ಯಾವ ರಾಶಿಗಿಂದು ಶುಭ ? ಯಾವ ರಾಶಿಗೆ ಅಶುಭ?

By Chirag Daruwalla  |  First Published Jul 5, 2024, 5:00 AM IST

ಇಂದು 5ನೇ ಜುಲೈ 2024 ಶುಕ್ರವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 


ಮೇಷ(Aries):ಇಂದು ರಾಜತಾಂತ್ರಿಕ ಸಂಬಂಧವೊಂದರಿಂದ ನಿಮಗೆ ಲಾಭವಾಗುವ ಸಾಧ್ಯತೆ. ನಿಮ್ಮ ಪ್ರತಿಭೆ ಹಾಗೂ ಚಾತುರ್ಯದಿಂದ ಕೆಲವೊಂದು ಅಚ್ಚರಿಯ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ಅಪರಿಚಿತ ವ್ಯಕ್ತಿಗೆ ನಿಮ್ಮ ಕುರಿತಾದ ಯಾವುದೇ ಮಾಹಿತಿಗಳನ್ನು ನೀಡಬೇಡಿ. ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಿ.ಯಾವುದೇ ವ್ಯವಹಾರದಲ್ಲಿ ಹೂಡಿಕೆ ಮಾಡುವ ಮುನ್ನ ಯೋಚಿಸಿ.ನೀವು ಮನೆ ಹಾಗೂ ವೃತ್ತಿ ಎರಡೂ ಕಡೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ಸಂಗಾತಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರ ವಹಿಸಿ. 

ವೃಷಭ(Taurus):ದೊಡ್ಡ ಮೊತ್ತದ ಧನ ಲಾಭ ಸಾಧ್ಯತೆ.ದಿನದ ಮೊದಲ ಭಾಗದಲ್ಲಿ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಮಧ್ಯಾಹ್ನದ ವೇಳೆಗೆ ಅಹಿತಕರ ಸುದ್ದಿ ಸಿಗುವ ಸಾಧ್ಯತೆಯಿದ್ದು, ಮನೆಯಲ್ಲಿ ಅಶಾಂತಿ ನೆಲೆಸಬಹುದು. ಕೆಲಸಗಳನ್ನು ಎಚ್ಚರದಿಂದ ಮಾಡಿ. ಸಣ್ಣ ನಿರ್ಲಕ್ಷ್ಯವೂ ತೊಂದರೆಗೆ ನಾಂದಿಯಾಗಬಹುದು. ಸಾಲ ಪಡೆಯಬೇಡಿ. ನಿಮ್ಮ ಆದಾಯದ ಮೂಲ ಹೆಚ್ಚಾಗಲಿದೆ. ಪತಿ-ಪತ್ನಿ ಸಂಬಂಧ ಮಧುರವಾಗಿರಲಿದೆ. ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

Tap to resize

Latest Videos

undefined

ಮಿಥುನ(Gemini):ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಲು ಹೆಚ್ಚಿನ ಶ್ರಮ ಹಾಕಿದ್ರೆ ಯಶಸ್ಸು ಸಿಗಲಿದೆ.ಇಂದು ನಿಮಗಾಗಿ ಒಂದಿಷ್ಟು ಸಮಯ ಮೀಸಲಿಡಿ.ಇದ್ರಿಂದ ನಿಮ್ಮೊಳಗೆ ಹೊಸ ಚೈತನ್ಯ ಹಾಗೂ ಉತ್ಸಾಹ ಮೂಡುತ್ತದೆ. ಹಳೆಯ ಘಟನೆಗಳು ಮತ್ತೊಮ್ಮೆ ಒತ್ತಡ ಸೃಷ್ಟಿಸುವ ಸಾಧ್ಯತೆ. ಕೋಪ ಹಾಗೂ ಮಾತು ಎರಡನ್ನೂ ನಿಯಂತ್ರಿಸಿ. ಯಂತ್ರ, ಕೈಗಾರಿಕೆ ಇತ್ಯಾದಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಯಶಸ್ಸು ಸಿಗುವ ಸಾಧ್ಯತೆ.

ಕಟಕ(Cancer):ಗುರಿ ಮುಟ್ಟಲು ಕಠಿಣ ಪರಿಶ್ರಮ ಅಗತ್ಯ. ಇಂದು ಕೂಡ ಉತ್ಸಾಹ ನಿಮಗೆ ಸಾಥ್ ನೀಡಲಿದೆ. ನಿಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸಕಾಲ. ನಕಾರಾತ್ಮಕ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಂದ ದೂರವಿರಿ. ಇನ್ನೊಬ್ಬರ ವಿಷಯದಲ್ಲಿ ತಲೆತೂರಿಸಬೇಡಿ. ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಹಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ. ಕಲಾ ರಂಗದಲ್ಲಿ ತೊಡಗಿರುವವರಿಗೆ ಯಶಸ್ಸು.

