ಕೈಗೆ ದುಡ್ಡು ಸೇರಬೇಕೆಂದರೆ ಮುಖ್ಯ ದ್ವಾರ ಹೇಗಿರಬೇಕು?

By Suvarna NewsFirst Published Jun 11, 2022, 5:58 PM IST
Highlights

ಹೀಗೆ ಬಂದ ಹಣ (Money) ಹಾಗೆ ಖರ್ಚಾಗುತ್ತಿದೆ. ಕೈನಲ್ಲಿ ದುಡ್ಡೇ ನಿಲ್ಲುತ್ತಿಲ್ಲ. ಎಷ್ಟು ದುಡಿದರೂ (Work) ಸಾಕಾಗುತ್ತಿಲ್ಲ. ಹೀಗೆ ನಾನಾ ಕಾರಣಗಳಿಂದ ಆರ್ಥಿಕ(Financial) ಸಂಕಷ್ಟ ಎದುರಿಸುವವರು ಇದ್ದಾರೆ. ಆರ್ಥಿಕ ಪ್ರಗತಿ(Economic Progress) ಕಾಣಲು ವಾಸ್ತುವಿನ(Vastu) ಪ್ರಕಾರ ಈ ದಿಕ್ಕಿನಲ್ಲಿ ಯಾವೆಲ್ಲಾ ವಸ್ತುಗಳನ್ನು ಇಡಬೇಕು ಎಂಬುದರ ಮಾಹಿತಿ ಇಲ್ಲಿದೆ.

ಹೀಗೆ ಬಂದ ಹಣ ಹಾಗೆ ಖರ್ಚಾಗುತ್ತಿದೆ. ಕೈನಲ್ಲಿ ದುಡ್ಡೇ ನಿಲ್ಲುತ್ತಿಲ್ಲ. ಎಷ್ಟು ದುಡಿದರೂ ಸಾಕಾಗುತ್ತಿಲ್ಲ ಹೀಗೆ ನಾನಾ ಕಾರಣಗಳಿಂದ ಆರ್ಥಿಕ ಸಂಕಷ್ಟ ಎದುರಿಸುವವರು ಇದ್ದಾರೆ. ಮನೆಯಲ್ಲಿ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಸಹ ವಾಸ್ತು ಸರಿಯಾಗಿರಬೇಕು. ವಾಸ್ತುವಿನ ಪ್ರಕಾರ ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಲಕ್ಷಿö್ಮ ಒಲಿದು ಬರುತ್ತಾಳೆ. ಮನೆಯಲ್ಲಿ ಆರ್ಥಿಕ ಸ್ಥಿರತೆ ಸರಿಯಾಗಿದ್ದರೆ ಮಾತ್ರ ಸಂಸಾರ (Family) ಚೆನ್ನಾಗಿ ಸಾಗುತ್ತದೆ. ಒಂದು ಏರುಪೇರಾದರು ತೊಂದರೆಗಳು (Problems) ಸಾಲಾಗಿ ನಿಂತಿರುತ್ತವೆ. ಪೂರ್ವ(East) ಹಾಗೂ ಈಶಾನ್ಯ ದಿಕ್ಕು(North East) ಆರ್ಥಿಕವಾಗಿ ಪ್ರಗತಿ Economic Progress) ಹೊಂದಲು ಸೂಕ್ತವಾದ ಸ್ಥಳ. ಹಾಗಂತೆ ಈ ಜಾಗದಲ್ಲಿ ಯಾವೆಲ್ಲಾ ವಸ್ತುಗಳನ್ನು ಇಟ್ಟರೆ ಅದೃಷ್ಟ ಕುಲಾಯಿಸುತ್ತೆ ಎಂದು ವಾಸ್ತು ಶಾಸ್ತçದಲ್ಲಿ ತಿಳಿಸಲಾಗಿದೆ. 

ಮನೆಯ ಪೂರ್ವ ಹಾಗೂ ಈಶಾನ್ಯ ದಿಕ್ಕಿನಲ್ಲಿ ದೋಷವಿದ್ದಲ್ಲಿ(Vastu Dosha) ಹಣಕಾಸಿಗೆ ಸಂಬAಧಿಸಿದ ತೊಂದರೆಗಳು ಹೆಚ್ಚು ಕಾಡುತ್ತದೆ. ಈ ದಿಕ್ಕುಗಳನ್ನು ಸರಿಯಾಗಿ ಉಪಯೋಗಿಸದಿದ್ದಾಗ ಅಂತಹವರಿಗೆ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಳ್ಳುತ್ತದೆ. ಹಾಗಾದರೆ ಆರ್ಥಿಕ ಪ್ರಗತಿ ಕಾಣಲು ಈ ದಿಕ್ಕಿನಲ್ಲಿ ಯಾವೆಲ್ಲಾ ವಸ್ತುಗಳನ್ನು ಇಡಬೇಕು ಎಂಬುದರ ಮಾಹಿತಿ ಇಲ್ಲಿದೆ.

