ದೇವಸ್ಥಾನ ಪ್ರವೇಶಿಸುವಾಗ ಮೆಟ್ಟಿಲುಗಳಿಗೆ ನಮಸ್ಕರಿಸುವುದು ಒಂದು ಸಾಮಾನ್ಯ ಪದ್ಧತಿ. ಆದರೆ ಇದರ ಹಿಂದಿನ ಕಾರಣ ಮತ್ತು ಮಹತ್ವವೇನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ದೇವಸ್ಥಾನದೊಳಗೆ ಹೇಗೆ ಪ್ರವೇಶಿಸಬೇಕು ಎಂಬುದರ ಬಗ್ಗೆ ಹಲವು ನಿಯಮಗಳಿವೆ. ಆ ನಿಯಮಗಳ ಪ್ರಕಾರವೇ ದೇಗುಲ ಪ್ರವೇಶಸಬೇಕು ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಸಾಮಾನ್ಯವಾಗಿ ದೇಗುಲ ಬಳಿಯೇ ಬರುತ್ತಿದ್ದಂತೆ ಮೊದಲು ಮೆಟ್ಟಿಲುಗಳಿಗೆ ನಮಸ್ಕರಿಸುತ್ತಾ ಬರುತ್ತಾರೆ. ದೇಗಲುಗಳಿಗೆ ಮೆಟ್ಟಿಲು ಇರದಿದ್ದರೆ ಹೊಸ್ತಿಲಿಗೆ ನಮಸ್ಕರಿಸಿಯೇ ಮುಂದೆ ಬರುತ್ತಾರೆ. ದೇವಸ್ಥಾನದ ಮೆಟ್ಟಿಲುಗಳನ್ನು ತೊಳೆದು ಅದಕ್ಕೆ ಅರಿಶಿನ-ಕುಂಕುಮ ಹಚ್ಚಿ ಪೂಜಿಸಲಾಗಿರುತ್ತದೆ. ದೇವಸ್ಥಾನ ಪ್ರವೇಶಿಸುವಾಗ ಕೆಲವು ವಿಷಯಗಳನ್ನು ಮನದಲ್ಲಿಟ್ಟುಕೊಳ್ಳಬೇಕು. ಇದು ಜೀವನದಲ್ಲಿ ಸಮೃದ್ಧಿಯನ್ನು ತರುತ್ತೆ ಎಂಬ ಬಲವಾದ ನಂಬಿಕೆ ಇದೆ. ದೇವಸ್ಥಾನ ಪ್ರವೇಶಿಸುವ ಸಮಯದಲ್ಲಿ ಮೆಟ್ಟಿಲುಗಳಿಗೆ ನಮಸ್ಕರಿಸುವುದು, ಗಂಟೆ ಬಾರಿಸುವುದು, ಹೊರಗೆ ಪಾದರಕ್ಷೆ, ಚಪ್ಪಲಿ ಇಡುವುದು ಸೇರಿದಂತೆ ಹಲವು ನಿಯಮಗಳು ಶತಮಾನನಗಳಿಂದ ನಡೆದುಕೊಂಡು ಬಂದಿವೆ.
ಕೆಲ ಭಕ್ತರು ದೇವಾಲಯದ ಪ್ರತಿ ಮೆಟ್ಟಿಲುಗಳಿಗೆ ನಮಸ್ಕರಿಸಿ ಬರೋದನ್ನು ಗಮನಿಸಿರಬಹದು ಅಥವಾ ನೀವೇ ಈ ರೀತಿ ಮಾಡಿರಲೂಬಹುದು. ಆದ್ರೆ ಯಾಕೆ ದೇವಸ್ಥಾನದ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಲಾಗುತ್ತೆ ಎಂಬ ವಿಷಯ ನಿಮಗೆ ಗೊತ್ತಿದೆಯಾ? ಇದರ ಹಿಂದಿನ ಕಾರಣ ಏನು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಅನಿಲ್ ಜೈನ್ ಜಿ ವಿವರವಾಗಿ ಮಾಹಿತಿ ನೀಡಿದ್ದಾರೆ.
