ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಶಿಗೆ ಅನುಗುಣವಾಗಿ ಖುಷಿಯ ಮಾನದಂಡ ಭಿನ್ನವಾಗುತ್ತದೆ. ಹೀಗಾಗಿ, ನಿಮ್ಮ ರಾಶಿಗೆ ತಕ್ಕಂತೆ ಏನು ಮಾಡಿದರೆ ಜೀವನದಲ್ಲಿ ನಿಮಗೆ ಖುಷಿ-ರುಚಿ ದೊರೆಯುತ್ತದೆ ಎಂದು ನೋಡಿಕೊಳ್ಳಿ.
ವೀಕೆಂಡ್ ಬಂದರೆ ಸಾಕು, ನಗರವನ್ನು ಬಿಟ್ಟು ಊರಿಗೆ ಹೋಗಿ ತಂಪಾಗಿದ್ದು ಬರುವವರಿದ್ದಾರೆ, ಪ್ರವಾಸ ಮಾಡುವ ಮೂಲಕ ಮನಸ್ಸನ್ನು ಮುದಗೊಳಿಸಿಕೊಳ್ಳುವವರಿದ್ದಾರೆ. ಓದುವ ಮೂಲಕ ಖುಷಿ ಕಂಡುಕೊಳ್ಳುವವರಿದ್ದಾರೆ. ಒಟ್ಟಿನಲ್ಲಿ ಒಬ್ಬೊಬ್ಬರಿಗೆ ಒಂದೊಂದರಲ್ಲಿ ಖುಷಿ ದೊರೆಯುತ್ತದೆ. ಕೆಲವರಿಗೆ ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದರಲ್ಲಿ ಆಸಕ್ತಿ ಇದ್ದರೆ ಮತ್ತಷ್ಟು ಜನರಿಗೆ ಏಕಾಂಗಿಯಾಗಿದ್ದುಬಿಡುವ ಹಂಬಲ. ಆದರೆ, ಕೆಲವು ಬಾರಿ ಏನು ಮಾಡಿದರೂ ಖುಷಿ ಸಿಗುವುದಿಲ್ಲ. ಸಾಕಷ್ಟು ಪ್ರಯತ್ನಪಟ್ಟರೂ ನಾವು ಬಯಸುವ ನೆಮ್ಮದಿ ದೊರೆಯುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಮ್ಮ ರಾಶಿಚಕ್ರವನ್ನು ಆಧರಿಸಿ ನಿರ್ದಿಷ್ಟ ಕಾರ್ಯವನ್ನು ಮಾಡಿದರೆ ಮಾತ್ರ ನಮಗೆ ಬೇಕಾದ ನೈಜ ಸಂತಸ ದೊರೆಯುತ್ತದೆ.
• ಮೇಷ (Aries)
ಸಿಕ್ಕಾಪಟ್ಟೆ ಎನರ್ಜಿ (Energy) ಮತ್ತು ಉತ್ಸಾಹದ ಮೇಷ ರಾಶಿಯ ಜನ ಕ್ರಿಯೆಗೆ (Action) ಮತ್ತೊಂದು ಹೆಸರು. ಹೊಸ ಸವಾಲುಗಳನ್ನು ಎದುರಿಸುವಲ್ಲಿ ಸದಾ ಮುಂದು. ಅಗ್ನಿತತ್ವದ ಇವರ ಅಗ್ನಿ (Fire) ಜ್ವಲಿಸುತ್ತಲೇ ಇರಬೇಕು. ಅಂದರೆ, ಇವರು ಸದಾ ತಮ್ಮನ್ನು ತಾವು ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಲೇ ಇರಬೇಕು.
