ಹಣ, ಹೆಸರು, ಸಂತೋಷದ ಹೊಳೆಯನ್ನೇ ಹರಿಸುವ Gaja Kesari Yoga, ನಿಮ್ಮ ಜಾತಕದಲ್ಲಿದೆಯೇ?

By Suvarna News  |  First Published Feb 17, 2022, 11:24 AM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಯೋಗಗಳಿವೆ. ಅವುಗಳಲ್ಲೊಂದು ಅತಿ ಪ್ರಬಲವಾದ ಯೋಗ ಗಜಕೇಸರಿ ಯೋಗ. ಅತ್ಯಂತ ಶುಭ ಫಲಕ್ಕೆ ಕಾರಣವಾಗುವ ಈ ಯೋಗ ಯಾವಾಗ, ಹೇಗೆ ಉಂಟಾಗುತ್ತದೆ, ಇದ್ದರೆ ಅದರಿಂದ ಲಾಭಗಳೇನು ನೋಡೋಣ.


ಜಾತಕದಲ್ಲಿ ಯೋಗಗಳನ್ನು ಪಡೆದು ಹುಟ್ಟೋಕೂ ಯೋಗವಿರಬೇಕು! 
ಅದರಲ್ಲೂ ಈ ಗಜಕೇಸರಿ ಯೋಗವಿದೆಯಲ್ಲ... ಹೆಸರಲ್ಲೇ ಅದರ ಬಲದ ಅನುಭವವಾಗುತ್ತದೆ. ಗಜ ಅಂದರೆ ಆನೆ- ಆನೆಯಂತೆ ಬಲಶಾಲಿ, ಗಣಪತಿಯ ಬುದ್ಧಿವಂತಿಕೆ, ಹಾಗೂ ಸಿಂಹದಂತೆ ಧೈರ್ಯ ಹಾಗೂ ಪರಾಕ್ರಮಶೀಲತೆ.. ಇವೆಲ್ಲ ಗುಣಗಳೂ ಒಟ್ಟಾಗಿ ಒಬ್ಬ ವ್ಯಕ್ತಿಗೆ ಲಭಿಸಿದರೆ ಅದು ಯೋಗವಲ್ಲದೆ ಮತ್ತೇನು?
ಒಂದು ಗ್ರಹ ಮತ್ತೊಂದು ಗ್ರಹದೊಂದಿಗೆ ಸ್ನೇಹದಿಂದ ಸೇರಿದಾಗ ಯೋಗವುಂಟಾಗುತ್ತದೆ. ಅಂತೆಯೇ ಗುರು(Jupiter) ಗ್ರಹ ಹಾಗೂ ಚಂದ್ರನು ಜಾತಕದ ಒಂದೇ ಮನೆಯಲ್ಲಿದ್ದಾಗ ಗಜಕೇಸರಿ ಯೋಗವುಂಟಾಗುತ್ತದೆ. 

ಹಾಗೆಂದು, ಯಾವುದೇ ಮನೆಯಲ್ಲಿದ್ದರೂ ಆಗುವುದಿಲ್ಲ, ಜಾತಕದ 1, 4, 7 ಹಾಗೂ 10 ನೇ ಮನೆಯಲ್ಲಿ ಗುರು ಮತ್ತು ಚಂದ್ರ(Moon) ಸೇರಿದಾಗ ಗಜಕೇಸರಿ ಯೋಗ ಉಂಟಾಗುತ್ತದೆ. ಆದರೆ, ಆ ಯೋಗ ಪಡೆಯಲು ಈ ಎರಡು ಗ್ರಹಗಳ ಮೇಲೆ ಪಾಪಗ್ರಹಗಳ ದೃಷ್ಟಿ ಬೀಳಿದಿರುವುದು ಕೂಡಾ ಅಷ್ಟೇ ಮುಖ್ಯ. ಒಂದು ವೇಳೆ ಈ ಗ್ರಹಗಳ ಯುತಿ(ಒಂದೇ ಮನೆಯಲ್ಲಿ ಸೇರುವುದು) ಉಂಟಾಗದೆ ಗುರು ಹಾಗೂ ಚಂದ್ರ ಗ್ರಹಗಳು ಪರಸ್ಪರ ಒಬ್ಬರ ಮೇಲೊಬ್ಬರು ದೃಷ್ಟಿ ಬೀರಿದಾಗ ಕೂಡಾ ಗಜಕೇಸರಿ ಯೋಗ ಉಂಟಾಗುತ್ತದೆ. 

