Haircut ದಿನ ನಿಗದಿ ಮಾಡುವ ಮುನ್ನ, ಶುಭ-ಅಶುಭಗಳ ಕಡೆ ಇರಲಿ ಗಮನ

By Suvarna NewsFirst Published Jun 1, 2022, 9:55 AM IST
Highlights

ವಿಧವಿಧವಾದ ರೀತಿಯಲ್ಲಿ ಕೂದಲನ್ನು ಕತ್ತರಿಸಲು ಯೋಚಿಸುತ್ತಿರುವವರು, ನಿಮ್ಮ ಕೂದಲಿನ ಆರೋಗ್ಯ ಕಾಪಾಡಲು ಯಾವ ದಿನ ಕ್ಷೌರಕ್ಕೆ ಸೂಕ್ತವಾಗಿದೆ ಹಾಗೂ ಯಾವ ದಿನದಂದು ಕೂದಲು ಕತ್ತರಿಸಲೇಬಾರದು ಎಂಬುದನ್ನು ತಿಳಿದುಕೊಳ್ಳಿ..

ದೇಹದಿಂದ ತ್ಯಾಜ್ಯ ಮತ್ತು ಋಣಾತ್ಮಕ ಶಕ್ತಿಯನ್ನು (Negative Energy)ತೆಗೆದುಹಾಕಲು ತಲೆಕೂದಲು ಕತ್ತರಿಸುವುದು ಒಂದು ಪ್ರಾಯೋಗಿಕ (Practical) ಮಾರ್ಗವಾಗಿದೆ. ಹೀಗೆ ಮಾಡುವುದರಿಂದ ಪ್ರಕೃತಿಯಲ್ಲಿರುವ ಧನಾತ್ಮಕ ಶಕ್ತಿಯು (Positive Energy) ಪುನಃ ದೇಹದೊಳಗೆ ಸೇರಿಕೊಳ್ಳುತ್ತದೆ. ಹಾಗೆಯೇ ಒಂದೊಂದು ರಾಶಿ ನಕ್ಷತ್ರಗಾಳಿಗೂ ಯಾವ ದಿನ ಕೂದಲನ್ನು ಕತ್ತರಿಸಬೇಕು ಎಂಬ ಕುರಿತಾಗಿ ವೈದಿಕ ಜ್ಯೋತಿಷ್ಯ ಮತ್ತು ಚಂದ್ರನ ಹಂತಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ದಿನಗಳನ್ನು ನೀವಿಲ್ಲಿ ತಿಳಿಯಬಹುದು. 

ಅನೇಕ ಜನರು ಅದನ್ನು ಹುಚ್ಚ ಮತ್ತು ವಿಲಕ್ಷಣವೆಂದು ಭಾವಿಸುತ್ತಾರೆ. ಏನೇ ಆದರೂ ಕೂಡ, ಕ್ಷೌರ ಮಾಡುವಾಗ ದಿನವನ್ನು ನೋಡಬೇಕು ಎಂಬುದು ಸತ್ಯ. ನೀವು ಕ್ಷೌರ ಮಾಡಿಸಲು ಹೋಗುವ ಮುನ್ನ ಚಂದ್ರ (Moon) ಯಾವ ಹಂತದಲ್ಲಿ ಇದ್ದಾನೆ ಎಂಬುದನ್ನು ನೋಡಿಕೊಳ್ಳಬೇಕು. ಏಕೆಂದರೆ, ಚಂದ್ರನ ಹಂತಗಳು ಮತ್ತು ಕೂದಲಿನ ಆರೋಗ್ಯದ ನಡುವೆ ಸಂಬಂಧವಿದೆ ಎಂಬುದು ದೀರ್ಘಾವಧಿಯ ಅಧ್ಯಯನದ ಮೂಲಕ ತಿಳಿದು ಬಂದಿದೆ. ನಿಮ್ಮ ಕೇಶವನ್ನು ಸುಂದರವಾಗಿ ವಿನ್ಯಾಸಗೊಳಿಸಲು ಉತ್ತಮ ಸಮಯವೆಂದರೆ ಹುಣ್ಣಿಮೆಯ ಸಮಯವಾಗಿದೆ. ಇದು ಶಕ್ತಿಯಿಂದ ತುಂಬಿದ ಸಮಯವಾಗಿರುವಿದರಿಂದ ಕೂದಲಿನ ಆರೋಗ್ಯ ಹೆಚ್ಚುವುದರಲ್ಲಿ ಅನುಮಾನವಿಲ್ಲ. 

