ಬ್ರೇಕಪ್ ಆದ್ರೆ ದೇವದಾಸನ ತರ ಆಗ್ತಾರೆ ಈ ರಾಶಿಯವರು, ಮತ್ತೆ ಕೆಲವರು ಕ್ಯಾರೇ ಅನ್ನೋಲ್ಲ

Published : May 19, 2025, 12:57 PM IST
ಬ್ರೇಕಪ್ ಆದ್ರೆ ದೇವದಾಸನ ತರ ಆಗ್ತಾರೆ ಈ ರಾಶಿಯವರು, ಮತ್ತೆ ಕೆಲವರು ಕ್ಯಾರೇ ಅನ್ನೋಲ್ಲ

ಸಾರಾಂಶ

ಕೆಲವು ಪ್ರೇಮಗಳು ಬ್ರೇಕಪ್‌ನಲ್ಲಿ ಕೊನೆಗೊಳ್ಳುತ್ತವೆ. ಕರ್ಕಾಟಕ ರಾಶಿಯವರು ಭಾವನಾತ್ಮಕರಾಗಿ ನೋವಿನಿಂದ ಹೊರಬರಲು ಕಷ್ಟಪಡುತ್ತಾರೆ. ವೃಷಭ ರಾಶಿಯವರು ನಂಬಿಕೆಗೆ ದ್ರೋಹವೆಸಗಿದ ನೋವನ್ನು ಅನುಭವಿಸುತ್ತಾರೆ. ಸಿಂಹ ರಾಶಿಯವರು ಬ್ರೇಕಪ್‌ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ. ಮಕರ ರಾಶಿಯವರು ನೋವು ಮರೆತಂತೆ ಕಂಡರೂ, ಅದು ಆಂತರಿಕವಾಗಿ ಕಾಡುತ್ತಲೇ ಇರುತ್ತದೆ.

ಪ್ರತಿಯೊಂದೂ ಪ್ರೀತಿಯ ಪಯಣಕ್ಕೂ ಹ್ಯಾಪಿ ಎಂಡಿಂಗ್ ಇರುತ್ತೆಂದು ಹೇಳಲಾಗುವುದಿಲ್ಲ. ಕೆಲವು ಬ್ರೇಕಪ್ ಹಂತವನ್ನೂ ತಲುಪುತ್ತೆ. ಬ್ರೇಕ್‌ಅಪ್ ಆದವರು ನಿಜವಾಗಲೂ ಆ ನೋವನ್ನು ಸಮರ್ಥವಾಗಿ ಎದುರಿಸಬಲ್ಲರಾ? ಇಂಥದ್ದೊಂದು ಟೈಮನ್ನು ಎದುರಿಸಲು ರಾಶಿ ಚಕ್ರದ ಬಲವೂ ಬೇಕು. ಕೆಲವು ರಾಶಿಯವರು ಇಂಥ ನೋವಿನಿಂದ ಬೇಗ ಹೊರಬಂದರೆ, ಮತ್ತೆ ಕೆಲವರು ವಿಲ ವಿಲ ಒದ್ದಾಡುತ್ತಾರೆ. ಯಾವ ರಾಶಿಯವರು ಬ್ರೇಕಪ್ ನೋವನ್ನು ಯಾವ ರೀತಿ ಅನುಭವಿಸುತ್ತಾರೆ? 

ಪ್ರೀತಿ, ಪ್ರೇಮ ಎನ್ನೋದು ಎಲ್ಲರ ಲೈಫಲ್ಲೂ ಒಂದಲ್ಲೊಂದು ಸಲ ಆಗುತ್ತೆ. ಇವು ಇಲ್ಲದಿದ್ದರೆ ಜೀವನಕ್ಕೆ ಅರ್ಥವಿರೋಲ್ಲ. ಅಪ್ಪ-ಅಮ್ಮನ ಪ್ರೀತಿಯೂ ಆದಾಗಿರಬಹುದು. ಒಡ ಹುಟ್ಟಿದವರು, ಫ್ರೆಂಡ್ಸ್ ಲವ್ ಹೀಗೆ ಬೇರೆ ಬೇರೆ ರೂಪದಲ್ಲಿರಬಹುದು. ಆದರೆ, ಈಗ ಹೇಳಲು ಹೊರಟಿರುವುದು ಪ್ರೇಮಿಗಳ ಖಾಸ್‌ಬಾತ್. ಇನ್ನು ಟೀನೇಜ್‌ಗೆ ಬಂದ ಹದಿ ಹರೆಯದವರಿದೆ ವಿರುದ್ಧ ಲಿಂಗಿಗಳಿಂದ ಆಕರ್ಷಿತರಾಗಿ ಲವ್ವಲ್ಲಿ ಬೀಳೋದೂ ಸಹಜ. ಆದರೆ, ಲವ್ ಮಾಡೋದು ಓಕೆ, ಬ್ರೇಕ್ ಅಪ್ ಆದ್ಮೇಲೆ ಹೇಗೆ ರೆಸ್ಪಾಂಡ್ ಮಾಡ್ತಾರೆ ಮಂದಿ? 

