ದೇವಸ್ಥಾನದಲ್ಲಿ ತುಂಬಾ ಎನರ್ಜಿ ಪಡೆಯಬೇಕಾದರೆ ಹೀಗ್ ಮಾಡಿ!

By Suvarna News  |  First Published Apr 16, 2024, 6:25 PM IST

ದೇವಸ್ಥಾನಕ್ಕೆ ಹೋಗುವುದರಿಂದ ನಿಮ್ಮಲ್ಲಿ ಶಕ್ತಿಸಂಚಯವಾಗುತ್ತದೆ. ದೇವಾಲಯಕ್ಕೆ ನೀವು ಭೇಟಿ ನೀಡಿದಾಗ ಅಲ್ಲಿ ಹೆಚ್ಚಿನ ಎನರ್ಜಿ ಪಡೆಯೋಕೆ ಏನು ಮಾಡಬೇಕು?


ಭಕ್ತಿಯಿದ್ದವರು ದೇವಸ್ಥಾನಕ್ಕೆ ಹೋಗುತ್ತಾರೆ. ತುಂಬಾ ಭಕ್ತಿ ಇಲ್ಲದವರೂ, ದಿನನಿತ್ಯದ ಕರ್ತವ್ಯವೋ ಎಂಬಂತೆ ದೇವಸ್ಥಾನಕ್ಕೆ ಹೋಗುತ್ತಾರೆ. ಇತರ ಹಲವು ಧರ್ಮಗಳಂತೆ ನಮ್ಮಲ್ಲಿ ದೇವಾಲಯಕ್ಕೆ ಹೋಗುವುದು ಕಡ್ಡಾಯವಲ್ಲ. ಆದರೆ ದೇವಸ್ಥಾನಕ್ಕೆ ಹೋಗುವುದರಿಂದ ನಿಮ್ಮಲ್ಲಿ ಶಕ್ತಿಸಂಚಯವಾಗುತ್ತದೆ. ಆ ದಿನದ ಕೆಲಸಗಳಿಗೆ ಬೇಕಾದ ಎನರ್ಜಿಯನ್ನು ಪಡೆದುಕೊಂಡು ನೀವು ದೇವಸ್ಥಾನದಿಂದ ಮರಳುತ್ತೀರಿ. ಹಾಗಿದ್ದರೆ, ದೇವಾಲಯಕ್ಕೆ ನೀವು ಭೇಟಿ ನೀಡಿದಾಗ ಅಲ್ಲಿ ಹೆಚ್ಚಿನ ಎನರ್ಜಿ ಪಡೆಯೋಕೆ ಏನು ಮಾಡಬೇಕು?

ಕೈಕಾಲು ತೊಳೆದು ಒಳಗೆ ಹೋಗಿ: ದೇವಾಲಯದ ಒಳಗೆ ನಿಮ್ಮ ಕಾಲಿನ ಧೂಳನ್ನು ಒಯ್ಯುವುದು ಉಚಿತವಲ್ಲ. ಕಾಲುಗಳು, ಕೈಗಳು ಹಾಗೂ ಮುಖ ಪ್ರಕ್ಞಾಳನ ಮಾಡಿಕೊಳ್ಳಬೇಕು. ಆಗ ಮನಸ್ಸೂ ಸ್ವಚ್ಛವಾಗಿದ್ದು, ದೇವಾಲಯದ ಒಳಗಿನ ಶಕ್ತಿಯನ್ನು ಬರಮಾಡಿಕೊಳ್ಳುವುದಕ್ಕೆ ತಯಾರಾಗುತ್ತದೆ. 

