ಪೃಕೃತಿಯ ಮಡಿಲಲ್ಲಿ ಗಣಪನ ಉದ್ಭವ; ಎಂದಿಗೂ ಬತ್ತಲ್ಲ ಇಲ್ಲಿನ ವಿಸ್ಮಯಕಾರಿ ಕೊಳ..!

By Sushma Hegde  |  First Published Aug 1, 2023, 12:10 PM IST

ಕೊಳನ್ ಕಲ್ ಮಹಾಗಣಪತಿ ದೇವಸ್ಥಾನವು ಪೃಕೃತಿಯ ಮಡಿಲಲ್ಲಿ ನೆಲೆನಿಂತಿರುವ ಪುಣ್ಯ ತಾಣ. ಇದು ಪವಾಡವೋ ಅಥವಾ ಸುಂದರ  ಸೃಷ್ಟಿಯೋ ಎಂಬಂತಿದೆ. ಕಣ್ಣಿಗೆ ಕಾಣುವ ವಿಸ್ಮಯದಂತೆ ಕಾಣುವ ಈ ದೇವಾಲಯ ಹಲವು ಕುತೂಹಲಕಾರಿ ವಿಷಯಗಳನ್ನು ಒಳಗೊಂಡಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.


ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಿದ್ಕಲ್ಕಟ್ಟೆ ಸಮೀಪ ಒಂದು ಸುಂದರವಾದ ಗಣಪತಿ ದೇವಾಲಯ (Ganapati Temple) ವಿದೆ. ಅದು ಹಲವು ವಿಸ್ಮಯಗಳ ಗೂಡು. ಅಲ್ಲಿ ನಿಬ್ಬೆರಗಾಗುವ ವಿಸ್ಮಯಕಾರಿ  (Amazing) ಅಂಶಗಳಿವೆ. ಪೃಕೃತಿ (Nature) ಯ ಚಮತ್ಕಾರವಿದೆ. ಆ ದೇವಾಲಯವೇ  ಕೊಳನ್ ಕಲ್ ಮಹಾಗಣಪತಿ ದೇವಸ್ಥಾನ.

ಕಲ್ಲು ಬಂಡೆಯ ಮೇಲೆ ಗಣಪತಿಯು ಉದ್ಭವ

Latest Videos

undefined

ಕೊಳನ್ ಕಲ್ 'ಕೊಳ' ಹಾಗು 'ಕಲ್ಲು' ಎಂಬ ಶಬ್ದಗಳಿಂದ ಉತ್ಪತ್ತಿಯಾಗಿದೆ. ಇಲ್ಲಿ ಸುಂದರ ಪ್ರಕೃತಿ (Beautiful nature) ಯ ನಡುವೆ, ಕಲ್ಲು ಬಂಡೆಯ ಮೇಲೆ ಗಣಪತಿಯು ಉದ್ಬವವಾಗಿ ನೆಲೆಸಿದ್ದಾನೆ. ಇಲ್ಲಿ ಒಂದು ಸಣ್ಣ ನಾಗಬನ ಕೂಡ ಇದೆ. ಈ ಸ್ಥಳದ ಹತ್ತಿರದಲ್ಲಿ ಅನೇಕ ಇತರ ಬಂಡೆ (rock) ಗಳನ್ನು ಹೊಂದಿತ್ತು, ಅವುಗಳಲ್ಲಿ ಹೆಚ್ಚಿನವು ಡೈನಮೈಟ್ ಬಳಸಿ ಸ್ಫೋಟಿಸಲಾಗಿದೆ ಮತ್ತು ಕಲ್ಲುಗಣಿಗಾರಿಕೆಯಿಂದ ತೆಗೆದುಕೊಂಡು ಹೋಗಲಾಗಿದೆ. ಮುಖ್ಯವಾಗಿ ದೇವಾಲಯ (Temple) ದ ಉಪಸ್ಥಿತಿಯಿಂದಾಗಿ ಪ್ರಸ್ತುತ ಈ ಬಂಡೆ ಮಾತ್ರ ಉಳಿದಿದೆ.

ಶಿಕ್ಷಣದ ಮೇಲೆ ಸಾಡೇಸಾತಿ ಶನಿಯ ಪ್ರಭಾವ; ಕಠಿಣ ಪರಿಶ್ರಮದಿಂದ ಯಶಸ್ಸು..!