Latest Videos

ಸೃಜನಶೀಲರು, ಸ್ವತಂತ್ರಪ್ರಿಯರು, ಬುದ್ಧಿವಂತರು.. ಕುಂಭ ರಾಶಿಯ ಸ್ವಭಾವ ಬಲ್ಲಿರಾ?

ಇನ್ನು, ನಿಮ್ಮ ತಲೆಕೂದಲಿನ ಬೆಳವಣಿಗೆಯು (Hair growth) ಯಾವ ರೀತಿಯಲ್ಲಿ ಆಗಬೇಕು ಎಂಬುದನ್ನು ಬಯಸುತ್ತೀರೋ ಅದನ್ನು ಕೂಡ ರಾಶಿಚಕ್ರಗಳಿಗೆ (Zodiacs) ಅನುಗುಣವಾಗಿ, ಚಂದ್ರನ ಸ್ಥಾನಕ್ಕೆ ಸರಿಹೊಂದುವಂತೆ ದಿನವನ್ನು ನಿಗದಿಪಡಿಸಿಕೊಳ್ಳಬೇಕು. ನೀವೇನಾದರೂ ಗಟ್ಟಿಯಾದ ಬೇರುಗಳ ಜೊತೆಗೆ ವೇಗವಾಗಿ ಕೂದಲು ಬೆಳವಣಿಗೆಯನ್ನು ಹುಡುಕುತ್ತಿದ್ದರೆ, ಹುಣ್ಣಿಮೆಯ ಚಕ್ರದ ಕೊನೆಯ ಏಳು ದಿನಗಳ ಸಮಯದಲ್ಲಿ ಕತ್ತರಿಸಬೇಕು. ಅಥವಾ, ನಿಧಾನ ಬೆಳವಣಿಗೆಯೊಂದಿಗೆ ಬಲವಾದ ಬೇರುಗಳನ್ನು (Strong Roots) ಬಯಸಿದರೆ, ಅಮಾವಾಸ್ಯೆಯ ಚಕ್ರದ ಕೊನೆಯ ಐದು ದಿನಗಳಲ್ಲಿ ಕೂದಲು ಕತ್ತರಿಸಬೇಕು. ಆದಾಗ್ಯೂ, ಅಮಾವಾಸ್ಯೆಯಂತಹ ಕೆಲವು ದಿನಗಳು, 9, 15 ಮತ್ತು 23 ನೇ ಚಂದ್ರನ ದಿನಗಳು ನಿಮ್ಮ ಕೂದಲನ್ನು ಕತ್ತರಿಸಲು ಕಟ್ಟುನಿಟ್ಟಾಗಿ ಸೂಕ್ತವಲ್ಲ. ಅಲ್ಲದೆ, ಯಾವುದೇ ಗ್ರಹಣ (Eclipse) ದಿನದಂದು ಕ್ಷೌರ ಮಾಡಲೇಬಾರದು.

ರಾಶಿಚಕ್ರದ ಚಿಹ್ನೆಗಳಿಗೆ ಸಂಬಂಧಿಸಿದಂತೆ, ಚಂದ್ರನ ಸ್ಥಾನ ಮತ್ತು ಕೂದಲು ಕತ್ತರಿಸುವುದು ಮುಖ್ಯವಾಗಿದೆ.

