
ವಿಜೃಂಭಣೆಯ ದಸರಾ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಬದುಕಲ್ಲಿ ಹೊಸ ಬೆಳಕು, ಉತ್ಸಾಹ ಮೂಡಿಸುವ ದೀಪಾವಳಿ ಹಬ್ಬ ಎದುರಾಗುತ್ತಿದೆ. ದೀಪಾವಳಿಯನ್ನು ಹೊಸ ಚೈತನ್ಯದ ಕುರುಹಿನಂತೆಯೇ ಪರಿಗಣಿಸಲಾಗುತ್ತದೆ. ಈ ಸಮಯ ಕೇವಲ ಮನೆಯನ್ನು ಸ್ವಚ್ಛಗೊಳಿಸುವುದು, ಅಲಂಕರಿಸುವುದಕ್ಕೆ ಮಾತ್ರ ಸೀಮಿತವಲ್ಲ. ಹಣಕಾಸು ಪ್ರಗತಿ, ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಕ್ರಮಗಳನ್ನು ಅನುಸರಿಸಬೇಕಾದ ದಿನಗಳೂ ಆಗಿವೆ. ದೀಪಾವಳಿಯ ಮೊದಲು ಬರುವ ತ್ರಯೋದಶಿಯಂದು ಏನಾದರೂ ಖರೀದಿ ಮಾಡುವುದು ಉತ್ತಮ ಎಂದು ಭಾವಿಸಲಾಗಿದೆ. ಈ ದಿನವನ್ನು ಧನತ್ರಯೋದಶಿ ಎಂದೇ ಹೇಳಲಾಗುತ್ತದೆ. ಈ ಬಾರಿ ನೀವು ಏನನ್ನು ಖರೀದಿಸಬೇಕೆಂದುಕೊಂಡಿದ್ದೀರಿ? ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಖರೀದಿಸುವ ಮುನ್ನ ನಿಮ್ಮ ರಾಶಿಗೆ ಅನುಗುಣವಾಗಿ, ನಿಮಗೆ ಅದೃಷ್ಟ ತರುವ ವಸ್ತುಗಳನ್ನು ಶಾಪಿಂಗ್ ಮಾಡುವುದು ಶ್ರೇಯಸ್ಕರ. ಯಾವ ರಾಶಿಗೆ ಏನನ್ನು ಖರೀದಿಸುವುದು ಉತ್ತಮ ಎಂದು ತಿಳಿದುಕೊಳ್ಳಿ.
• ಮೇಷ (Aries)
ಮೇಷ ರಾಶಿಯ ಚೈತನ್ಯಕ್ಕೆ (Energy) ಸರಿಸಾಟಿಯಾಗುವಂತೆ ಈ ಬಾರಿಯ ದೀಪಾವಳಿಗೆ ಚಿನ್ನದ ಆಭರಣ (Jewelry) ಅಥವಾ ನಾಣ್ಯಗಳನ್ನು (Coins) ಖರೀದಿ ಮಾಡುವುದು ಉತ್ತಮ. ನಿಮ್ಮ ಹಣಕಾಸು (Financial) ಪ್ರಗತಿಗೆ ಇದರಿಂದ ಹೆಚ್ಚಿನ ವೇಗ ದೊರೆಯುತ್ತದೆ.
• ವೃಷಭ (Taurus)
ಲಕ್ಸುರಿ ಹಾಗೂ ಸುಂದರವಾದ ವಸ್ತುಗಳ ಬಗ್ಗೆ ಮೋಹವಿರುವ ವೃಷಭ ರಾಶಿಯ ಜನ ಈ ದೀಪಾವಳಿಗೆ ವಿಶೇಷ ಖರೀದಿ (Purchase) ಮಾಡಬೇಕು. ಚಿನ್ನಾಭರಣ, ಕಲಾತ್ಮಕ (Artistic) ವಸ್ತು ಅಥವಾ ಮನೆಯನ್ನು ಅಲಂಕರಿಸುವ ಯಾವುದಾದರೂ ಸುಂದರ ಸಲಕರಣೆ ಖರೀದಿಸಬೇಕು. ಇದರಿಂದ ಮನದಾಳದ ಬಯಕೆಗಳು ಪೂರ್ತಿಯಾಗಿ ಜೀವನ ಸಮೃದ್ಧವೆನಿಸುತ್ತದೆ.
