ನಾವು ಏನು ಧರಿಸ್ತೇವೆ ಎಂಬುದು ಕೂಡ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಬಟ್ಟೆ ಯಾವುದಾದ್ರೆ ಏನು, ಬಣ್ಣ ಯಾವುದಾದ್ರೆ ಏನು, ಧರಿಸೋದು ಮುಖ್ಯ ಎಂದುಕೊಳ್ಳುವವರು ನೀವಾಗಿದ್ದರೆ ನಿಮ್ಮ ನಂಬಿಕೆ ತಪ್ಪು. ನೀವು ಯಾವ ಬಣ್ಣದ ಬಟ್ಟೆಯನ್ನು ಯಾವ ಸಂದರ್ಭದಲ್ಲಿ ಧರಿಸ್ತೀರಿ ಎಂಬುದು ನಿಮ್ಮ ಉತ್ತಮ ಭವಿಷ್ಯಕ್ಕೆ ದಾರಿಯಾಗುತ್ತದೆ.
ಬಣ್ಣಗಳು ನಮ್ಮ ಜೀವನದ ಒಂದು ಅಂಗವಾಗಿದೆ. ಪ್ರತಿ ದಿನ ನಾನಾ ಬಣ್ಣಗಳ ಜೊತೆ ನಾವು ಬದುಕುತ್ತೇವೆ. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಬಣ್ಣಗಳಿಗೆ ಮಹತ್ವ ನೀಡಲಾಗಿದೆ. ಯಾವ ಸಂದರ್ಭದಲ್ಲಿ ಯಾವ ಬಣ್ಣವನ್ನು ಬಳಕೆ ಮಾಡ್ಬೇಕು ಎಂಬುದನ್ನು ಕೂಡ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಯಾವ ಬಣ್ಣ ಯಾವ ಅರ್ಥವನ್ನು ನೀಡುತ್ತದೆ ಎಂಬುದನ್ನು ಕೂಡ ಇದ್ರಲ್ಲಿ ಹೇಳಲಾಗಿದೆ. ಸಾವಿನ ಮನೆಯಲ್ಲಿ ಬಿಳಿ ಅಥವಾ ಕಪ್ಪು ಬಣ್ಣದ ಬಟ್ಟೆಯನ್ನು ಏಕೆ ಧರಿಸಬೇಕು ಎಂಬುದರ ಬಗ್ಗೆ ಈಗಾಗಲೇ ಹೇಳಲಾಗಿದೆ. ನಾವಿಂದು ಶುಭ ಕಾರ್ಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಬೇಕು ಎಂಬುದನ್ನು ನಿಮಗೆ ಹೇಳ್ತೇವೆ.
ಶುಭ ಕಾರ್ಯದಲ್ಲಿ ನೀವು ಕಪ್ಪು (Black) ಬಣ್ಣದ ಬಟ್ಟೆ ಧರಿಸಿದ್ರೆ ಅದನ್ನು ಅಶುಭ ಎನ್ನಲಾಗುತ್ತದೆ. ಹಾಗೆಯೇ ಶುಭ (Good Luck) ಕಾರ್ಯದಲ್ಲಿ ಕೆಲ ಬಣ್ಣಕ್ಕೆ ವಿಶೇಷ ಮಹತ್ವವಿದೆ. ಆ ಬಣ್ಣದ ಬಟ್ಟೆಗಳನ್ನು ಧರಿಸಿ ನೀವು ಶುಭ ಕಾರ್ಯಗಳಲ್ಲಿ ಪಾಲ್ಗೊಂಡ್ರೆ ಯಶಸ್ಸು ಲಭಿಸುತ್ತದೆ. ಶುಭ ಫಲ ಪ್ರಾಪ್ತಿಯಾಗುತ್ತದೆ. ಬಣ್ಣಗಳು ನಮ್ಮ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಪ್ರತಿಯೊಂದು ಬಣ್ಣವು ಒಂದು ಅಥವಾ ಎರಡು ಗ್ರಹದ ಜೊತೆ ಸಂಬಂಧ ಹೊಂದಿರುತ್ತದೆ. ನಾವು ಧರಿಸುವ ಬಣ್ಣದ ಬಟ್ಟೆ ನಮ್ಮ ಗ್ರಹಗಳ ಮೇಲೆ ಪ್ರಭಾವ ಬೀರುತ್ತದೆ.
undefined
ಬುದ್ಧನ ಪ್ರತಿಮೆ ಮನೆಯಲ್ಲಿಡ್ತೀರಾ? ಹಾಗಿದ್ರೆ ವಾಸ್ತು ನಿಯಮ ಪಾಲಿಸಿ
ಶುಭ ಕಾರ್ಯದಲ್ಲಿ ಈ ಬಣ್ಣ (Color) ದ ಬಟ್ಟೆ ಧರಿಸಿ : ಯಾವುದೇ ಶುಭ ಕಾರ್ಯಕ್ಕೆ ಹೋಗುವ ವೇಳೆ ನೀವು ತಿಳಿ ಬಣ್ಣದ ಬಟ್ಟೆಯನ್ನು ಧರಿಸುವುದು ಮಂಗಳಕರ. ಹಳದಿ, ಗುಲಾಬಿ, ತಿಳಿ ಕಿತ್ತಳೆ ಮತ್ತು ತಿಳಿ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿದ್ರೆ ಹೆಚ್ಚು ಪ್ರಯೋಜನವನ್ನು ನೀವು ಪಡೆಯುತ್ತೀರಿ. ನೀವು ತಿಳಿ ಕೆಂಪು ಬಣ್ಣದ ಬಟ್ಟೆಯನ್ನು ಕೂಡ ಸಮಾರಂಭದಲ್ಲಿ ಧರಿಸಬಹುದು. ಇದ್ರಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ಕಾಣಬಹುದು.