Tap to resize

Latest Videos

ಒಳಗೆ ಹೋದ ತಕ್ಷಣ ದೇವರ ವಿಗ್ರಹವನ್ನು ನೋಡಬೇಡಿ. ಮೊದಲು ಎಡದಿಂದ ಬಲಕ್ಕೆ ಗರ್ಭಗುಡಿಗೆ ಪ್ರದಕ್ಷಿಣೆ ಬನ್ನಿ. ಪ್ರತಿ ದೇವಸ್ಥಾನದಲ್ಲೂ ಪಂಚಾಯತನ ಪೂಜೆಯ ಕ್ರಮವಿರುತ್ತದೆ. ಅಂದರೆ ಪ್ರತಿ ದೇವಾಲಯದಲ್ಲಿಯೂ ಐವರು ದೇವರು ಇರುತ್ತಾರೆ.  ಶಿವ, ವಿಷ್ಣು, ದೇವಿ ಅಥವಾ ದುರ್ಗೆ, ಸೂರ್ಯ ಮತ್ತು ಗಣೇಶ. ಈ ಐವರು ದೇವರಿಗೂ ಸಮಾನವಾಗಿ ವಂದಿಸಿ. ಯಾರೊಬ್ಬರೂ ಮೇಲಲ್ಲ ಅಥವಾ ಕೀಳಲ್ಲ. ಯಾವುದೋ ಒಂದು ದೇವರಿಗೆ ವಿಶೇಷ ಪೂಜೆ ಮಾಡಿಸಿದರೂ ಏನೂ ತಪ್ಪಿಲ್ಲ. 

ಈ ಪ್ರದಕ್ಷಿಣೆಯನ್ನು ಮಾಡುವಾಗ ಧ್ಯಾನಸ್ಥ ಮನಸ್ಥಿತಿಯಲ್ಲಿ ಮಾಡಬೇಕು. ಮನಸ್ಸಿನಿಂದ ಮಾಡಿದ ಪಾಪಗಳು ಮೊದಲ ಹೆಜ್ಜೆಯಿಂದ, ಮಾತಿನಲ್ಲಿ ಮಾಡಿದ ಪಾಪಗಳು ಎರಡನೇ ಹೆಜ್ಜೆಯಿಂದ ಮತ್ತು ದೇಹದಿಂದ ಮಾಡಿದ ಪಾಪಗಳು ಮೂರನೇ ಹೆಜ್ಜೆಯಿಂದ ನಾಶವಾಗುತ್ತವೆ ಎಂದು ಪುರಾಣ ಹೇಳುತ್ತದೆ. ಗಣೇಶನಿಗೆ ಒಂದು, ಸೂರ್ಯ ಮತ್ತು ಶಿವನಿಗೆ ಮೂರು, ದೇವಿ ಮತ್ತು ವಿಷ್ಣುವಿಗೆ ನಾಲ್ಕು ಹಾಗೂ ಅರಳಿ ಮರಕ್ಕೆ ಏಳು ಬಾರಿ ಪ್ರದಕ್ಷಿಣೆಯನ್ನು ಹಾಕಲಾಗುತ್ತದೆ. ಹೀಗಾಗಿ ದೇವರಿಗೆ ಪ್ರದಕ್ಷಣೆ ಹಾಕುವ ಮುನ್ನ ಯೋಚಿಸಿ ಪ್ರದಕ್ಷಣೆ ಹಾಕಬೇಕು. 

ದೇವಾಲಯದ ಒಳಗೆ ಪ್ರವೇಶಿಸುವ ಮೊದಲು, ಮೆಟ್ಟಿಲುಗಳನ್ನು ಮುಟ್ಟಿ ನಮಸ್ಕರಿಸಿ. ನಿಮ್ಮ ಅಹಂಕಾರ, ಕೆಟ್ಟ ತನ, ಸ್ವಾರ್ಥ ತುಂಬಿದ ಆಲೋಚನೆಗಳನ್ನು ಬಿಡಬೇಕು. ನಂತರ ದೇವಾಲಯವನ್ನು ಪ್ರವೇಶಿಸಿ. ಮೆಟ್ಟಿಲುಗಳನ್ನು ಮುಟ್ಟಿ ನಮಸ್ಕರಿಸುವುದು ದೇವರ ಪಾದಕ್ಕೆ ಶರಣಾದ ಭಾವನೆಯನ್ನು ನಿಮ್ಮಲ್ಲಿ ಮೂಡಿಸುತ್ತದೆ. ನೀವು ದೇವರ ಆಶ್ರಯದಲ್ಲಿ ಬಂದಾಗ, ನಿಮ್ಮ ಪ್ರತಿಯೊಂದು ಪ್ರಾರ್ಥನೆಯನ್ನು ಕೇಳಲಾಗುತ್ತದೆ ಮತ್ತು ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ.

