Latest Videos

ಹಣೆಗೆ ಸಿಂಧೂರ ಇಡಲು ಇವೆ ಕ್ರಮಗಳು; ಯೋಧರಿಗೆ ಹೆಬ್ಬೆರಳ ತಿಲಕ ಏಕೆ..?

By Sushma HegdeFirst Published Jul 8, 2023, 11:09 AM IST
Highlights

ಸನಾತನ ಧರ್ಮದಲ್ಲಿ ಹಣೆಗೆ ತಿಲಕ ಹಚ್ಚುವುದಕ್ಕೆ ಬಹಳ ಮಹತ್ವವಿದೆ. ಕುಂಕುಮವು ದೇವರೊಂದಿಗಿನ ಸಂಬಂಧವೆಂದು ನಂಬಲಾಗಿದೆ. ಹಾಗೂ ಕೆಲವರು ಅದನ್ನು ಮನಸ್ಸು ಮತ್ತು ಮೆದುಳಿಗೆ ಸಂಬಂಧಿಸಿದೆ ಎಂದು ಹೇಳುತ್ತಾರೆ. ಶಿವನ ಭಕ್ತರು ಭಸ್ಮವನ್ನು, ವಿಷ್ಣು ಭಕ್ತರು ಸಿಂಧೂರವನ್ನು ಮತ್ತು ದುರ್ಗೆಯ ಭಕ್ತರು ಕುಂಕುಮವನ್ನು ಅನ್ವಯಿಸಿಕೊಳ್ಳುತ್ತಾರೆ. ತಿಲಕ ಹಚ್ಚಲು ಕೂಡ ವಿಧಾನಗಳಿವೆ.

ಸನಾತನ ಧರ್ಮದಲ್ಲಿ ಹಣೆಗೆ ತಿಲಕ ಹಚ್ಚುವುದಕ್ಕೆ ಬಹಳ ಮಹತ್ವವಿದೆ. ಕುಂಕುಮವು ದೇವರೊಂದಿಗಿನ ಸಂಬಂಧವೆಂದು ನಂಬಲಾಗಿದೆ. ಹಾಗೂ ಕೆಲವರು ಅದನ್ನು ಮನಸ್ಸು ಮತ್ತು ಮೆದುಳಿಗೆ ಸಂಬಂಧಿಸಿದೆ ಎಂದು ಹೇಳುತ್ತಾರೆ. ಶಿವನ ಭಕ್ತರು ಭಸ್ಮವನ್ನು, ವಿಷ್ಣು ಭಕ್ತರು ಸಿಂಧೂರವನ್ನು ಮತ್ತು ದುರ್ಗೆಯ ಭಕ್ತರು ಕುಂಕುಮವನ್ನು ಅನ್ವಯಿಸಿಕೊಳ್ಳುತ್ತಾರೆ. ತಿಲಕ ಹಚ್ಚಲು ಕೂಡ ವಿಧಾನಗಳಿವೆ. ಈ ಕುರಿತು ಇಲ್ಲಿದೆ ಮಾಹಿತಿ.

ತಿಲಕ ಇಟ್ಟುಕೊಳ್ಳುವುದು ಅಥವಾ ಇತರರಿಗೆ ಇಡುವುದರಿಂದ ಅದೃಷ್ಟ ಮತ್ತು ಸಂತೋಷ ಸಿಗಲಿದೆ ಎಂಬ ನಂಬಿಕೆ ನಮ್ಮಲ್ಲಿದೆ. ವಿಭೂತಿ, ಗಂಧ, ಸಿಂಧೂರ, ಕುಂಕುಮವನ್ನು ತಿಲಕದ ರೂಪದಲ್ಲಿ ಅನ್ವಯಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ತಿಲಕವನ್ನು ಉಂಗುರ (ring) ದ ಬೆರಳಿನಿಂದ ಹಚ್ಚಲಾಗುತ್ತದೆ. ಆದರೆ ತಿಲಕವನ್ನು ವಿವಿಧ ಬೆರಳುಗಳಿಂದ ಹಚ್ಚಲಾಗುತ್ತದೆ ಎಂಬ ವಿಚಾರ ತುಂಬಾ ಜನರಿಗೆ ತಿಳಿದಿರಲ್ಲ. 

ಯೋಧರು ಯುದ್ಧಕ್ಕೆ ಹೋಗುವಾಗ ಹೆಬ್ಬೆರಳುಗಳಿಂದ ತಿಲಕವನ್ನು ಇಡಲಾಗುತ್ತದೆ. ಆದರೆ ಮಕ್ಕಳು ಮತ್ತು ಇತರರು ತಮ್ಮ ಉಂಗುರದ ಬೆರಳು (finger) ಗಳಿಂದ ತಿಲಕವನ್ನು ಇಟ್ಟುಕೊಳ್ಳುತ್ತಾರೆ. ಜನರು ವಿವಿಧ ಸಂದರ್ಭಗಳಲ್ಲಿ ಬೇರೆ-ಬೇರೆ ಬೆರಳುಗಳಿಂದ ತಿಲಕ ಹಚ್ಚುತ್ತಾರೆ. ಈ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ.

