ರಾಶಿಯನುಸಾರ ನಿಮಗೆ ಯಾವ ಪ್ರಾಣಿ – ಪಕ್ಷಿಗಳಿಂದ ಅದೃಷ್ಟ?

Suvarna News   | Asianet News
Published : Mar 29, 2022, 06:14 PM IST
ರಾಶಿಯನುಸಾರ ನಿಮಗೆ ಯಾವ ಪ್ರಾಣಿ – ಪಕ್ಷಿಗಳಿಂದ ಅದೃಷ್ಟ?

ಸಾರಾಂಶ

ಪ್ರಾಣಿ – ಪಕ್ಷಿಗಳ ಸಾಕಣೆಯು ಅದೃಷ್ಟವನ್ನು ತಂದುಕೊಡುತ್ತದೆ. ಜೊತೆಗೆ ನಕಾರಾತ್ಮಕ ಶಕ್ತಿಯನ್ನು ಓಡಿಸುತ್ತದೆ. ಆದರೆ, ರಾಶಿಗಳಿಗೆ ಅನುಸಾರವಾಗಿ ಯಾವ ರಾಶಿಯವರು ಯಾವ ಯಾವ ಪ್ರಾಣಿ – ಪಕ್ಷಿಗಳನ್ನು ಸಾಕಿದರೆ ಉತ್ತಮ, ಅದೃಷ್ಟ ಒಲಿಯಲಿದೆ ಎಂಬುದನ್ನು ನೋಡೋಣ ಬನ್ನಿ...

ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ ಇರುತ್ತದೆ. ಅದರಂತೆ ಕೆಲವರಿಗೆ ಪ್ರಾಣಿ – ಪಕ್ಷಿಗಳನ್ನು ಸಾಕುವುದು ಎಂದರೆ ಬಲು ಪ್ರೀತಿ. ಮನೆಯಲ್ಲಿ ಅವರು ತಮಗಿಷ್ಟವಾದ ಪ್ರಾಣಿಗಳನ್ನೋ, ಪಕ್ಷಿಗಳನ್ನೋ ಇಲ್ಲವೋ ಅಕ್ವೇರಿಯಂಗಳ ಮೂಲಕ ಮೀನುಗಳನ್ನೋ ಸಾಕುತ್ತಿರುತ್ತಾರೆ. ಇನ್ನೊಂದು ವಿಷಯವೆಂದರೆ ಈ ಪ್ರಾಣಿ ಪಕ್ಷಿಗಳಿಂದ ನೆಗೆಟಿವಿಟಿಯನ್ನು ತಡೆದು ಪಾಸಿಟಿವಿಟಿ ಕೊಡುವ ಶಕ್ತಿ ಇರುತ್ತದೆ. ಆದರೆ, ಕೆಲವರಿಗೆ ಪ್ರಾಣಿ, ಪಕ್ಷಿಗಳ ಸಾಕಾಣಿಕೆ ಆಗಿ ಬರುವುದಿಲ್ಲ. ಮತ್ತು ರಾಶಿಯನುಸಾರ ಪ್ರಾಣಿ – ಪಕ್ಷಿಗಳನ್ನು ಸಾಕಿದರೆ ಅವರಿಗೆ ಶುಭ ಫಲ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾಗಿ ರಾಶಿಗಳಿಗೆ ಅನುಗುಣವಾಗಿ ಯಾವ ಯಾವ ಪ್ರಾಣಿಗಳನ್ನು ಸಾಕಬಹುದು ಎಂಬುದನ್ನು ನೋಡೋಣ... 

ಮೇಷ ರಾಶಿ (Aries)
ಈ ರಾಶಿಯವರಿಗೆ ತಾವು ಯಾರ ಹಂಗಿನಲ್ಲಿ ಇರುವುದು ಇಷ್ಟವಿರುವುದಿಲ್ಲ. ಮೇಷ ರಾಶಿಯವರು ನಾಯಿಗಳನ್ನು (Dog) ಸಾಕಿದರೆ ಶುಭ ಫಲ ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 

ವೃಷಭ ರಾಶಿ (Taurus)
ವೃಷಭ ರಾಶಿಯಲ್ಲಿ ಜನಿಸಿದವರು ಸಾಧಕರಾಗಿದ್ದಾರೆ. ಇವರು ಕೊಟ್ಟ ಮಾತನ್ನು ತಪ್ಪುವವರಲ್ಲ. ಈ ರಾಶಿಯಲ್ಲಿ ಜನಿಸಿದವರು ಮೊಲ ಅಥವಾ ಬೆಕ್ಕನ್ನು ಸಾಕುವುದರಿಂದ ಶುಭ ಫಲ ದೊರೆಯುತ್ತದೆ. 

ಮಿಥುನ ರಾಶಿ (Gemini)
ಮಿಥುನ ರಾಶಿಯಲ್ಲಿ ಜನಿಸಿದವರು ಒಳ್ಳೇ ಮಾತುಗಾರರು. ಇವರು ರಾಶಿಯನುಸಾರ ಪಕ್ಷಿಗಳನ್ನು ಸಾಕಬಹುದಾಗಿದೆ. ಗಿಳಿಯನ್ನು (Parrot) ಸಾಕಿದರೆ ಇನ್ನೂ ಉತ್ತಮ ಎಂದು ಹೇಳಲಾಗಿದೆ. ಹೀಗೆ ಮಾಡುವುದರಿಂದ ಶುಭ ಫಲ ನೀಡಲಿದೆ. 

ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯಲ್ಲಿ ಜನಿಸಿದರವರಿಗೆ ಗೋವನ್ನು ಸಾಕಬೇಕು. ಗೋಮಾತೆಯನ್ನು ಪೂಜಿಸುವುದರಿಂದ, ಅದರ ಸೇವೆಯನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. 

ಸಿಂಹ ರಾಶಿ (Leo)
ಸಿಂಹ ರಾಶಿಯವರದ್ದು ಸಾಹಸಮಯ ಪ್ರವೃತ್ತಿ ಆಗಿರುವುದರಿಂದ ಈ ರಾಶಿಯಲ್ಲಿ ಜನಿಸಿದವರಿಗೆ ಕುದುರೆ (Horse) ಶುಭ ಫಲವನ್ನು ತಂದುಕೊಡಲಿದೆ. ಜೊತೆಗೆ ಇವರು ಬೆಕ್ಕನ್ನು ಸಹ ಸಾಕಬಹುದಾಗಿದೆ.

ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರಿಗೆ ಮೀನು ಸಾಕಣೆ ಶುಭ ಫಲವನ್ನು ತಂದುಕೊಡಲಿದೆ. ಹೀಗೆ ಮಾಡುವುದರಿಂದ ಅಧಿಕ ಲಾಭವನ್ನು ಗಳಿಸಬಹುದಾಗಿದೆ. ಅಕ್ವೇರಿಯಂ ಅನ್ನು ಸಹ ಇಟ್ಟುಕೊಳ್ಳಬಹುದಾಗಿದೆ. 

ಇದನ್ನು ಓದಿ : Eyebrows ನೋಡಿ ವ್ಯಕ್ತಿತ್ವ ಹೇಳ್ಬೋದು!

ತುಲಾ ರಾಶಿ (Libra)
ತುಲಾ ರಾಶಿಯವರು ಪ್ರಕೃತಿ ಪ್ರಿಯರು. ಇವರಿಗೆ ಗಿಳಿ ಸಾಕಾಣೆಯು ಶುಭ ಫಲವನ್ನು ತಂದುಕೊಡಲಿದೆ. 

ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರಿಗೆ ಚಂಚಲ ಸ್ವಭಾವ. ಇವರು ಸಾಕು ಪ್ರಾಣಿಗಳನ್ನು ಬಹಳವೇ ಇಷ್ಟಪಡುತ್ತಾರೆ. ಇವರು ಶ್ವಾನವನ್ನು ಸಾಕಬಹುದಾಗಿದ್ದು, ಇದರಿಂದ ಸಕಾರಾತ್ಮಕ (Positive) ಶಕ್ತಿಯನ್ನು ಪಡೆದುಕೊಳ್ತಾರೆ. 

ಧನು ರಾಶಿ (Sagittarius)
ಸ್ವಾಭಿಮಾನಿ ಗುಣವುಳ್ಳ ಧನು ರಾಶಿಯವರು ಮೀನು (Fish) ಸಾಕಣೆ ಮಾಡಿದರೆ ಬಹಳ ಒಳ್ಳೆಯದು. ಅಲ್ಲದೆ, ಆಮೆಯನ್ನು ಸಹ ಇವರು ಸಾಕಬಹುದಾಗಿದೆ.

ಮಕರ ರಾಶಿ (Capricorn)
ಮಕರ ರಾಶಿಯವರು ನಾಯಿಗಳು ಇಲ್ಲವೇ ಗೋವನ್ನು (Cow) ಸಾಕಬೇಕು. ಹೀಗೆ ಮಾಡುವುದರಿಂದ ಇವರು ಶುಭ ಫಲವನ್ನು ಪಡೆಯುತ್ತಾರೆ. 

ಕುಂಭ ರಾಶಿ (Aquarius)
ಕುಂಭ ರಾಶಿಯಲ್ಲಿ ಜನಿಸಿದವರಿಗೆ ಮೊಲ (Rabbit) ಸಾಕಣೆ ಬಹಳ ಉತ್ತಮವಾಗಿದೆ. ಇಲ್ಲವೇ ಇವರು ಶ್ವಾನವನ್ನು ಸಹ ಸಾಕಬಹುದಾಗಿದೆ.

ಮೀನ ರಾಶಿ (Pisces)
ಮೀನ ರಾಶಿಯವರು ಇಲಿ (Mouse) ಸಾಕಬೇಕೆಂದು ಶಾಸ್ತ್ರ ಹೇಳುತ್ತದೆ. ಅದರಲ್ಲೂ ಬಿಳಿ ಇಲಿಯನ್ನು ಇವರು ಸಾಕಬೇಕಂತೆ. 

ಇದನ್ನು ಓದಿ : Gemology: ಪರ್ಲ್ ಧರಿಸಿದರೆ ಹಣಕಾಸಿನ ಸಮಸ್ಯೆ ಇರಲ್ಲ

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

2026 ರಲ್ಲಿ ಶನಿಯ ಧನ ರಾಜಯೋಗ, ಈ 40 ದಿನ ಈ 3 ರಾಶಿಗೆ ಕರೆನ್ಸಿ, ನೋಟು ಮಳೆ
ಈ ರಾಶಿಗೆ ತೊಂದರೆ ಹೆಚ್ಚಾಗಬಹುದು, ರಾಹು ಕಾಟದಿಂದ ಉದ್ಯೋಗ, ವ್ಯವಹಾರದ ಮೇಲೆ ಪರಿಣಾಮ