ಸಿಂಹ(Leo):ಇಂದಿನ ಬಹುತೇಕ ಸಮಯವನ್ನು ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುತ್ತೀರಿ. ನಿಮ್ಮ ಕಾರ್ಯಕ್ಷಮತೆ ಇನ್ನಷ್ಟು ಬಲಗೊಳ್ಳಲಿದೆ. ಮಕ್ಕಳ ವೃತ್ತಿಜೀವನಕ್ಕೆ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕೆ ಪ್ರಮುಖ ವ್ಯಕ್ತಿಯೊಬ್ಬರಿಂದ ನೆರವು. ಆಸ್ತಿ ವಿವಾದಗಳು ಬಗೆಹರಿಯುತ್ತವೆ. ತಾಳ್ಮೆ ಹಾಗೂ ಸೌಮ್ಯತೆ ಇರಲಿ. ಕೋಪ ಕೆಲಸ ಕೆಡಿಸುವ ಸಾಧ್ಯತೆಯಿದೆ. ಸಂಗಾತಿಗೆ ಭಾವನಾತ್ಮಕ ಬೆಂಬಲ ನೀಡಿ. 
ಆರೋಗ್ಯ ಉತ್ತಮ.

ಕನ್ಯಾ(Virgo):ನಿಮ್ಮ ಸಕಾರಾತ್ಮಕ ನಿಲುವು ಮನೆ ಹಾಗೂ ವೃತ್ತಿ ಎರಡನ್ನೂ ಸಮನಾಗಿ ನಿಭಾಯಿಸಲು ನೆರವು ನೀಡಲಿದೆ. ಆಸ್ತಿ ವರ್ಗಾಯಿಸುವ ಯೋಜನೆಯಿದ್ರೆ ತಕ್ಷಣ ಪ್ರಾರಂಭಿಸಿ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಯೋಚನೆ ನಡೆಸುತ್ತೀರಿ. ಸಮಯಕ್ಕೆ ಸರಿಯಾಗಿ ಕಾರ್ಯ ಪೂರ್ಣಗೊಳಿಸಿ. ಇನ್ನೊಬ್ಬರ ವಿಚಾರದಲ್ಲಿ ತಲೆಹಾಕೋದ್ರಿಂದ ಮಾನಹಾನಿ ಸಾಧ್ಯತೆ. ಉದ್ಯಮದ ಬೆಳವಣಿಗೆಗೆ ಹೊಸ ಯೋಜನೆಯ ಅಗತ್ಯವಿದೆ. ಪತಿ ಹಾಗೂ ಪತ್ನಿ ನಡುವಿನ ವೈಮನಸ್ಸು ದೂರ. ಸ್ವಲ್ಪ ಮಟ್ಟಿನ ಅನಾರೋಗ್ಯ ಕಿರಿಕಿರಿಗೆ ಕಾರಣವಾಗಬಹುದು. 

ತುಲಾ(Libra):ಉದ್ಯಮಕ್ಕೆ ಸಂಬಂಧಿಸಿದ ಪ್ರಯಾಣದಿಂದ ಆರ್ಥಿಕ ಲಾಭ. ಕೆಲಸಗಳನ್ನು ಪೂರ್ಣ ಶ್ರಮ ಹಾಕಿ ಮಾಡುತ್ತೀರಿ. ಕುಟುಂಬ ವಲಯದಲ್ಲಿ ಸಕಾರಾತ್ಮಕ ವಾತಾವರಣ. ವಿದ್ಯಾರ್ಥಿಗಳು  ಮೋಜು-ಮಸ್ತಿಯಲ್ಲಿ ಸಮಯ ವ್ಯರ್ಥ ಮಾಡಬೇಡಿ. ಮನೆಯ ಹಿರಿಯರ ಸಲಹೆಯನ್ನು ನಿರ್ಲಕ್ಷ್ಯಿಸಬೇಡಿ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕ(Scorpio):ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಡಿ. ಯಾವುದೇ ಸಮಸ್ಯೆಯಿದ್ರೂ ಇಂದು ಬಗೆಹರಿಯುತ್ತದೆ. ಮನೆಗೆ ಅಗತ್ಯವಾದ ವಸ್ತುಗಳ ಖರೀದಿಗೆ ಕುಟುಂಬ ಸದಸ್ಯರ ಜೊತೆಗೆ ಶಾಪಿಂಗ್ ನಡೆಸುತ್ತೀರಿ.  ಸಮೀಪದ ಸಂಬಂಧಿಯೊಬ್ಬರ ಜೊತೆಗಿನ ಭಿನ್ನಾಭಿಪ್ರಾಯ ಪರಿಹಾರವಾಗುತ್ತದೆ. ಅನಗತ್ಯ ಪ್ರಯಾಣ ಕಾರ್ಯಕ್ರಮ ಹಾಕಿಕೊಳ್ಳಬೇಡಿ. ಜನರೊಂದಿಗೆ ವ್ಯವಹರಿಸುವಾಗ ಎಚ್ಚರ. ಭಿನ್ನಾಭಿಪ್ರಾಯ ಸಂಬಂಧ ಕೆಡಿಸಬಹುದು. ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ನೆರವು ನೀಡಿ. ಅಲರ್ಜಿ ಹಾಗೂ ರಕ್ತ ಸಂಬಂಧಿ ಕಾಯಿಲೆಗಳು ಕಾಡುವ ಸಾಧ್ಯತೆ.

