ಸತ್ತ ಮೇಲಾದ್ರೂ ಸುಖ ಸಿಗ್ಬಹುದು ಎಂದು ಕಾಮನ್ ಆಗಿ ಹೇಳುವ ಮಾತು ಗರುಡ ಪುರಾಣದ ಪ್ರಕಾರ ಸುಳ್ಳು. ಯಾಕೆಂದ್ರೆ ನೀವಿಲ್ಲಿ ಮಾಡಿದ ಎಲ್ಲ ಪಾಪಕ್ಕೆ ಅಲ್ಲಿ ಮತ್ತಷ್ಟು ಕಠಿಣ ಶಿಕ್ಷಿ ಸಿಗುತ್ತೆ. ಸತ್ತ ಮೇಲೆ ಆತ್ಮ ಏನಾಗುತ್ತೆ ಎನ್ನುವ ಪ್ರಶ್ನೆಗೆ ಗರುಡ ಪುರಾಣದಲ್ಲಿ ಉತ್ತರವಿದೆ.
ಹುಟ್ಟಿದ ಮೇಲೆ ಎಲ್ಲ ಪ್ರಾಣಿಗಳು ಸಾಯ್ಲೇಬೇಕು. ಸತ್ತ ಮೇಲೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯುತ್ತದೆ. ನಂತ್ರ ಹನ್ನೆರಡು ದಿನಗಳ ಕಾಲ ಆತ್ಮಕ್ಕೆ ಶಾಂತಿ ಸಿಗಲೆನ್ನುವ ಕಾರಣಕ್ಕೆ ಕೆಲ ಕಾರ್ಯಗಳನ್ನು ಕುಟುಂಬಸ್ಥರು ಮಾಡ್ತಾರೆ. ವರ್ಷಕ್ಕೊಮ್ಮೆ ಅವರನ್ನು ನೆನೆದು ಶ್ರಾದ್ಧ ಮಾಡುವವರಿದ್ದಾರೆ. ಇದೆಲ್ಲ ಮಾಡಿದ್ರೆ ಸತ್ತ ಆತ್ಮಕ್ಕೆ ಶಾಂತಿ ಸಿಗುತ್ತೆ, ಪಿತೃ ದೋಷ ಕುಟುಂಬಸ್ಥರನ್ನು ಕಾಡೋದಿಲ್ಲ ಎಂಬುದು ನಂಬಿಕೆ. ಇಷ್ಟೆಲ್ಲರ ಮಧ್ಯೆ ಮನುಷ್ಯ ಸತ್ತ ಮೇಲೆ ಎಲ್ಲಿಗೆ ಹೋಗ್ತಾನೆ, ಏನಾಗ್ತಾನೆ, ಆತ್ಮ ಅನ್ನೋದು ಇದ್ಯಾ, ಮತ್ತೊಂದು ಜನ್ಮವೆತ್ತಿ ಮತ್ತೆ ಬರ್ತಾನಾ ಎಂಬೆಲ್ಲ ಪ್ರಶ್ನೆಗೆ ನಮ್ಮಲ್ಲಿ ಸರಿಯಾದ ಉತ್ತರ ಇಲ್ಲ. ಆದ್ರೆ ಗರುಡ ಪುರಾಣದಲ್ಲಿ ಇದ್ರ ಬಗ್ಗೆ ಅನೇಕ ಆಸಕ್ತಿಕರ ವಿಷ್ಯವನ್ನು ಹೇಳಲಾಗಿದೆ. ಒಬ್ಬ ವ್ಯಕ್ತಿ ಸಾವನ್ನಪ್ಪಿದಾಗ ಗರುಡ ಪುರಾಣವನ್ನು