ಈ ಪ್ರೀತಿ-ಪ್ರೇಮ ಅನ್ನೋ ಹುಡುಗ, ಹುಡುಗಿಯರು ಬ್ರೇಕಪ್ ಬಗ್ಗೆ ಮೊದಲೆಲ್ಲ ಅಷ್ಟು ತಲೆಕೆಡಿಸಿಕೊಳ್ಳೋಲ್ಲ. ಆದರೆ, ಪ್ರೀತಿಯ ಗಾಢತೆಗೆ ಬಿದ್ದ ನಂತರ ಇಂಥದ್ದೇನಾದರೂ ಫೇಲ್ಯೂರ್ ಆದರೆ, ನೋವನ್ನು ಸಹಿಸಿಕೊಳ್ಳಲು ವಿಲ ವಿಲ ಒದ್ದಾಡುತ್ತಾರೆ. ಕೆಲವರು ಹೇಗೋ ಆ ನೋವಿನಿಂದ ಆಚೆ ಬಂದು ಹೊಸ ಜೀವನ ಕಟ್ಟಿಕೊಂಡು ಬಿಡುತ್ತಾರೆ. ಮತ್ತೆ ಕೆಲವರು ಹಳೇ ನೆನಪುಗಳನ್ನೇ ನೆನೆಯುತ್ತಾ ಖಿನ್ನತೆಗೂ ಜಾರುತ್ತಾರೆ. 

ಹೀಗೆ ಬ್ರೇಕ್‌ಅಪ್‌ನಂಥ ನೋವನ್ನು ಸಹಿಸಿಕೊಳ್ಳುವ ತಾಕತ್ತು ಎಲ್ಲರಿಗೂ ಇರುವುದಿಲ್ಲ. ಇನ್ನು ರಾಶಿಗಳಿಗನುಗುಣವಾಗಿಯೂ ಇವುಗಳನ್ನು ಸಹಿಸಿಕೊಳ್ಳುವ, ಇಲ್ಲವೇ ನೋವು ಅನುಭವಿಸುವ ಸ್ವಭಾವದವರೂ ಇರುತ್ತಾರೆ. ಹಾಗಾದರೆ, ಯಾವ ರಾಶಿಯವರಿಗೆ ನೋವನ್ನು ಮರೆಯುವುದು ಕಷ್ಟ?

ಕರ್ಕಾಟಕ ರಾಶಿ
ಬ್ರೇಕಪ್‌ನಲ್ಲಿ ನೋವು ಅನುಭವಿಸುವವರ ಪಟ್ಟಿಯಲ್ಲಿ ಈ ರಾಶಿಯವರೇ ಮೊದಲಿಗರು. ಬಹಳ ಭಾವನಾತ್ಮಕ ಜೀವಿಯಾಗಿರುವ ಇವರು, ಬೇಗ ಲವ್‌ಗೆ ಕಮಿಟ್ ಆಗುತ್ತಾರೆ. ಜೊತೆಗೆ ಸೂಕ್ಷ್ಮ ಮನಸ್ಸುಳ್ಳವರಾಗಿರುವ ಕರ್ಕಾಟಕ ರಾಶಿಯವರು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಯಾರನ್ನು ಪ್ರೀತಿಸುತ್ತಾರೋ ಅವರನ್ನು ತುಂಬಾ ಹಚ್ಚಿಕೊಳ್ಳುತ್ತಾರೆ. ಬ್ರೇಕಪ್ ಎಂದರೆ ಅಕ್ಸೆಪ್ಟ್ ಮಾಡುವುದೇ ಇವರಿಗೆ ದೊಡ್ಡ ಚಾಲೆಂಜ್ ಆ ದುಃಖದಿಂದ ಹೊರ ಬರಲಾರದೇ ವಿಲ ವಿಲ ಒದ್ದಾಡುತ್ತಾರೆ. 