ನೀವು ಶುಭ ಕಾರ್ಯಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ತಿಳಿ ಬಣ್ಣದ ಬಟ್ಟೆಯನ್ನು ಧರಿಸಿದ್ರೆ ಗ್ರಹಗಳು ಶಾಂತವಾಗುತ್ತವೆ. ಕೋಪಿತ ಗ್ರಹದಿಂದ ಆಗುವ ನಷ್ಟವನ್ನು ತಪ್ಪಿಸಬಹುದು. ನಕಾರಾತ್ಮಕ ಶಕ್ತಿಯ ನಾಶಕ್ಕೆಂದೇ ಪೂಜೆ, ಹೋಮ, ಹವನಗಳನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ನೀವು ತಿಳಿ ನೀಲಿ ಬಣ್ಣದ ಬಟ್ಟೆ ಧರಿಸಿದ್ರೆ ನಕಾರಾತ್ಮಕ ಶಕ್ತಿಯ ನಷ್ಟವಾಗುತ್ತದೆ. ನೀವು ಶುಭ ಸಮಾರಂಭದಲ್ಲಿ ಹಸಿರು ಬಣ್ಣದ ಬಟ್ಟೆಯನ್ನು ಧರಿಸಬಹುದು. ನೀವು ಗಾಢ ಹಸಿರು ಬಣ್ಣದ ಬಟ್ಟೆಯನ್ನು ಧರಿಸಿದ್ರೆ ಇದ್ರಿಂ ಲಾಭ ಹೆಚ್ಚು ಎನ್ನುತ್ತದೆ ಶಾಸ್ತ್ರ. ಗಾಢ ಹಸಿರು ಬಣ್ಣದ ಬಟ್ಟೆಯನ್ನು ನೀವು ತೊಟ್ಟುಕೊಳ್ಳುವುದ್ರಿಂದ ಶಕ್ತಿ ಹೆಚ್ಚಾಗುತ್ತದೆ.
ಮದುವೆಯಾಗುವ ನಾರದರ ಕನಸನ್ನು ವಿಷ್ಣು ಭಗ್ನಗೊಳಿಸಿದ್ದೇಕೆ?
ಶುಭ ಕಾರ್ಯಕ್ಕರ ಹೋಗುವ ವೇಳೆ ಈ ಬಣ್ಣದ ಬಟ್ಟೆ ಧರಿಸಬೇಡಿ :
ಶುಭ ಕಾರ್ಯಕ್ಕೆ ತೆರಳುವ ವೇಳೆ ಯಾವ ಬಣ್ಣದ ಬಟ್ಟೆ ಧರಿಸಬೇಕು ಹಾಗೆ ಯಾವುದನ್ನು ಧರಿಸಬಾರದು ಎಂಬುದು ತಿಳಿದಿರಬೇಕು. ನೀವು ಗಾಢ ಬಣ್ಣದ ಬಟ್ಟೆಯನ್ನು ಶುಭಕಾರ್ಯದ ಸಂದರ್ಭದಲ್ಲಿ ಧರಿಸದಿರುವುದು ಒಳ್ಳೆಯದು. ಕಪ್ಪು, ನೇರಳೆ, ಕಡು ನೀಲಿ, ಕಡು ಕೆಂಪು, ಕಂದು ಇತ್ಯಾದಿ ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಈ ಗಾಢ ಬಣ್ಣಗಳು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ. ಗ್ರಹಗಳ ದೋಷಕ್ಕೆ ಕಾರಣವಾಗುತ್ತವೆ. ಮೊದಲೇ ಹೇಳಿದಂತೆ ಕಪ್ಪು ಬಟ್ಟೆಯನ್ನು ತೊಡುವುದ್ರಿಂದ ಅಶುಭ ಫಲ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ನೀವು ಶುಭ ಕಾರ್ಯದಲ್ಲಿ ಗಾಢ ಬಣ್ಣದ ಬಟ್ಟೆ ಧರಿಸಿದ್ದರೆ ಕೈಗೆ ರಕ್ಷಾ ದಾರವಾದ ಕಲವನ್ನು ಕಟ್ಟಬೇಕು. ಇದು ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುವ ಕೆಲಸ ಮಾಡುತ್ತದೆ. ಹಾಗೆಯೇ ಬಣ್ಣದಿಂದ ಉಂಟಾಗುವ ದೋಷವನ್ನು ಇದು ಕಡಿಮೆ ಮಾಡುತ್ತದೆ.