Panchamukhi Hanuman : ಪಂಚಮುಖಿ ಆಂಜನೇಯ ವಿಗ್ರಹ ಇದ್ದಲ್ಲಿ ವಾಸ್ತುದೋಷವೇ ಇಲ್ಲ, ಆರಾಧನೆಯ ರೀತಿ ಹೇಗಿರಬೇಕು?

ನೀಲಿ ಪಿರಮಿಡ್
ಮನೆಯ ಉತ್ತರ(North) ದಿಕ್ಕಿನಲ್ಲಿ ನೀಲಿ(Blue) ಬಣ್ಣದ ಪಿರಮಿಡ್(Pyramid) ಇರಿಸುವುದು ಮಂಗಳಕರ ಎಂದು ಶಾಸ್ತçದಲ್ಲಿ ಹೇಳಲಾಗಿದೆ. ಪಿರಮಿಡ್ ಇಡುವುದರಿಂದ ಬಂದ ಹಣ ಪೂರ್ಣವಾಗಿ ಖಾಲಿಯಾಗದಂತೆ(Empty) ನೋಡಿಕೊಳ್ಳುತ್ತದೆ. 
 
ಗ್ಲಾಸ್ ಬೌಲ್
ವಾಸ್ತು ಶಾಸ್ತçದ ಪ್ರಕಾರ ಉತ್ತರ ದಿಕ್ಕಿನಲ್ಲಿ ಒಂದು ಗ್ಲಾಸ್ ಬೌಲ್(Glass Bowl) ಇಡುವುದು ಒಳ್ಳೆಯದು. ನೀರು ತುಂಬಿದ ಈ ಗ್ಲಾಸ್‌ನಲ್ಲಿ ಬೆಳ್ಳೆಯ ನಾಣ್ಯವನ್ನು(Silver Coin) ಹಾಕಿಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಲಕ್ಷಿö್ಮÃ(Lord Lakshmi) ಸದಾ ನೆಲೆಸಿರುತ್ತಾಳೆ.

ತುಳಸಿ ಹಾಗೂ ಆಮ್ಲಾ
ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ(Tulasi Plant) ಸಸಿಯನ್ನು ನೆಡುವುದು ಮಂಗಳಕರ ಎಂದು ವಾಸ್ತು ಶಾಸ್ತçದಲ್ಲಿ ಹೇಳಲಾಗಿದೆ. ತುಳಸಿಯ ಹಿಂದೆಯೇ ಆಮ್ಲಾ(Amla Plant) ಗಿಡ ಬೆಳೆಸಿದರೆ ಕುಟುಂಬದಲ್ಲಿ(Family) ಆರ್ಥಿಕ ಸಮೃದ್ಧಿ ಸದಾ ಇರುತ್ತದೆ ಎನ್ನಲಾಗಿದೆ.

ಹಣ ಕೈಲಿ ನಿಲ್ತಿಲ್ಲ ಅಂದ್ರೆ ಹೀಗ್ಮಾಡಿ ಅನ್ನುತ್ತೆ Vastu

ಗಣೇಶ ಮತ್ತು ಲಕ್ಷ್ಮಿ ವಿಗ್ರಹ
ಮನೆಯ ಈಶಾನ್ಯ ಭಾಗದಲ್ಲಿ ಗಣೇಶ(Lord Ganesha) ಹಾಗೂ ಲಕ್ಷಿö್ಮÃ ದೇವಿಯ(Lord Lakshmi Devi) ವಿಗ್ರಹ(Idol) ಇರಿಸುವುದು ಶ್ರೇಷ್ಠ ಎನ್ನಲಾಗಿದೆ. ಈ ವಿಗ್ರಹಗಳ ಮುಂದೆ ಮಣ್ಣಿನ ದೀಪ(Earthen Lamp) ಇರುವುದು ಬಹಳ ಒಳ್ಳೆಯದಂತೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣಕಾಸಿನ ಕೊರತೆ ಕಾಣಿಸಿಕೊಳ್ಳುವುದಿಲ್ಲ.

