Astrology Tips : ಲಕ್ಷ್ಮಿ ಒಲಿಯಬೇಕೆಂದ್ರೆ ಈ ವಸ್ತು ಮನೆಯಲ್ಲಿ ಇರಕೂಡದು!

By Suvarna NewsFirst Published Apr 14, 2023, 5:18 PM IST
Highlights

ಅಕ್ಷಯ ತೃತೀಯ ಹತ್ತಿರ ಬರ್ತಿದೆ. ಜನರು ತಾಯಿ ಲಕ್ಷ್ಮಿ ಒಲಿಸಿಕೊಳ್ಳುವ ಪ್ರಯತ್ನ ನಡೆಸ್ತಾರೆ. ಈ ದಿನ ನಿಮ್ಮ ಮೇಲೂ ತಾಯಿ ಕೃಪೆ ತೋರಬೇಕು ಎಂದಾದ್ರೆ ಮನೆಯಲ್ಲಿರುವ ವಸ್ತುಗಳ ಮೇಲೆ ಕಣ್ಣು ಹಾಯಿಸಿ.   
 

ಏಪ್ರಿಲ್ 22ರಂದು ಅಕ್ಷಯ ತೃತೀಯವನ್ನು ಆಚರಿಸಲಾಗ್ತಿದೆ. ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಭಗವಂತ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. 

ಅಕ್ಷಯ ತೃತೀಯ (Akshaya Tritiya) ದಿನದಂದು ಚಿನ್ನ (Gold) ಖರೀದಿಸುವುದು ಶುಭಕರ. ಈ ದಿನ ಬಂಗಾರದ ಜೊತೆ ಅತ್ಯಮೂಲ್ಯ ಆಭರಣಗಳನ್ನು ಖರೀದಿಸುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಈ ದಿನ ಕೆಲ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕುವಂತೆಯೂ ಹೇಳಲಾಗುತ್ತದೆ. ಮನೆಯಲ್ಲಿರುವ ಕೆಲ ವಸ್ತುಗಳು ನಮ್ಮ ಜೀವನದಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ. ಆರ್ಥಿಕ (Financial) ನಷ್ಟಕ್ಕೆ ಇದು ಕಾರಣವಾಗುತ್ತದೆ. ಅಕ್ಷಯ ತೃತೀಯದ ದಿನ ಯಾವ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

Latest Videos

Chanakya Niti: ಅತಿಯಾಗಿ ತಿನ್ನೋ ವ್ಯಕ್ತಿಯ ಬಳಿ ಲಕ್ಷ್ಮೀ ನಿಲ್ಲೋದಿಲ್ವಂತೆ !

ಅಕ್ಷಯ ತೃತೀಯದಂದು ಮನೆಯಲ್ಲಿ ಈ ವಸ್ತು ಇಡಬೇಡಿ : 

ಶೂ (Shoe) ಮತ್ತು ಚಪ್ಪಲಿ : ಅಕ್ಷಯ ತೃತೀಯ ಶುಭ ದಿನವಾಗಿದೆ. ಈ ದಿನ ಲಕ್ಷ್ಮಿ (Lakshmi) ಮುನಿಸಿಕೊಳ್ಳುವಂತಹ ಯಾವುದೇ ವಸ್ತುವನ್ನು ಇಡಬಾರದು. ನೀವು ಮನೆಯಲ್ಲಿ ಹಳೆಯ, ಕೊಳಕಾದ ಮತ್ತು ಹರಿದ ಬೂಟುಗಳು ಮತ್ತು ಚಪ್ಪಲಿಗಳನ್ನು ಇಡಬಾರದು. ಇದು ಮನೆಯಲ್ಲಿದ್ದರೆ ಮನೆಗೆ  ಬಡತನವನ್ನು ಆಹ್ವಾನಿಸಿದಂತೆ. ನೀವು ಅಕ್ಷಯ ತೃತೀಯದ ದಿನ ಮನೆಯಲ್ಲಿರುವ ಹರಿದ ಚಪ್ಪಲಿಯನ್ನು ಹೊರಗೆ ಹಾಕಿ. ಹಾಗೆಯೇ ಮನೆಯ ಒಳಗೆ ಚಪ್ಪಲಿ – ಶೂ ಇಡಬೇಡಿ. ಮನೆಯ ಮುಖ್ಯ ದ್ವಾರದ ಮುಂದೆಯೂ ಚಪ್ಪಲಿಯನ್ನು ಚಲ್ಲಾಪಿಲ್ಲಿಯಾಗಿ ಎಸೆಯಬೇಡಿ.   

