Vinayaka Chaturthi 2023: ಫೆ. 23ರಂದು ಚಂದ್ರನ ನೋಡಿದ್ರೆ ಕಳಂಕ ತಪ್ಪಿದ್ದಲ್ಲ!

By Suvarna NewsFirst Published Feb 22, 2023, 3:07 PM IST
Highlights

ನಾಳೆ ಫಾಲ್ಗುಣ ಮಾಸದ ವಿನಾಯಕ ಚತುರ್ಥಿ. ನಾಲ್ಕು ಶುಭ ಯೋಗಗಳ ರಚನೆಯಾಗುತ್ತಿದೆ.  ಈ ದಿನದ ಉಪವಾಸ, ವ್ರತ ಆಚರಣೆಗೆ ವಿಶೇಷ ಮಹತ್ವವಿದೆ. ಆದರೆ, ತಪ್ಪಿಯೂ ಚಂದ್ರ ದರ್ಶನ ಮಾಡಬೇಡಿ!

ಭಾರತದಲ್ಲಿ ಗಣೇಶನಿಗೆ ಭಕ್ತರು ಜಾಸ್ತಿ. ಅವನೆಂದರೆ ಭಯ ಪಡುವುದಕ್ಕಿಂತ ಹೆಚ್ಚಾಗಿ ಭಕ್ತರು ಆತನನ್ನು ತಮ್ಮ ಮನೆ ಮಗನಂತೆ ಮುದ್ದಿನಿಂದ ಕಾಣುತ್ತಾರೆ. ಹೀಗಾಗಿ, ಭಯಕ್ಕಿಂತ ಗಣಪತಿ ಎಂದರೆ ಭಕ್ತಿ, ಪ್ರೀತಿಯಿಂದ ಆರಾಧಿಸುವವರೇ ಹಲವರು. ಯಾವುದೇ ಪೂಜೆಗೂ ಮುನ್ನ ಗಣೇಶನನ್ನು ಪೂಜಿಸಲಾಗುತ್ತದೆ. ಯಾವುದೇ ಶುಭ ಕಾರ್ಯವನ್ನು ಗಣೇಶನನ್ನು ಮೆಚ್ಚಿಸುವ ಮೂಲಕ ಪ್ರಾರಂಭಿಸಲಾಗುತ್ತದೆ. 

ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳ ಶುಕ್ಲ ಪಕ್ಷದ ಚತುರ್ಥಿ ದಿನಾಂಕವನ್ನು ವಿನಾಯಕ ಚತುರ್ಥಿ ಎಂದು ಆಚರಿಸಲಾಗುತ್ತದೆ.ಈ ದಿನಾಂಕವು ಭಗವಾನ್ ಗಣೇಶನ ಆರಾಧನೆಗೆ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನ ವಿನಾಯಕ ಚತುರ್ಥಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಬಾರಿ ಫಾಲ್ಗುಣ ಮಾಸದ ವಿನಾಯಕ ಚತುರ್ಥಿ ತಿಥಿಯಂದು ಹಲವು ಶುಭ ಯೋಗಗಳು ಸೃಷ್ಟಿಯಾಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಿದೆ. ಆದ್ದರಿಂದ ಶುಭ ಯೋಗ ಮತ್ತು ಫಾಲ್ಗುಣ ಮಾಸದ ವಿನಾಯಕ ಚತುರ್ಥಿಯ ನಿಖರವಾದ ದಿನಾಂಕದ ಬಗ್ಗೆ ತಿಳಿಯೋಣ.

Latest Videos

ವಿನಾಯಕ ಚತುರ್ಥಿ ತಿಥಿ 2023 (Vinayaka Chaturthi Tithi 2023)
ಪಂಚಾಂಗದ ಪ್ರಕಾರ, ಪ್ರತಿ ತಿಂಗಳ ಶುಕ್ಲ ಪಕ್ಷ ಚತುರ್ಥಿಯಂದು ವಿನಾಯಕ ಚತುರ್ಥಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ವರ್ಷ ಫಾಲ್ಗುಣ ಮಾಸದ ವಿನಾಯಕ ಚತುರ್ಥಿ ತಿಥಿ ಫೆಬ್ರವರಿ 23 ರಂದು ಮುಂಜಾನೆ 3.24ಕ್ಕೆ ಪ್ರಾರಂಭವಾಗಲಿದೆ. ಈ ತಿಥಿಯು ಮುಂದಿನ ದಿನ ಫೆಬ್ರವರಿ 24ರಂದು ಮಧ್ಯಾಹ್ನ 1.33ಕ್ಕೆ ಮುಗಿಯುತ್ತದೆ. ಉದಯ ತಿಥಿಗೆ ಪ್ರಾಮುಖ್ಯತೆ ನೀಡಿ ಫೆಬ್ರವರಿ 23 ರಂದು ವಿನಾಯಕ ಚತುರ್ಥಿ ಉಪವಾಸ ಆಚರಿಸಲಾಗುವುದು.

ಸ್ಕಂದ ಷಷ್ಠಿ 2023: ಮಕ್ಕಳಾಗದವರಿಗೆ ಫಲವನ್ನೂ, ಮಕ್ಕಳಿಗೆ ಆರೋಗ್ಯವನ್ನೂ ಕರುಣಿಸುವ ವ್ರತವಿದು..