ವೃಷಭ ರಾಶಿ
ಪ್ರೀತಿಯಲ್ಲಿ ಬೀಳುವ ಮೊದಲು ಆ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ಈ ರಾಶಿಯವರು ಬಹಳವೇ ಸಮಯ ತೆಗೆದುಕೊಳ್ಳುತ್ತಾರೆ. ಅವರ ಬಳಗ ಸಣ್ಣದಿದ್ದರೂ ಯಾರನ್ನಾದರೂ ಪ್ರೀತಿಸುತ್ತಿದ್ದಾರೆಂದರೆ ಅವರ ಮೇಲೆ ಅಷ್ಟೇ ಅಪಾರ ನಂಬಿಕೆಯನ್ನೂ ಇಡುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಈ ಜೋಡಿಗಳು ಪ್ರತ್ಯೇಕವಾಗಬೇಕೆಂದರೆ ಅದನ್ನು ಈ ರಾಶಿಯ ಸಂಗಾತಿ ಎದುರಿಸುವುದು ಕಷ್ಟ ಕಷ್ಟ. ಈ ವಿದಾಯದ ವಿಷಯ ಕೇಳಿಯೇ ಮನಸ್ಸು ತುಂಬಾ ಗೊಂದಲಗಳಿಗೆ ಸಿಲುಕಲಿದ್ದು, ಬಹಳ ವೇದನೆ ಅನುಭವಿಸುತ್ತಾರೆ. 

ಸಿಂಹ ರಾಶಿ
ಪ್ರಭಾವಿ ಸ್ವಭಾವದವರಾದ ಸಿಂಹ ರಾಶಿಯವರಿಗೆ ತಾವು ಹೇಳಿದ್ದೇ ಆಗಬೇಕು, ತಮಗೆ ವಿರುದ್ಧವಾಗಿ ಯಾರೂ ನಿಲ್ಲಬಾರದು ಹಾಗೂ ಮಾತನಾಡಬಾರದು ಎಂಬುದು ಇವರ ಮನಸ್ಥಿತಿ. ಈ ರಾಶಿಯ ವ್ಯಕ್ತಿಗಳು ಪ್ರೀತಿಯಲ್ಲಿ ಬಿದ್ದು ಸಂಗಾತಿ ಬಾಯಿಂದ ಪ್ರತ್ಯೇಕವಾಗುವ ಮಾತು ಕೇಳಿಬಂದರೆ ದೊಡ್ಡ ರಾದ್ದಾಂತ  ಮಾಡುತ್ತಾರೆ. ಕಣ್ಣೀರಿನಿಂದ ಮುಗಿಯುವ ಬ್ರೇಕಪ್ ಆಗೋಲ್ಲ. ಬಹಳ ದೊಡ್ಡ ಮಟ್ಟದ ಗಲಾಟೆಯಾಗುವಂತೆ ಮಾಡುತ್ತಾರೆ. 

ಮಕರ ರಾಶಿ
ಈ ರಾಶಿಯವರು ಪ್ರೀತಿಯಲ್ಲೇನೋ ಬಿದ್ದಿರುತ್ತಾರೆ. ಕೆಲವೊಮ್ಮೆ ಬ್ರೇಕಪ್ ಆಗಬೇಕಾದ ಪರಿಸ್ಥಿತಿ ಬಂದರೆ ಆ ನೋವಿನಿಂದ ಹೊರಬರಲು ಬಹಳವೇ ಪ್ರಯತ್ನ ಪಡುತ್ತಾರೆ. ನೋವು ಮರೆತು ಲೈಫಲ್ಲಿ ಎಲ್ಲವೂ ಸರಿ ಹೋಯಿತು, ಯಶಸ್ವಿಯಾದರು ಎಂದು ಅನ್ನಿಸಿದರೂ ಕೊನೇ ಕ್ಷಣದಲ್ಲಿ ಆತ್ಮವಿಶ್ವಾಸ ಕಳೆದು ಕೊಳ್ಳುತ್ತಾರೆ. ನೋಡಲು ಬಹಳ ಸದೃಢರೆಂದು ಅನ್ನಿಸಿದರೂ ಸಂಬಂಧದ ವಿಷಯಕ್ಕೆ ಬಂದಾಗ ಬಹಳ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಇವರು ತಮ್ಮೆಲ್ಲ ಸಂಬಂಧಗಳನ್ನು ಕಡಿದುಕೊಂಡರೂ, ಜೀವಮಾನ ಪೂರ್ತಿ ಆ ಸಣ್ಣ ನೋವು ಇವರನ್ನು ಕಾಡುತ್ತಲೇ ಇರುತ್ತದೆ. 

PREV
Read more Articles on
click me!

Recommended Stories

Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?
ಡಿಸೆಂಬರ್ 8 ರಿಂದ 14 ಲಕ್ಷ್ಮಿ ನಾರಾಯಣ ರಾಜಯೋಗ, 5 ರಾಶಿಗೆ ಸಂಪತ್ತಿನ ಲಾಭ-ಉತ್ತಮ ಯಶಸ್ಸು