ಸರ್ಪ ದೋಷ ಎಂದರೇನು? ಯಾರಿಗೆ ಬರುತ್ತದೆ? ಖ್ಯಾತ ಜ್ಯೋತಿಷಿ ಡಾ. ಗೌರಿ ಸುಬ್ರಹ್ಮಣ್ಯ ಮಾಹಿತಿ...

By Suchethana D  |  First Published Nov 1, 2024, 4:48 PM IST

ಸರ್ಪ ದೋಷ ಎಂದರೇನು? ಯಾರಿಗೆ ಬರುತ್ತದೆ? ಖ್ಯಾತ  ಜ್ಯೋತಿಷಿ, ಶ್ರೀ ಮುಕ್ತಿ ನಾಗ ಕ್ಷೇತ್ರದ ಧರ್ಮಾಧಿಕಾರಿ ಡಾ. ಗೌರಿ ಸುಬ್ರಮಹ್ಮಣ್ಯ  ಮಾಹಿತಿ ಕೇಳಿ... 
 


ಹಾವುಗಳಿಗೂ ಮನುಷ್ಯ ಅವಿನಾಭಾವ ಸಂಬಂಧ. ಇದು ಇಂದು-ನಿನ್ನೆಯ ಮಾತಲ್ಲ. ಮನುಕುಲ ಹುಟ್ಟಿದಾಗಿನಿಂದಲೂ ಸರ್ಪಗಳು ಮತ್ತು ಮನುಷ್ಯನಿಗೆ ಬಿಡಿಸಲಾರದ ನಂಟಿದೆ. ಇದೇ ಕಾರಣಕ್ಕೆ ನಾಗಲೋಕ, ನಾಗಕನ್ಯೆ ಇತ್ಯಾದಿ ಪರಿಕಲ್ಪನೆಗಳು ಹುಟ್ಟಿಕೊಂಡಿರುವುದು. ಮನುಷ್ಯರು ಹಾವಾಗುವುದು, ಹಾವುಗಳು ಮನುಷ್ಯರಾಗುವುದು... ಇಂಥ ಕಥೆಗಳಿಗೆ ಸಾಕ್ಷಿಯಾಗಿ ನಿಂತಿವೆ ಮನುಷ್ಯ ಮತ್ತು ಸರ್ಪಗಳ ಸಂಬಂಧ. ಅದರಲ್ಲಿಯೂ ಹಿಂದೂ ಸಂಪ್ರದಾಯದಲ್ಲಿ ಹಾವನ್ನು ಹೊಡೆಯುವುದು, ಸಾಯಿಸುವುದು ಅಥವಾ ಇನ್ನಾವುದೇ ರೀತಿಯಲ್ಲಿ ಹಿಂಸೆಮಾಡುವುದು  ಪಾಪ ಎಂದೇ ಪರಿಗಣಿಸಲಾಗುತ್ತದೆ. ಹಾವನ್ನು ದೇವರು ಎಂದು ಪೂಜಿಸುವ ದೊಡ್ಡ ವರ್ಗವೇ ಇದೆ. ತಿಳಿದೂ ತಿಳಿಯದೆಯೋ ಸರ್ಪವನ್ನು ಸಾಯಿಸಿದರೆ ಅದು ಶಾಪ ಆಗುತ್ತದೆ ಎಂದು ತಲೆ ತಲಾಂತರಗಳಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಹಣಕಾಸಿನ ಸಮಸ್ಯೆ, ಸಂಸಾರದಲ್ಲಿ ಕಿರಿಕಿರಿ, ವಿವಾಹ ಮುರಿದು ಬೀಳುವುದು, ವಿವಾಹ ಆಗದೇ ಇರುವುದು, ವೃತ್ತಿಕ್ಷೇತ್ರದಲ್ಲಿ ಹಿನ್ನಡೆ, ಎಲ್ಲೆಡೆಯಿಂದಲೂ ಮೋಸ, ತಮ್ಮವರಿಂದಲೇ ವಂಚನೆ,  ಸಂತಾನ ಹೀನತೆ, ಮಕ್ಕಳು ಹುಟ್ಟಿದರೂ ಅವರಿಗೆ ಸಮಸ್ಯೆ... ಹೀಗೆ ಅನೇಕ ಸಮಸ್ಯೆಗಳು ಸರ್ಪದೋಷದಿಂದ ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 