ಧನುಸ್ಸು(Sagittarius):ನಿಮ್ಮ ಸಕಾರಾತ್ಮಕ ಆಲೋಚನೆ ನಿಮಗೆ ಯಶಸ್ಸು ದೊರಕಿಸಿ ಕೊಡಲಿದೆ. ಧಾರ್ಮಿಕ ಹಾಗೂ ಆಧ್ಯಾತ್ಮ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರುತ್ತೀರಿ. ಕೆಲವು ವಿಶೇಷ ವ್ಯಕ್ತಿಗಳ ಸಂಪರ್ಕದಿಂದ ನಿಮ್ಮ ಆಲೋಚನೆಯಲ್ಲಿ ಬದಲಾವಣೆ ಸಾಧ್ಯತೆ. ಹಣ ಕಳೆದು ಹೋಗಿ ಆತಂಕ. ಜನದಟ್ಟಣೆಯಿರುವ ಸ್ಥಳಗಳಿಗೆ ಹೋಗಬೇಡಿ. ಹತ್ತಿರದ ವ್ಯಕ್ತಿಗಳ ಟೀಕೆಗಳಿಂದ ಮನಸ್ಸಿಗೆ ಬೇಸರ.

ಮಕರ(Capricorn):ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳಲು ಇಂದು ಹೆಚ್ಚಿನ ಶ್ರಮ ಅಗತ್ಯ. ಆತ್ಮೀಯ ಸ್ನೇಹಿತ ಅಥವಾ ಸಮೀಪದ ಬಂಧುಗಳ ದಿಢೀರ್ ಭೇಟಿಯಿಂದ ಒತ್ತಡದ ವಾತಾವರಣ ಸೃಷ್ಟಿ. ಕೋಪದ ಮೇಲೆ ಹಿಡಿತವಿರಲಿ. ಉದ್ಯೋಗ ಹಾಗೂ ವೃತ್ತಿಗೆ ಸಂಬಂಧಿಸಿದ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಿ.  ಕುಟುಂಬದಲ್ಲಿ ಹಿತಕರ ವಾತಾವರಣ. ಹೊಟ್ಟೆ ಸಂಬಂಧಿ ಸಮಸ್ಯೆ ದೂರ.

ಕುಂಭ(Aquarius):ಸಮರ್ಪಕ ಸಹಭಾಗಿತ್ವದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ. ಅದರಲ್ಲಿ ಯಶಸ್ಸು ಕೂಡ ಸಿಗುತ್ತದೆ. ನಿಮ್ಮ ಸಾಮಾಜಿಕ ಕಾರ್ಯಗಳಿಗೆ ಮುನ್ನಣೆ ಸಿಗಲಿದೆ. ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ. ಉದ್ಯಮ ವಲಯದಲ್ಲಿ ಹಣದ ವ್ಯವಹಾರದಲ್ಲಿ ಹೆಚ್ಚಿನ ಎಚ್ಚರ ಅಗತ್ಯ. ಮನೆಯಲ್ಲಿ ಸಂತಸದ ವಾತಾವರಣ.

ಮೀನ(Pisces):ಇಂದು ಪರಿಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆ. ಸೂಕ್ತವಾದ ಅವಕಾಶ ಸಿಗಲಿದೆ. ನಿಮ್ಮ ಎಲ್ಲ ಕೆಲಸ-ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಿದ್ರೆ ಉತ್ತಮ ಫಲಿತಾಂಶ ಸಿಗಲಿದೆ. ಮಕ್ಕಳ ವಿಚಾರದಲ್ಲಿ ಶುಭ ಸುದ್ದಿ ಸಿಕ್ಕಿ ಮನಸ್ಸಿಗೆ ನೆಮ್ಮದಿ. ನಿರ್ಲಕ್ಷ್ಯ ಹಾಗೂ ಉದಾಸೀನದಿಂದ ಪ್ರಮುಖ ಕೆಲಸಗಳು ಸ್ಥಗಿತಗೊಳ್ಳುವ ಸಾಧ್ಯತೆ. ಸಹೋದರರ ಜೊತೆ ಉತ್ತಮ ಸಂಬಂಧವಿಟ್ಟುಕೊಳ್ಳಿ. ವೈವಾಹಿಕ ಸಂಬಂಧ ಉತ್ತಮ. 

click me!