ಇವುಗಳನ್ನು ಅಡುಗೆ ಮನೆಯಿಂದ ಹೊರಗೆ ಹಾಕಿ : ತವಾ, ಪಾತ್ರೆಗಳು ಅಡುಗೆ ಮನೆಯಲ್ಲಿರುತ್ತವೆ. ಕೆಲವರು ಸ್ವಲ್ಪ ಹಾಳಾದ ತವಾವನ್ನೂ ಬಳಕೆ ಮಾಡ್ತಿರುತ್ತಾರೆ. ಆದ್ರೆ ಮುರಿದ ಪಾತ್ರೆ, ತವಾ, ಬಾಣಲೆ ಬಳಸಬಾರದು. ನೀವು ಅದನ್ನು ಮನೆಯಿಂದ ಹೊರಗೆ ಹಾಕಿ. ಇದು ಲಕ್ಷ್ಮಿಯನ್ನು ಸೆಳೆಯಲು ವಿಫಲವಾಗುತ್ತದೆ. ನೀವು ಅಕ್ಷಯ ತೃತೀಯದ ದಿನ ಇವೆಲ್ಲವನ್ನೂ ಮನೆಯಿಂದ ಹೊರಗೆ ಹಾಕಿದ್ರೆ ಒಳ್ಳೆಯದು.  

Marriage astrology: ಜಾತಕ ಹೀಗಿದ್ದರೆ ವಿಚ್ಚೇದನ ಆಗ್ಬೋದು!

ಹಳೆ ಪೊರಕೆ ಎಸೆದುಬಿಡಿ : ಪೊರಕೆಯನ್ನು ತಾಯಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಅಕ್ಷಯ ತೃತೀಯ ದಿನದಂದು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಕೆಟ್ಟ ಅಥವಾ ಮುರಿದ ಪೊರಕೆಯನ್ನು ಮನೆಯಲ್ಲಿ ಇಡಬಾರದು. ತಾಯಿ ಲಕ್ಷ್ಮಿ ಇದರಿಂದ ಕೋಪಗೊಳ್ಳುತ್ತಾಳೆ. ಮನೆಯಲ್ಲಿ ಹೊಸ ಪೊರಕೆ ಬಳಕೆ ಮಾಡಬೇಕು. ಮನೆಗೆ ತಂದ ಪೊರಕೆಯನ್ನು ಎದುರಿಗೆ ಇಡಬೇಡಿ. ಅದನ್ನು ಯಾರ ಕಣ್ಣಿಗೂ ಕಾಣದ ಜಾಗದಲ್ಲಿ ಇಡಬೇಕು. 

ಹಳೆಯ ಪೂಜಾ ಸಾಮಗ್ರಿ ಇಡಬೇಡಿ : ಮನೆಯಲ್ಲಿ ಪೂಜೆ ಸಮಯದಲ್ಲಿ ಬಳಸಿದ ಬಟ್ಟೆ ಹರಿದಿದ್ದರೆ ಅಥವಾ ಕಲೆಯಾಗಿದ್ದರೆ,  ಅಕ್ಷಯ ತೃತೀಯ ದಿನದಂದು ಅದನ್ನು ಮನೆಯ ಹೊರಗೆ ಹಾಕಿ. ಅದನ್ನು ನೆಲದಲ್ಲಿ ಹೂತುಹಾಕುವುದು ಒಳ್ಳೆಯದು. ದೇವರ ಮನೆ ಯಾವಾಗ್ಲೂ ಶುದ್ಧವಾಗಿರಬೇಕು. ಸ್ವಚ್ಛವಾಗಿರಬೇಕು. ಹಳೆ ವಸ್ತುಗಳನ್ನು ಅಲ್ಲಿ ಇಡಬಾರದು.  

ಕಸದ ಬುಟ್ಟಿ ಬಗ್ಗೆ ಇರಲಿ ಗಮನ : ಅಕ್ಷಯ ತೃತೀಯ ದಿನದಂದು, ಹಳೆಯ ಕಸದ ಬುಟ್ಟಿಯನ್ನು ಮನೆಯಲ್ಲಿ ಇಡಬೇಡಿ. ಅಕ್ಷಯ ತೃತೀಯ ದಿನದಂದು ಲಕ್ಷ್ಮಿ ದೇವಿಯು ಮನೆಗೆ ಆಗಮಿಸುತ್ತಾಳೆ ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ  ಮನೆಯಲ್ಲಿ ಮುರಿದ, ಹಾಳಾದ ಕಸದ ಬುಟ್ಟಿ ಇಡಬಾರದು. 

ಹಾಳಾದ ಪಿಠೋಪಕರಣ – ಗ್ಲಾಸ್ : ಮನೆಯಲ್ಲಿ ಹಾಳಾದ ಪಿಠೋಪಕರಣ, ಒಡೆದ ಗ್ಲಾಸ್ ಇದ್ರೆ ಅದನ್ನು ಕೂಡ ಮನೆಯಿಂದ ಹೊರಗೆ ಹಾಕಿ. ಲಕ್ಷ್ಮಿ ಯಾವಾಗ್ಲೂ ಸ್ವಚ್ಛವಾಗಿರುವ ಮನೆಯನ್ನು ಪ್ರವೇಶ ಮಾಡ್ತಾಳೆ. ಹಾಳಾದ, ಹಳೆಯ ವಸ್ತುಗಳು ಆಕೆಯ ಮನಸ್ಸನ್ನು ಬದಲಿಸುವ ಸಾಧ್ಯತೆಯಿರುತ್ತದೆ. 
 

click me!