ಗುರು ಹಾಗೂ ಚಂದ್ರ ಬಲ
ಗುರು ಗ್ರಹವು ಸಂಪತ್ತಿನ ಜೊತೆಗೆ ಆಧ್ಯಾತ್ಮಿಕ ಜ್ಞಾನ(spiritual wisdom)ವನ್ನು ಕೂಡಾ ತರುತ್ತದೆ. ಗುರು ಎಂದರೆ ಬೃಹಸ್ಪತಿ(Brihaspati). ಈ ಗ್ರಹವು ಭಕ್ತಿ, ಪೂಜೆ, ಮಕ್ಕಳು ಹಾಗೂ ಸಮೃದ್ಧಿಯ ಕಾರಕ. ಇನ್ನು ಚಂದ್ರನ ವಿಷಯಕ್ಕೆ ಬಂದರೆ, ಆತ ಕರುಣೆ, ಸಂತೋಷ, ಏಳ್ಗೆಯ ಕಾರಕ. ಈ ಎರಡೂ ಗ್ರಹಗಳು ಒಂದೇ ಮನೆಯಲ್ಲಿ ಬಂದಾಗ ಈ ಎಲ್ಲ ವರಗಳು ದಕ್ಕಲೇಬೇಕಲ್ಲ.. ಗಜಕೇಸರಿ ಯೋಗವಿರುವ ವ್ಯಕ್ತಿಯು ಬಹಳಷ್ಟು ಪ್ರೀತಿಗೆ ಪಾತ್ರವಾಗುತ್ತಾನೆ. ಜೊತೆಗೆ, ಆತನ ಬುದ್ಧಿವಂತಿಕೆಗೆ ಎಲ್ಲರೂ ತಲೆ ಬಾಗುತ್ತಾರೆ. ಬಡತನ, ಹಣದ ಕೊರತೆ ಆತನಿಗೆ ಕಾಡುವುದಿಲ್ಲ. ಪ್ರಸಿದ್ಧಿ ಆತನನ್ನು ಅರಸಿ ಬರುತ್ತದೆ.

Tap to resize

Latest Videos

ಕಟಕ(Cancer) ರಾಶಿಯವರಿಗೆ ಕಟಕ ರಾಶಿಯಲ್ಲಿ ಗುರು, ಚಂದ್ರ ಹಾಗೂ ಮಂಗಳ ಇದ್ದಾಗ ಆ ವ್ಯಕ್ತಿಯು ಬಹಳ ಶ್ರೀಮಂತನಾಗುತ್ತಾನೆ. ಜೊತೆಗೆ, ಗುರುವು ಧನು, ಮೀನ, ಹಾಗೂ ಕಟಕದಲ್ಲಿದ್ದಾಗ ವ್ಯಕ್ತಿಗೆ ಐಭೋಗ್ಯ ಕೊಡುತ್ತಾನೆ. ಅಂದರೆ, ಜಾತಕದಲ್ಲಿ ಗುರುವು ಬಲವಾಗಿದ್ದರೆ, ಅಂಥ ವ್ಯಕ್ತಿಗಳು ಬದುಕಿನುದ್ದಕ್ಕೂ ಹೊಳೆಯುತ್ತಾರೆ. ಅವರ ಬದುಕಲ್ಲಿ ಶಾಂತಿ, ಸಮೃದ್ಧಿ, ಜ್ಞಾನ, ಸಹಾಯದ ಗುಣ, ಹಾಗೂ ಸಂತೋಷ (happiness) ತುಂಬಿರುತ್ತದೆ. 

