ಮುಂದಿನ ಜನ್ಮದಲ್ಲಿ ಏನಾಗುತ್ತೀರಿ ತಿಳೀಬೇಕಾ? Garuda Puranದಲ್ಲಿದೆ ಮಾಹಿತಿ..

By Suvarna NewsFirst Published Feb 4, 2023, 4:10 PM IST
Highlights

ಮನುಷ್ಯನ ಕರ್ಮಗಳು ಅವನ ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ ಎಂಬ ಮಾತನ್ನು ಕೇಳಿಯೇ ಬೆಳೆದಿದ್ದೇವೆ. ಇದೇ ಮಾತನ್ನು ಗರುಡ ಪುರಾಣದಲ್ಲಿಯೂ ಹೇಳಲಾಗಿದೆ. ಹಾಗೆಯೇ ಈ ಜನ್ಮದಲ್ಲಿ ಮಾಡುವ ಯಾವ ಕರ್ಮಗಳು ಮುಂದಿನ ಜನ್ಮದಲ್ಲಿ ನಮ್ಮನ್ನು ಏನಾಗಿಸುತ್ತವೆ ಎಂದು ಕೂಡಾ ಗರುಡ ಪುರಾಣದಲ್ಲಿ ತಿಳಿಸಲಾಗಿದೆ. 

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕಾರ್ಯಗಳ ಫಲವನ್ನು ಪಡೆಯುವುದು ಖಚಿತ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ, ಮನುಷ್ಯನು ಭೂಮಿಯ ಮೇಲೆ ಮಾಡುವ ಕರ್ಮಗಳ ಆಧಾರದ ಮೇಲೆ ಅದರ ಫಲವನ್ನು ಪಡೆಯುತ್ತಾನೆ. ಗರುಡ ಪುರಾಣದಲ್ಲಿ ಮನುಷ್ಯನ ಕರ್ಮಗಳ ವೃತ್ತಾಂತವನ್ನು ಹೇಳಲಾಗಿದೆ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಒಬ್ಬ ವ್ಯಕ್ತಿ ಸತ್ತಾಗ ಮಾತ್ರ ಗರುಡ ಪುರಾಣವನ್ನು ಪಠಿಸಲಾಗುತ್ತದೆ. ಇದರ ಪ್ರಕಾರ, ಒಬ್ಬ ವ್ಯಕ್ತಿಗೆ ಸ್ವರ್ಗ ಅಥವಾ ನರಕದಲ್ಲಿ ಸ್ಥಾನ ಸಿಗುವುದು ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ಮಾತ್ರ. ಮನುಷ್ಯನ ಕರ್ಮಗಳು ಅವನ ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ ಎಂಬ ಮಾಹಿತಿಯನ್ನು ಗರುಡ ಪುರಾಣದಲ್ಲಿಯೂ ನೀಡಲಾಗಿದೆ. ಗರುಡ ಪುರಾಣದ ಆಧಾರದ ಮೇಲೆ, ಯಾವ ಕಾರ್ಯಗಳಿಂದಾಗಿ ಜನರು ಮುಂದಿನ ಜನ್ಮದಲ್ಲಿ ಪ್ರಾಣಿಗಳಾಗಿ ಭೂಮಿಗೆ ಬರುತ್ತಾರೆ ನೋಡೋಣ.

  • ಗರುಡ ಪುರಾಣದ ಪ್ರಕಾರ, ತನ್ನ ಜೀವನದುದ್ದಕ್ಕೂ ಮೋಸ ಮಾಡುವ ವ್ಯಕ್ತಿ ಮುಂದಿನ ಜನ್ಮದಲ್ಲಿ ಗೂಬೆಯಾಗಿ ಹುಟ್ಟುತ್ತಾನೆ.
  • ಮತ್ತೊಂದೆಡೆ, ಯಾರಿಗಾದರೂ ಸುಳ್ಳು ಸಾಕ್ಷ್ಯವನ್ನು ನೀಡುವ ವ್ಯಕ್ತಿಯು ಮುಂದಿನ ಜನ್ಮದಲ್ಲಿ ಕುರುಡನಾಗಿ ಹುಟ್ಟುತ್ತಾನೆ.
  • ಲೂಟಿ, ಪ್ರಾಣಿಹಿಂಸೆ, ಬೇಟೆಯಾಡುತ್ತಾ ತನ್ನ ಸಂಸಾರವನ್ನು ನಿರ್ವಹಿಸುವವನು ಮುಂದಿನ ಜನ್ಮದಲ್ಲಿ ಕಟುಕನ ಕೈಯಲ್ಲಿ ಸಾವನ್ನು ಪಡೆಯುತ್ತಾನೆ. ಅಂದರೆ ಮುಂದಿನ ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುತ್ತಾನೆ.
  • ತಂದೆ-ತಾಯಿ ಮತ್ತು ಒಡಹುಟ್ಟಿದವರನ್ನು ಹಿಂಸಿಸುವವನು ಹುಟ್ಟುತ್ತಾನೆ, ಆದರೆ ಗರ್ಭದಲ್ಲಿಯೇ ಸತ್ತಿರುತ್ತಾನೆ, ಅವನು ಭೂಮಿಗೆ ಬರುವುದಿಲ್ಲ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
  • ಒಬ್ಬ ವ್ಯಕ್ತಿ ಕಲಿತುಕೊಂಡರೂ ತನ್ನ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳದೆ ಅದನ್ನು ತನಗಷ್ಟೇ ಸೀಮಿತವಾಗಿಟ್ಟುಕೊಂಡರೆ ಅಂತಹ ವ್ಯಕ್ತಿ ಮುಂದಿನ ಜನ್ಮದಲ್ಲಿ ಮಾನಸಿಕ ಅಸ್ವಸ್ಥನಾಗುತ್ತಾನೆ. ಅವನ ಸಂಚಿತ ಜ್ಞಾನದ ನಿಧಿ ಮುಂದೆ ಸಾಗಲಾರದು.