ಓದುವ ಪದ್ಧತಿ ನಮ್ಮಲ್ಲಿದೆ. ಅದ್ರಲ್ಲಿರುವ ಅನೇಕ ವಿಷ್ಯಗಳು ಆಸಕ್ತಿಕರವಾಗಿದೆ. ಗರುಡ ಪುರಾಣದಲ್ಲಿ ಸತ್ತವರು 24 ಗಂಟೆ ನಂತ್ರ ಮತ್ತೆ ಬರ್ತಾರೆ ಎನ್ನಲಾಗಿದೆ. ಸತ್ತ ನಂತ್ರದ ಪಯಣದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಸಾವು (Death) ಹತ್ತಿರ ಬರುವಾಗ ಏನಾಗುತ್ತೆ? : ಗರುಡ ಪುರಾಣ (Garuda Purana) ದಲ್ಲಿ ಒಬ್ಬ ವ್ಯಕ್ತಿ ಸಾವಿಗೆ ಹತ್ತಿರವಾಗ್ತಿರುವ ಸಮಯದಲ್ಲಿ ಏನೆಲ್ಲ ಅನುಭವಿಸ್ತಾನೆ ಎಂಬುದನ್ನು ಹೇಳಲಾಗಿದೆ. ಅದ್ರ ಪ್ರಕಾರ, ಸಾವಿನ ಅಂಚಿನಲ್ಲಿ ನಿಂತಿರುವ ವ್ಯಕ್ತಿಯ ಗಂಟಲು ಒಣಗಲು ಪ್ರಾರಂಭವಾಗುತ್ತದೆ. ಚರ್ಮ ತೇವಾಂಶ ಕಳೆದುಕೊಳ್ಳುತ್ತದೆ. ದೇಹ ಹಗುರವಾದ ಭಾವನೆಗೆ ಒಳಗಾಗ್ತಾನೆ. ಕಣ್ಣುಗಳು ಶಾಂತಿಯ ಹುಡುಕಾಟದಲ್ಲಿ ಮುಚ್ಚಲು ಶುರುವಾಗುತ್ತವೆ. ಸಾವಿಗೆ ಹತ್ತಿರ ನಿಂತಿರುವ ವ್ಯಕ್ತಿಗೆ ಈ ಪ್ರಪಂಚದ ಪರಿವೆ ಇರೋದಿಲ್ಲ. ಬೇರೆಯವರ ಮಾತು ಕೇಳೋದಿಲ್ಲ. ಏನೇನೋ ಹೇಳಲು ಆತ ಬಯಸ್ತಾನೆ. ಆದ್ರೆ ಆತನ ಬಾಯಿಂದ ಮಾತು ಹೊರಗೆ ಬರೋದಿಲ್ಲ. ವ್ಯಕ್ತಿ ಮುಂದಿರುವ ಯಮರಾಜ ಆತನಿಗೆ ಮಾತ್ರ ಕಾಣ್ತಿರುತ್ತಾನೆ. ಯಮರಾಜ ಆ ವ್ಯಕ್ತಿಯ ದೇಹ ಬಿಟ್ಟು, ಆತ್ಮವನ್ನು ಮಾತ್ರ ತನ್ನ ಜೊತೆ ಯಮಲೋಕಕ್ಕೆ ಕರೆದೊಯ್ಯುತ್ತಾನೆ ಎನ್ನುತ್ತದೆ ಗರುಡ ಪುರಾಣ.
