
Vijaya Ekadashi 2025: ಹಿಂದೂಗಳಿಗೆ ಇನ್ನೆರಡು ದಿನಗಳ ಬಳಿಕ ಬರುತ್ತಿರುವ ಸೋಮವಾರ ತುಂಬಾ ವಿಶೇಷವಾದ ದಿನವಾಗಿದೆ. ಈ ಸೋಮವಾರದಂದು ಕೆಲವು ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬರಬೇಕು. ಇದರಿಂದ ಮನೆಗೆ ಲಕ್ಷ್ಮೀ ದೇವಿಯ ಆಗಮನವಾಗುತ್ತದೆ. ಈ ಸೋಮವಾರ ತುಂಬಾ ವಿಶೇಷವಾಗಿರುವ ಕಾರಣ, ತಿಳಿದಿರುವ ಜನರು ಮೊದಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಈ ದಿನ ನೀವು ಖರೀದಿಸುವ ವಸ್ತುಗಳಿಂದ ನಿಮ್ಮ ಆರ್ಥಿಕ ಸಂಕಷ್ಟಗಳೆಲ್ಲಾ ದೂರವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ. ಹಾಗಾದ್ರೆ ಈ ಸೋಮವಾರ ಯಾಕಿಷ್ಟು ವಿಶೇಷ? ಈ ದಿನ ಖರೀದಿಸಬೇಕಾದ ವಸ್ತುಗಳೇನು ಎಂಬುದರ ಮಾಹಿತಿಯುನ್ನು ಈ ಲೇಖನ ಒಳಗೊಂಡಿದೆ.
ಸಾಮಾನ್ಯವಾಗಿ ಏಕಾದಶಿಯಂದು ಒಂದಿಷ್ಟು ವರ್ಗದ ಜನರು ಉಪವಾಸ ಮಾಡುತ್ತಾರೆ ಮತ್ತು ವಿಶೇಷ ಪೂಜೆ ಸಲ್ಲಿಸುತ್ತಾರೆ. ಫೆಬ್ರವರಿ 24ರಂದು ಫಾಲ್ಗುಣ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಯ ದಿನವಾಗಿದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷ ಇರೋ ಕಾರಣ ಇದನ್ನು 'ವಿಜಯ ಏಕಾದಶಿ' ಎಂದು ಕರೆಯಲಾಗುತ್ತದೆ. ಸನಾತನ ಧರ್ಮದಲ್ಲಿ ಏಕಾದಶಿಯ ಉಪವಾಸ ಆಚರಣೆಯನ್ನು ಅತ್ಯಂತ ಪ್ರಮುಖ ಎಂದು ಪರಿಗಣಿಸಲಾಗುತ್ತದೆ. ಏಕಾದಶಿಯಂದು ವಿಶೇಷ ಪೂಜೆ ಸಲ್ಲಿಸಿ, ಉಪವಾಸ ಕೈಗೊಳ್ಳುವುದರಿಂದ ಮಂಗಳಕರ ಎಂದು ನಂಬಲಾಗಿದೆ. ಧರ್ಮಗ್ರಂಥಗಳಲ್ಲಿ ವಿಶೇಷ ದಿನವಾದ ವಿಜಯ ಏಕಾದಶಿ ಆಚರಣೆ ಬಗ್ಗೆ ವಿವರವಾಗಿ ಹೇಳಲಾಗಿದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಫೆಬ್ರವರಿ 24ರಂದು ಆಚರಿಸಲಾಗುತ್ತದೆ.
ಯಾಕೆ ಈ ಏಕಾದಶಿ ವಿಶೇಷ?
ಜ್ಯೋತಿಷಿ ಅನೀಶ್ ವ್ಯಾಸ್ ಅವರು ಹೇಳುವ ಪ್ರಕಾರ, ಈ ಬಾರಿಯ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಏಕಾದಶಿಯ ದಿನದಂದು ಸಿದ್ಧಿ ಯೋಗ ಮತ್ತು ಶಿವನ ಸಂಯೋಜನೆಯನ್ನು ಹೊಂದಿದೆ. ಪೂರ್ವಾಷಾಢ ಮತ್ತು ಉತ್ತರಾಷಾಢ ನಕ್ಷತ್ರಗಳು ಹಾಗೂ ಈ ವಿಶೇಷ ಸಂಯೋಜನೆ ಏಕಾದಶಿಯನ್ನು ಪ್ರಬಲ ಮಾಡುತ್ತವೆ. ಏಕಾದಶಿಯ ಪ್ರಬಲತೆಯಿಂದಾಗಿ ಏಕಾದಶಿ ಆಚರಣೆಯ ಫಲಗಳು ತುಂಬಾನೇ ಪರಿಣಾಮಕಾರಿಯಾಗಿರುತ್ತವೆ. ಈ ಶುಭ ಸಂದರ್ಭದಲ್ಲಿ ಪೂಜೆ ಮತ್ತು ಉಪವಾಸ ವ್ರತ ಆಚರಣೆ ಮಾಡೋದರಿಂದ ಮನೆ ಮತ್ತು ಮನೆಯಲ್ಲಿರೋ ಎಲ್ಲಾ ಸದಸ್ಯರಿಗೆ ಮಂಗಳಕರ ಮತ್ತು ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳುತ್ತಾರೆ.
