ವಿಜಯ್‌ ಮಲ್ಯ ಜಾತಕದಲ್ಲಿ ಇರುವುದೇ ಹೀಗೆ, ಎಲ್ಲಾ ವದಂತಿ ಮಧ್ಯೆ ಮಲ್ಯ ಜನ್ಮ ಜಾತಕ ವಿವರಿಸಿದ ಜ್ಯೋತಿಷಿ

Published : Jun 09, 2025, 04:21 PM ISTUpdated : Jun 11, 2025, 12:47 PM IST
ASTROLOGY KASHYAP

ಸಾರಾಂಶ

ಕರ್ನಾಟಕದ ಅತಿರಂಜಿತ , ವಿವಾದಿತ ಉದ್ಯಮಿ ವಿಜಯ್‌ ಮಲ್ಯ, ಪರದೇಸಿಯಾಗಿ ಬಹುವರ್ಷವಾಗಿ ಈಗ ಮರುಗು, ಪಶ್ಚಾತ್ತಾಪದ ಮಾತುಗಳ ಆಡುತ್ತಿರುವ ಸುದ್ದಿ ಹರಡಿದೆ.

ವಿಜಯ್‌ ಮಲ್ಯ ಈತನ ಜಾತಕಫಲ ಹೇಗಿದೆ ಅಂತ ಸಂಕ್ಷಿಪ್ತವಾಗಿ ದೈವಜ್ಞ ಹರೀಶ್ ಕಾಶ್ಯಪ ಹೇಳಿದ್ದಾರೆ. 1955 ರಲ್ಲಿ ಕೊಲ್ಕತ್ತಾ ಜನನ. ಶ್ರವಣಾ ಮಕರ ರಾಶಿ, ಕುಂಭ ಲಗ್ನ. ಸದ್ಯ ಶನಿ ದಶಾ ಕಳೆದು ಎರಡು ವರ್ಷ ಆಗಿ, ಬುಧ ದಶಾ ನಡೆಯುತ್ತಿದೆ. ಗುರುವಿನ ಪ್ರಭಾವ ಬಹುಶ್ರುತ, ಮೇಧಾವಿ, ಗುಟ್ಟು ಬಿಟ್ಟುಕೊಡದ, ಲೋಭಿ, ಶಷ್ಟಾಧಿಪ ಚಂದ್ರ ವ್ಯಯದಲ್ಲಿ ಕಾರಣ ಅನ್ಯರ ಪ್ರಭಾವದಿಂದ ಅರಿಯುವ ಸ್ವಂತ ಜ್ಞಾನ ಕಡಿಮೆ, ಮಾನಸಿಕ ಅಸ್ಥಿರ, ಆದರೂ ದಯಾಪರ ಮನಸ್ಸು ಉಳ್ಳವ. ಇತ್ಯಾದಿ ಜಾತಕ ಲಕ್ಷಣಗಳು.

ಪ್ಲಸ್ ಪಾಯಿಂಟ್ಸ್ : ಲಗ್ನಾಧಿಪತಿ ಶನಿ ದಶಮದಲ್ಲಿ, ಸಪ್ತಮಾಧಿಪತಿ ಸೂರ್ಯ ಧನು ಲಾಭದಲ್ಲಿ , ಧನಾಧಿಪ ಲಭಾಧಿಪ ಗುರು ಸಿಂಹ ಕೇಂದ್ರದಲ್ಲಿ ಇದ್ದು ಅನಪ್ಹ, ಸುನಪ್ಹ ಯೋಗಗಳು, ಕೀರ್ತಿ, ಪ್ರತಿಷ್ಠಾಯೋಗ, ರಾಜಯೋಗಗಳು ಇಡಿಯ ಜೀವನ ನಡೆಯುತ್ತದೆ. ಹಾಗೆಯೇ ಇಲ್ಲಿ ಆರ್ಥಿಕ ಅಪರಾಧ ಮಾಡಿಯೂ, ವಿದೇಶದಲ್ಲಿ ಕೂಡಾ ರಾಜಯೋಗವೆ ನಡೆಯುತ್ತಿದೆ..(ಜಾತಕದಲ್ಲಿ ಅಂತ ಯೋಗಗಳು ಇಲ್ಲವಾದರೆ ಆಯು ಪ್ರಾಣ ಮಾನಗಳು ಒಟ್ಟಿಗೇ ನಾಶವಾಗುತ್ತದೆ)

