ನಾಳೆಯಿಂದ ಪವಿತ್ರ ಶ್ರಾವಣ ಮಾಸ ಆರಂಭವಾಗಲಿದ್ದು, ಅನೇಕ ಭಕ್ತರು ಈ ತಿಂಗಳಲ್ಲಿ ಉಪವಾಸ ವ್ರತ ಆಚರಣೆ ಮಾಡುತ್ತಾರೆ. ಇನ್ನು ಕೆಲವರು ಮಾಂಸಾಹಾರ ಬಿಡುತ್ತಾರೆ. ಹಾಗಾದರೆ ಶ್ರಾವಣ ಮಾಸದಲ್ಲಿ ಏನು ತಿನ್ನಬೇಕು ಹಾಗೂ ಏನು ತಿನ್ನಬಾರದು ಎಂಬ ಮಾಹಿತಿ ಇಲ್ಲಿದೆ.
ನಾಳೆಯಿಂದ ಪವಿತ್ರ ಶ್ರಾವಣ ಮಾಸ ಆರಂಭವಾಗಲಿದ್ದು, ಅನೇಕ ಭಕ್ತರು ಈ ತಿಂಗಳಲ್ಲಿ ಉಪವಾಸ ವ್ರತ ಆಚರಣೆ ಮಾಡುತ್ತಾರೆ. ಇನ್ನು ಕೆಲವರು ಮಾಂಸಾಹಾರ ಬಿಡುತ್ತಾರೆ. ಹಾಗಾದರೆ ಶ್ರಾವಣ ಮಾಸದಲ್ಲಿ ಏನು ತಿನ್ನಬೇಕು ಹಾಗೂ ಏನು ತಿನ್ನಬಾರದು ಎಂಬ ಮಾಹಿತಿ ಇಲ್ಲಿದೆ.
ಶ್ರಾವಣ ಮಾಸದಲ್ಲಿ ಸೋಮವಾರ ವ್ರತ ಎಂದು ಉಪವಾಸ ಆಚರಿಸುತ್ತಾರೆ. ಮತ್ತೆ ಕೆಲವರು ಮಾಂಸ ಮತ್ತು ಮದ್ಯಗಳನ್ನು ತ್ಯಜಿಸಿ ಒಂದು ತಿಂಗಳು ಸಸ್ಯಾಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಇನ್ನು ಕೆಲವರು ಊಟವನ್ನು ದಿನಕ್ಕೊಂದು ಹೊತ್ತಿಗೆ ಮಾತ್ರ ಸೀಮಿತಗೊಳಿಸುತ್ತಾರೆ. ಹೀಗೆ ಹಿಂದೂಗಳು ಒಂದಲ್ಲ ಒಂದು ರೀತಿಯಲ್ಲಿ ಆಹಾರದ ವಿಷಯದಲ್ಲಿ ಕಟ್ಟುಪಾಡುಗಳನ್ನು ಅನುಸರಿಸುತ್ತಾರೆ. ಹಾಗಾದರೆ ಈ ತಿಂಗಳು ಆರೋಗ್ಯ ಮತ್ತು ಭಕ್ತಿಯ ದೃಷ್ಟಿಯಿಂದ ಏನು ಸೇವಿಸಬೇಕು ಮತ್ತು ಏನು ಸೇವಿಸಬಾರದು ಎಂಬ ಡೀಟೇಲ್ಸ್ ಇಲ್ಲಿದೆ.
ಮದ್ಯಪಾನ ಹಾಗೂ ಮಾಂಸಾಹಾರ ಸೇವನೆ ಬೇಡ
ಶ್ರಾವಣ ಮಾಸದಲ್ಲಿ ಮದ್ಯಪಾನ ಹಾಗೂ ಮಾಂಸಾಹಾರ ಸೇವನೆ ಮಾಡಬಾರದು. ಈ ತಿಂಗಳು ಮದ್ಯಪಾನದಿಂದ ಸಂಪೂರ್ಣ ದೂರವುಳಿಯಿರಿ. ಅದೇ ರೀತಿ ಮೊಟ್ಟೆ, ಮೀನು ಹಾಗೂ ಯಾವುದೇ ಮಾಂಸವನ್ನು ಶ್ರಾವಣದಲ್ಲಿ ತಿನ್ನಬಾರದು.
