ಕಪ್ಪು ಬೆಕ್ಕು ಯಾಕಷ್ಟು ಭಯಾನಕ? ಅದು ಅಪಶಕುನ ಅನ್ನೋದು ನಿಜವಾ?

By Bhavani BhatFirst Published Oct 18, 2024, 9:27 PM IST
Highlights

ಇಂಗ್ಲೆಂಡ್‌ನಲ್ಲಿ ಕಪ್ಪು ಬೆಕ್ಕುಗಳು ಮಾಟಗಾರರು, ಮಾಟಗಾತಿಯರ ವಾಹನವಾಗಿ ಕಾಣಿಸಿಕೊಂಡಿವೆ. ಅಲ್ಲಿ ಅವು ಕೆಟ್ಟ ಪ್ರೇತಪಿಶಾಚಿಗಳ ವಾಹಕಗಳೆಂದೇ ಲೆಕ್ಕ. ಆದರೆ ನಮ್ಮ ಶಾಸ್ತ್ರದಲ್ಲಿ ಕಪ್ಪು ಬೆಕ್ಕುಗಳ ಬಗ್ಗೆ ಏನ್‌ ಹೇಳ್ತಿದೆ ಇತ್ಯಾದಿ ನೋಡೋಣ.  


ಕಪ್ಪು ಬೆಕ್ಕು ಕಂಡರೇ ಹಲವರಿಗೆ ಆಗಲ್ಲ. ನಮ್ಮಲ್ಲಿಯ ಹಾಗೆ ಪಾಶ್ಚಾತ್ಯರಲ್ಲಿಯೂ ಕಪ್ಪು ಬೆಕ್ಕುಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಅದು ಅಪಶಕುನ ಅನಿಸಿಕೊಂಡಿದೆ. ಕಪ್ಪು ಬೆಕ್ಕಿನ ಬಗ್ಗೆ ಇರುವ ಈ ನಂಬಿಕೆ, ಅಲ್ಲಿನ ಹಾರರ್‌ ಕಾದಂಬರಿಗಳು ಮತ್ತು ಸಿನಿಮಾಗಳಿಂದಲೂ ಮೂಡಿ ಬಂದಿರಬಹುದು. ಇಂಗ್ಲೆಂಡ್‌ನಲ್ಲಿ ಕಪ್ಪು ಬೆಕ್ಕುಗಳು ಮಾಟಗಾರರು, ಮಾಟಗಾತಿಯರ ವಾಹನವಾಗಿ ಕಾಣಿಸಿಕೊಂಡಿವೆ. ಅಲ್ಲಿ ಅವು ಕೆಟ್ಟ ಪ್ರೇತಪಿಶಾಚಿಗಳ ವಾಹಕಗಳೆಂದೇ ಲೆಕ್ಕ. ಆದರೆ ನಮ್ಮ ಶಾಸ್ತ್ರದಲ್ಲಿ ಕಪ್ಪು ಬೆಕ್ಕುಗಳ ಬಗ್ಗೆ ಏನ್‌ ಹೇಳ್ತಿದೆ ಇತ್ಯಾದಿ ನೋಡೋಣ.  

ಒಳ್ಳೆಯ ಕಾರ್ಯಕ್ಕೆ ಹೋಗುವಾಗ ಬೆಕ್ಕನ್ನು ಕಂಡರೆ ಅಶುಭ ಎಂದು ಹೇಳುವವರಿದ್ದಾರೆ. ಹೊರಡುವಾಗ ಬೆಕ್ಕು ಎಡದಿಂದ ಬಲಕ್ಕೆ ಹೋದರೆ ಏನು, ಬಲದಿಂದ ಎಡಕ್ಕೆ ಹೋದರೆ ಏನು ಎಂದೆಲ್ಲ ಜ್ಯೋತಿಷ್ಯಶಾಸ್ತ್ರ ಕ್ಲಿಯರ್‌ ಆಗಿ ಹೇಳುತ್ತದೆ ತುಂಬಾ ಮಂದಿ ಭಯಪಡುವಂತೆ ಕಪ್ಪು ಬೆಕ್ಕು ಬರಿಯ ಅಪಶಕುನ ಅಲ್ಲ. ಬರಿಯ ಶುಭಶಕುನವೂ ಅಲ್ಲ.

