ಉದಯ: ಶನಿ ಕಣ್ಣು ಬಿಟ್ಟರೆ ಬಡವನೂ ಶ್ರೀಮಂತನಾಗುತ್ತಾನೆ, ಯಾವ ರಾಶಿಗೆ ಆ ಲಕ್?

By Suvarna News  |  First Published Jan 10, 2023, 4:16 PM IST

ನಿಮ್ಮ ಕರ್ಮಕ್ಕೆ ಫಲ ನೀಡುವ ದೇವರು ಶನಿ. ನ್ಯಾಯ ದೇವತೆ ಶನಿಯನ್ನು ಒಲಿಸಿಕೊಳ್ಳುವುದು ಕಷ್ಟ. ಒಮ್ಮೆ ಕೃಪೆ ತೋರಿದ್ರೆ ಜಯ ನಿಮ್ಮದೆ. ಶನಿ ಈಗ ಮೂರು ರಾಶಿಗಳ ಅದೃಷ್ಟ ಬದಲಿಸಲಿದ್ದಾನೆ.
 


ಗ್ರಹ ಹಾಗೂ ರಾಶಿಗಳು ನಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ ಎಂದು ವೈದಿಕ ಜ್ಯೋತಿಷ್ಯ ಹೇಳುತ್ತದೆ. ಗ್ರಹದ ಚಲನೆ ಬದಲಾದಂತೆ ಅದು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದ ಆಯಾ ರಾಶಿಯವರ ಜೀವನದಲ್ಲಿ ಏರುಪೇರುಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಎಲ್ಲರೂ ಶನಿಗೆ ಹೆದರುತ್ತಾರೆ. ಶನಿಯ ವಕ್ರದೃಷ್ಟಿ ಬಿದ್ದರೆ ಅಪಾಯ ನಿಶ್ಚಿತ. ಹಾಗೆಯೇ ಶನಿ ಕರುಣೆ ತೋರಿದ್ರೆ ಬೀದಿಯಲ್ಲಿದ್ದವನು ಆಗರ್ಭ ಶ್ರೀಮಂತನಾಗಬಲ್ಲ. 

ಕರ್ಮವನ್ನು ಕೊಡುವ ಶನಿ (Shani) ಕೂಡ  ಗ್ರಹ (Planet ) ಗಳನ್ನು ಮತ್ತು ಚಲನೆಯನ್ನು ಬದಲಾಯಿಸುತ್ತಲೇ ಇರುತ್ತಾನೆ. ಕರ್ಮಫಲದಾತ ಎಂದೇ ಹೆಸರಾಗಿರುವ ಶನಿ ಸುಮಾರು 1 ವರ್ಷದ ನಂತರ ಫೆಬ್ರವರಿ (February ) ತಿಂಗಳಲ್ಲಿ ಉದಯಿಸಲಿದ್ದಾನೆ. ಶನಿಯ ಉದಯವು ಪ್ರತಿಯೊಂದು ರಾಶಿ ಮೇಲೆ ವಿಭಿನ್ನ ಪರಿಣಾಮ ಬೀರಲಿದೆ. ಅದ್ರಲ್ಲೂ ಮೂರು ರಾಶಿಗಳ ಮೇಲೆ ಇದ್ರ ಪ್ರಭಾವ ಹೆಚ್ಚಿರಲಿದೆ.  
ಇಷ್ಟು ದಿನಗಳವರೆಗೆ ಜೀವನ (Life) ದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದ ಮೂರು ರಾಶಿಯ ಜನರು ಶನಿ ಉದಯದ ನಂತ್ರ  ವೃತ್ತಿಜೀವನದಲ್ಲಿ ಪ್ರಗತಿ ಕಾಣಲಿದ್ದಾರೆ. ಅವರ ಆದಾಯದಲ್ಲಿ ಏರಿಕೆಯಾಗಲಿದೆ. ನಾವಿಂದು ಶನಿ ಉದಯದ ನಂತ್ರ ಸಂತೋಷ, ಸಮೃದ್ಧಿ ಹೊಂದುವ ಮೂರು ರಾಶಿಗಳು ಯಾವುವು ಎಂಬುದನ್ನು ನಿಮಗೆ ಹೇಳ್ತೆವೆ. 

Garuda Purana: ಹೀಗ್ ದಿನ ಆರಂಭಿಸಿ, ಎಲ್ಲವೂ ಶುಭ ಆಗುತೈತಿ!

Tap to resize

Latest Videos

ಶನಿ ಉದಯದಿಂದ ಬದಲಾಗಲಿದೆ ಈ ರಾಶಿಯವರ ಭವಿಷ್ಯ :  