ಹಾಗಿದ್ದರೆ ಸರ್ಪದೋಷ ಎಂದರೆ ಏನು? ಯಾರಿಗೆ ಬರುತ್ತದೆ, ಏಕೆ ಬರುತ್ತದೆ ಎನ್ನುವ ಬಗ್ಗೆ ಖ್ಯಾತ  ಜ್ಯೋತಿಷಿ, ವೈದ್ಯೆ ಹಾಗೂ ಶ್ರೀ ಮುಕ್ತಿ ನಾಗ ಕ್ಷೇತ್ರದ ಧರ್ಮಾಧಿಕಾರಿ ಡಾ. ಗೌರಿ ಸುಬ್ರಮಹ್ಮಣ್ಯ ಮಾಹಿತಿ ನೀಡಿದ್ದಾರೆ. ರ್ಯಾಪಿಡ್​ ರಶ್ಮಿ ಷೋನಲ್ಲಿ ಅವರು ಸರ್ಪದೋಷದ ಕುರಿತು ಮಾತನಾಡಿದ್ದಾರೆ. ನಾಗನಿಗೆ ಮನುಷ್ಯ ಜನ್ಮದಲ್ಲಿ ತುಂಬಾ ಪ್ರಧಾನ್ಯತೆ ಇದೆ. ಸರ್ಪಗಳು ಅದರಲ್ಲಿಯೂ ವಿಶೇಷವಾಗಿ ಹಲವು ಜಾತಿಯ ನಾಗರಹಾವುಗಳು ಯಾರ ತಂಟೆಗೂ ಹೋಗುವುದಿಲ್ಲ. ಅವುಗಳ ಪಾಡಿಗೆ ಅವು ಇರುತ್ತವೆ. ಆದರೆ ಯಾವುದೋ ಮೂಲೆಯಲ್ಲಿ ಇರುವ ಸರ್ಪವನ್ನು ಕಡ್ಡಿಯಿಂದ ಚುಚ್ಚಿ, ಇಲ್ಲವೇ ಕಲ್ಲು ಹೊಡೆದು ಹಿಂಸಿಸಲಾಗುತ್ತದೆ, ನಾಗರಹಾವು ಕಂಡೊಡನೇ ಸಾಯಿಸಲಾಗುತ್ತದೆ. ಅಲ್ಲಿಂದಲೇ ಶುರುವಾಗುವುದು ಮನುಷ್ಯನಿಗೆ ಕಠಿಣ ಸಮಯ ಎಂದು ಡಾ. ಗೌರಿ ಸುಬ್ರಮಹ್ಮಣ್ಯ ಹೇಳಿದ್ದಾರೆ. 

Tap to resize

Latest Videos

undefined

ಶ್ವಾಸಕೋಶದ ಸಮಸ್ಯೆ ಮುಕ್ತಿಗೆ, ಮಕ್ಕಳಾಗೋದಕ್ಕೆ ಅರಳಿ ಮರನೇ ಯಾಕೆ? ಡಾ. ಗೌರಿಯಮ್ಮನವರ ಮಾತು ಕೇಳಿ...
 
ಹಾವು ಸಾಯುವಂಥ ಸಮಯದಲ್ಲಿ ಶಪಿಸುತ್ತವೆ.  ಶಪಿಸುವ ಸಂದರ್ಭದಲ್ಲಿ ಸುತ್ತ ಎಷ್ಟು ಜನ ನಿಂತಿದ್ದಾರೆ ಎಲ್ಲರಿಗೂ ಸರ್ಪದೋಷ ಬರುತ್ತದೆ ಎನ್ನುವುದು ಡಾ. ಗೌರಿ ಸುಬ್ರಮಹ್ಮಣ್ಯ ಅವರ ಮಾತು. ಸರ್ಪಗಳು ಸಾಯುವಾಗ ದೀರ್ಘವಾಗಿ ಉಸಿರು ಬಿಡುತ್ತವೆ. ಅವುಗಳ ಉಸಿರು ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಆ  ಗಾಳಿಯನ್ನು ಯಾರು ತೆಗೆದುಕೊಳ್ಳುತ್ತಾರೆಯೋ ಅವರಿಗೆಲ್ಲರಿಗೂ ಸರ್ಪದೋಷ ಬರುತ್ತದೆ. ಅವರ ವಂಶಸ್ಥರೂ ಇದರಿಂದ ಬಳಲಬೇಕಾಗುತ್ತದೆ. ಸಾಯಿಸುವ ಸಂದರ್ಭದಲ್ಲಿ ಸುತ್ತಲೂ ನಿಂತು ಅದನ್ನು ತಡೆಯಲು ನೋಡದಿದ್ದವರಿಗೂ ಸರ್ಪದೋಷ ಸುತ್ತಿಕೊಳ್ಳುತ್ತದೆ ಎಂದಿರುವ ಡಾ.ಗೌರಿ ಅವರು,  ಹಲವು ಸಂದರ್ಭಗಳಲ್ಲಿ ಇಡೀ ವಂಶವೇ ಸರ್ಪದೋಷದಿಂದ ನಾಶವಾಗಿ ಹೋಗಿರುವುದನ್ನು ತಾವು ಕಂಡಿರುವುದಾಗಿ ಹೇಳಿದ್ದಾರೆ. ಜಾತಕ ತೋರಿಸಿದಾಗ ಸರ್ಪದೋಷ ಹೇಗೆ ಅವರ ಕುಟುಂಬಕ್ಕೆ ಬಂದಿದೆ ಎನ್ನುವುದು ತಿಳಿಯುತ್ತದೆ. ಆ ಪೈಕಿ ಹಲವರ ಹಿನ್ನೆಲೆ ನೋಡಿದಾಗ ನಾಗರಹಾವು ಕೊಂದ ದಿನದಿಂದಲೇ ಈ ದೋಷ ಅಂಟಿಕೊಳ್ಳುತ್ತದೆ ಎಂದಿದ್ದಾರೆ.
 