• ವೃಷಭ (Taurus)
ಪ್ರಾಯೋಗಿಕ (Practical) ನಿಲುವಿನ ವೃಷಭ ರಾಶಿಯ ಜನ ಸಾದಾಸೀದಾ ಮನುಷ್ಯರು. ಇವರು ಸಿಂಪಲ್ಲಾಗಿ ಸಂತಸ ಪಡುತ್ತಾರೆ. ಉತ್ತಮ ಊಟ (Good Food), ಸುಂದರ ವಾತಾವರಣ, ಉತ್ತಮ ಸಹವಾಸ ಮತ್ತು ಕಂಫರ್ಟ್ (Comfort) ಆಗಿದ್ದರೆ ಸುಖಿಯಾಗಿರುತ್ತಾರೆ.
undefined
ಈ ರಾಶಿಯವರು ಟಾಪ್ ಮೋಸ್ಟ್ ಹ್ಯಾಪಿಯೆಸ್ಟ್ ಪೀಪಲ್ಸ್
• ಮಿಥುನ (Gemini)
ಸಂವಹನ, ಕಲಿಕೆ ಮತ್ತು ವಿಭಿನ್ನತೆಯಲ್ಲಿ (Variety) ಸಂತಸ ಕಾಣುವ ಮಿಥುನ ರಾಶಿಯ ಜನ ಸಾಮಾಜಿಕ (Social) ಜೀವಿಗಳು. ಅತಿಯಾದ ಕುತೂಹಲ ಹೊಂದಿದ್ದು, ನಿರಂತರವಾಗಿ ಮಾತುಕತೆ ನಡೆಸುವುದು, ಹೊಸ ಜನರ ಭೇಟಿ, ವಿವಿಧ ಆಸಕ್ತಿಗಳನ್ನು ಅನ್ವೇಷಿಸುವುದೆಂದರೆ ಇವರಿಗೆ ಭಾರೀ ಖುಷಿ (Happy).
• ಕರ್ಕಾಟಕ (Cancer)
ಭಾವಜೀವಿಗಳಾಗಿರುವ ಕರ್ಕಾಟಕ ರಾಶಿಯ ಜನ ನೈಸರ್ಗಿಕವಾಗಿ ಆರೈಕೆ ಮಾಡುವ ಗುಣ ಹೊಂದಿದ್ದಾರೆ. ಪ್ರೀತಿ ತುಂಬಿದ ಮನೆಯಲ್ಲಿ ಇತರರಿಗೆ ಆರೈಕೆ (Care) ಮಾಡುವುದರಲ್ಲಿ ಸಂತಸ ಕಾಣುತ್ತಾರೆ. ಭಾವನಾತ್ಮಕ (Emotional) ಸಂಪರ್ಕವಿದ್ದರೆ ಮಾತ್ರ ಇವರಿಗೆ ಖುಷಿ.
• ಸಿಂಹ (Leo)
ಸ್ವ ಅಭಿವ್ಯಕ್ತಿಯಲ್ಲಿ (Self Expression) ಆಸಕ್ತಿ ಹೊಂದಿರುವ ಸಿಂಹ ರಾಶಿಯ ಜನ ಕ್ರಿಯಾಶೀಲವಾಗಿ ತಮ್ಮನ್ನು ಅಭಿವ್ಯಕ್ತಿಸಿಕೊಳ್ಳಲು ಇಷ್ಟಪಡುತ್ತಾರೆ. ತಮ್ಮ ಪ್ರತಿಭೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದರಲ್ಲಿ ಖುಷಿ ಕಾಣುತ್ತಾರೆ.
ಈ ರಾಶಿಯವರು ಅರೇಂಜ್ಡ್ ಮ್ಯಾರೇಜ್ ಆಗೋದು ಪಕ್ಕಾ..ಯಾಕೆ ಗೊತ್ತಾ..?
• ಕನ್ಯಾ (Virgo)
ಎಲ್ಲವೂ ನೀಟಾಗಿ ಇರಬೇಕು ಎನ್ನುವ ಕನ್ಯಾ ರಾಶಿಯವರು ಪರಿಪೂರ್ಣತೆ (Perfection) ಮತ್ತು ನಿಖರತೆಯಲ್ಲೇ ಸಂತಸ ಕಾಣುತ್ತಾರೆ. ತಮ್ಮ ಸುತ್ತಲ ವಾತಾವರಣವನ್ನು ಸುಧಾರಿಸಲು ಯತ್ನಿಸುತ್ತಾರೆ, ಇತರರಿಗೆ ಸಹಾಯ (Help) ಮಾಡುವುದರಲ್ಲಿ ಖುಷಿ ಕಾಣುತ್ತಾರೆ.
