March Festival Calendar 2023: ಯುಗಾದಿ, ಹೋಳಿ, ರಾಮನವಮಿ.. ಹಬ್ಬಗಳ ರಸದೌತಣ ಬಡಿಸುವ ಮಾರ್ಚ್

By Suvarna NewsFirst Published Feb 20, 2023, 1:19 PM IST
Highlights

ಮಾರ್ಚ್‌ನಲ್ಲಿ ಹಬ್ಬಗಳ ಸುಗ್ಗಿಯೇ ನಮ್ಮೆಲ್ಲರ ಸಂಭ್ರಮ ಹೆಚ್ಚಿಸಲು ಕಾದು ಕುಳಿತಿದೆ. ಇದೇ ತಿಂಗಳಲ್ಲಿ ಹಿಂದೂ ಹೊಸ ವರ್ಷ ಯುಗಾದಿ ಬರಲಿದೆ. ಜೊತೆಗೆ, ಬಣ್ಣಗಳ ಹಬ್ಬ ಹೋಳಿ, ರಾಮನವಮಿ ಸೇರಿದಂತೆ ಸಾಕಷ್ಟು ಪ್ರಮುಖ ಆಚರಣೆಗಳನ್ನು ಕಾಣಬಹುದಾಗಿದೆ. 

ಮಾರ್ಚ್ ಎಂದರೆ ವಸಂತ ಋತುವಿನ ಸಂತಸ.. ಚಳಿಗಾಲದ ಅಂತ್ಯ. ಈ ತಿಂಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ವಿಶೇಷವಾಗಿದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ಮಾರ್ಚ್ ವರ್ಷದ ಮೂರನೇ ತಿಂಗಳು. ನಾವು ಹಿಂದೂ ಕ್ಯಾಲೆಂಡರ್ ಅನ್ನು ನೋಡಿದರೆ, ಈ ಸಮಯದಲ್ಲಿ ಫಾಲ್ಗುಣ ಮಾಸ ನಡೆಯುತ್ತದೆ. ಧಾರ್ಮಿಕ ದೃಷ್ಟಿಯಿಂದ ಮಾರ್ಚ್ ತಿಂಗಳು ಬಹಳ ವಿಶೇಷವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಣ್ಣದೋಕುಳಿಯ ಹಬ್ಬ ಹೋಳಿ ಈ ತಿಂಗಳಿಗೆ ರಂಗು ತುಂಬುತ್ತದೆ. ಕೇವಲ ಹೋಳಿಯೇ ಅಲ್ಲದೆ, ಮಾರ್ಚ್‌ನಲ್ಲಿ ಹಲವಾರು ಹಬ್ಬಹರಿದಿನಗಳಿವೆ. ಅವುಗಳ ಬಗ್ಗೆ ಕಣ್ಣಾಡಿಸೋಣ. 

3 ಮಾರ್ಚ್ 2023: ಅಮಲಕಿ ಏಕಾದಶಿ
ಅಮಲಕಿ ಏಕಾದಶಿ ಅಥವಾ ರಂಗಭರಣಿ ಏಕಾದಶಿಯನ್ನು ಫಲ್ಗುಣ ಮಾಸದ ಶುಕ್ಲ ಪಕ್ಷದಂದು ಆಚರಿಸಲಾಗುತ್ತದೆ. ವರ್ಷದ ಎಲ್ಲಾ ಏಕಾದಶಿ ದಿನಾಂಕಗಳನ್ನು ಭಗವಾನ್ ವಿಷ್ಣುವಿಗೆ ಸಮರ್ಪಿತವೆಂದು ಪರಿಗಣಿಸಲಾಗುತ್ತದೆ.  ಅಮಲಕಿ ಏಕಾದಶಿಯ ದಿನ ನೆಲ್ಲಿಕಾಯಿ ಮರವನ್ನು ಪೂಜಿಸುವ ಸಂಪ್ರದಾಯವಿದೆ. ಶ್ರೀಹರಿಯೇ ನೆಲ್ಲಿ ವೃಕ್ಷದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ.