ವಿನಾಯಕ ಚತುರ್ಥಿ ಪೂಜಾ ಮುಹೂರ್ತ 2023 (Vinayaka Chaturthi Puja Muhurat 2023)
ಫಾಲ್ಗುಣ ಮಾಸದ ವಿನಾಯಕ ಚತುರ್ಥಿ ವ್ರತದ ದಿನ ಬೆಳಿಗ್ಗೆ 11.26ರಿಂದ ಪೂಜೆಯ ಶುಭ ಮುಹೂರ್ತ ನಡೆಯಲಿದೆ. ಫೆಬ್ರವರಿ 23ರಂದು ಈ ಮುಹೂರ್ತವು ಮಧ್ಯಾಹ್ನ 1:43ರವರೆಗೆ ಇರುತ್ತದೆ. ವಿನಾಯಕ ಚತುರ್ಥಿಯಂದು ಉಪವಾಸ ಮಾಡುವುದರಿಂದ ನೀವು ಶ್ರೀ ಗಣೇಶನ ಅನುಗ್ರಹವನ್ನು ಪಡೆಯುತ್ತೀರಿ. ಈ ದಿನದಂದು ಶುಭ ಮುಹೂರ್ತದಲ್ಲಿ ಪೂಜಿಸಬೇಕು, ಹೀಗೆ ಮಾಡುವುದರಿಂದ ಶುಭ ಫಲ ಸಿಗುತ್ತದೆ.

ವಿನಾಯಕ ಚತುರ್ಥಿ ಶುಭ ಯೋಗ(Vinayaka Chaturthi Shubh Yog)
ಫಾಲ್ಗುಣ ಮಾಸದ ವಿನಾಯಕ ಚತುರ್ಥಿಯಂದು ನಾಲ್ಕು ವಿಶೇಷ ಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗವು ಬಹಳ ಮಂಗಳಕರವೆಂದು ಸಾಬೀತುಪಡಿಸಲಿದೆ. ಈ ಮಂಗಳಕರವಾದ ಯೋಗದಲ್ಲಿ ಪೂಜಿಸುವುದರಿಂದ ಭಕ್ತರ ಎಲ್ಲ ಇಷ್ಟಾರ್ಥಗಳು ನೆರವೇರುತ್ತವೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಈ ದಿನ ಗಣೇಶ ಮತ್ತು ಚಂದ್ರನನ್ನು ಪೂಜಿಸುವುದು ಫಲಪ್ರದವೆಂದು ಪರಿಗಣಿಸಲಾಗಿದೆ. ವಿನಾಯಕ ಚತುರ್ಥಿಯಂದು ಬೆಳಗ್ಗೆಯಿಂದ ಶುಭ ಯೋಗ ಮೂಡಿ ಬರುತ್ತಿದ್ದು, ರಾತ್ರಿ 8.58ರವರೆಗೆ ನಡೆಯಲಿದೆ. ನಂತರ ಶುಕ್ಲ ಯೋಗ ಇರಲಿದೆ. ವಿನಾಯಕ ಚತುರ್ಥಿಯಂದು ಬೆಳಗ್ಗೆ 6.53ರಿಂದ ಆರಂಭವಾಗಿ ಫೆ.24ರ ಮುಂಜಾನೆ 3.44ರವರೆಗೆ ರವಿಯೋಗವೂ ನಿರ್ಮಾಣವಾಗುತ್ತಿದೆ. ಜೊತೆಗೆ ಸರ್ವಾರ್ಥ ಸಿದ್ಧಿ ಯೋಗವೂ ಇದೇ ದಿನ ರೂಪುಗೊಳ್ಳಲಿದೆ.

3 ರಾಶಿಗಳಿಗೆ ಧನಲಕ್ಷ್ಮೀ ಕಟಾಕ್ಷ ತರುವ Mahalaxmi Rajyog

ಅಪ್ಪಿ ತಪ್ಪಿಯೂ ಚಂದ್ರನ ದರ್ಶನ ಮಾಡಬೇಡಿ..
ವಿನಾಯಕ ಚತುರ್ಥಿಯಂದು ಚಂದ್ರನ ದರ್ಶನವನ್ನು ನಿಷೇಧಿಸಲಾಗಿದೆ. ನಂಬಿಕೆಗಳ ಪ್ರಕಾರ, ಚತುರ್ಥಿಯ ಚಂದ್ರನನ್ನು ನೋಡುವುದರಿಂದ ನಿಮ್ಮ ಮೇಲೆ ಸುಳ್ಳು ಕಳಂಕ ಉಂಟಾಗುತ್ತದೆ. ಶ್ರೀಕೃಷ್ಣನು ಚತುರ್ಥಿಯ ಚಂದ್ರನನ್ನು ನೋಡಿದ್ದರಿಂದ ರತ್ನಗಳನ್ನು ಕದ್ದನೆಂದು ಆರೋಪ ಎದುರಿಸಿದನು. ಇನ್ನು ಹುಲು ಮಾನವರ ಪಾಡೇನು? ಹಾಗಾಗಿ ಈ ದಿನ ಚಂದ್ರ ದರ್ಶನದಿಂದ ದೂರ ಉಳಿಯಲು ಎಚ್ಚರಿಕೆ ವಹಿಸಿ..

click me!