Zodiac Animal: ನಿಮ್ಮಲ್ಲಿ ಈ ಮೃಗದ ಅಂಶಗಳಿವೆಯಾ? ಚೆಕ್ ಮಾಡ್ಕೊಳ್ಳಿ

By Suvarna News  |  First Published Nov 30, 2021, 3:14 PM IST

ನಿಮ್ಮಲ್ಲಿ ಯಾವ ಪ್ರಾಣಿಯ ಅಂಶವಿದೆ? ಯಾವತ್ತಾದರೂ ಗಮನಿಸಿದ್ದೀರಾ? ಇಲ್ಲಿದೆ ನೋಡಿಕೊಳ್ಳಿ.


ಕೆಲವರನ್ನು ನೋಡಿದಾಗ, ಹಣ ನೋಡಿದರೆ ನಾಯಿಯ ಥರಾ ಆಡ್ತಾನೆ ಎಂದು ಹೇಳುತ್ತಾರೆ. ಅವನು ಜಂಭದ ಕೋಳಿ ಎಂದು ಹೇಳುವುದುಂಟು. ಅವನು ಹಾವಿನ ಹಾಗೆ ದ್ವೇಷ ಸಾಧಿಸ್ತಾನೆ ಎಂದೂ ಹೇಳುವುದನ್ನು ಕೇಳಿರಬಹುದು. ಆಯಾ ಜನ್ಮರಾಶಿಗೆ (Zodiac) ಹೊಂದುವ ಸ್ವಭಾವ ಇದ್ದಂತೆ, ಕೆಲವು ಮೃಗಗಳ ಚರ್ಯೆಗಳು ಕೂಡ ಕೆಲವು ಜನ್ಮರಾಶಿಗಳನ್ನು ಹೊಂದಿಕೊಂಡು ಇರುತ್ತವೆ. ಅಂದರೆ ಜನ್ಮರಾಶಿ ಯಾವುದು ಎಂದು ಹೇಳಿದರೆ, ಆತನಲ್ಲಿ ಯಾವ ಪ್ರಾಣಿಯ ಅಂಶಗಳು ಇವೆ ಥಟ್ಟನೆ ಎಂದು ಹೇಳಿಬಿಡಬಹುದು. ಹಲವು ಮೃಗಗಳಿಗೆ ಅವುಗಳದೇ ಆದ ವ್ಯಕ್ತಿತ್ವಗಳೂ ಇರುತ್ತವೆ. ಹಾಗಿದ್ದರೆ ಬನ್ನಿ, ನಿಮ್ಮಲ್ಲಿ ಯಾವ ಮೃಗದ ಅಂಶವಿದೆ? ಇಲ್ಲಿ ತಿಳಿಯೋಣ.

ಮೇಷ ರಾಶಿ (Aries)
ನಿಮ್ಮ ಮೃಗ ಆನೆ. ಇಂದ್ರನ ವಾಹನ ಐರಾವತ ಎಂಬ ಆನೆ ಎಂದು ನೆನಪಿಸಿಕೊಳ್ಳಿ. ಅತ್ಯಂತ ಬಲಶಾಲಿಯಾದ ಆನೆ, ಭೂಮಿಯನ್ನು ಹೊತ್ತುಕೊಂಡಿರುವ ಎಂಟು ದಿಗ್ಗಜಗಳಲ್ಲಿ ಒಂದು ಎಂದು ಕತೆ. ನೀವು ಕೂಡ ಕಷ್ಟಸಹಿಷ್ಣು. ಎಷ್ಟೇ ಕೆಲಸ ಹೊರಿಸಿದರೂ ಮಾಡುವ ಸ್ವಭಾವ ನಿಮ್ಮದು.

ವೃಷಭ ರಾಶಿ (Taurus)
ನಿಮ್ಮ ಮೃಗ ಪರಮೇಶ್ವರನ ವಾಹನವಾದ ನಂದಿ. ನಿಮಗೆ ಕೃಷಿ ಎಂದರೆ ಇಷ್ಟ. ಕೃಷಿಗೆ ಮೂಲವೇ ಗೋವು, ನಂದಿ ಅಥವಾ ಬಸವ. ನೀವು ಕೂಡ ಕಷ್ಟಸಹಿಷ್ಣು ಮತ್ತು ಪರರಿಗಾಗಿ ಸ್ವಾರ್ಥವಿಲ್ಲದೆ ಸೇವೆ ಮಾಡುವ ಸ್ವಭಾವವನ್ನು ಹೊಂದಿದ್ದೀರಿ. ನೀವು ಸುಮ್ಮನೇ ಗುಮ್ಮುವವರಲ್ಲ.

Power around you: ನಿಮ್ಮ ಸುತ್ತ ಇರೋ ಪ್ರಭಾವಳಿಯನ್ನು ತಿಳಿಯುವುದು ಹೇಗೆ?