ಉತ್ತರ ದಿಕ್ಕು
ವಾಸ್ತು ಶಾಸ್ತçದ ಪ್ರಕಾರ ಉತ್ತರ(North) ದಿಕ್ಕು ಕುಬೇರನ(Kubera) ಸ್ಥಾನ. ಕುಬೇರ ಎಂದರೆ ಸಮೃದ್ಧಿಯ(Wealth) ಸಂಕೇತ. ಹಾಗಾಗಿ ಹಣ(Money) ಹಾಗೂ ಸೇಫ್ಟೀ ಲಾಕರ್‌ಗಳನ್ನು(Safety Locker) ಈ ದಿಕ್ಕಿನಲ್ಲಿ ಇರಿಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯಲ್ಲೂ ಹಣಕಾಸಿನ ತೊಂದರೆಯಾಗಲಿ, ಕೊರತೆಯಾಗಲಿ ಕಾಣಿಸಿಕೊಳ್ಳುವುದಿಲ್ಲ. ಹಾಗೆಯೇ ಈ ದಿಕ್ಕಿನಲ್ಲಿ ಯಾವುದೇ ರೀತಿಯ ಭಾರದ ವಸ್ತುಗಳನ್ನು(Heavy Goods) ಇಡಬೇಡಿ. ಈ ಜಾಗವನ್ನು ಆದಷ್ಟು ಫ್ರೀಯಾಗಿರಲು(Free) ಬಿಡಿ. ಮನೆಯ ಉತ್ತರ ದಿಕ್ಕಿನ ಗೋಡೆಯ(Wall) ಮೇಲೆ ಕುಬೇರ ಯಂತ್ರ(Kubera Yanthra) ಇಡಬೇಕು. ಹೀಗೆ ಮಾಡಿದರೆ ಹಣಕ್ಕೆ ಸಂಬAಧಿಸಿದ ಹೊಸ ಆಫರ್‌ಗಳು ಆಕರ್ಷಿಸುತ್ತವೆ. 

ಎಲ್ಲ ಕಡೆಯೂ ಸಾಲ, ಯಾವಾಗ್ಲೂ ಟೆನ್ಶನ್: ಈ ಸರಳ ವಾಸ್ತು ಪಾಲಿಸಿ

ಮುಖ್ಯ ದ್ವಾರ ಹೀಗಿರಲಿ
ಮನೆಯ ಆಕರ್ಷಣೆಯ(Attraction) ಕೇಂದ್ರ ಬಿಂದು ಎಂದರೆ ಅದು ಮನೆಯ ಮುಖ್ಯ ದ್ವಾರ(Main Door). ಇದು ಧನಾತ್ಮಕ ಶಕ್ತಿಯನ್ನು(Positive Energy), ಸಮೃದ್ಧಿಯನ್ನು(Wealth) ಆಕರ್ಷಿಸುತ್ತದೆ. ಹಾಗಾಗಿ ಮುಖ್ಯ ದ್ವಾರದಲ್ಲಿ ಯಾವುದೇ ರೀತಿಯ ಬಿರುಕು(Crack), ತಪ್ಪುಗಳು(Faults) ಇರದಂತೆ ನೋಡಿಕೊಳ್ಳಿ. ಹಾಗೆ ಲಾಕ್(Locking) ಅನ್ನು ನಿಧಾನವಾಗಿ ಹಾಕಿ ತೆಗೆದು ಮಾಡಬೇಕು. 

ಅಕ್ವೇರಿಯಂ
ಈಶಾನ್ಯ ದಿಕ್ಕಿನಲ್ಲಿ ನೀರು ಇರುವ ಅಕ್ವೇರಿಯಂ(Aquarium), ಫೌಂಟೇನ್‌ಗಳನ್ನು(Fountain) ಇರಿಸುವುದು ಉತ್ತಮ. ಏಕೆಂದರೆ ಇದರಿಂದ ಧನಾತ್ಮಕ ಶಕ್ತಿ(Positive Energy) ಹಾಗೂ ಹಣದ ಹೊಳೆ ಹರಿದುಬರುತ್ತದೆ ಎಂದು ಶಾಸ್ತçದಲ್ಲಿ ಹೇಳಲಾಗಿದೆ. ಹಾಗೆಯೇ ಈ ದಿಕ್ಕಿನಲ್ಲಿ ನೀರು ಹರಿಯುತ್ತಿರಬೇಕು ಹಾಗೂ ಆಗಾಗ್ಗೆ ಅದನ್ನು ಬದಲಾಯಿಸುತ್ತಿರಬೇಕು. 

click me!