ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೇತಮಂಗಲದ ತಾತೇನಹಳ್ಳಿಯ ಅಜ್ಜಬೀರೇಶ್ವರ ಸ್ವಾಮಿದೇವಾಲಯದಲ್ಲಿ ವಿಶೇಷ ಪೂಜೆ
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಅ.05): ಕೋಲಾರದಲ್ಲಿ ವಿಜಯದಶಮಿ ಪ್ರಯಕ್ತ ತಲೆಯ ಮೇಲೆ ತೆಂಗಿನ ಕಾಯಿ ಒಡೆಯುವ ಪೂಜಾ ಕೈಂಕರ್ಯಗಳು ನೆರವೇರಿದವು. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೇತಮಂಗಲದ ತಾತೇನಹಳ್ಳಿ ಬಳಿ ಇರುವ ಅಜ್ಜಬೀರೇಶ್ವರ ಸ್ವಾಮಿದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇನ್ನು ಪ್ರತಿ ವರ್ಷದಂತೆ ವಿಜಯದಶಮಿ ಪ್ರಯುಕ್ತ ಇಲ್ಲಿ ಭಕ್ತರು ತಲೆಯ ಮೇಲೆ ತೆಂಗಿನ ಕಾಯಿ ಒಡೆಸಿಕೊಳ್ಳುವ ಮೂಲಕ ತಮ್ಮ ಶಕ್ತಿಯನ್ನ ಪ್ರದರ್ಶಿಸುತ್ತಾರೆ. ಅದರಂತೆ ಸುಮಾರು 50 ಕ್ಕೂ ಹೆಚ್ಚು ಜನರು ತಲೆಯ ಮೇಲೆ ತೆಂಗಿನಕಾಯಿ ಹೊಡೆಸಿಕೊಳ್ಳುವ ಮೂಲಕ ಅಜ್ಜಬೇರೇಶ್ವರ ದೇವರಿಗೆ ತಮ್ಮ ಭಕ್ತಿಯನ್ನ ಸಮರ್ಪಿಸಿದರು.
ಉಡುಪಿ ಕೃಷ್ಣನಿಗೆ ಹೆಣ್ಣಿನ ಅಲಂಕಾರ ಮಾಡುವುದು ಯಾಕೆ ಗೊತ್ತಾ?
ಇನ್ನು ವಿವಿಧೆಡೆಯಿಂದ ಕುರುಬ ಸಮುದಾಯದವರು ಪ್ರತಿವರ್ಷ ಈ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಇನ್ನು ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿದ್ದಾರೆ.