Jyotish Remedy: ದುಷ್ಟ ಶಕ್ತಿಯ ಪ್ರಭಾವದಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಪರಿಹಾರ..

By Suvarna NewsFirst Published Apr 13, 2023, 1:57 PM IST
Highlights

ದುಷ್ಟ ಶಕ್ತಿಯ ಪ್ರಭಾವದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮನೆಯಲ್ಲಿ ಮಕ್ಕಳು, ಹಿರಿಯರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ - ಅವನ್ನು ತೊಡೆದು ಹಾಕಲು ಜ್ಯೋತಿಷ್ಯದ ಈ ಪರಿಹಾರಗಳು ಬಹಳ ಶಕ್ತಿಯುತವಾಗಿವೆ. 

ಸನಾತನ ಸೇರಿದಂತೆ ಎಲ್ಲಾ ಧರ್ಮಗಳಲ್ಲಿ ದೆವ್ವ, ಪಿಶಾಚಿಗಳ, ದುಷ್ಟ ಶಕ್ತಿಗಳ ಉಲ್ಲೇಖವಿದೆ. ಒಬ್ಬ ವ್ಯಕ್ತಿಯು ಪ್ರೇತದ ನೆರಳಿನಲ್ಲಿ ಒಮ್ಮೆ ಬಂದರೆ, ಅವನ ಜೀವನದಲ್ಲಿ ಅಸ್ಥಿರತೆ ಬರುತ್ತದೆ. ಕೆಲವೊಮ್ಮೆ ಆತ್ಮವು ವ್ಯಕ್ತಿಯನ್ನು ತಪ್ಪುಗಳನ್ನು ಮಾಡುವಂತೆ ಮಾಡುತ್ತದೆ. ಮನೆಯ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಭಯಭೀತರಾಗಿದ್ದಲ್ಲಿ, ಮನೆಯಲ್ಲಿ ದುಷ್ಟ ಶಕ್ತಿಗಳ ಉಲ್ಬಣವು ಖಂಡಿತವಾಗಿಯೂ ಇರುತ್ತದೆ. ಒಟ್ಟಿನಲ್ಲಿ ದುಷ್ಟ ಶಕ್ತಿಯು ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಯಾರಿಗಾದರೂ ಕಿರುಕುಳ ನೀಡುತ್ತದೆ ಎಂಬ ನಂಬಿಕೆ ಇದೆ. ಮಾಟ ಮಂತ್ರ, ದುಷ್ಟ ಶಕ್ತಿಗಳಿಂದ ಬಳಲುತ್ತಿದ್ದರೆ, ಮನೆಯಲ್ಲಿ ಸಮಸ್ಯೆಗಳ ಮೇಲೆ ಸಮಸ್ಯೆಗಳು ಹೆಚ್ಚುತ್ತಿದ್ದರೆ ಅವುಗಳಿಂದ ತಪ್ಪಿಸಿಕೊಳ್ಳಲು ಜ್ಯೋತಿಷ್ಯದ ಈ ಪರಿಹಾರ ಮಾಡಿ. 

ಮಕ್ಕಳು ಭಯಭೀತರಾಗಿದ್ದರೆ, ಅನಾರೋಗ್ಯ ಹೊಂದಿದ್ದರೆ..
ಮಕ್ಕಳು ಆಗಾಗ ಅನಾರೋಗ್ಯ ಪೀಡಿತರಾಗುತ್ತಲೇ ಇದ್ದರೆ, ಅಥವಾ ಮನೆಯೊಳಗೇ ಓಡಾಡಲು ಹೆದರುತ್ತಿದ್ದರೆ- ದುಷ್ಟ ಶಕ್ತಿಯ ಪ್ರಭಾವದಿಂದ ಅವರನ್ನು ಮುಕ್ತಗೊಳಿಸಲು ಮನೆಯ ದಕ್ಷಿಣ ದಿಕ್ಕಿಗೆ ತುಪ್ಪದ ದೀಪವನ್ನು ಹಚ್ಚಿ. ಪೂರ್ವಜರಿಂದ ಕುಟುಂಬದ ರಕ್ಷಣೆಗಾಗಿ ಪ್ರಾರ್ಥಿಸಿ.

