ಈ ದರಿದ್ರ ಕೆಲಸದಿಂದ ‘ಲಕ್ಷ್ಮಿ ದೇವಿ’ ಕೋಪಗೊಳ್ಳುವಳು; ಇವುಗಳನ್ನು ಇಂದೇ ನಿಲ್ಲಿಸಿ.!

By Sushma Hegde  |  First Published Aug 22, 2023, 12:01 PM IST

ವರಮಹಾಲಕ್ಷ್ಮಿ ಹಬ್ಬವನ್ನು 2023 ರ ಆಗಸ್ಟ್‌ 25 ರಂದು ಆಚರಿಸಲಾಗುವುದು. ಈ ಲಕ್ಷ್ಮೀದೇವಿಯ ಕೃಪೆಯಿರುವ ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಇರುವುದಿಲ್ಲ ಎಂದು ನಂಬಲಾಗಿದೆ.


ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ಹಬ್ಬವು ಅತ್ಯಂತ ಜನಪ್ರಿಯ ಹಬ್ಬವಾಗಿದೆ. ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನು 2023 ರ ಆಗಸ್ಟ್‌ 25 ರಂದು ಆಚರಿಸಲಾಗುವುದು. ಈ ಲಕ್ಷ್ಮೀದೇವಿಯ ಕೃಪೆಯಿರುವ ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಇರುವುದಿಲ್ಲ ಎಂದು ನಂಬಲಾಗಿದೆ. ಅದೇ ಸಮಯದಲ್ಲಿ ತಿಳಿದೋ ಅಥವಾ ತಿಳಿಯದೆಯೋ ನಾವು ಅನೇಕ ಬಾರಿ ಕೆಲವು ತಪ್ಪುಗಳನ್ನು ಮಾಡಿತ್ತೇವೆ. ಇದರಿಂದಾಗಿ ಲಕ್ಷ್ಮಿದೇವಿಯು ಕೋಪಗೊಳ್ಳಬಹುದು. ಆ ಕೆಲಸವನ್ನು ನೀವು ಇಂದೇ ನಿಲ್ಲಿಸಿ.

ಹಿಂದೂಗಳ ನಂಬಿಕೆಯ ಪ್ರಕಾರ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ನಮ್ಮ ಮನೆಯಲ್ಲಿ ಸಂಪತ್ತು ಮತ್ತು ಸಂತೋಷವನ್ನು ಪಾಡಿಕೊಳ್ಳಲು ಕೆಲವು ಕೆಲಸಗಳನ್ನು ನಿಲ್ಲಿಸಬೇಕು. ಈ ಕುರಿತು ಇಲ್ಲಿದೆ ಮಾಹಿತಿ.

Tap to resize

Latest Videos

ಸೂರ್ಯಾಸ್ತದ ವೇಳೆ ನಿದ್ದೆ

ಮುಸ್ಸಂಜೆಯ ವೇಳೆ ಮಲಗಬಾರದು ಎಂದು ಹಿರಿಯರು ಹೇಳುವುದನ್ನು ಕೇಳಿರಬಹುದು. ಸೂರ್ಯಾಸ್ತ ಸಮಯದಲ್ಲಿ ದೇವತೆಗಳು ಭೂಮಿಯನ್ನು ಪ್ರದಕ್ಷಿಣೆ ಮಾಡಲು ಬರುತ್ತಾರೆ ಎಂದು ನಂಬಲಾಗಿದೆ. ಹೀಗಾಗಿ ಸೂರ್ಯಾಸ್ತದ ಸಮಯದಲ್ಲಿ ಮಲುಗುವುದು ಒಳ್ಳೆಯದಲ್ಲ. ಲಕ್ಷ್ಮಿ ದೇವಿಯ ಅನುಗ್ರವನ್ನು ಉಳಿಸಿಕೊಳ್ಳಲು, ಸೂರ್ಯಾಸ್ತದ ಸಮಯದಲ್ಲಿ ಮಲುಗುವುದನ್ನು ತಪ್ಪಿಸಿ.

ಹರಿದ ಬಟ್ಟೆಗಳನ್ನು ಧರಿಸಬೇಡಿ

ನಿಮ್ಮ ಮನೆಯಿಂದ ಬಡತವನ್ನು ತೊಡೆದು ಹಾಕಲು ನೀವು ಬಯಸಿದರೆ, ಹರಿದ ಕೊಳಕು ಬಟ್ಟೆಗಳನ್ನು ಧರಿಸಬೇಡಿ. ಕೊಳಕು ಬಟ್ಟೆಗಳನ್ನು ಧರಿಸುವುದರಿಂದ ಲಕ್ಷ್ಮಿದೇವಿಗೆ ಕೋಪಬರುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಶುದ್ಧವಾದ ಬಟ್ಟೆಗಳನ್ನು ಪ್ರತಿದಿನ ಧರಿಸಬೇಕು.ಇದು ನಿಮ್ಮ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ.

ಮನೆಯ ಈ ದಿಕ್ಕಿನಿಂದ ಕಪ್ಪು ಇರುವೆ ಬಂದ್ರೆ ಹಣವೋ ಹಣ; ನಿಮ್ಮ ಬಡತನ ದೂರಾಗುತ್ತೆ..!

 

ಕಟುವಾಗಿ ಮಾತನಾಡಬೇಡಿ

ನಿಮಗೆ ಲಕ್ಷ್ಮಿದೇವಿಯ ಆಶಿರ್ವಾದ ಸಿಗಬೇಕಾದರೆ ನಿಮ್ಮ ಮಾತು ಮಧುರವಾಗಿರಲಿ. ಅನಾವಶ್ಯಕ ಕೂಗಾಡುವ ಮೂಲಕ ಅಥವಾ ಸಂಕಟವನ್ನು ಉಂಟು ಮಾಡುವುದರಿಂದ ಲಕ್ಷ್ಮಿ ಕೋಪಗೊಳ್ಳಬಹುದು. ಆದ್ದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಕಾಪಾಡಿಕೊಳ್ಳಲು ಮಹಿಳೆಯರನ್ನು ಗೌರವಿಸಿ ಸಹಾನೂಭೂತಿ ತೋರಿಸಿ.

ಕೊಳಕು ಹಲ್ಲು

ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಸಹ ಬಹಳ ಮುಖ್ಯ. ಈ ಕಾರಣದಿಂದಾಗಿ ನಿಮ್ಮ ಬಾಯಿಯ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಬ್ಯಾಕ್ಟೀರಿಯಾಗಳು ಸಹ ಬೆಳೆಯುವುದಿಲ್ಲ. ಮತ್ತೊಂದೆಡೆ ಕೆಲವರ ಕೊಳಕು ಹಲ್ಲುಗಳಿಂದ ಲಕ್ಷ್ಮಿಮಾತೆಯು ಕೋಪ ಗೊಳ್ಳುತ್ತಾಳೆ ಎಂದು ಹೇಳಲಾಗಿದೆ.

click me!