ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ವಸ್ತುಗಳ ಖರೀದಿ ಮಾಡ್ತೇವೆ. ಕೆಲ ವಸ್ತುಗಳನ್ನು ಖರೀದಿ ಮಾಡುವ ವೇಳೆ ಹಾಗೂ ಅದನ್ನು ಮನೆಯಲ್ಲಿ ಇಡುವ ವೇಳೆ ವಾಸ್ತು ನಿಯಮವನ್ನು ಗಮನಿಸಬೇಕು. ಇಲ್ಲವೆಂದ್ರೆ ಅನೇಕ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
ಮನೆಯಲ್ಲಿರುವ ಪೀಠೋಪಕರಣಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮನೆಯ ಒಳಾಂಗಣಕ್ಕೆ ಹೊಂದಿಕೆಯಾಗುವಂತಹ ಅನೇಕ ಬಗೆಯ ಫರ್ನೀಚರ್ ಗಳು ಇಂದು ಮಾರುಕಟ್ಟೆಯಲ್ಲಿ ಸಿಗುತ್ತವೆ. ಚಿಕ್ಕ ಮನೆಗಳಿಂದ ಹಿಡಿದು ದೊಡ್ಡ ಬಂಗಲೆಗಳಿಗೆ ಹೊಂದುವಂತಹ ನಾನಾ ಬಗೆಯ ಫರ್ನೀಚರ್ ಗಳು ಲಭ್ಯವಿದೆ. ಇತ್ತೀಚೆಗೆ ಮನೆ (Home) ಯಲ್ಲಿ ಜಾಗದ ಕೊರತೆ ಇರುವವರು ಕನ್ವರ್ಟಿಬಲ್ ಪೀಠೋಪಕರಣ (Furniture) ಗಳನ್ನು ಬಳಸುತ್ತಾರೆ. ಮನೆಯಲ್ಲಿ ಜಾಗದ ಕೊರತೆ ಇರುವವರಿಗೆ ಈ ಫರ್ನೀಚರ್ ಗಳು ಅನುಕೂಲವಾಗುತ್ತವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಜಾಗದ ಕೊರತೆ ಹೆಚ್ಚಿರುತ್ತದೆ. ಹಾಗಾಗಿ ಜನರು ಕನ್ವರ್ಟಿಬಲ್ (Convertible) ಫರ್ನೀಚರ್ ಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹ ಫರ್ನೀಚರ್ ಗಳನ್ನು ನಾವು ನಮಗೆ ಹೇಗೆ ಬೇಕೋ ಹಾಗೆ ಹೊಂದಿಸಿಕೊಳ್ಳಬಹುದು. ಈ ಕನ್ವರ್ಟಿಬಲ್ ಫರ್ನೀಚರ್ ಗಳು ಅನೇಕ ಬಗೆಯಲ್ಲಿಯೂ ಬಳಕೆಯಾಗುತ್ತವೆ.
ಹಾಗಾಗಿಯೇ ಜನರು ಈಗ ಹೆಚ್ಚು ಹೆಚ್ಚು ಕಾಂಪ್ಯಾಕ್ಟ್ ಫರ್ನೀಚರ್ ಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಪ್ರತಿಯೊಂದು ಮನೆಯನ್ನು ವಾಸ್ತು ಪ್ರಕಾರವಾಗಿಯೇ ನಿರ್ಮಿಸಲಾಗುತ್ತದೆ. ಹಾಗೆಯೇ ಮನೆಯ ಒಳಾಂಗಣಗಳು ಕೂಡ ವಾಸ್ತು ಪ್ರಕಾರವಾಗಿಯೇ ಇರುತ್ತದೆ. ಮನೆಯಲ್ಲಿರುವ ಎಲ್ಲ ವಸ್ತುಗಳನ್ನು ವಾಸ್ತು ಪ್ರಕಾರ ಇಟ್ಟರೆ ನಮಗೆ ಒಳ್ಳೆಯದು. ಅದ್ರಲ್ಲಿ ಪಿಠೋಪಕರಣ ಕೂಡ ಸೇರಿದೆ. ನೀವು ಮನೆಯಲ್ಲಿ ಕನ್ವರ್ಟಿಬಲ್ ಫರ್ನೀಚರ್ ಬಳಸುತ್ತಿದ್ದರೆ ಕೆಲ ವಾಸ್ತು ಟಿಪ್ಸ್ ಫಾಲೋ ಮಾಡಿ.
undefined
ವೃಶ್ಚಿಕ ರಾಶಿಯಲ್ಲಿ ಶುಕ್ರ , ಜನವರಿ 18ರ ನಂತರ ಇವರಿಗೆ ಬಂಪರ್ ಲಾಟರಿ
ಲೈಟ್ ವೇಟ್ ಫರ್ನೀಚರ್ ಅಳವಡಿಸಿ : ಹೆಚ್ಚು ಭಾರವಾದ ಕನ್ವರ್ಟಿಬಲ್ ಫರ್ನೀಚರ್ ಗಳನ್ನು ಖರೀದಿಸಬಾರದು. ಫರ್ನೀಚರ್ ಗಳು ಹೆಚ್ಚು ಭಾರವಿರುವುದರಿಂದ ಅದನ್ನು ಸ್ಥಳಾಂತರಿಸಲು ಹಾಗೂ ಬಳಸಲು ಕಷ್ಟವಾಗುತ್ತದೆ. ವಾಸ್ತು ಪ್ರಕಾರವಾಗಿಯೂ ಇದು ಸರಿಯಲ್ಲ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ಹಗುರವಾದ ಫರ್ನೀಚರ್ ಗಳನ್ನೇ ಖರೀದಿಸಬೇಕು.