ದೇವಸ್ಥಾನದಲ್ಲಿ ಗಂಟೆ ಹೊಡೆಯಲು ಮರೆಯಬೇಡಿ : ಎಲ್ಲ ದೇವಸ್ಥಾನದಲ್ಲಿಯೂ ದೇವರ ಎದುರಿನಲ್ಲಿ ಗಂಟೆಗಳನ್ನು ತೂಗಿಹಾಕಿರುತ್ತಾರೆ. ದೇವಸ್ಥಾನಕ್ಕೆ ಹೋದ ತಕ್ಷಣ ನೀವು ಕೂಡ ಮೊದಲು ಗಂಟೆಯನ್ನು ಹೊಡೆಯಬೇಕು. ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

ವಿಪರೀತ ರಾಜಯೋಗ, ಹತ್ತು ದಿನದಲ್ಲಿ ಈ ಮೂರು ರಾಶಿಗೆ ಅದೃಷ್ಟ ,ಹಣದ ಸುರಿಮಳೆ

ದೇವಸ್ಥಾನದಿಂದ ಬರಿಗೈನಲ್ಲಿ ಬರಬೇಡಿ : ಅಭಿಷೇಕ ಮಾಡಲೆಂದು ತೆಗೆದುಕೊಂಡು ಹೋದ ನೀರಿನ ಪಾತ್ರೆಯನ್ನು ಖಾಲಿ ಮಾಡಿಕೊಂಡು ಮನೆಗೆ ತರಬಾರದು. ಇದರಿಂದ ಮನೆಗೆ ಶ್ರೇಯಸ್ಸಾಗುವುದಿಲ್ಲ. ದೇವಸ್ಥಾನದಿಂದ ಬರುವಾಗ ಆ ಬಿಂದಿಗೆಯಲ್ಲಿ ತೀರ್ಥವನ್ನು ತೆಗೆದುಕೊಂಡು ಬನ್ನಿ. ತುಂಬಿದ ಪಾತ್ರೆಯನ್ನು ಮನೆಗೆ ತರುವುದರಿಂದ ದೇವರ ಆಶೀರ್ವಾದ ಯಾವಾಗಲೂ ಇರುತ್ತೆ ಮತ್ತು ಸಂಸಾರದಲ್ಲಿ ನೆಮ್ಮದಿ ನೆಲೆಸುತ್ತೆ.

ದೇವಸ್ಥಾನದಲ್ಲಿ ದೀಪ ಹಚ್ಚಿ : ದೇವಸ್ಥಾನಕ್ಕೆ ಪೂಜೆಗೆಂದು ಹೋದಾಗ ಅಲ್ಲಿ ದೀಪ ಹಚ್ಚುವುದನ್ನು ಮರೆಯಬಾರದು. ದೇವರ ಮುಂದೆ ದೀಪ ಹಚ್ಚುವುದರಿಂದ ಆಸೆಗಳು ಈಡೇರುತ್ತವೆ ಮತ್ತು ಕೆಲಸದಲ್ಲಿಯೂ ಪ್ರಗತಿ ಸಿಗುತ್ತದೆ.

ಪ್ರಸಾದ ಸ್ವೀಕರಿಸದೆ ಬರಬೇಡಿ : ಅನೇಕ ದೇವಸ್ಥಾನದಲ್ಲಿ ಪ್ರಸಾದ ವಿತರಣೆಯ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಪ್ರಸಾದ ಕೊಟ್ಟಾಗ ಅದರ ಸ್ವಲ್ಪ ಭಾಗವನ್ನಾದರೂ ಅಲ್ಲೇ ಕುಳಿತು ತಿನ್ನಬೇಕು. ದೇವರಿಗೆ ನೈವೇದ್ಯ ಮಾಡಿಕೊಟ್ಟ ಪ್ರಸಾದವನ್ನು ತಿನ್ನದೆ ಹಾಗೇ ಬರುವುದು ಶ್ರೇಯಸ್ಸಲ್ಲ. ಇದ್ರಿಂದ ಜೀವನದ ಕಷ್ಟಗಳು ದೂರವಾಗಿ ಸುಖ, ಸಮೃದ್ಧಿ ನೆಲೆಸುತ್ತದೆ.

ಅಂಬಾನಿ ಕುಟುಂಬ ನಂಬಿರೋ ಈ ದೇವಾಲಯ ಉದ್ಯಮಿಗಳಿಗೆ ತರುತ್ತೆ ಯಶಸ್ಸು..
 

click me!