ಕಾಗೆಗಳಿಗೆ ಸಿಗುತ್ತಿದೆ ಕೆಲವೊಂದು ಮುನ್ಸೂಚನೆಗಳು. ಪಿತೃಪಕ್ಷಕ್ಕೆ ಕಾಗೆ ಬಂದಿಲ್ಲ ಅಂದ್ರೆ ತುಂಬಾ ಕಷ್ಟ....
ಕಾಗೆ ಕಪ್ಪು ಕಾಕಾ ಅಂತಾನೇ ಇರುತ್ತೆ ಎಂದು ಅದೆಷ್ಟೋ ಮಂದಿ ಕಾಗೆಯನ್ನು ಇಷ್ಟ ಪಡುವುದಿಲ್ಲ. ಆದರೆ ಕುಟುಂಬದಲ್ಲಿ ಸಾವು ಸಂಭವಿಸಿದ್ದಾಗ ಅವರ ಅಂತಿಮ ವಿಧಿವಿಧಾನ ಮುಗಿಯುವುದೇ ಅಲ್ಲಿ ಕಾಗೆ ಪ್ರತ್ಯಕ್ಷ ಆದ ಮೇಲೆ. ತಿಥಿ ಕಾರ್ಯದಲ್ಲಿ ಕಾಗೆ ಬಂದ ಮೇಲೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುವುದು, ಪೂಜೆ ಮುಗಿದು ಬಂದವರಿಗೆ ಊಟ ಸಿಗುವುದು. ಕಾಗೆಗೂ ಮನುಷ್ಯರಿಗೂ ಏನು ಸಂಬಂಧ? ಭವೇಶ್ ಭೀಮಾನಾಥನಿ ಹೇಳಿರುವ ಮಾತುಗಳು ವೈರಲ್.....
ಧೂಮಾವತಿ:
ಮಹಾವಿದ್ಯೆಯಲ್ಲಿ ಬರುವ 10 ಹಿಂದು ತಾಂತ್ರಿಕ ದೇವಿಗಳಲ್ಲಿ ಒಬ್ಬರಾದ ಧೂಮಾವತಿ ಸಾಮಾನ್ಯವಾಗಿ ವಯಸ್ಸಾದ, ಕೊಳಕು ವಿಧವೆತಾಗಿ ಚಿತ್ರಿಸಲಾಗಿದೆ. ಹಿಂದೂ ಧರ್ಮದಲ್ಲಿ ಆಕೆ ಕಾಗೆಗಳ ಜೊತೆ ಸಂಪರ್ಕ ಹೊಂದಿರುತ್ತಾಳೆ, ಕಾಗೆಗಳ ಮೂಲಕವೇ ಸಂಪರ್ಕ ಮಾಡುತ್ತಾಳೆ ಹಾಗೂ ಕಾಗೆಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾಳೆ ಎನ್ನಲಾಗಿದೆ. ಈಕೆ ಕಾಗೆ ಮೇಲೆ ಸವಾರಿ ಮಾಡುತ್ತಿರುವ ದೇವಿ ಎನ್ನಲಾಗಿದೆ. ಮನುಷ್ಯರ ತೊಂದರೆಗಳಿಂದ ರಕ್ಷಿಸುವುರು ಹಾಗೂ ಮೋಕ ದೊರಕುವಂತೆ ಮಾಡುತ್ತಾಳೆ ಎನ್ನಲಾಗತ್ತದೆ.
ವಾರದ ಈ ದಿನಗಳಲ್ಲಿ ಕೂದಲು ಕತ್ತರಿಸಿ ನೋಡಿ...ಅದೃಷ್ಟ ಲಕ್ಷ್ಮಿ ಹೇಗೆ ಮನೆಗೆ ಬರುತ್ತಾಳೆಂದು!