Latest Videos

ಮನೆಯ ಒಳಗೆ ಅಥವಾ ಆಸುಪಾಸಿನಲ್ಲಿ, ಅದೂ ರಾತ್ರಿ ಹೊತ್ತು, ಬೆಕ್ಕಿನ ಅಳುವಿಕೆ ಭಯಾನಕವಾಗಿ ಕೇಳಿಸುತ್ತದೆ. ಇದು ಅಹಿತಕರ ಘಟನೆಗಳ ಸಂಕೇತವೆಂದು ಜನ ಪರಿಗಣಿಸುತ್ತಾರೆ. ಒಳ್ಳೆಯ ಕಾರ್ಯಕ್ಕೆ ಹೋಗುವಾಗ ಬೆಕ್ಕನ್ನು ಕಂಡರೆ ಅಶುಭ ಎಂಬ ಮಾತು ಇದೆ. ಆದರೆ ಬೆಕ್ಕು ಕಾಣುವುದು ಕೂಡ ಹಲವು ಬಾರಿ ಶುಭ. ಉದಾಹರಣೆಗೆ, ಕನಸಿನಲ್ಲಿ ಕಪ್ಪು ಬೆಕ್ಕು ಕಾಣಿಸಿದರೆ ಅದು ಹಣದ ಲಾಭದ ಸೂಚನೆಗಳನ್ನು ನೀಡುತ್ತದೆ.

ಬೆಕ್ಕು ಮನೆಗೆ ಆಗಾಗ್ಗೆ ಭೇಟಿ ನೀಡುವುದು ಶುಭ. ಆದರೆ ಕಪ್ಪು ಬೆಕ್ಕು ಭೇಟಿ ನೀಡುವುದು ಶುಭಕಾರಕವಲ್ಲ. ಅದರಲ್ಲೂ ನೀವು ಯಾವುದಾದರೂ ಮಂಗಳಕಾರ್ಯ ಹಮ್ಮಿಕೊಂಡಿದ್ದಾಗ ಕಪ್ಪು ಬೆಕ್ಕು ಮನೆಗೆ ಬಂದು ಹೊಕ್ಕರೆ, ಅಥವಾ ಮನೆಯಿಂದ ಅದು ಹೊರಬೀಳುತ್ತಿರುವುದನ್ನು ನೀವು ಕಂಡರೆ, ಜಾಗರೂಕರಾಗಿ ಇರುವುದು ವಿಹಿತ. ಹಣಕಾಸಿನ ವಿಷಯಗಳಲ್ಲಿ ಎಚ್ಚರವಾಗಿರಬೇಕು. ಸಾಧ್ಯವಾದರೆ ಹತ್ತಿರದ ಶಿವ- ಶನಿ ದೇವಾಲಯದಲ್ಲಿ ಒಂದು ಪೂಜೆ ಮಾಡಿಸಬಹುದು. ಭೇಟಿ ಕೊಟ್ಟು ನಮಸ್ಕಾರ ಮಾಡಬಹುದು.    

ಶಕುನ ಶಾಸ್ತ್ರದಲ್ಲಿ ಕಪ್ಪು ಬೆಕ್ಕಿಗೆ ಸಂಬಂಧಿಸಿದಂತೆ ಅನೇಕ ಮಂಗಳಕರ ಮತ್ತು ಅಶುಭ ಚಿಹ್ನೆಗಳನ್ನು ತಿಳಿಸಲಾಗಿದೆ. ಎಲ್ಲೋ ಹೋಗುವಾಗ ಕಪ್ಪು ಬೆಕ್ಕು ಎಡದಿಂದ ಬಲಕ್ಕೆ ದಾರಿಯನ್ನು ದಾಟಿದರೆ, ಅದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಲದಿಂದ ಎಡಕ್ಕೆ ಕಪ್ಪು ಬೆಕ್ಕು ಹೋದರೆ ಶುಭವಂತೆ. ನೀವು ಬೆಳಿಗ್ಗೆ ಕಪ್ಪು ಬೆಕ್ಕನ್ನು ನೋಡಿದರೆ, ಅತಿಥಿಗಳು ನಿಮ್ಮ ಮನೆಗೆ ಬರಲಿದ್ದಾರೆ ಅಥವಾ ನೀವು ಹಳೆಯ ಸ್ನೇಹಿತನನ್ನು ಭೇಟಿಯಾಗಲಿದ್ದೀರಿ ಎಂದರ್ಥ.

ಕಪ್ಪು ಬೆಕ್ಕುಗಳು ಪರಸ್ಪರ ಜೋರಾಗಿ ಜಗಳವಾಡುವುದನ್ನು ನೋಡಿದರೆ, ಅದು ನಿಮ್ಮ ಮನೆಯಲ್ಲಿರುವ ಕುಟುಂಬ ಜಗಳದ ಸಂಕೇತವಾಗಿದೆ. ಕಪ್ಪು ಬೆಕ್ಕು ಬಲಭಾಗದಲ್ಲಿ ಒಂದು ದಿಕ್ಕಿನಲ್ಲಿ ಚಲಿಸುತ್ತಿದ್ದರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಬೆಕ್ಕು ಮಲವಿಸರ್ಜನೆ ಮಾಡಿದರೆ, ಅಲ್ಲಿ ಅಹಿತಕರ ಘಟನೆಗಳು ಸಂಭವಿಸುವ ಲಕ್ಷಣಗಳು ಕಂಡುಬರುತ್ತವೆ.