Tap to resize

Latest Videos

undefined

ಮಿಥುನ ರಾಶಿ (Gemini)
ನೀವು ಗಣಪತಿಯ ವಾಹನವಾದ ಇಲಿಯನ್ನು ನಿಮ್ಮ ಮೃಗೀಯ ಚೆಹರೆಯಾಗಿ ಹೊಂದಿದ್ದೀರಿ. ಇಲಿ ಸಂದಿಗೊಂದಿಗಳಲ್ಲಿ ನುಸುಳುವಂತೆ ನೀವು ಕೂಡ, ಕಷ್ಟಕರವಾದ ಕೆಲಸಗಳನ್ನು ಎಲ್ಲೆಲ್ಲೋ ಓಡಾಡಿ ಸಾಧಿಸಿಕೊಳ್ಳುವಿರಿ. ಗಣಾಧಿಪನ ಆಶೀರ್ವಾದ ಸದಾ ನಿಮ್ಮ ಮೇಲಿರುವುದು.

ಕಟಕ ರಾಶಿ (Cancer)
ಷಣ್ಮುಖನ ವಾಹನ ಮಯೂರ ನಿಮ್ಮ ಪೌರಾಣಿಕ ಸಂಕೇತ. ನಿಮ್ಮನ್ನು ಕಂಡರೆ ಕ್ಷುದ್ರ ವ್ಯಕ್ತಿಗಳು ದೂರವೇ ಇರುವರು. ನಿಮ್ಮ ನಿಲುಮೆ ಧೀರಗಂಭೀರ ಹಾಗೂ ನಿಮ್ಮ ನಡೆ ನುಡಿ ಉದಾತ್ತವಾದುದು. ನೀವು ಸಭೆಯ ಮಧ್ಯದಲ್ಲಿದ್ದರೂ ನಿಮ್ಮ ಸೌಂದರ್ಯದಿಂದ ಎಲ್ಲರ ಗಮನ ಸೆಳೆಯುವಿರಿ.

ಸಿಂಹ ರಾಶಿ (Leo)
ದುರ್ಗೆಯನ್ನು ಸಿಂಹವಾಹನೆ ಎನ್ನುತ್ತಾರೆ. ನಿಮ್ಮ ಪ್ರಾಣಿಯೂ ಈ ಸಿಂಹವೇ. ಇದನ್ನೇ ಶಾರ್ದೂಲ ಎಂದೂ ಹೇಳುತ್ತಾರೆ. ನೀವು ವ್ಯಗ್ರರಾದರೆ ಕಷ್ಟ ಎಂದು ಯಾರೂ ನಿಮ್ಮನ್ನು ಎದುರು ಹಾಕಿಕೊಳ್ಳುವುದಿಲ್ಲ. ನೀವೊಂಥರಾ ರಾಜನಂತೆ. ದೇವಿಯ ಆಶೀರ್ವಾದ ನಿಮಗೆ ಸದಾ ಇರುತ್ತದೆ.

ಕನ್ಯಾ ರಾಶಿ (Virgo)
ಸರಸ್ವತೀ ದೇವಿಯನ್ನು ಕಳಹಂಸಾಲಸಯಾನೆ ಎಂದು ಗುರುತಿಸುತ್ತಾರೆ. ಎಂದರೆ ಹಂಸದ ಮೇಲೆ ಪ್ರಯಾಣ ಮಾಡುವವಳು. ಹಂಸ ಧವಳ ಚಾರಿತ್ರ್ಯಕ್ಕೆ ಸಂಕೇತ. ನೀವು ಶ್ರೀರಾಮನಂತೆ, ಒಂದು ಚೂರು ಅಪಕೀರ್ತಿ ಬಂದರೂ ಸಹಿಸುವವರಲ್ಲ. ಬಿಳಿ ಬಣ್ಣವನ್ನು ನೀವು ಇಷ್ಟಪಡುತ್ತೀರಿ.

ತುಲಾ ರಾಶಿ (Libra)
ಕರಡಿ ನಿಮ್ಮ ಇಷ್ಟದ ಪ್ರಾಣಿ. ಜಾಂಬವ ಎಂದರೆ ಕರಡಿಗಳ ರಾಜ. ಇವನು ಶ್ರೀರಾಮನ ಸೈನ್ಯದಲ್ಲಿ ಇದ್ದವನು. ಹಾಗೇ ಶಿವ- ಪಾರ್ವತಿಯರ ಮದುವೆಯನ್ನೂ ನೋಡಿದವನು. ನೀವು ತುಂಬ ಹಳೆಯ ಸಂಗತಿಗಳ ಮೇಲೆ ಹೆಚ್ಚಿನ ವ್ಯಾಮೋಹವನ್ನು ಹೊಂದಿರುವಿರಿ. ಗೆಳೆಯರು ನಿಮಗೆ ಹೆಚ್ಚು.

