25 ರಂದು ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಿತ್ತು. ಈ ವರ್ಷದ ಮೊದಲ ಚಂದ್ರಗ್ರಹಣವು 16 ಮೇ 2022ರಂದು ಸಂಭವಿಸಿತು. 08 ನವೆಂಬರ್ ಕಾರ್ತಿಕ ಮಾಸದ ಹುಣ್ಣಿಮೆಯ ದಿನಾಂಕವೂ ಆಗಿದೆ. 

ಈ ಚಂದ್ರಗ್ರಹಣವು ಭಾರತದಲ್ಲಿ ಭಾಗಶಃ ಗೋಚರಿಸತ್ತಿದ್ದು, ಹಲವು ದೇಶಗಳಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ. ಚಂದ್ರಗ್ರಹಣವು ಭಾರತ, ದಕ್ಷಿಣ ಮತ್ತು ಪೂರ್ವ ಯುರೋಪ್, ಆಸ್ಟ್ರೇಲಿಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಪೆಸಿಫಿಕ್ ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರ ಸೇರಿದಂತೆ ಏಷ್ಯಾದ ಅನೇಕ ದ್ವೀಪಗಳಲ್ಲಿ ಗೋಚರಿಸಲಿದೆ. ನವೆಂಬರ್ 8ರಂದು ಮಧ್ಯಾಹ್ನ 1.32ರಿಂದ ಸಂಜೆ 7.27ರವರೆಗೆ ಭಾರತದ ಸಮಯದ ಪ್ರಕಾರ ಚಂದ್ರಗ್ರಹಣ ಸಂಭವಿಸುತ್ತದೆ. 

Latest Videos

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರಗ್ರಹಣ ಸಂಭವಿಸಿದಾಗ, ಸೂತಕ ಅವಧಿಯು ನಿಖರವಾಗಿ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಸೂತಕ ಕಾಲದಲ್ಲಿ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ. 

ವಾರಣಾಸಿಯಲ್ಲಿ ದೇವ್ ದೀಪಾವಳಿ; ಮೋದಿ ಶೇರ್ ಮಾಡಿದ ಅದ್ಭುತ ದೃಶ್ಯಾವಳಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಣ ಅವಧಿಯು ನಮ್ಮ ಸುತ್ತಲಿನ ಎಲ್ಲವುಗಳ ಮೇಲೂ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗರ್ಭಿಣಿಯರು ಈ ಸಮಯದಲ್ಲಿ ಕೆಲವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಮೊದಲೇ ಮಹಿಳೆ ತಾಯಿಯಾಗುವ ಹಂತಕ್ಕೆ ಹೋಗುತ್ತಿದ್ದಂತೆಯೇ ತಮ್ಮ ಮಗುವಿನ ಒಳಿತಿಗಾಗಿ ಎಲ್ಲವನ್ನೂ ಮಾಡಲು ಸಿದ್ಧಳಾಗುತ್ತಾಳೆ. ಅಂಥದರಲ್ಲಿ ಗ್ರಹಣದ ಸಂದರ್ಭದಿಂದ ತನ್ನನ್ನೂ ಹಾಗೂ ತನ್ನ ಮಗುವನ್ನೂ ಜತನ ಮಾಡುವುದು ಆಕೆಗೆ ಬಹಳ ಮುಖ್ಯವಾಗುತ್ತದೆ. ಏಕೆಂದರೆ, ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿರುತ್ತವೆ. ಅವುಗಳು ಈ ಪ್ರಕೃತಿಯ ದೊಡ್ಡ ಬದಲಾವಣೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಹೇಳುವುದು ಸುಲಭವಲ್ಲ. 

ಹಾಗಾದರೆ ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಯಾವ ವಿಷಯಗಳನ್ನು ನೆನಪಿನಲ್ಲಿಡಬೇಕು ಎಂಬುದನ್ನು ತಿಳಿಯೋಣ.