Latest Videos

ತೊಂದರೆಗಳು ಹೆಚ್ಚಿದ್ದರೆ..
ನಿಮಗೆ ದುಷ್ಟ ಶಕ್ತಿಗಳಿಂದ ತೊಂದರೆಯಾಗಿದ್ದರೆ, ಅಮಾವಾಸ್ಯೆಯ ರಾತ್ರಿ ಆಹಾರ ಸೇವಿಸಿದ ನಂತರ ಪವಿತ್ರ ಸ್ಥಳದಲ್ಲಿ ಅಥವಾ ಪೂಜಾ ಮನೆಯಲ್ಲಿ ಬೆಳ್ಳಿಯ ಬಟ್ಟಲಿನಲ್ಲಿ ಕರ್ಪೂರ ಮತ್ತು ಲವಂಗವನ್ನು ಸುಟ್ಟು ಹಾಕಿ. ಇದರ ನಂತರ, ದುಷ್ಟ ಶಕ್ತಿಗಳಿಂದ ರಕ್ಷಣೆಗಾಗಿ ಕುಲ ದೇವತೆಯನ್ನು ಪ್ರಾರ್ಥಿಸಿ. ನಂತರ, ಇಡೀ ಮನೆಯಲ್ಲಿ ಕರ್ಪೂರ ಮತ್ತು ಲವಂಗದ ದೀಪದ ಹೊಗೆ ಹರಿಸಿ. ಈ ಪರಿಹಾರವನ್ನು ಮಾಡುವುದರಿಂದ ದುಷ್ಟ ಶಕ್ತಿಗಳ ಸಮಸ್ಯೆ ದೂರವಾಗುತ್ತದೆ. ಮಲಗುವ ಮುನ್ನ ಈ ಪರಿಹಾರವನ್ನು ಮಾಡಬೇಕು ಎಂಬುದನ್ನು ನೆನಪಿನಲ್ಲಿಡಬೇಕು.

ಎಂಥ ಮಂಗಳಕರ ದಿನವಾದರೂ ಈ ಬಾರಿ Akshaya Tritiyaದಂದು ವಿವಾಹಕ್ಕಿಲ್ಲ ಮುಹೂರ್ತ!

ಮಾಟಮಂತ್ರದ ಶಕ್ತಿ ಅಡಗಿಸಲು..
ನೀವು ಮಾಂತ್ರಿಕ ತಡೆಗೋಡೆಯಿಂದ ತೊಂದರೆಗೊಳಗಾಗಿದ್ದರೆ ಮತ್ತು ಅದನ್ನು ತೊಡೆದುಹಾಕಲು ಬಯಸಿದರೆ, ಪುಷ್ಯ ನಕ್ಷತ್ರದಲ್ಲಿ ಮನೆಯ ಹೊರಗೆ ಧಾತುರಾ ಗಿಡವನ್ನು ನೆಡಿ. ಮನೆಯ ಮುಖ್ಯ ಬಾಗಿಲಲ್ಲಿ ಜಾಗವಿಲ್ಲದಿದ್ದರೆ ಧಾತುರ ಗಿಡದ ಬೇರನ್ನು ಕೂಡ ನೆಡಬಹುದು. ಈ ಪರಿಹಾರವನ್ನು ಮಾಡಿದರೆ ಪ್ರೇತ ವಿಘ್ನ ನಿವಾರಣೆಯಾಗುತ್ತದೆ. ರವಿವಾರ ಬೆಳಗ್ಗೆ ಬಲಗೈಗೆ ಕಪ್ಪು ದತುರಾ ಬೇರನ್ನು ಕಟ್ಟಿಕೊಂಡರೆ ಮಾಟಮಂತ್ರದಿಂದ ತ್ವರಿತ ಪರಿಹಾರ ಸಿಗುತ್ತದೆ.