ಮೊದಲ ಡೇಟ್‌ನಲ್ಲೇ ಪ್ರೇಮದ ಅಮಲೇರಿಸುವ ರಾಶಿಯವರಿವರು
• ಮಿಥುನ (Gemini)
ಸಂವಹನದಲ್ಲಿ ನಂಬಿಕೆ ಇಟ್ಟಿರುವ ಮಿಥುನ ರಾಶಿಯ ಜನ ಗ್ಯಾಜೆಟ್ಸ್ ಅಥವಾ ಮೌಲಿಕ ಕೃತಿಗಳನ್ನು (Books) ಖರೀದಿಸುವುದು ಉತ್ತಮ. ಮಾಹಿತಿ ಹೆಚ್ಚಿಸಲು, ಜ್ಞಾನ ವೃದ್ಧಿಸಲು ಇವು ನೆರವಾಗುತ್ತವೆ.
• ಕರ್ಕಾಟಕ (Cancer)
ಮನೆ ಮತ್ತು ಕುಟುಂಬಕ್ಕೆ ಆಳವಾದ ಸಂಪರ್ಕ ಹೊಂದಿರುವ ಕರ್ಕಾಟಕ ರಾಶಿಯ ಜನ ಈ ಬಾರಿ, ಮನೆಗೆ ಅಗತ್ಯವಿರುವ ಯಾವುದೇ ಸಲಕರಣೆ, ಅಡುಗೆ ಮನೆಯಲ್ಲಿ (Kitchen) ಬಳಸುವ ವಸ್ತುಗಳನ್ನು ಖರೀದಿ ಮಾಡಬೇಕು. ಇದರಿಂದ ಮನೆಯಲ್ಲಿ ಸಂತಸ ಹೆಚ್ಚುತ್ತದೆ.
• ಸಿಂಹ (Leo)
ಆತ್ಮವಿಶ್ವಾಸಿ, ವರ್ಚಸ್ಸಿನ ಸಿಂಹ ರಾಶಿಯ ಜನ ಈ ಬಾರಿಯ ದೀಪಾವಳಿಗೆ ಬಟ್ಟೆ (Cloth), ಆಭರಣ ಅಥವಾ ನಿಮ್ಮತನವನ್ನು ಉತ್ತೇಜಿಸುವ ಯಾವುದೇ ವಸ್ತುವನ್ನು ಖರೀದಿಸಬಹುದು. ಇದರಿಂದ ಹೆಚ್ಚು ಅವಕಾಶಗಳು ನಿಮ್ಮದಾಗುತ್ತವೆ.
• ಕನ್ಯಾ (Virgo)
ವಿಸ್ತೃತ ಮಾಹಿತಿ ಇಷ್ಟಪಡುವ ಕನ್ಯಾ ರಾಶಿಯ ಜನರು, ಸ್ಟೇಷನರಿ ಅಥವಾ ಆರೋಗ್ಯಕ್ಕೆ (Health) ಸಂಬಂಧಿಸಿದ ಯಾವುದೇ ವಸ್ತುಗಳನ್ನು ಖರೀದಿ ಮಾಡಬಹುದು. ಇದರಿಂದ ಸಂಘಟಿತವಾಗಿರಲು ಹಾಗೂ ಒಟ್ಟಾರೆ ನಿಮ್ಮ ಕ್ಷೇಮಕ್ಕೆ ಅನುಕೂಲವಾಗುತ್ತದೆ.
• ತುಲಾ (Libra)
ಸಾಮರಸ್ಯ, ಸೌಹಾರ್ದತೆಯ ತುಲಾ ರಾಶಿಯ ಜನ ಕಲೆ, ಸಂಗೀತ (Music) ಅಥವಾ ಮನೆಯ ಅಲಂಕಾರಿಕ ವಸ್ತುಗಳನ್ನು ಖರೀದಿಸಬೇಕು. ಈ ಹೂಡಿಕೆಯಿಂದ ಜೀವನದ ಸೌಂದರ್ಯ, ಸಮತೋಲನ ಹೆಚ್ಚುತ್ತದೆ. ಅಲೌಕಿಕ ನೆಮ್ಮದಿ ದೊರೆಯುತ್ತದೆ.