ಗುರು ಬಲವಿದ್ದರೆ ಆಗ ರಾಹು, ಕೇತು, ಹಾಗೂ ಶನಿಯ ಪ್ರಭಾವ ಸಂಪೂರ್ಣ ನ್ಯೂಟ್ರಲ್ ಆಗಿರುತ್ತದೆ. ಅಂದರೆ, ಅವು ಇದ್ದೂ ಇಲ್ಲದಂತಿರುತ್ತವೆ. 

undefined

ಯೋಗಕ್ಕೂ ಒಂದಿಷ್ಟು ಸವಾಲುಗಳಿವೆ..

  • ಗುರು ಗ್ರಹವು ಶತ್ರು ಮನೆಯಲ್ಲಿದ್ದರೆ, ಆಗ ಎರಡೂ ಗ್ರಹ ಒಟ್ಟಿಗಿದ್ದರೂ ಯೋಗ ದಕ್ಕುವುದಿಲ್ಲ. ಜೊತೆಗೆ, ಗುರುವು ಹಿಮ್ಮುಖ ಚಲನೆಯಲ್ಲಿದ್ದರೂ ಈ ಯೋಗ ದಕ್ಕುವುದಿಲ್ಲ. ಚಂದ್ರನಿಗೂ ಇದೇ ನಿಯಮಗಳು ಅನ್ವಯಿಸುತ್ತವೆ. 
  • ಚಂದ್ರ ಹಾಗೂ ಗುರು ಗ್ರಹದ ದಶ ಹಾಗೂ ಭುಕ್ತಿಯ ಸಮಯದಲ್ಲಿ ಮಾತ್ರ ಈ ಗಜಕೇಸರಿ ಯೋಗದ ಪರಿಣಾಮ ಕಾಣಬಹುದು. ಇದಲ್ಲದೆ, ಇವೆರಡು ಗ್ರಹಗಳ ಅಂತರ್ದಶ ಸಮಯದಲ್ಲಿ ಕೂಡಾ ಪರಿಣಾಮ ಇರುತ್ತದೆ. 
  • ಗಜಕೇಸರಿ ಯೋಗವಿದೆ ಎಂದು ಸುಮ್ಮನೆ ಕುಳಿತರೆ ಯಾವುದೂ ದಕ್ಕದು. ವ್ಯಕ್ತಿಯ ಶ್ರಮವೂ ಮುಖ್ಯವಾಗುತ್ತದೆ. 
  • ಇದರೊಂದಿಗೆ ಆತ ಎಲ್ಲರಿಗೂ ಒಳ್ಳೆಯದನ್ನು ಬಯಸುವವನಲ್ಲದಿದ್ದರೆ ಈ ಯೋಗದ ಫಲ ದೊರೆಯುವುದಿಲ್ಲ. 
  • ದೇವರಲ್ಲಿ ನಂಬಿಕೆ ಇಡದವನಿಗೆ ಗಜಕೇಸರಿ ಯೋಗದ ಸಂಪೂರ್ಣ ಲಾಭ ದಕ್ಕುವುದಿಲ್ಲ. 

ಗಜಕೇಸರಿ ಯೋಗ ಹಾಗೂ ವೈವಾಹಿಕ ಬದುಕು
ಜಾತಕದ 7ನೇ ಮನೆ ಮದುವೆ(marriage)ಗೆ ಸಂಬಂಧಿಸಿದೆ. ಗಜಕೇಸರಿ ಯೋಗ 7ನೇ ಮನೆಯಲ್ಲಿದ್ದಾಗ ಆ ವ್ಯಕ್ತಿಯ ವೈವಾಹಿಕ ಬದುಕು ಅತ್ಯಂತ ಸಂತೋಷಮಯವಾಗಿರುತ್ತದೆ. ಉತ್ತಮ ಹಿನ್ನೆಲೆಯ ಸಂಗಾತಿ ದೊರೆಯುವುದಲ್ಲದೆ, ಇಬ್ಬರೂ ಚೆನ್ನಾಗಿ ಹೊಂದಿಕೊಂಡು ವೈವಾಹಿಕ ಬದುಕನ್ನು ಅನುಭವಿಸಲು ಸಾಧ್ಯವಾಗುತ್ತದೆ. 

click me!