ಪ್ರೇತ ನಿವಾರಣೆಗಾಗಿ..
ದೆವ್ವ ಅಥವಾ ಮಾಟಗಾತಿಯ ಅಡೆತಡೆಗಳಿಂದ ನೀವು ತೊಂದರೆಗೊಳಗಾಗಿದ್ದರೆ, ಅಶೋಕ ಮರದ ಏಳು ಎಲೆಗಳನ್ನು ಮನೆಗೆ ತನ್ನಿ. ಸ್ನಾನ-ಧ್ಯಾನವನ್ನು ತೆಗೆದುಕೊಂಡ ನಂತರ, ಕ್ರಮಬದ್ಧವಾಗಿ ಪೂಜಾ ಮಂತ್ರವನ್ನು ಪಠಿಸಿ. ಕೊನೆಗೆ ದೇವರ ಕೋಣೆಯಲ್ಲಿ ಅಶೋಕ ಎಲೆಯನ್ನು ಇಟ್ಟು ಪ್ರತಿದಿನ ಅಶೋಕ ಎಲೆಯನ್ನು ಪೂಜಿಸಿ. ಆದರೆ, ಎಲೆಗಳು ಒಣಗಿದಾಗ, ಹೊಸ ಎಲೆಗಳನ್ನು ತರಬೇಕು.. ಈ ಪರಿಹಾರವನ್ನು ನಿರಂತರ ಮಾಡುವುದು ಉತ್ತಮ. 

ಅನಾರೋಗ್ಯ ತಡೆಗಾಗಿ
ದುಷ್ಟ ಶಕ್ತಿಗಳು ಮತ್ತು ಅಡೆತಡೆಗಳನ್ನು ತಕ್ಷಣವೇ ತೊಡೆದು ಹಾಕಲು, ಜೀರಿಗೆಯನ್ನು ಮುಷ್ಠಿಯಲ್ಲಿ ಹಿಡಿದು ರೋಗಿಯ ದೇಹದ ಸುತ್ತ  7 ಬಾರಿ ಸುತ್ತಿಸಿ, ದೇಹಕ್ಕೆ ಸ್ಪರ್ಶಿಸಿ ಮತ್ತು ಬೆಂಕಿಯಲ್ಲಿ ಹಾಕಿ. ಜೀರಿಗೆ ಹೊಗೆಯು ರೋಗಿಯ ಮೈ ಪೂರ್ತಿ ಸೋಕುವಂತೆ ನೋಡಿಕೊಳ್ಳಿ..

Shani Chandra In Kumbh: 3 ರಾಶಿಗಳ ಮನಸ್ಸನ್ನು ಕೆಡಿಸಿ, ಜೀವನ ನರಕವಾಗಿಸೋ ವಿಷ ಯೋಗ

ದುಷ್ಟ ಶಕ್ತಿ ದಮನಕ್ಕೆ
ಸೂರ್ಯಾಸ್ತದ ಸಮಯದಲ್ಲಿ ಸ್ನಾನ ಮಾಡಿದ ನಂತರ, ಶುದ್ಧವಾದ ಪಾತ್ರೆಯಲ್ಲಿ ಅರ್ಧ ಕಿಲೋ ಹಸಿ ಹಸುವಿನ ಹಾಲಿನಲ್ಲಿ ಒಂಬತ್ತು ಹನಿ ಶುದ್ಧ ಜೇನುತುಪ್ಪವನ್ನು ಮಿಶ್ರಣ ಮಾಡಿ. ಮನೆಯ ಮೇಲ್ಛಾವಣಿಯಿಂದ ಕೆಳಗಿನವರೆಗೆ, ಪ್ರತಿ ಕೋಣೆ, ವಾಸದ ಕೋಣೆ, ಗ್ಯಾಲರಿ ಇತ್ಯಾದಿಗಳಲ್ಲಿ ಆ ಹಾಲನ್ನು ಚಿಮುಕಿಸುತ್ತಾ ಹನುಮಾನ್ ಚಾಲೀಸಾ ಅಥವಾ ಗಾಯತ್ರಿ ಮಂತ್ರವನ್ನು ಪಠಿಸುತ್ತಲೇ ಇರಿ. ಉಳಿದ ಹಾಲನ್ನು ಮುಖ್ಯ ದ್ವಾರದ ಹೊರಗೆ ಬಿಡಿ.

click me!