ಈ ರಾಶಿಯವರು ಸಾಲ ನೀಡುವ ಮೊದಲು ನೂರು ಬಾರಿ ಯೋಚಿಸಬೇಕಂತೆ..ಯಾಕೆ ಗೊತ್ತಾ..?
• ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನ ತೀವ್ರತೆಗೆ ಮತ್ತೊಂದು ಹೆಸರು. ಹೀಗಾಗಿ, ಇವರು ರತ್ನಗಳು (Gemstones), ಹರಳು, ಸುಗಂಧಭರಿತ ವಸ್ತುಗಳು ಮತ್ತು ಧಾರ್ಮಿಕ ಕಲಾಕೃತಿಗಳನ್ನು ಮನೆಗೆ ತರಬೇಕು. ಇವುಗಳಿಂದ ನಿಮ್ಮ ಆಸೆ ಪೂರೈಸುತ್ತದೆ.
• ಧನು (Sagittarius)
ಅನ್ವೇಷಣೆಯನ್ನು ಪ್ರೀತಿಸುವ ಧನು ರಾಶಿಯ ಜನ ಪ್ರಯಾಣಕ್ಕೆ ಸಂಬಂಧಿಸಿದ ಅಥವಾ ಶೈಕ್ಷಣಿಕ (Educational) ವಸ್ತುಗಳನ್ನು ಖರೀದಿಸಬೇಕು. ಜ್ಞಾನಕ್ಕಾಗಿ ಹಂಬಲಿಸುವ ನಿಮ್ಮ ಮನಸ್ಸಿಗೆ ಇದರಿಂದ ಬೆಂಬಲ ದೊರೆಯುತ್ತದೆ. ದೈಹಿಕವಾಗಿ, ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ.
• ಮಕರ (Capricorn)
ಮಹತ್ವಾಕಾಂಕ್ಷೆಯ ಮಕರ ರಾಶಿಯ ಜನ ಈ ಬಾರಿಯ ದೀಪಾವಳಿಗೆ ವಹಿವಾಟಿಗೆ (Business) ಸಂಬಂಧಿಸಿದ ಯಾವುದೇ ವಸ್ತು, ಸಲಕರಣೆಗಳನ್ನು ಖರೀದಿಸಬಹುದು. ಇದರಿಂದ ನಿಮ್ಮ ಗುರಿ ಸಾಧಿಸಲು ಅನುಕೂಲವಾಗುತ್ತದೆ. ಯಶಸ್ಸು ದೊರೆಯುತ್ತದೆ. ಪ್ರಗತಿಯತ್ತ ದಾಪುಗಾಲು ಹಾಕುತ್ತೀರಿ.
• ಕುಂಭ (Aquarius)
ವಿಶಿಷ್ಟ ದೃಷ್ಟಿಕೋನದ ಕುಂಭ ರಾಶಿಯ ಜನ ತಂತ್ರಜ್ಞಾನ (Tech) ಅಥವಾ ಸಾಮಾಜಿಕ ಉದ್ದೇಶಕ್ಕೆ ಬಳಕೆ ಮಾಡಬಹುದಾದ ಯಾವುದೇ ಸಲಕರಣೆ ಖರೀದಿಸುವುದು ಒಳ್ಳೆಯದು. ಇದರಿಂದಾಗಿ ನಿಮ್ಮ ಚಿಂತನಾಕ್ರಮಕ್ಕೆ ಬೆಂಬಲ ದೊರೆಯುತ್ತದೆ.
• ಮೀನ (Pisces)
ಕ್ರಿಯಾಶೀಲತೆಯ ಸೂಕ್ಷ್ಮ ಮನಸ್ಸಿನ ಮೀನ ರಾಶಿಯ ಜನರು ಕಲಾತ್ಮಕ ವಸ್ತುಗಳು, ಸಂಗೀತದ ಸಲಕರಣೆಗಳು, ಆಧ್ಯಾತ್ಮಿಕ (Spiritual) ಸಾಹಿತ್ಯಗಳನ್ನು ಖರೀದಿಸಬೇಕು. ಇದರಿಂದ ಕ್ರಿಯಾಶೀಲತೆ, ಆಧ್ಯಾತ್ಮಿಕ ಭಾವನೆಗಳಿಗೆ ಚೈತನ್ಯ ದೊರೆಯುತ್ತದೆ.