ವಿಜಯ ಏಕಾದಶಿಯಂದು ಖರೀದಿಸಬೇಕಾದ ವಸ್ತುಗಳು
ಜ್ಯೋತಿಷಿ ಅನೀಶ್ ವ್ಯಾಸ್ ಅವರು ವಿಜಯ ಏಕಾದಶಿಯಂದು ಕೆಲವೊಂದು ವಸ್ತುಗಳನ್ನು ಖರೀದಿಸಿ ಮನೆಗೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಈ ವಸ್ತುಗಳನ್ನು ತರೋದು ಮಂಗಳಕರವಾಗಿದ್ದು, ಇದರಿಂದ ನೀವು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ. ಮನೆಯಲ್ಲಿಯೂ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ. ಹಣದ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂದುಯ ಜ್ಯೋತಿಷಿ ಅನೀಶ್ ವ್ಯಾಸ್ ಹೇಳುತ್ತಾರೆ.
ಹಸುವನ್ನು ಮನೆಯೊಳಗೆ ತಂದು ಆಹಾರ ನೀಡಿ ಪೂಜಿಸಬೇಕು. ನೀವು ಹೈನುಗಾರಿಕೆ ಹೊಂದಿದ್ದರೆ ಕಾಮದೇನು ಖರೀದಿಸೋದು ಉತ್ತಮ. ಇಲ್ಲವಾದ್ರೆ ಹಸುವಿನ ಬೆಳ್ಳಿ ವಿಗ್ರಹ ಖರೀದಿಸಿ ಪೂಜಾಕೋಣೆಯಲ್ಲಿ ಕ್ರಮಬದ್ಧವಾಗಿ ಪ್ರತಿಷ್ಠಾಪಿಸಬೇಕು. ಏಕಾದಶಿಯಂದೇ ಹಸುವಿನ ಖರೀದಿಸಿ, ಅಂದೇ ಪ್ರತಿಷ್ಠಾಪಿಸಿ. ಹಸುವನ್ನು ಪೂಜಿಸುವುದರಿಂದ ಮನೆಯ ಸಂತೋಷ, ಸೌಭಾಗ್ಯ ಮತ್ತು ಸಮೃದ್ಧಿಯು ಅಪಾರವಾಗಿ ಹೆಚ್ಚಾಗುತ್ತದೆ. ಬೆಳ್ಳಿ ಆಮೆ, ದಕ್ಷಿಣಾವರ್ತಿ ಶಂಖ, ಕೆಂಪು ಬಣ್ಣದ ಬಟ್ಟೆ, ಶ್ರೀಫಲ, ಗಜರಾಜನ ವಿಗ್ರಹವನ್ನುಏಕಾದಶಿಯಂದು ಖರೀದಿಸಿ ತರೋದು ಸಹ ಶುಭಕರ ಎಂದು ನಂಬಲಾಗಿದೆ.
ಇದನ್ನೂ ಓದಿ: ಜೂನ್‌ನಲ್ಲಿ ಮಂಗಳನ ದ್ವಿಮುಖ ಸಂಚಾರ, ಈ 3 ರಾಶಿಗೆ ಲಾಭ, ಅದೃಷ್ಟ
ಏನಿದು ಏಕಾದಶಿ?
ಧಾರ್ಮಿಕ ನಂಬಿಕೆಗಳ ಪ್ರಕಾರ, ರಾವಣನ ಮೇಲೆ ಯುದ್ಧಕ್ಕೆ ತೆರಳುವ ಮುನ್ನ ಶ್ರೀರಾಮ ಏಕಾದಶಿ ಉಪವಾಸ ವ್ರತ ಆಚರಿಸುತ್ತಾರೆ. ಇದಾದ ಬಳಿಕ ಲಂಕೆಯನ್ನು ಗೆದ್ದು, ರಾವಣನ ಸಂಹಾರ ನಡೆಯುತ್ತದೆ. ಏಕಾದಶಿ ಉಪವಾಸ ವ್ರತ ಆಚರಿಸಿದ್ರೆ ಜೀವನದಲ್ಲಿರುವ ಕಷ್ಟಗಳು ದೂರವಾಗುತ್ತದೆ. ಶತ್ರುಗಳಿಂದ ಅಪಾಯ ತಪ್ಪುತ್ತೆ ಎಂಬ ಬಲವಾದ ನಂಬಿಕೆಯಿದೆ.
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: ಮಾರ್ಚ್ 29 ರ ನಂತರ ಈ 3 ರಾಶಿಯವರು ಜಾಗರೂಕರಾಗಿರಬೇಕು, ಶನಿ ಕಾಟದಿಂದ ದುಃಖ, ಕಷ್ಟ