    Lal Kitab remedies: ಕರ್ಕಾಟಕ, ವೃಶ್ಚಿಕ ರಾಶಿ ನಿಮ್ಮದಾದರೆ, ಶನಿ ಧೈಯ್ಯಾದಿಂದ ಬಿಡುಗಡೆಗೆ ಹೀಗೆ ಮಾಡಿ..
     
  • ವ್ಯಕ್ತಿಯು ತುಂಬಾ ಕೋಪದ ಸ್ವಭಾವದವನಾಗಿದ್ದರೆ, ಸೇಡು ತೀರಿಸಿಕೊಳ್ಳುವ ಭಾವನೆಯನ್ನು ಹೊಂದಿದ್ದರೆ, ಅವನು ಮುಂದಿನ ಜನ್ಮದಲ್ಲಿ ಹಾವಿನ ಯೋನಿಯೊಳಗೆ ಹೋಗುತ್ತಾನೆ, ಅಂದರೆ, ಅವನು ಹಾವಾಗಿ ಹುಟ್ಟುತ್ತಾನೆ ಎಂದು ನಂಬಲಾಗಿದೆ.
  • ವ್ಯಕ್ತಿಯು ಹಣವೇ ಪ್ರಪಂಚ ಎಂದುಕೊಂಡಿದ್ದರೆ ಮತ್ತು ಅವನ ಹಣವನ್ನು ಖರ್ಚು ಮಾಡದಿದ್ದರೆ ಈ ಬಾಂಧವ್ಯದಿಂದಾಗಿ ಅವನು ಆ ಸಂಪತ್ತನ್ನು ಬಿಡಲಾರನು. ಆದ್ದರಿಂದ ಅವನು ಮುಂದಿನ ಜನ್ಮದಲ್ಲಿ ಹಾವಿನ ರೂಪದಲ್ಲಿ ಅದರ ಸುತ್ತಲೂ ಸುಳಿದಾಡುತ್ತಾನೆ ಎಂದು ಹೇಳಲಾಗುತ್ತದೆ.
  • ಗುರುವನ್ನು ಅವಮಾನಿಸುವವನಿಗೆ ನರಕದ ದಾರಿ ತೆರೆಯುತ್ತದೆ. ಅಂತಹವನು ಮುಂದಿನ ಜನ್ಮದಲ್ಲಿ ನೀರಿಲ್ಲದ ಕಾಡಿನಲ್ಲಿ ಬ್ರಹ್ಮರಾಕ್ಷಸನಾಗಿ ಹುಟ್ಟುತ್ತಾನೆ.
  • ಮಹಿಳೆಯರಂತೆ ವರ್ತಿಸುವ ಅಥವಾ ಅವರ ಅಭ್ಯಾಸಗಳು ಮತ್ತು ಸ್ವಭಾವದಲ್ಲಿ ಮಹಿಳೆಯರ ನೋಟವನ್ನು ಹೊಂದಿರುವ ಪುರುಷರು, ಮುಂದಿನ ಜನ್ಮದಲ್ಲಿ ಮಹಿಳೆಯರಾಗಿ ಹುಟ್ಟುತ್ತಾರೆ.
  • ಹೆಣ್ಣನ್ನು ಕೊಂದವನು, ಗರ್ಭಪಾತ ಮಾಡಿದವನು ಅಥವಾ ಹಸುವನ್ನು ಕೊಂದವನು ಮುಂದಿನ ಜನ್ಮದಲ್ಲಿ ಮೂರ್ಖನಾಗಿ ಜನ್ಮ ಪಡೆಯುತ್ತಾನೆ.
  • ಗರುಡ ಪುರಾಣದ ಪ್ರಕಾರ, ಹೆಣ್ಣನ್ನು ಶೋಷಣೆ ಮಾಡುವವರು ಮುಂದಿನ ಜನ್ಮದಲ್ಲಿ ಭಯಾನಕ ಕಾಯಿಲೆಗಳಿಗೆ ತುತ್ತಾಗುತ್ತಾರೆ.
  • ಇದಲ್ಲದೆ, ಅಸಹಜ ಸಂಬಂಧಗಳನ್ನು ಮಾಡುವ ಜನರು ಮುಂದಿನ ಜನ್ಮದಲ್ಲಿ ದುರ್ಬಲರಾಗುತ್ತಾರೆ.
  • ಒಬ್ಬ ವ್ಯಕ್ತಿಯು ಇಂದ್ರಿಯ ಸುಖಗಳಲ್ಲಿ ಹೆಚ್ಚು ತೊಡಗಿಸಿಕೊಂಡರೆ, ಅವನು ಮುಂದಿನ ಜನ್ಮದಲ್ಲಿ ಕೆಲಸಗಳಲ್ಲಿ ಹಿಂದುಳಿಯುತ್ತಾನೆ ಮತ್ತು ಅವನು ತನ್ನ ಎಲ್ಲಾ ಶಕ್ತಿಯನ್ನು ಸರಿಯಾಗಿ ಬಳಸಲಾರನು.