• ತುಲಾ (Libra)
ಸಂಬಂಧಗಳು (Relations) ಚೆನ್ನಾಗಿದ್ದರೆ ತುಲಾ ರಾಶಿಯವರು ಖುಷಿಯಾಗಿರುತ್ತಾರೆ. ಉತ್ತಮ ವಾತಾವರಣ ಸೃಷ್ಟಿಸಲು, ಸಮತೋಲನದ ಬದುಕನ್ನು ಬಾಳಲು ಇಷ್ಟಪಡುತ್ತಾರೆ. ಸಾಮರಸ್ಯ (Harmony) ಮತ್ತು ಸಮತೋಲನದ ಭಾವನೆ ಇವರಲ್ಲಿ ರಕ್ತಗತವಾಗಿದೆ.
• ವೃಶ್ಚಿಕ (Scorpio)
ಆಳವಾದ ಪ್ರೀತಿ, ಮೋಹ, ತೀವ್ರತೆಯನ್ನು (Intensity) ಹೊಂದಿರುವ ವೃಶ್ಚಿಕ ರಾಶಿಯ ಜನ ಜೀವನದ ನಿಗೂಢತೆಗಳನ್ನು ಅರಿಯುವ ಪ್ರಯತ್ನದಲ್ಲಿ ಖುಷಿ ಪಡುತ್ತಾರೆ. ಆಳವಾದ ಬಾಂಧವ್ಯ ಹೊಂದಿರುವ ಅತ್ಯುತ್ತಮ ಸಂಪರ್ಕಗಳೂ ಇವರಿಗೆ ಅಗತ್ಯ.
• ಧನು (Sagittarius)
ಬುದ್ಧಿವಂತಿಕೆ (Wisdom) ಮತ್ತು ಸಾಹಸ ಬಯಸುವ ಧನು ರಾಶಿಯ ಜನ ಹೊಸ ಹೊಸ ಅನ್ವೇಷಣೆಗಳಲ್ಲಿ ಖುಷಿ ಕಾಣುತ್ತಾರೆ. ಬದಲಾವಣೆ ಬಯಸುತ್ತಾರೆ, ಮನಸ್ಸನ್ನು ವಿಸ್ತರಿಸುವ ಚಟುವಟಿಕೆಗಳೆಂದರೆ ಇವರಿಗೆ ಭಾರೀ ಇಷ್ಟ.
• ಮಕರ (Capricorn)
ಮಹತ್ವಾಕಾಂಕ್ಷಿ (Ambitious), ಗುರಿ ಆಧಾರಿತ ಮಕರ ರಾಶಿಯ ಜನ ತಮ್ಮ ಸಾಧನೆ, ಅಂತಸ್ತು ಮತ್ತು ಕನಸುಗಳನ್ನು ಸಾಕಾರಗೊಳಿಸುವಲ್ಲಿ ಖುಷಿ ಕಾಣುತ್ತಾರೆ.
• ಕುಂಭ (Aquarius)
ವಿಭಿನ್ನ ದೃಷ್ಟಿಕೋನದ ಕುಂಭ ರಾಶಿಯ ಜನ ಅಸಾಂಪ್ರದಾಯಿಕ ಚಿಂತನಾಕ್ರಮ ಹೊಂದಿರುತ್ತಾರೆ. ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ, ಸಮಾನ ಮನಸ್ಕ ಸ್ನೇಹಿತರ ಜತೆಗಿದ್ದು ಕೆಲಸ ಮಾಡುವುದೆಂದರೆ ಇವರಿಗೆ ಖುಷಿ.
• ಮೀನ (Pisces)
ಕನಸುಗಾರರಾಗಿರುವ ಮೀನ ರಾಶಿಯ ಜನ ಅಂತಃಪ್ರಜ್ಞೆ ಹೊಂದಿದ್ದು, ಭಾವನಾತ್ಮಕವಾಗಿ ಎಲ್ಲರನ್ನೂ ಅರಿತುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಅಂತರಂಗದೊಂದಿಗೆ ಬೆಸುಗೆ ಸಾಧಿಸುವ ಕಲಾತ್ಮಕ, ಕ್ರಿಯಾಶೀಲ (Creative) ವಿಚಾರಗಳಲ್ಲಿ ಸಂತಸ ಪಡುತ್ತಾರೆ.