  •  ಚಂದ್ರನು ಮೇಷ ರಾಶಿಯಲ್ಲಿದ್ದಾಗ ಕೂದಲು ಕತ್ತರಿಸುವುದನ್ನು ತಪ್ಪಿಸಬೇಕು ಏಕೆಂದರೆ ಅದು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ರೋಗಗಳು ಹೆಚ್ಚಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
  •  ಕೂದಲು ಸೀಳುವುದು (Splits) ಮತ್ತು ಉದುರುವುದನ್ನು ಕಡಿಮೆ ಮಾಡಲು ಒಬ್ಬರು ಬಯಸಿದರೆ, ಚಂದ್ರನು ವೃಷಭ, ಮಕರ ಅಥವಾ ಕನ್ಯಾರಾಶಿಯಲ್ಲಿ ಇದ್ದಾಗ ಕ್ಷೌರ ಮಾಡುವುದು ಉತ್ತಮ ಸಮಯ.
  •  ಕೂದಲನ್ನು ಹೆಚ್ಚು ಕರ್ಲಿ (Curly) ಮಾಡಲು, ಮಿಥುನದಲ್ಲಿರುವ ಚಂದ್ರನ ಹಂತದಲ್ಲಿ ನೀವು ಅದನ್ನು ಸ್ಟೈಲ್ ಮಾಡುವುದು ಒಳ್ಳೆಯದು. ಅಲ್ಲದೆ, ಚಂದ್ರನು ಮಿಥುನ ಅಥವಾ ತುಲಾ ರಾಶಿಯಲ್ಲಿದ್ದಾಗ ಜೇನುಗೂಡಿನ ಕೂದಲನ್ನು ಮಾಡಲು ಅನುಕೂಲಕರ ಸಮಯವೆಂದು ಪರಿಗಣಿಸಬಹುದು.

Name and Astrology: ಈ ಹೆಸರಿನ ಪತಿ ಪಡೆದ ಮಹಿಳೆಯರು ಲಕ್ಕಿ

  •  ನೀವೇನಾದರೂ, ಅಲ್ಪಾವಧಿಯ (Temporary) ಪ್ರಯೋಗವನ್ನು ಹುಡುಕುತ್ತಿದ್ದರೆ ಮತ್ತು ಶಾಶ್ವತ ಲಕ್ಷಣವಲ್ಲದಿದ್ದರೆ (Permanent), ಚಂದ್ರನು ಕುಂಭ ರಾಶಿಯಲ್ಲಿದ್ದಾಗ ಇದಕ್ಕೆ ಉತ್ತಮ ಸಮಯ.
  •   ದುರ್ಬಲವಾದ ಅಥವಾ ಒಣ ಕೂದಲು ಹೊಂದಿರುವವರು ಗುಣಮಟ್ಟದಲ್ಲಿ ಸುಧಾರಣೆ ಮತ್ತು ನಿಧಾನಗತಿಯ (Slow) ಬೆಳವಣಿಗೆಯನ್ನು ಬಯಸುತ್ತಿರುವವರು ಕರ್ಕಟಕ ಅಥವಾ ಮೀನ ರಾಶಿಯಲ್ಲಿರುವ ಚಂದ್ರನ ಸಮಯದಲ್ಲಿ ಕೇಶ ವಿನ್ಯಾಸವನ್ನು ತೆಗೆದುಕೊಳ್ಳಬೇಕು.
  •   ಸಿಂಹ ರಾಶಿಯ ಚಂದ್ರನು ಕೂದಲಿಗೆ ಬಣ್ಣ (Coloring) ಹಾಕಲು ಮತ್ತು ಅಲಂಕಾರಕ್ಕೆ ಒಳ್ಳೆಯದು.
  •   ಇನ್ನು ಧನು ರಾಶಿಯ ಚಂದ್ರನು, ಕೂದಲಿನೊಂದಿಗೆ ಯಾವುದೇ ಪ್ರಯೋಗಗಳನ್ನು ಮಾಡಲು ಅನುಕೂಲಕರವಾಗಿಲ್ಲ.
click me!