Sawan Month 2023: ಇದು ಶಿವನು 'ವಿಷ' ಕುಡಿದ ಶ್ರಾವಣ ಮಾಸ; ಮಹಾದೇವನ ಕೃಪೆಗಾಗಿ ಏನು ಮಾಡಬೇಕು?
ಶ್ರಾವಣದಲ್ಲಿ ಬದನೆಕಾಯಿ ತಿನ್ನಬಾರದು
ಶ್ರಾವಣ ಮಾಸದಲ್ಲಿ ಬದನೆಕಾಯಿಯನ್ನು ತಿನ್ನಬಾರದು. ಇದು ಸಂಪೂರ್ಣ ಅಪವಿತ್ರ ಎಂದು ಹೇಳಲಾಗಿದ್ದು, ಬಹಳಷ್ಟು ಜನರು ಶ್ರಾವಣದಲ್ಲಿ ಇದರಿಂದ ದೂರವುಳಿಯುತ್ತಾರೆ.
ಹಾಲು ಹಾಗೂ ಹಸಿರು ತರಕಾರಿ ಬೇಡ
ಉಪವಾಸ ವೃತಾಚರಣೆ ಮಾಡುವವರು ಹಾಲಿನಿಂದ ದೂರ ಉಳಿಯಬೇಕು. ಆಯುರ್ವೇದದ ಪ್ರಕಾರ, ಮಳೆಗಾಲದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಎಲ್ಲಾ ರೀತಿಯ ದೋಷಗಳನ್ನು ಇಂಬ್ಯಾಲೆನ್ಸ್ ಮಾಡುತ್ತವೆ. ಹಾಗೂ ಹಸಿರು ತರಕಾರಿಗಳು ಹಾಗೂ ಸೊಪ್ಪುಗಳನ್ನು ಶ್ರಾವಣದಲ್ಲಿ ಸೇವಿಸಬೇಡಿ. ಮತ್ತು ಅತಿಯಾಗಿ ಕರಿದ ಮಸಾಲಾ ಪದಾರ್ಥಗಳಿಂದ ದೂರವಿರಿ.
ಶ್ರಾವಣದ ಉಪವಾಸದ ವೇಳೆ ಏನು ತಿನ್ನಬೇಕು?
ಶ್ರಾವಣ ಮಾಸದಲ್ಲಿ ದಿನದಲ್ಲಿ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಿರಿ. ಬೆಳಗ್ಗೆ ಎದ್ದೊಡನೆ ಒಂದೆರಡು ಗ್ಲಾಸ್ ಬೆಚ್ಚನೆಯ ನೀರಿಗೆ ಸ್ವಲ್ಪ ನಿಂಬೆರಸ, ಜೇನುತುಪ್ಪ ಹಾಕಿಕೊಂಡು ಸೇವಿಸಿ. ಉಪವಾಸದ ಸಂದರ್ಭದಲ್ಲಿ ತಿಂಡಿಯ ಬದಲು ಒಂದು ಲೋಟ ಬಾಳೆಹಣ್ಣಿನ ಮಿಲ್ಕ್‌ಶೇಕ್ ಕುಡಿಯಬಹುದು.
ಬಾದಾಮಿಯಂತಹ ನಟ್ಸ್'ಗಳನ್ನು ಸೇವಿಸಬೇಕು. ಊಟಕ್ಕೆ 1 ಬಟ್ಟಲು ಸಲಾಡ್ ಅಥವಾ ಸಬುದಾನಾ ಕಿಚಡಿ ಮಾಡಿ ಸೇವಿಸಬಹುದು.
ಊಟದ ಸಮಯದಲ್ಲಿ 2 ಚಪಾತಿ, 1 ಬಟ್ಟಲು ದಾಲ್, 1 ಬಟ್ಟಲು ಸೂಪ್, 1 ಬಟ್ಟಲು ಮೊಸರು ಸೇವಿಸುವುದು ಉತ್ತಮ. ಮಲಗುವಾಗ 1 ಬಾಳೆಹಣ್ಣು ಸೇವಿಸಿ.
ಶನಿಯಿಂದ ನಾಶವಾಗದ ವಿಷಯೋಗ ಸೃಷ್ಟಿ; ಈ ನಾಲ್ಕು ರಾಶಿಯವರಿಗೆ ಇನ್ಮುಂದೆ ಬರೀ ಸಂಕಷ್ಟ..!