ಮೋಕ್ಷ

  • ಗರುಡ ಪುರಾಣದ ಪ್ರಕಾರ, ಮರಣದ ಸಮಯದಲ್ಲಿ ದೇವರ ಹೆಸರನ್ನು ತೆಗೆದುಕೊಳ್ಳುವ ವ್ಯಕ್ತಿಗೆ ಮೋಕ್ಷದ ಮಾರ್ಗ ಸಿಗುತ್ತದೆ. ಸಾಯುವ ಸಮಯದಲ್ಲಿ ರಾಮನ ಹೆಸರನ್ನು ತೆಗೆದುಕೊಳ್ಳುವುದನ್ನು ಧರ್ಮಗ್ರಂಥಗಳಲ್ಲಿ ಪ್ರಮುಖವೆಂದು ಪರಿಗಣಿಸಲು ಇದೇ ಕಾರಣ.

    ಸಂಪತ್ತು, ಸುಖ ಪ್ರಾಪ್ತಿಗೆ ಸಾಲಿಗ್ರಾಮ ಪೂಜಿಸಿ
     
  • ಒಬ್ಬ ವ್ಯಕ್ತಿಯು ಹಣದ ದುರಾಸೆಯನ್ನು ಹೊಂದಿಲ್ಲದಿದ್ದರೆ, ಅದರ ಬಗ್ಗೆ ಉದಾರ ಮನೋಭಾವವನ್ನು ಹೊಂದಿದ್ದರೆ ಮತ್ತು ಒಳ್ಳೆಯ ಕೆಲಸಗಳಲ್ಲಿ ಹಣವನ್ನು ಬಳಸಿಕೊಳ್ಳುತ್ತಿದ್ದರೆ, ಆಗ ಅವನು ಮುಂದಿನ ಜನ್ಮದಲ್ಲಿ ಸ್ವಯಂಪ್ರೇರಿತವಾಗಿ ಹಣವನ್ನು ಪಡೆಯುತ್ತಾನೆ. ನಂತರ ಆ ಹಣವನ್ನು ಒಳ್ಳೆಯ ಕೆಲಸಗಳಲ್ಲಿ ತೊಡಗಿಸುತ್ತಾನೆ.
  • ಒಬ್ಬ ವ್ಯಕ್ತಿಯು ಬುದ್ಧಿವಂತನಾಗಿದ್ದರೆ, ಜ್ಞಾನವನ್ನು ದಾನ ಮಾಡಿದರೆ, ಅವನ ಆಂತರಿಕ ಪ್ರಜ್ಞೆಯಿಂದಾಗಿ ಮುಂದಿನ ಜನ್ಮದಲ್ಲಿ ಅವನು ಯಾವುದೇ ವಿಷಯವನ್ನು ಬೇಗನೆ ಕಲಿಯುವಂತಾಗುತ್ತದೆ. ಈ ಕಾರಣದಿಂದಾಗಿ ಅವರು ತೀವ್ರವಾದ ಬುದ್ಧಿವಂತಿಕೆ ಅಥವಾ ಉನ್ನತ ಮಟ್ಟದ ಬುದ್ಧಿವಂತಿಕೆಯನ್ನು ಪಡೆಯುತ್ತಾರೆ.
click me!