undefined
ನಾವು ಯಾರನ್ನಾದರೂ ಗೌರವಿಸಬೇಕಾದ್ರೆ ಅವರ ಮುಂದೆ ಬಾಗಿ ನಮಸ್ಕರಿಸುತ್ತೇವೆ. ಕೆಲವೊಮ್ಮೆ ಬಾಗಿ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುವ ಮೂಲಕ ಗೌರವ ಸಲ್ಲಿಸುತ್ತೇವೆ ಹಾಗೂ ಆಶೀರ್ವಾದವನ್ನು ಪಡೆದುಕೊಳ್ಳುತ್ತೇವೆ. ಅದೇ ರೀತಿ ದೇವಸ್ಥಾನ ಪ್ರವೇಶಿಸುವಾಗಲೂ ಮೆಟ್ಟಿಲುಗಳಿಗೆ ನಮಸ್ಕರಿಸುತ್ತೇವೆ. ಇದು ದೇವರಿಗೆ ಗೌರವವನ್ನು ತೋರಿಸುವ ಮೊದಲ ಹೆಜ್ಜೆಯಾಗಿದೆ ಎಂದು ಅನಿಲ್ ಜೈನ್ ಜಿ ಹೇಳುತ್ತಾರೆ. ನಾವು ದೇವಸ್ಥಾನದ ಮಟ್ಟಿಲು ಮಟ್ಟಿದಾಗ ದೇಗುಲದ ಹೊರಗೆಯೇ ಮನಸ್ಸಿನಲ್ಲಿನ ಕೆಟ್ಟ ವಿವೇಚನೆ, ಅನಿಷ್ಠಗಳನ್ನು ಹೊರಗೆ ಬಿಟ್ಟು ಒಳಗೆ ಬರುತ್ತವೆ. ದೇಗುಲದ ಮೆಟ್ಟಿಲುಗಳಿಗೆ ನಮಸ್ಕರಿಸುತ್ತಲೇ ನಾವು ಪುಣ್ಯಕ್ಷೇತ್ರಕ್ಕೆ ಬಂದ ಅನುಭವ ಉಂಟಾಗುತ್ತದೆ.
ಚಾಣಕ್ಯ ನೀತಿ: ಈ ಐದು ಜನರು ಯಾವಾಗಲೂ ಮೂರ್ಖರಾಗಿಯೇ ಇರ್ತಾರೆ, ಇವರ ಜೊತೆಯಲ್ಲಿರೋರು ಹುಷಾರ್ ಆಗಿರಿ!
ಮೆಟ್ಟಿಲುಗಳಿಗೆ ನಮಸ್ಕರಿಸಿದಾಗ ಮನದೊಳಗಿನ ಅಹಂಕಾರವೆಲ್ಲ ನಾಶವಾಗುತ್ತದೆ. ಮನಸ್ಸಿನಲ್ಲಿ ಅಹಂಕಾರವಿದ್ದರೆ ನೀವು ಎಷ್ಟೇ ಪೂಜೆ ಸಲ್ಲಿಸಿದರೂ ಪ್ರತಿಫಲ ಸಿಗಲ್ಲ. ಆದ್ದರಿಂದ ಮೆಟ್ಟಿಲುಗಳಿಗೆ ನಮಸ್ಕರಿಸುತ್ತಾ ಬರೋದರಿಂದ ಅಹಂಕಾರ ನಾಶವಾಗಿ, ನಾನು ಪರಮಾತ್ಮನ ಮುಂದೆ ಏನೂ ಅಲ್ಲ ಎಂಬ ಭಾವನೆ ಭಕ್ತರಲ್ಲಿ ಉಂಟಾಗಿ ಸಕಾರಾತ್ಮಕ ಆಲೋಚನೆಗಳು ಬರಲು ಶುರುವಾಗುತ್ತದೆ. ನಮ್ಮೊಳಗಿನ ಅಹಂಕಾರ ನಾಶವಾಗಿ ಜ್ಞಾನದ ಸಾಧನೆಗೆ ಕಾರಣವಾಗುತ್ತದೆ. ಮೆಟ್ಟಿಲುಗಳಿಗೆ ನಮಸ್ಕರಿಸೋದು ಶರಣಾಗತಿಯ ಸಂಕೇತ ಅಂತಾನೂ ಹೇಳಲಾಗುತ್ತದೆ. ಮೊದಲ ಮೆಟ್ಟಿಲಿಗೆ ನಮಸ್ಕರಿಸುತ್ತಲೇ ನಾನು ನಿನಗೆ ಶರಣು ಎಂದು ಹೇಳಿದಂತೆ ಎಂದು ಜ್ಯೋತಿಷಿಗಳು ವಿವರಿಸುತ್ತಾರೆ. ಹೀಗೆ ಮಾಡೋದರಿಂದ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೀರಿ.
ಮೆಟ್ಟಿಲುಗಳ ಪಾದಗಳನ್ನು ಸ್ಪರ್ಶಿಸಿದಾಗ ಅದು ದೇವರ ಮುಂದಿನ ಶರಣಾಗತಿಯನ್ನು ಸೂಚಿಸುತ್ತದೆ. ದೇಗುಲ ಪ್ರವೇಶಕ್ಕೂ ಮೊದಲೇ ನಿಮ್ಮ ಆತ್ಮ ಮತ್ತು ದೇಹವು ದೇವರಿಗೆ ಸಮರ್ಪಿತವಾಗಿದೆ ಎಂದು ಹೇಳಿದಂತೆ. ದೇವರ ಮುಂದೆ ಶರಣಾಗೋದರಿಂದ ಇಷ್ಟಾರ್ಥಗಳು ನೆರವೇರುತ್ತವೆ ಹಾಗೂ ಪೂಜೆಯ ಪ್ರತಿಫಲವು ನಿಮ್ಮದಾಗುತ್ತದೆ ಎಂದರ್ಥ.