ಆದ್ದರಿಂದ ಯಾರೂ ಸರ್ಪಕ್ಕೆ ತೊಂದರೆ ಮಾಡಬೇಡಿ. ಒಂದು ವೇಳೆ ಸರ್ಪ ಕಂಡು ಬಂದರೆ ಹಾವು ಹಿಡಿಯುವವರನ್ನು ಕ ಕರೆಸಿ ಹಿಡಿಸಿ, ಇಲ್ಲವೇ ಅದರ ಪಾಡಿಗೆ ಅದನ್ನು ಬೇರೆ ಕಡೆ ಹೋಗುವಂತೆ ಮಾಡಿ. ಇಲ್ಲದಿದ್ದರೆ ಅದಕ್ಕೆ ಏನಾಗುತ್ತದೋ ಗೊತ್ತಿಲ್ಲ, ಆದರೆ ಕೊಂದವರು ಮಾತ್ರ ನರಳುವುದು ತಪ್ಪುವುದಿಲ್ಲ. ಸರ್ಪದೋಷಕ್ಕೆ ಪರಿಹಾರಗಳು ಇದ್ದರೂ ಕೆಲವು ಸಂದರ್ಭಗಳಲ್ಲಿ ಪರಿಹಾರ ಮಾಡಿಸಿಕೊಂಡರೂ ಶೀಘ್ರದಲ್ಲಿ ಸಂಪೂರ್ಣ ಗುಣಪಡಿಸಿಕೊಳ್ಳಲು ಆಗುವುದಿಲ್ಲ. ನರಳಿ ನರಳಿ ಸಾಯಬೇಕಾಗುತ್ತದೆ ಎಂದು ಡಾ.ಗೌರಿ ಹೇಳಿದ್ದಾರೆ. ಅದೇ ವೇಳೆ, ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿನ ಕುಂಡಲಿ ಹಾಕಿ ನೋಡಿದಾಗ, ಭಾರತಕ್ಕೆ ಕಾಳಸರ್ಪ ದೋಷದ ಸಮಯವಾಗಿತ್ತು. ಆದ್ದರಿಂದ ಈ ಭೂಮಿಯಲ್ಲಿ ಹುಟ್ಟಿದ ಎಲ್ಲರಿಗೂ ಸರ್ಪದೋಷ ಸ್ವಲ್ಪ ಮಟ್ಟಿಗೆ ಇದ್ದೇ ಇರುತ್ತದೆ. ಅಂಥವರು ಒಮ್ಮೆ ಸರ್ಪದೋಷ ನಿವಾರಣೆ ಮಾಡಿಕೊಂಡರೆ  ಅನೇಕ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.  

ಡಯಟ್​, ವರ್ಕ್​ಔಟ್​ನಿಂದ ತೂಕ ಕಡಿಮೆ ಆಗ್ಲಿಲ್ಲ... ಅಸಲಿ ವಿಷಯವೇ ಬೇರೆ ಇತ್ತು: ವಿದ್ಯಾ ಬಾಲನ್​ ಓಪನ್​ ಮಾತು

click me!