ಮೈನಸ್ ಪಾಯಿಂಟ್ಸ್ : ಲಗ್ನಾ ದಶಮದಲ್ಲಿ ಶನಿ ನೀಚ ರಾಹುವನ್ನು ಬೆರೆತು ಪಾಪಗ ಎನಿಸಿ, ಯದ್ವಾತದ್ವಾ ದುಷ್ಟ ಕಾರ್ಯಗಳನ್ನೇ ಮಾಡುವ ಪ್ರವೃತ್ತಿ ಬೆಳೆದಿದೆ. ಈತನ ಎಲ್ಲಾ ಸಂಕಷ್ಟಗಳಿಗೂ ಇದೇ ಮುಖ್ಯ ಕಾರಣ. ಪಾಪರಾಶಿಯಲ್ಲಿ ಎರಡು ಪಾಪರ ದುಷ್ಫಲ ಇಡಿಯ ವ್ಯಕ್ತಿತ್ವಕ್ಕೆ ಕಾರಣವಾಗುವುದು. ನವಾಂಶದಲ್ಲೂ ಕುಂಭ ಲಗ್ನವಾಗಿ ರಾಹು ಇರುವುದು, ಮಹಾ ಮೊಂಡುತನ, ಅಹಂಕಾರ, ಯಾವ ಒಳ್ಳೇ ಜನರ ಮಾತೂ ಸಂಗವನ್ನೂ ಮಾಡದೇ , ಅವರನ್ನು ಕೂಡಾ ಬೇಸರಿಸಿ ದೂರ ಮಾಡಿಕೊಂಡಿರುತ್ತಾರೆ. ಅದು ಮತ್ತೂ ಪಾಪಕ್ಕೆ ಕಾರಣವಾಗುತ್ತದೆ.

2022 ರವರೆಗೂ ಇದ್ದ ಶನಿಯ ದಶೆಯೇ ಸಾಕ್ಷಿ. ಸಕಲವನ್ನೂ ಪಡೆದೂ, ಸಕಲವೂ ನಾಶವಾಗಿ , ತಾಯಿ ತಂದೆಯ ನೆಲವನ್ನು ತೊರೆದು ಪರದೇಶಿಯಾಗಿ ಮ್ಲೆಚ್ಚರ ಆಶ್ರಯ ಪಡೆವುದು ಪಪಾಗಯೋಗದ ಫಲವೇ ಆಗಿದೆ.

ಚತುರ್ಥ ನವಮಾಧಿಪ ಶುಕ್ರನೂ ಅಸ್ತನಿದ್ದು, ಚಂದ್ರ ವ್ಯಯ, ಅಲ್ಲಿ ಕುಜನು ತುಲಾ ವೃಷಭ ಶುಕ್ರ ರಾಶಿಗಳ ಪ್ರಭಾವಿಸುವುದು ಸಾಲೂ ಸಾಲು ಸ್ತ್ರೀ ದೋಷ ಶಾಪಗಳ ಗೂಡಾಗಿದೆ ವಿಜಯ್ ಮಲ್ಯರ ಬಾಳು ಬದುಕು.

ಈಗ ಸದ್ಯ ಸೌಮ್ಯ ದಶಾ ಇದ್ದು, ಹಂತಹಂತವಾಗಿ ಏಳಿಗೆ ಪಡೆಯುವ ಸಾಧ್ಯತೆ ಇದೆ. ವಂಶಾರಿಷ್ಟ, ಸ್ತ್ರೀ, ದೇವ, ದೈವಗಳ ಪ್ರಕೋಪಗಳು ಮತ್ತು ನಾಗದೋಷಗಳೂ ಇರುವುದರಿಂದ ಕಡ್ಡಾಯವಾಗಿ ಸ್ವ ದೇಶಕ್ಕೆ ಬರುವುದು ಒಂದೇ ಈತನ ಜನ್ಮಕ್ಕೆ ಸಾರ್ಥಕ ತರುವುದು. ಅದೇನೂ ಈಗ ಕಷ್ಟವಾಗದು. ದೊಡ್ಡ ಮನಸು ಮಾಡಿ, ಭಾರತದ ನ್ಯಾಯಾಂಗದ ಮೇಲೆ ಭರವಸೆ ಇಟ್ಟು, ಭಾಗಶಃ ಸಾಲ ಪಾವತಿಸಿ ಬಂಧನ ಭೀತಿಯಿಂದ ರಕ್ಷಣೆ ಕೋರಿ ವಾಪಸ್ ಆಗಬಹುದು. ಹೀಗೆ ವಾಪಸ್ ಬಂದರೆ ಮಾತ್ರ, ಈ ಮೇಲೆ ಹೇಳಿದ ಹಲವು ದೋಷಗಳಿಗೆ ತಕ್ಕ ಅಲ್ಲವಾದರೂ ಪ್ರಾಯಶ್ಚಿತ್ತ ಪರಿಹಾರಗಳ ವಿಧಿವತ್ ಮಾಡಿ ದೇವತಾ ರಕ್ಷೆಗಳ ಪಡೆಯಲು ಸಾಧ್ಯ ಇಲ್ಲವಾದರೆ , ಜಾತಕ ಕರ್ಮ ಸಾಲ" ಬೆಳೆಯುತ್ತಲೇ ಹೋಗುತ್ತದೆ

PREV
Read more Articles on
click me!

Recommended Stories

ಹೊಸ ವರ್ಷದಲ್ಲಿ ಕೇತು 3 ರಾಶಿಗೆ ದಯೆ, ಗೌರವ ಮತ್ತು ಪ್ರತಿಷ್ಠೆ 3 ಪಟ್ಟು ಜಾಸ್ತಿ
ನಿಮ್ಮ ಜನ್ಮರಾಶಿಯ ಗುಪ್ತ ಮಂತ್ರ: ಅದೃಷ್ಟ ಬದಲಿಸುವ ಶಕ್ತಿ!