Latest Videos

ಮಾರ್ಚ್ 4, 2023: ಪ್ರದೋಷ ವ್ರತ
ಪ್ರತಿ ತಿಂಗಳಿಗೆ ಎರಡು ಏಕಾದಶಿ ತಿಥಿಗಳು ಇರುವಂತೆ, ಎರಡು ಪ್ರದೋಷಗಳಿವೆ. ಈ ದಿನವನ್ನು ಶಿವನಿಗೆ ಸಮರ್ಪಿಸಲಾಗಿದೆ. ಈ ದಿನ ಶಿವನನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಆಚರಿಸಲಾಗುತ್ತದೆ.

ಮಾರ್ಚ್ 7, 2023: ಛೋಟಿ ಹೋಳಿ, ಹೋಲಿಕಾ ದಹನ್
ಹೋಳಿಕಾ ದಹನವನ್ನು ಹೋಳಿ ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಮಾಡಲಾಗುತ್ತದೆ. ಜನರು ಈ ದಿನವನ್ನು ಛೋಟಿ ಹೋಳಿ ಎಂದೂ ಕರೆಯುತ್ತಾರೆ. ಈ ವರ್ಷ ಹೋಲಿಕಾ ದಹನವನ್ನು ಮಾರ್ಚ್ 7, ಮಂಗಳವಾರ ಮಾಡಲಾಗುತ್ತದೆ ಮತ್ತು ದಹನಕ್ಕೆ ಮಂಗಳಕರ ಸಮಯವು 06:31 ರಿಂದ 08:58 ರವರೆಗೆ ಇರುತ್ತದೆ.

8 ಮಾರ್ಚ್ 2023: ಹೋಳಿ
2023ರಲ್ಲಿ, ಹೋಳಿ ಹಬ್ಬವನ್ನು ಮಾರ್ಚ್ 8ರಂದು ಬುಧವಾರ ಆಚರಿಸಲಾಗುತ್ತದೆ. ಫಲ್ಗುಣ ಮಾಸದ ಹುಣ್ಣಿಮೆ ಮರುದಿನ ಬಣ್ಣಗಳ ಹೋಳಿಯನ್ನು ಆಡಲಾಗುತ್ತದೆ.

Holi 2023: ಹೋಳಿ ಹಬ್ಬ ಯಾವಾಗ? ಎಲ್ಲೆಲ್ಲಿ ಹೇಗೆ ಆಚರಿಸುತ್ತಾರೆ?

ಮಾರ್ಚ್ 12, 2023: ರಂಗ ಪಂಚಮಿ
ರಂಗ ಪಂಚಮಿ ಹಬ್ಬವನ್ನು ಚೈತ್ರ ಮಾಸದ ಐದನೇ ದಿನದಂದು ಆಚರಿಸಲಾಗುತ್ತದೆ. ಹೋಳಿ ಹಬ್ಬದ ಐದು ದಿನಗಳ ನಂತರ ರಂಗ ಪಂಚಮಿ ಬರುತ್ತದೆ. ಈ ದಿನ ಹೋಳಿಯನ್ನು ಬಣ್ಣಗಳ ಬದಲಿಗೆ ಗುಲಾಲ್‌ನೊಂದಿಗೆ ಆಡಲಾಗುತ್ತದೆ. ರಂಗ ಪಂಚಮಿಯ ದಿನದಂದು ದೇವ-ದೇವತೆಗಳು ಸಹ ಭೂಮಿಗೆ ಬಂದು ಭಕ್ತರೊಂದಿಗೆ ಬಣ್ಣಗಳನ್ನು ಆಡುತ್ತಾರೆ ಎಂದು ನಂಬಲಾಗಿದೆ.

ಮಾರ್ಚ್ 18, 2023: ಪಾಪಮೋಚಿನಿ ಏಕಾದಶಿ
ಪಾಪಮೋಚಿನಿ ಏಕಾದಶಿಯು ಫಲ್ಗುಣ ಮಾಸದ ಕೃಷ್ಣ ಪಕ್ಷ ಏಕಾದಶಿಯಂದು ಬರುತ್ತದೆ. ಈ ಏಕಾದಶಿಯಂದು ಉಪವಾಸ ಮಾಡುವುದರಿಂದ ಪಾಪ ನಾಶವಾಗುತ್ತದೆ ಎಂದು ನಂಬಲಾಗಿದೆ. ಈ ಏಕಾದಶಿಯ ಶುಭ ಫಲಗಳ ಬಗ್ಗೆ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ್ದ ಉಲ್ಲೇಖಗಳಿವೆ.