ಮನುಷ್ಯರು- ಕಾಗೆ:
'ಕಾಗೆಗಳು ತುಂಬಾನೇ ಸ್ಮಾರ್ಟ್ ಪಕ್ಷಿಗಳು. ವಿದ್ಯೆಯಲ್ಲಿ ಬರುವ ಧೂಮಾವತಿ ಎಲ್ಲಾ ಕಾಗೆಗಳನ್ನು ಕಂಟ್ರೋಲ್ ಮಾಡುತ್ತಾರೆ. ಪಿತೃಪಕ್ಷದ ದಿನ ನಾವು ಅನ್ನದ ಉಂಡೆಯನ್ನು ಇಡುತ್ತೀವಿ ಆ ದಿನ ಕಾಗೆಗಳು ಬಂದು ತಿನ್ನುವುದು ತುಂಬಾನೇ ಕಷ್ಟ ಏಕೆ ಎಂದು ತುಂಬಾ ಯೋಚನೆ ಮಾಡಿದ್ದೀನಿ. ಪೂರ್ವಜ್ಜರ ಜೊತೆ ಸಂಪರ್ಕ ಮಾಡಲು ಸಹಾಯ ಮಾಡುವುದೇ ಕಾಗೆಗಳು. ಒಂದು ಕಡೆ ಸಾವು ಸಂಬವಿಸುತ್ತದೆ ಅನ್ನೋ ಸಮಯದಲ್ಲಿ ಅಲ್ಲಿ ರೇವನ್ (ಸಾಮಾನ್ಯ ಕಾಗೆಗಳಿಗಿಂತ ದೊಡ್ಡ ಗಾತ್ರದ ಕಾಗೆ) ಕಾಣಿಸಿಕೊಳ್ಳುತ್ತದೆ. ಪ್ರತಿಯೊಂದು ಪ್ರಾಣಿ ಪಕ್ಷಿಗೂ ಪ್ರಕೃತಿ ಒಂದು ಕೆಲಸ ಕೊಟ್ಟಿರುತ್ತದೆ. ಕಾಗೆಗಳಲ್ಲಿ ತುಂಬಾ ಶಕ್ತಿ ಇರುತ್ತದೆ. ಧೂಮವತಿ ಕಾಗೆಗಳ ಮೂಲಕ ಸಂಪರ್ಕ ಮಾಡುವುದರಲ್ಲಿ ಎತ್ತಿದ ಕೈ. ಸಾಕಷ್ಟು ಸಲ ಕಾಗೆಗಳನ್ನು ಕುಕ್ಕುವುದನ್ನು ನೋಡಿದ್ದೀವಿ, ಹೀಗೆ ವರ್ತಿಸಲು ಬಲವಾದ ಕಾರಣ ಇರುತ್ತದೆ. ಕಾಗೆಗಳು ದ್ವೇಷ ಇಟ್ಟಿಕೊಳ್ಳುವುದರಲ್ಲಿ ಎತ್ತಿದ ಕೈ ಹಾಗೆ ನಮ್ಮ ಪೂರ್ವಜ್ಜರ ಕರ್ಮವನ್ನು ನಮ್ಮ ಮೇಲೆ ಸಾಧಿಸುತ್ತದೆ. ಒಬ್ಬ ವ್ಯಕ್ತಿ ಹಿಂದೆ ಕಾಗೆ ಪದೇ ಪದೇ ಹೋಗುತ್ತಿದೆ ಅಂದ್ರೆ ಏನೋ ಸೂಚನೆ ನೀಡುತ್ತಿದೆ ಎಂದು ಅರ್ಥ ಎಂದು ಭವೇಶ್ ಭೀಮಾನಾಥನಿ ಹೇಳಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ವಾಹನ ಖರೀದಿಸುತ್ತೀರಾ? ಇಲ್ಲಿದೆ ನೋಡಿ ನಿಮ್ಮ ಅದೃಷ್ಟದ ಡೇಟ್ ಅಂಡ್ ಟೈಂ