 

ಎಂದಿಗೂ ಬತ್ತದ ಕೊಳದ ನೀರು

ಇದು ಉಡುಪಿಯಿಂದ ಸುಮಾರು 40 ಕಿ.ಮೀ. ದೂರದಲ್ಲಿದ್ದು, ನೋಡಲು ತುಂಬಾ ರಮಣೀಯವಾಗಿದೆ ಈ ಸುಂದರ ಕ್ಷೇತ್ರ. ಇಲ್ಲಿನ ಕೊಳದಲ್ಲಿ ಎಂತಹ ಬಿರು ಬೇಸಿಗೆ (Summer) ಯಲ್ಲೂ ನೀರು ಬತ್ತುವುದಿಲ್ಲ. ಇದೊಂದು ಗಣಪತಿಯ ಪವಾಡ (miracle) ವೋ ಅಥವಾ ಪ್ರಕೃತಿಯ ಸುಂದರ ಸೃಷ್ಟಿ (creation) ಯೋ ತಿಳಿಯದು ಎಂಬಂತಿದೆ. ಬಂಡೆಯ ಮೇಲಿದ್ದರೂ ಈ ಕೊಳದಲ್ಲಿ ವರ್ಷಪೂರ್ತಿ ನೀರು  (water) ಇರುತ್ತದೆ. ಇದು ನೋಡುಗರನ್ನು ಅಚ್ಚರಿಗೊಳಿಸುತ್ತದೆ. ಬಂಡೆಯ ಮೇಲೆ ಸುಮಾರು 50 ಮೆಟ್ಟಿಲುಗಳನ್ನು ಏರಬೇಕು. ಆಗ ಈ ಪುಣ್ಯ ಕ್ಷೇತ್ರ  (Punya Kshetra) ಸಿಗಲಿದೆ.

ಈ ಸ್ಥಳಕ್ಕೆ ಹೇಗೆ ಹೋಗಬೇಕು..?

ಇದು ಉಡುಪಿ ಜಿಲ್ಲೆಯ ಬಾರ್ಕೂರು-ಹಾಲಾಡಿ ರಸ್ತೆಯಲ್ಲಿದೆ. ಇಲ್ಲಿ ಒಂದು ಮಹಗಣಪತಿಯ ದೇವಸ್ಥಾನದ ದೊಡ್ಡ ಕಮಾನು (arch)  ಇದ್ದು, ಅಲ್ಲಿಂದ ಬಿದ್ಕಲಕಟ್ಟೆ ಎಂಬ ಊರನ್ನು ತಲುಪಿ ಮುಂದೆ ಹೋಗಬೇಕು. ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು  (Tourists) ಹಾಗೂ ಭಕ್ತ (devotee) ರು ಬರುತ್ತಲೇ ಇರುತ್ತಾರೆ. ವಿಶೇಷ ಹಬ್ಬಗಳ ಸಂದರ್ಭಗಳಾದ ಗಣೇಶ ಚತುರ್ಥಿ (Ganesha Chaturthi) , ಸಂಕ್ರಮಣ ಹಾಗೂ ಸಂಕಷ್ಟಹಾರ ಚತುರ್ಥಿಯಂದು ಸಾಕಷ್ಟು ಭಕ್ತರು ಇಲ್ಲಿಗೆ ಬಂದು ಗಣೇಶನ ದರ್ಶನ (Darshan) ಪಡೆಯುತ್ತಾರೆ.

ಜೀವನವೇ ಹಿಂಸೆ ಅನಿಸ್ತಿದೆಯಾ? ಚಿಂತಿಸಬೇಡಿ... ಆಗಸ್ಟ್ಈ ನಾಲ್ಕು ರಾಶಿಯವರಿಗೆ ಅದೃಷ್ಟ ತರಲಿದೆ..!

 

ಕಲ್ಲು ಗಣಪತಿ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? 

ಉಡುಪಿ ಜಿಲ್ಲೆಯ ಶಿರಿಯಾರ ಗ್ರಾಮದ ಪಡುಮುನಾಡು ಎಂಬಲ್ಲಿ ಕಲ್ಲು ಗಣಪತಿ ಎಂಬ ಇನ್ನೊಂದು ದೇವಸ್ಥಾನವಿದೆ. ಇದೊಂದು ಗುಹೆಯೊಳಗೆ ಇರುವ ಗಣಪತಿ. ಇದೊಂದು ಬಹಳ ಪ್ರಾಚೀನ ದೇವಾಲಯವಾಗಿದ್ದು, ಬಂಡೆಕಲ್ಲಿನ ಮೇಲೆ ಸ್ಥಾಪಿತವಾಗಿದೆ. ಇಲ್ಲಿನ ಗಣೇಶನು 4 ಕೈಯನ್ನು ಹೊಂದಿದ್ದಾನೆ ಎರಡು ಕೈ ವರದಾ ಹಸ್ತ ಇಚ್ಛೆಯನ್ನು ಸೂಚಿಸಿದರೆ ಇನ್ನೆರಡು ಕೈಗಳು ಮೋಕ್ಷವನ್ನು ಸೂಚಿಸುತ್ತದೆ. ಇಲ್ಲಿ ಶಿವ, ಪಾರ್ವತಿ ಹಾಗೂ ಗಣೇಶನ ವಿಗ್ರಹವಿದೆ. ಇಲ್ಲಿನ ಶಿವ ಪಾರ್ವತಿ ಉದ್ಭವ ಮೂರ್ತಿ ಎನ್ನಲಾಗುತ್ತದೆ.

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!