Sexy zodiac Signs: ನಿಮ್ಮ ರಾಶಿಚಕ್ರಕ್ಕೆ ಯಾವುದು ಸೂಕ್ತ?

ವೃಶ್ಚಿಕ ರಾಶಿ (Scorpio)
ನಿಮ್ಮ ಇಷ್ಟದ ಮೃಗವೆಂದರೆ ಪುರುಷಾಮೃಗ. ಇದೊಂದು ವಿಚಿತ್ರ ಪ್ರಾಣಿ. ಮಹಾಭಾರತದಲ್ಲಿ ಬರುತ್ತದೆ. ಭೀಮಸೇನ ಇದನ್ನು ರಾಜಸೂಯ ಯಾಗದ ಸಂದರ್ಭದಲ್ಲಿ ಕೈಲಾಸದಿಂದ ತರುತ್ತಾನೆ. ಇದು ಶುದ್ಧೀಕರಣದ ಮೃಗ. ನೀವು ಹೋದಲ್ಲೆಲ್ಲಾ ಶುಚಿತ್ವವನ್ನು ಬಯಸುವ ವ್ಯಕ್ತಿತ್ವದವರು.

ಧನು ರಾಶಿ (Sagittarius)
ನಿಮಗೆ ಮಹಾವಿಷ್ಣುವಿನ ಅವತಾರವಾದ ನರಸಿಂಹ ಒಪ್ಪುವ ಮೃಗ. ನರಸಿಂಹ ಮೃಗವೂ ಹೌದು, ಅರೆ ಮಾನವನೂ ಹೌದು. ಅಂದರೆ ನಿಮ್ಮಲ್ಲಿ ಮೃಗತ್ವವೂ ಸ್ವಲ್ಪ ಇದೆ. ಮಾನವತ್ವವೂ ಸಾಕಷ್ಟಿದೆ. ದೇವರನ್ನು ಪ್ರಶ್ನಿಸುವವರನ್ನು ನೀವು ಸಹಿಸುವುದಿಲ್ಲ. ಏರಿ ಬಂದವರನ್ನು ಬಿಡುವುದೂ ಇಲ್ಲ.

ಮಕರ ರಾಶಿ (Capricorn)
ಮಹಾವಿಷ್ಣುವಿನ ಇನ್ನೊಂದು ಅವತಾರವಾದ ವರಾಹ ನಿಮಗೆ ಇಷ್ಟದ ಪ್ರಾಣಿ. ಇದು ಶ್ವೇತವರಾಹ. ಅಂದರೆ ಬಿಳಿ ಬಣ್ಣದ ವರಾಹ. ನೀವು ಕೊಳೆಯನ್ನು ಸ್ವಚ್ಛ ಮಾಡಲು ಬಯಸುತ್ತೀರಿ; ಆದರೆ ನೀವು ಸ್ವತಃ ಕೊಳೆಯಾಗುವವರಲ್ಲ. ನಿಮಗೆ ಬಗೆಬಗೆಯ ಆಹಾರಗಳು ಇಷ್ಟ.

ಕುಂಭ ರಾಶಿ (Aquarius)
ಮಹಾವಿಷ್ಣುವಿನ ವಾಹನವಾದ ಗರುಡ ನಿಮ್ಮ ಚೆಹರೆಯ ಪೌರಾಣಿಕ ಪಕ್ಷಿ. ಗರುಡನನ್ನು ಕಂಡರೆ ಹಾವುಗಳು ಹೆದರುತ್ತವೆ. ಹೀಗಾಗಿ ನಿಮಗೆ ಹಾವುಗಳಿಂದಲೂ ವಿಷಪ್ರಾಶನದಿಂದಲೂ ಭಯವಿಲ್ಲ. ಪಕ್ಷಿಗಳಿಗೆ ನಿಮ್ಮನ್ನು ಕಂಡರೆ ಇಷ್ಟವಿರಬಹುದು. ಅವುಗಳನ್ನು ಸಾಕಬಹುದು.



ಮೀನ ರಾಶಿ (Pisces)
ಮೀನ ಎಂದರೆ ಮೀನು. ಮಹಾವಿಷ್ಣುವಿನ ಮೊದಲ ಅವತಾರವಾದ ಮತ್ಸ್ಯಾವತಾರ ನಿಮಗೆ ಇಷ್ಟ. ಮತ್ಸ್ಯನು, ಪ್ರಳಯದಲ್ಲಿ ಮುಳುಗಿ ಹೋದ ಭೂಮಿಯನ್ನು ಮೇಲೆ ಎತ್ತಿ, ಮಹಾನೌಕೆಯನ್ನು ಎಳೆದೊಯ್ದು ದಡ ಮುಟ್ಟಿಸಿದಂತೆ ನೀವು ಕೂಡ ಮುಳುಗಲಿರುವ ಕೆಲಸಗಳನ್ನು ದಡ ಸೇರಿಸುವಿರಿ.

 

click me!