ಜುಲೈ 7 ರಿಂದ ತುಲಾ ರಾಶಿಯ ಅಧಿಪತಿಯಿಂದ ಈ 5 ರಾಶಿಯವರಿಗೆ ಸಮಸ್ಯೆಗಳು ಹೆಚ್ಚಾಗಲಿದ್ದು, ಧನ ನಷ್ಟ
ಸತ್ತ ಮೇಲೆ 24 ಗಂಟೆ ಭೂಮಿ ಮೇಲಿರುತ್ತೆ ಆತ್ಮ (Soul) : ದೇಹದಿಂದ ಹೊರಬಿದ್ದ ಆತ್ಮ ಯಮರಾಜನ ಜೊತೆ ಯಮಲೋಕಕ್ಕೆ ಹೋದ್ರೂ ಮತ್ತೆ ವಾಪಸ್ ಬರುತ್ತದೆ. ಯಮರಾಜ ಆತ್ಮದ ಜೊತೆ ಮತ್ತೆ ಭೂಲೋಕಕ್ಕೆ ಬಂದು, ಸತ್ತ ವ್ಯಕ್ತಿಯ ಪಾಪ, ಪುಣ್ಯಗಳನ್ನು ಲೆಕ್ಕ ಹಾಕ್ತಾನೆ. ವ್ಯಕ್ತಿಯ ಆತ್ಮವು 24 ಗಂಟೆಗಳ ಕಾಲ ಭೂಮಿಯ ಮೇಲೆ ಅಲೆದಾಡುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
ಅಕ್ಟೋಬರ್ 3 ರವರೆಗೆ 5 ರಾಶಿಗೆ ರಾಜಯೋಗ ಶ್ರೀಮಂತಿಕೆ ಅದೃಷ್ಟ
ವಾಪಸ್ ಹೋಗುವ ಮಾರ್ಗ ಕಠಿಣ : ಮೃತ ವ್ಯಕ್ತಿ ಮನೆಯಲ್ಲಿ ನಡೆಯುವ 13 ದಿನಗಳ ಕಾರ್ಯದಲ್ಲಿ ಮೃತ ವ್ಯಕ್ತಿಗಾಗಿ ಸೂಕ್ಷ್ಮ ದೇಹ ತಯಾರಾಗುತ್ತದೆ. ಅದ್ರಲ್ಲಿ ಸೇರಿಕೊಳ್ಳುವ ಆತ್ಮ ಮತ್ತೆ ಯಮಲೋಕಕ್ಕೆ ಪ್ರಯಾಣ ಬೆಳೆಸುತ್ತದೆ. ಆದರೆ ಇದು ವಾಯು ಮಾರ್ಗದ ಮೂಲಕ ಸುಲಭವಾಗಿ ನಡೆಯೋದಲ್ಲ. ಯಮರಾಜನ ಜೊತೆ ಸೂಕ್ಷ್ಮ ದೇಹದಲ್ಲಿ ನೆಲೆಸಿರುವ ಆತ್ಮ, ಕಾಲ್ನಡಿಗೆಯಲ್ಲಿ ಹೋಗ್ಬೇಕು. ಗರುಡ ಪುರಾಣದ ಪ್ರಕಾರ, ಯಮಲೋಕದ ದೂರವು 11 ಲಕ್ಷ 99 ಸಾವಿರದ 988 ಕಿಲೋಮೀಟರ್ ದೂರದಲ್ಲಿದೆ. ಇದನ್ನು ಸಾಗೋದು ಸುಲಭವಲ್ಲ. ಅನೇಕ ಅಪಾಯಗಳಿವೆ. ಅವುಗಳನ್ನು ದಾಟಬೇಕು. ಭೂಲೋಕದಲ್ಲಿ ಮಾಡಿದ ಪಾಪ – ಪುಣ್ಯಕ್ಕೆ ತಕ್ಕಂತೆ ದಾರಿಯಲ್ಲಿ ಕಷ್ಟಗಳು ಎದುರಾಗುತ್ತವೆ. ಎಲ್ಲ ಮುಗಿಸಿ ಯಮಲೋಕ ತಲುಪಿದ ನಂತ್ರವೂ 16 ನಗರಗಳನ್ನು ದಾಟಬೇಕು. ಅಲ್ಲಿ ಕೂಡ, ವ್ಯಕ್ತಿ ಭೂಲೋಕದಲ್ಲಿ ಮಾಡಿದ ಕೆಲಸಕ್ಕೆ ತಕ್ಕಂತೆ ಶಿಕ್ಷೆ ಅನುಭವಿಸುತ್ತಾನೆಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.