ತಲೆಯಲ್ಲಿ ಎರಡು ಸುಳಿಯಿದ್ದರೆ ಎರಡು ಮದುವೆಯಾಗುತ್ತೆ ಅನ್ನೋದು ನಿಜಾನ?
ಫರ್ನೀಚರ್ ಅನ್ನು ಈ ರೀತಿ ಜೋಡಿಸಿ : ಕನ್ವರ್ಟಿಬಲ್ ಫರ್ನೀಚರ್ ಎಂದಾಕ್ಷಣ ಅವುಗಳನ್ನು ಹಲವು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಕನ್ವರ್ಟಿಬಲ್ ಫರ್ನೀಚರ್ ಅನ್ನು ಬಳಸಿದ ನಂತರ ಅದನ್ನು ಫೋಲ್ಡ್ ಮಾಡಿ ಇಡಲಾಗುತ್ತದೆ. ಹೀಗೆ ಇಡುವಾಗ ದಿಕ್ಕುಗಳ ಬಗ್ಗೆ ಗಮನವಿರಬೇಕು. ಇಂತಹ ಫರ್ನೀಚರ್ ಗಳನ್ನು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ಇಡಬೇಕು. ಕನ್ವರ್ಟಿಬಲ್ ಫರ್ನೀಚರ್ ಗಳನ್ನು ಮಧ್ಯಾಹ್ನದಲ್ಲಿ ಎತ್ತಿಡುವುದಾದರೆ ಅದನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಬಹುದು. ಆದರೆ ಈಶಾನ್ಯ ದಿಕ್ಕಿನಲ್ಲಿ ಇಡಬಾರದು.
ಲೋಹದ ಫರ್ನೀಚರ್ ಬೇಡ : ಇಂದು ವಿವಿಧ ರೀತಿಯ ಲೋಹದಿಂದ ಮಾಡಿದ ಕನ್ವರ್ಟಿಬಲ್ ಫೀಠೋಪಕರಣಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದು ನೋಡಲು ಬಹಳ ಸುಂದರವಾಗಿ ಹಾಗೂ ಆಕರ್ಷಕವಾಗಿರುತ್ತವೆ. ಆದರೆ ಇದು ವಾಸ್ತು ಪ್ರಕಾರ ಇದು ಒಳ್ಳೆಯದಲ್ಲ. ಹಾಗಾಗಿ ಲೋಹದಿಂದ ಮಾಡಿದ ಫರ್ನೀಚರ್ ಗಳನ್ನು ಖರೀದಿಸಬಾರದು.
ಈ ಬಣ್ಣದ ಫರ್ನೀಚರ್ ಖರೀದಿಸಿ : ಕನ್ವರ್ಟಿಬಲ್ ಫರ್ನೀಚರ್ ಗಳು ಬಿಳಿ ಅಥವಾ ಕ್ರೀಮ್ ಬಣ್ಣದಲ್ಲಿರಬೇಕು. ಕಪ್ಪು ಬಣ್ಣದ ಫರ್ನೀಚರ್ ಅನ್ನು ಖರೀದಿಸಲೇಬಾರದು. ಕಪ್ಪು ಬಣ್ಣದ ಪೀಠೋಪಕರಣಗಳನ್ನು ಬಳಸುವುದರಿಂದ ನಿದ್ದೆ ಹಾಗೂ ಮನಸ್ಸಿಗೆ ಶಾಂತಿ ಇರೋದಿಲ್ಲ. ಕಪ್ಪು ಬಣ್ಣದ ಫರ್ನೀಚರ್ ಮೇಲೆ ಕುಳಿತು ಅಭ್ಯಾಸ ಮಾಡಿದರೆ ಅಭ್ಯಾಸದಲ್ಲಿ ಏಕಾಗ್ರತೆ ಇರೋದಿಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಈ ವಿಷಯದ ಕಡೆಗೂ ಗಮನವಿರಲಿ : ಮನೆಯಲ್ಲಿ ಬಳಸುವ ಕನ್ವರ್ಟಿಬಲ್ ಫರ್ನೀಚರ್ ಗಳಲ್ಲಿ ಯಾವುದೇ ಬಗೆಯ ಬಿರುಕು ಇಲ್ಲದಂತೆ ನೋಡಿಕೊಳ್ಳಬೇಕು. ಈ ಫರ್ನೀಚರ್ ಗಳನ್ನು ಪರಿವರ್ತಿಸುವಾಗ ಚಿತ್ರ ವಿಚಿತ್ರವಾದ ಶಬ್ದಗಳು ಬರುವುದು ಕಂಡುಬಂದರೆ ಕೂಡಲೇ ಅದನ್ನು ಸರಿಪಡಿಸಿಕೊಳ್ಳಬೇಕು. ಈ ರೀತಿಯ ಗದ್ದಲಗಳು ಮನೆಗೆ ಅಶುಭವನ್ನು ಉಂಟುಮಾಡುತ್ತದೆ. ವಾಸ್ತುಶಾಸ್ತ್ರಜ್ಞರು ಈ ಶಬ್ದ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.