ಮಾರ್ಚ್ 19, 2023: ಪ್ರದೋಷ ವ್ರತ
ಮಾರ್ಚ್ 19, ಭಾನುವಾರದಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ದಿನಾಂಕವನ್ನು ಶಿವನಿಗೆ ಸಮರ್ಪಿಸಲಾಗಿದೆ. 

ಮಾರ್ಚ್ 22, 2023: ಯುಗಾದಿ, ಗುಡಿ ಪಾಡ್ವಾ, ಚೈತ್ರ ನವರಾತ್ರಿ
ಮಾರ್ಚ್ 22 ರ ದಿನಾಂಕವು ತುಂಬಾ ಮಂಗಳಕರವಾಗಿದೆ. ಈ ದಿನ ಚೈತ್ರ ನವರಾತ್ರಿ ಆರಂಭವಾಗಲಿದೆ. ಅದೇ ದಿನ ಹಿಂದೂ ಹೊಸ ವರ್ಷವಾದ ಹಬ್ಬವಾದ ಯುಗಾದಿ ಮತ್ತು ಗುಡಿ ಪಾಡ್ವಾವನ್ನು ಸಹ ಆಚರಿಸಲಾಗುತ್ತದೆ.

24 ಮಾರ್ಚ್ 2023: ಮತ್ಸ್ಯ ಜಯಂತಿ, ಗೌರಿ ಪೂಜೆ, ಗಂಗೌರ್
ಮಾರ್ಚ್ 24 ರಂದು ಭಗವಾನ್ ವಿಷ್ಣುವಿನ ಮತ್ಸ್ಯ ಅವತಾರವನ್ನು ಪೂಜಿಸಲಾಗುತ್ತದೆ. ಮತ್ತೊಂದೆಡೆ ವಿವಾಹಿತ ಮಹಿಳೆಯರು ಗಂಗೌರ್ ತೀಜ್ ಆಚರಿಸುತ್ತಾರೆ. ಈ ದಿನ ಮಹಾದೇವ ಮತ್ತು ಮಾತಾ ಪಾರ್ವತಿಯನ್ನು ಸಂಪೂರ್ಣ ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ.

Ugadi 2023: 22 ಮಾರ್ಚ್‌ನಿಂದ ಶುರುವಾಗುತ್ತಿದೆ ಹೊಸ ಸಂವತ್ಸರ; 4 ರಾಶಿಗಳ ಪಾಲಿಗೆ ಅಚ್ಚೇ ದಿನದ ಆರಂಭ

25 ಮಾರ್ಚ್ 2023: ಲಕ್ಷ್ಮಿ ಪಂಚಮಿ
ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯನ್ನು ಲಕ್ಷ್ಮಿ ಪಂಚಮಿಯಂದು ಪೂಜಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಬಯಸಿದ ಫಲಿತಾಂಶಗಳು ದೊರೆಯುತ್ತವೆ.

30 ಮಾರ್ಚ್ 2023: ರಾಮ ನವಮಿ
ಮಾರ್ಚ್ 30 ನವರಾತ್ರಿಯ ಕೊನೆಯ ದಿನವಾಗಿರುತ್ತದೆ. ಈ ಸಂದರ್ಭದಲ್ಲಿ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನಾಂಕದಂದು ರಾಮ ನವಮಿಯ ಹಬ್ಬವನ್ನು ಸಹ ಆಚರಿಸಲಾಗುತ್ತದೆ. ಈ ದಿನದಂದು ಭಗವಾನ್ ಶ್ರೀರಾಮನು ಭೂಮಿಯಲ್ಲಿ ಜನಿಸಿದನು ಎಂದು ನಂಬಲಾಗಿದೆ.

click me!