ಗರ್ಭಿಣಿಯರು ಮಾಡಬಾರದ ಕೆಲಸಗಳು(don'ts during eclipse for pregnant)

  • ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರಗ್ರಹಣವು ಗರ್ಭಿಣಿಯರಿಗೆ ಅಶುಭ ಪರಿಣಾಮಗಳನ್ನು ನೀಡಲಿದೆ, ಆದ್ದರಿಂದ ಅವರು ಗ್ರಹಣ ಅವಧಿಯಲ್ಲಿ ಮನೆಯಲ್ಲಿಯೇ ಇರಲು ಸಲಹೆ ನೀಡಲಾಗುತ್ತದೆ. ಗರ್ಭಿಣಿಯರು ಗ್ರಹಣ ಕಾಲದಲ್ಲಿ ಹೊರಗೆ ಅಡ್ಡಾಡಬಾರದು. ಗ್ರಹಣವನ್ನು ಬರಿಕಣ್ಣಿನಲ್ಲಿ ನೋಡುವ ಸಾಹಸ ಮಾಡಬಾರದು.
  • ಚಂದ್ರಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯರು ತರಕಾರಿ ಕತ್ತರಿಸುವುದು, ಬಟ್ಟೆ ಹೊಲಿಯುವುದು ಮುಂತಾದ ಕೆಲಸಗಳನ್ನು ಮಾಡಬಾರದು. ಇದು ಹುಟ್ಟಲಿರುವ ಮಗುವಿಗೆ ದೈಹಿಕ ದೋಷಗಳನ್ನು ಉಂಟು ಮಾಡಬಹುದು.
  • ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮಲಗಬಾರದು.
  • ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಆಹಾರವನ್ನು ಬೇಯಿಸಬಾರದು ಮತ್ತು ತಿನ್ನಬಾರದು. ತಮ್ಮನ್ನು ತಾವು ಅಲಂಕರಿಸಿಕೊಳ್ಳಬಾರದು.

    ನವಗ್ರಹಗಳನ್ನೇ ಬಂಧಿಸಿದ್ದ ರಾವಣ! ಆಂಜನೇಯ ಭಕ್ತರಿಗೆ ಶನಿ ಕಾಡದಿರಲು ಇಲ್ಲಿದೆ ಕಾರಣ

ಗರ್ಭಿಣಿಯರು ಮಾಡಬೇಕಾದ ಕೆಲಸಗಳು(Dos for pregnant during eclipse)

  • ಗರ್ಭಿಣಿಯರ ಮೇಲೆ ಚಂದ್ರಗ್ರಹಣದ ದುಷ್ಪರಿಣಾಮವನ್ನು ತಪ್ಪಿಸಲು, ಅವರು ಹನುಮಾನ್ ಚಾಲೀಸಾ ಮತ್ತು ದುರ್ಗಾ ಸ್ತುತಿಯನ್ನು ತಮ್ಮ ನಾಲಿಗೆಗೆ ತುಳಸಿ ಎಲೆಗಳನ್ನು ಇಟ್ಟು ಪಠಿಸಬೇಕು.
  • ಚಂದ್ರಗ್ರಹಣ ಮುಗಿದ ನಂತರ ಗರ್ಭಿಣಿ ಸ್ತ್ರೀಯು ಪವಿತ್ರವಾದ ನೀರಿನಿಂದ ಸ್ನಾನವನ್ನು ಮಾಡಬೇಕು.
  • ಚಂದ್ರಗ್ರಹಣದ ಸಮಯದಲ್ಲಿ ಜಪ ಪಠಿಸುವುದು ತನ್ನ ಮತ್ತು ಹುಟ್ಟಲಿರುವ ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

    ಮಕರ, ಕುಂಭ, ಮೀನಕ್ಕೆ ತ್ರಿಗ್ರಾಹಿ ಯೋಗಬಲ, ಹೆಚ್ಚುವ ಹಣಬಲ

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
click me!