ಕಪ್ಪು ಬೆಕ್ಕು ಪದೇ ಪದೇ ಒಂದು ನಿರ್ದಿಷ್ಟ ದಿಕ್ಕಿನಿಂದ ಬರುತ್ತಿರುವುದು ನಿಮ್ಮೆಡೆಗೆ ಅಥವಾ ನಿಮ್ಮ ಮನೆಗೆ ಬರುತ್ತಿದ್ದರೆ. ನೀವು ಆ ದಿಕ್ಕಿನಿಂದ ಬರುವ ಅಪಾಯಗಳ ಬಗ್ಗೆ ಜಾಗರೂಕರಾಗಿರಬೇಕು. ಆ ದಿಕ್ಕಿನಲ್ಲಿರುವ ನಿಮ್ಮ ಶತ್ರುಗಳಿಂದ ಅಪಾಯ ಇರಬಹುದು. ಆ ದಿಕ್ಕಿನ ಗಾಳಿಯೂ ನಿಮಗೆ ಅಲರ್ಜಿ ಉಂಟುಮಾಡುವ ವೈರಸ್‌ ಹೊತ್ತುತರಬಹುದು. 

ಲಂಕೆಯಿಂದ ಆಯೋಧ್ಯೆಗೆ ಶ್ರೀರಾಮ ತೆಗೆದುಕೊಂಡಿದ್ದು 21 ದಿನ, ಹೌದು ಎನ್ನುತ್ತಿದೆ ಗೂಗಲ್ ಮ್ಯಾಪ್!
 

ಆದರೆ ನೀವು ಪ್ರೀತಿಯಿಂದ ಕಪ್ಪು ಬೆಕ್ಕನ್ನು ತಂದು ಮನೆಯಲ್ಲಿ ಸಾಕಿದ್ದರೆ, ಈ ಯಾವ ಶಕುನಗಳೂ ನಿಮಗೆ ಅನ್ವಯ ಆಗುವುದಿಲ್ಲ ಎನ್ನುತ್ತದೆ ಶಾಸ್ತ್ರ. ಯಾಕೆಂದರೆ ನಿಮ್ಮ ಜನ್ಮನಕ್ಷತ್ರದ ಗುಣಾವಗುಣಗಳು ಈ ಬೆಕ್ಕಿನಿಂದ ಆಗಬಹುದಾದ ಶುಭಾಶುಭಗಳಿಂದ ಬಾಧಿತವಾಗುವುದಿಲ್ಲ. ಯಾಕೆಂದರೆ ನೀವೇ ಅದಕ್ಕೆ ಅನ್ನದಾತರಾಗಿದ್ದೀರಿ. ಆ ಋಣವು ಅದರ ಮೇಲಿದೆ. ಹಿಂದಿನ ಜನ್ಮದಲ್ಲಿ ನೀವು ಅದರ ಅನ್ನ ಉಂಡಿರಬಹುದು- ಈ ಕರ್ಮವನ್ನು ಕಳೆಯಲಾಗುತ್ತಿದೆ ಎಂದು ತಿಳಿಯಬೇಕು.  

ಮೇಲಿನ ಎಲ್ಲ ಮಾಹಿತಿಗಳನ್ನೂ ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಕೆಲವು ಉದ್ಧರಣಗಳು ಹಾಗೂ ಹಿರಿಯ ಜ್ಯೋತಿಷ್ಯರು ಆಡುವ ಸಾಂದರ್ಭಿಕ ಮಾತುಗಳಿಂದ ತೆಗೆದು, ಮಾಹಿತ ನೀಡುವ ಉತ್ತಮ ಆಶಯದಿಂದ ಉಲ್ಲೇಖಿಸಲಾಗಿದೆ. ಇವುಗಳನ್ನು ನಿಜ ಎಂದು ತಿಳಿಯಲು ಯಾವ ವೈಜ್ಞಾನಿಕ ಆಧಾರಗಳೂ ಇಲ್ಲ. ಹೀಗಾಗಿ ಓದುಗರು ಈ ಬಗ್ಗೆ ತಮ್ಮದೇ ವಿವೇಚನೆಯನ್ನು ಬಳಸಬೇಕು.

ಎಷ್ಟೇ ದುಡಿದರೂ ಕೈಯಲ್ಲಿ ಕಾಸು ಉಳಿತಾ ಇಲ್ವಾ? ಲಕ್ಷ್ಮಿ ಪೂಜೆಗೆ ಈ ಟಿಪ್ಸ್ ಫಾಲೋ ಮಾಡಿ
 

click me!