Daily Horoscope: ಇಂದು ಈ ರಾಶಿಯವರಿಗೆ ಮಿತ್ರನಿಂದಲೇ ಅಪಾಯ; ನಂಬುವ ಮುನ್ನ ಎಚ್ಚರ..!

 

ತಿಲಕ ಹಚ್ಚಲು ಯಾವ ಬೆರಳು ಸೂಕ್ತ?

ಹಣೆಯ ಮೇಲೆ ತಿಲಕವನ್ನು ಹಚ್ಚಲು ಮುಖ್ಯವಾಗಿ ಉಂಗುರದ ಬೆರಳನ್ನು ಬಳಸಲಾಗುತ್ತದೆ. ವಾಸ್ತವವಾಗಿ ಇದಕ್ಕೆ ಮೂರು ಕಾರಣಗಳಿವೆ. ಮೊದಲನೆಯದಾಗಿ ಉಂಗುರದ ಬೆರಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಎರಡನೆಯದಾಗಿ ಈ ಬೆರಳಿನಲ್ಲಿ ಶುಕ್ರನು ವಾಸಿಸುತ್ತಾನೆ ಎಂದು ನಂಬಲಾಗಿದೆ. ಇದು ಯಶಸ್ಸು ಮತ್ತು ದೀರ್ಘಕಾಲೀನ ಸಾಧನೆಗಳನ್ನು ಸೂಚಿಸುತ್ತದೆ. 

ಉಂಗುರದ ಬೆರಳನ್ನು ಸನ್ ಮೌಂಟೇನ್ ಫಿಂಗರ್ ಎಂದೂ ಕರೆಯುತ್ತಾರೆ. ಆದ್ದರಿಂದ ಉಂಗುರದ ಬೆರಳಿನಿಂದ ತಿಲಕವನ್ನು ಹಚ್ಚುವುದರಿಂದ ವ್ಯಕ್ತಿಯು ಸೂರ್ಯನಂತೆ ಪ್ರಕಾಶಮಾನವಾಗಿರಲು, ನಿರಂತರ ಯಶಸ್ಸು (success) ಮತ್ತು ಅಪ್ರತಿಮ ಮಾನಸಿಕ ಶಕ್ತಿಯನ್ನು ಸಾಧಿಸಲು ವರದಾನವಾಗಿದೆ.

ಇನ್ನು ಮಧ್ಯದ ಬೆರಳನ್ನು ಬಳಸಿ ತಿಲಕವನ್ನು ಇಟ್ಟುಕೊಂಡರೆ ಜೀವನದಲ್ಲಿ ಅದೃಷ್ಟ ಮತ್ತು ಸಮೃದ್ಧಿಯು ಸಿಗಲಿದೆ ಎಂಬ ನಂಬಿಕೆ ಇದೆ. ಹೆಬ್ಬೆರಳನ್ನು ಬಳಸಿ ತಿಲಕವನ್ನು ಇಟ್ಟುಕೊಂಡರೆ ವ್ಯಕ್ತಿಗೆ ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ತೋರು ಬೆರಳು ಮೋಕ್ಷದ ಸಂಕೇತ ಆದ್ದರಿಂದ ಈ ಬೆರಳಿನಲ್ಲಿ ತಿಲಕವನ್ನು ಇಟ್ಟುಕೊಳ್ಳಬಾರದು. ಹಾಗೆಯೇ ಮೃತರ ಚಿತ್ರದ ಮೇಲೆ ತಿಲಕವನ್ನು ಹಚ್ಚುವಾಗ ಕಿರುಬೆರಳ (little finger) ನ್ನು ಬಳಸಬೇಕಾಗುತ್ತದೆ.
 
ತಿಲಕವನ್ನು ಅನ್ವಯಿಸುವ ನಿಯಮ

ತಿಲಕವನ್ನು ಅನ್ವಯಿಸುವಾಗ ಪೂರ್ವ ಅಥವಾ ಉತ್ತರ ದಿಕ್ಕಿ (North direction) ಗೆ ಮುಖ ಮಾಡುವುದು ಅವಶ್ಯಕ. ಅಲ್ಲದೆ ತಿಲಕವನ್ನು ಅನ್ವಯಿಸುವ ವ್ಯಕ್ತಿಯು ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ಸೃಷ್ಟಿಸಲು ತನ್ನ ತಲೆಯ ಮೇಲೆ ತನ್ನ ಕೈಗಳನ್ನು ಇಟ್ಟುಕೊಳ್ಳಬೇಕು. ಇದಲ್ಲದೆ ಒಬ್ಬ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವನು ಯಾವಾಗ ಬೇಕಾದರೂ ಹಣೆ (forehead) ಯ ಮೇಲೆ ತಿಲಕವನ್ನು ಅನ್ವಯಿಸಬಹುದು.

ಶ್ರಾವಣದಲ್ಲಿ ರುದ್ರಾಭಿಷೇಕ ಮಾಡಿ; ಗ್ರಹದೋಷಗಳಿಂದ ಮುಕ್ತಿ ಪಡೆಯಿರಿ

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!