ತುಲಾ ರಾಶಿ : ಶನಿ ಉದಯವು ತುಲಾ ರಾಶಿಯವರಿಗೆ ತುಂಬಾ ಅನುಕೂಲಕರವಾಗಲಿದೆ. ಶನಿಯು ತುಲಾ ರಾಶಿಯ ಐದನೇ ಮನೆಯಲ್ಲಿ ಉದಯಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐದನೇ ಮನೆಯು ಸಂತಾನ, ಉನ್ನತ ಶಿಕ್ಷಣ ಮತ್ತು ಪ್ರೇಮ ವಿವಾಹದ ಸ್ಥಳವಾಗಿದೆ. ವ್ಯಾಪಾರ ಆರಂಭಿಸಬೇಕೆಂದುಕೊಂಡವರಿಗೆ ಅಥವಾ ಹೊಸ ಯೋಜನೆಗಳನ್ನು ರೂಪಿಸುತ್ತಿರುವ ವ್ಯಾಪಾರ ವರ್ಗದ ಜನರಿಗೆ ಇದು ಅತ್ಯುತ್ತಮ ಸಮಯವಾಗಲಿದೆ. ಶನಿ ಉದಯದ ಸಮಯದಲ್ಲಿ ವ್ಯಾಪಾರದಲ್ಲಿ ಲಾಭವಾಗಲಿದೆ. ತುಲಾ ರಾಶಿಯವರಿಗೆ ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿಗಳು ಸಿಗಲಿವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡಿರುವ ತುಲಾ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಲಭ್ಯವಾಗಲಿದೆ.  

ವೃಷಭ ರಾಶಿ : ಶನಿಯ ಉದಯವು ವೃಷಭ ರಾಶಿಯವರಿಗೂ ತುಂಬಾ ಪ್ರಯೋಜನಕಾರಿಯಾಗಿದೆ. ವೃಷಭ ರಾಶಿಯ ಜನರಿಗೆ ವ್ಯಾಪಾರ ಮತ್ತು ವೃತ್ತಿ ಜೀವನದಲ್ಲಿ ಒಳ್ಳೆಯ ಸುದ್ದಿ ಲಭಿಸಲಿದೆ. ಶನಿಯು ವೃಷಭ ರಾಶಿಯ 10ನೇ ಮನೆಯಲ್ಲಿ ಉದಯಿಸಲಿದ್ದಾನೆ. ಇದ್ರಿಂದ ವ್ಯವಹಾರದಲ್ಲಿ ಉತ್ತಮ ಲಾಭ ವೃಷಭ ರಾಶಿಯವರಿಗೆ ಸಿಗಲಿದೆ. ಕೆಲಸದ ಸ್ಥಳದಲ್ಲಿ ಬುದ್ಧಿವಂತಿಕೆ ಮತ್ತು ದಕ್ಷತೆ ಹೆಚ್ಚಾಗಲಿದ್ದು, ಉತ್ಸಾಹದಿಂದ ಮಾಡಿದ ಕೆಲಸಕ್ಕೆ ಫಲ ಸಿಗಲಿದೆ. ತೈಲ, ಕಬ್ಬಿಣ, ಪೆಟ್ರೋಲಿಯಂ ಮತ್ತು ಖನಿಜಗಳಿಗೆ ಸಂಬಂಧಿಸಿದ ವ್ಯವಹಾರ ಮಾಡುವ ಜನರಿಗೆ ಹೆಚ್ಚಿನ ಲಾಭ ಸಿಗಲಿದೆ.  

Indian Culture : ಹಿರಿಯರ ಪಾದ ಸ್ಪರ್ಶದಿಂದ ಇದೆ ಈ ಲಾಭ

ವೃಶ್ಚಿಕ ರಾಶಿ : ಶನಿದೇವನ ಉದಯದಿಂದ ಪ್ರಯೋಜನ ಪಡೆಯುವ ಮೂರನೇ ರಾಶಿಯೆಂದ್ರೆ ವೃಶ್ಚಿಕ ರಾಶಿ. ಇವರು ಕೂಡ ಶನಿ ಉದಯದಿಂದ ಅನೇಕ ವಿಷ್ಯದಲ್ಲಿ ಲಾಭ ಕಾಣಲಿದ್ದಾರೆ. ಶನಿದೇವನು ಈ ರಾಶಿಯ ನಾಲ್ಕನೇ ಮನೆಯಲ್ಲಿ ಉದಯಿಸಲಿದ್ದಾನೆ. ಈ ಮನೆಯನ್ನು ತಾಯಿ ಮತ್ತು ದೈಹಿಕ ಸಂತೋಷದ ಮನೆ ಎಂದು ಪರಿಗಣಿಸಲಾಗುತ್ತದೆ. ವೃಶ್ಚಿಕ ರಾಶಿಯವರಿಗೆ ಶನಿ ಉದಯದ ನಂತ್ರ  ವಾಹನ ಮತ್ತು ಆಸ್ತಿ ಖರೀದಿಸುವ ಅವಕಾಶ ಸಿಗಲಿದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಲಾಭ ಪ್ರಾಪ್ತಿಯಾಗುತ್ತದೆ. ಹಣಕಾಸಿನ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶ ವೃಶ್ಚಿಕ ರಾಶಿಯವರಿಗೆ ಸಿಗಲಿದೆ. ರಿಯಲ್ ಎಸ್ಟೇಟ್ ಮತ್ತು ಆಸ್ತಿಗೆ ಸಂಬಂಧಿಸಿದ ವ್ಯವಹಾರವಾಗಿದ್ದರೆ ಹೆಚ್ಚಿನ ಲಾಭವನ್ನು ನೀವು ಪಡೆಯಲಿದ್ದೀರಿ. ಇದಲ್ಲದೆ ತಾಯಿ ಹಾಗೂ ಇವರ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ.  

click me!