ತಿರುಪತಿ ತಿಮ್ಮಪ್ಪ ವಿಶೇಷ ದರ್ಶನಕ್ಕೆ ಆನ್‌ಲೈನ್ ಟಿಕೆಟ್ಸ್ ಬಿಡುಗಡೆ, ಬುಕಿಂಗ್ ಓಪನ್

By Suvarna News  |  First Published Jan 9, 2023, 4:48 PM IST

ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ವು ಭಕ್ತರು ಮುಂದಿನ ಎರಡು ತಿಂಗಳಿಗಾಗಿ ಜನವರಿ 9ರಂದು ಬೆಳಿಗ್ಗೆ 10 ಗಂಟೆಯಿಂದ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವಂತೆ ವಿನಂತಿಸಿದೆ. 


ತಿರುಮಲ ತಿರುಪತಿ ದೇವಸ್ಥಾನವು(ಟಿಟಿಡಿ) ಜನವರಿ 9ರಂದು ಆನ್‌ಲೈನ್ ಕೋಟಾ ವಿಶೇಷ ಪ್ರವೇಶ ದರ್ಶನ (ಎಸ್‌ಇಡಿ) ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಜನವರಿ ಮತ್ತು ಫೆಬ್ರವರಿ ತಿಂಗಳಿನ ಭೇಟಿಯ ವಿಶೇಷ ದರ್ಶನಕ್ಕಾಗಿ ಇಂದು ಬೆಳಗ್ಗೆ 10 ಗಂಟೆಯಿಂದ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ದರ್ಶನಕ್ಕೆ ಭಕ್ತರಿಗೆ ತಲಾ 300 ರೂ. ಚಾರ್ಜ್ ಮಾಡಲಾಗುತ್ತದೆ. 

'ಜನವರಿ 12ರಿಂದ 31ರವರೆಗೆ ಮತ್ತು ಫೆಬ್ರವರಿಗೆ ರೂ.300ರ ಆನ್‌ಲೈನ್ ಕೋಟಾವನ್ನು ಜನವರಿ 9ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಬಿಡುಗಡೆ ಮಾಡುತ್ತದೆ. ಭಕ್ತರು ಇದನ್ನು ಗಮನಿಸಿ ಮತ್ತು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸುವಂತೆ ವಿನಂತಿಸಲಾಗಿದೆ' ಎಂದು ಟಿಟಿಡಿ ಟ್ವೀಟ್‌ನಲ್ಲಿ ತಿಳಿಸಿದೆ.

Tap to resize

Latest Videos

ಬಾಲಾಲಯದ ನಿಮಿತ್ತ ಫೆ.22ರಿಂದ ಫೆ.28ರವರೆಗೆ ಸರ್ವ ದರ್ಶನಕ್ಕೆ ಅವಕಾಶವಿಲ್ಲ ಎಂದು ಟಿಟಿಡಿ ತಿಳಿಸಿದೆ. ಇದೇ ವೇಳೆ ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ ನಡೆಯುತ್ತಿದೆ. ವೈಕುಂಠ ಏಕಾದಶಿಯ 10 ದಿನಗಳ ಅವಧಿಯನ್ನು ಜನವರಿ 2ರಿಂದ 11ರವರೆಗೆ ಆಚರಿಸಲಾಗುತ್ತದೆ.

ತಿರುಮಲ ದೇವಸ್ಥಾನದಲ್ಲಿ ಡಿಸೆಂಬರ್ 23, 2022ರಂದು ಸಂಜೆ ರಂಗನಾಯಕುಲ ಮಂಟಪದಲ್ಲಿ ವಾರ್ಷಿಕ ಅಧ್ಯಯನೋತ್ಸವಗಳು ಪ್ರಾರಂಭವಾದವು. 25 ದಿನಗಳ ವಾರ್ಷಿಕ ಉತ್ಸವವು ವೈಕುಂಠ ಏಕಾದಶಿಗೆ 11 ದಿನಗಳ ಮೊದಲು ಪ್ರಾರಂಭವಾಗುತ್ತದೆ ಮತ್ತು ಜನವರಿ 15ರಂದು ಮುಕ್ತಾಯಗೊಳ್ಳುತ್ತದೆ.
ಈ ಉತ್ಸವದ ವಿಶಿಷ್ಟತೆ ಏನೆಂದರೆ 12 ಆಳ್ವಾರರು ರಚಿಸಿದ 4000 ಸ್ತೋತ್ರಗಳನ್ನು ನಾಲಯೈರ ದಿವ್ಯಪ್ರಬಂಧ ಪಾಸುರಂಗಳನ್ನು ಪ್ರತಿದಿನ ಪಠಿಸಲಾಗುತ್ತದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಜ.10ರಂದು ಅಂಗಾರಕ ಸಂಕಷ್ಟಿ ಚತುರ್ಥಿ, ವ್ರತ ಆಚರಣೆ ಹೇಗೆ, ಪ್ರಯೋಜನವೇನು?

ತಿರುಮಲದಲ್ಲಿ ವಸತಿ ಕೊಠಡಿಗಳ ಬಾಡಿಗೆ ದರ ಹೆಚ್ಚಳ
ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರ ವಸತಿ ಕೊಠಡಿಗಳ ಬಾಡಿಗೆ ದರವನ್ನು ಟಿಟಿಡಿ ಹೆಚ್ಚಳ ಮಾಡಿದೆ. ನಂದಕಂ, ಪಾಂಚಜನ್ಯಂ, ಕೌಸ್ತುಭಂ ಮತ್ತು ವಕುಳಮಾತಾ ಅತಿಥಿಗೃಹಗಳ ಕೊಠಡಿಗಳ ಬಾಡಿಗೆ ದರವನ್ನು 500-600 ರು.ಗಳಿಂದ 1000 ರು.ಗಳಿಗೆ ಏರಿಕೆ ಮಾಡಿದೆ. ನಾರಾಯಣ ಗಿರಿ ವಿಶ್ರಾಂತಿ ಗೃಹದ 1,2,3 ನೇ ಬ್ಲಾಕ್‌ನ ಬಾಡಿಗೆಯನ್ನು 1500 ರು.ಗಳಿಂದ 1700 ರು.ಗೆ ಏರಿಕೆ ಮಾಡಲಾಗಿದೆ. ವಿಶ್ರಾಂತಿ ಗೃಹ-4ರ ಬಾಡಿಗೆ 750 ರಿಂದ 1700 ರು.ಗೆ ಏರಿಕೆಯಾಗಿದೆ. ಕಾರ್ನರ್‌ ಸೂಟ್‌ಗಳ ದರ ಜಿಎಸ್‌ಟಿ ಸೇರಿ 2200 ರು.ಗಳಾಷ್ಟಗಿದ್ದು, ವಿಶೇಷ ಕೊಠಡಿಗಳ ಬಾಡಿಗೆ ದರ 2800 ರು.ಗೆ ಏರಿಕೆಯಾಗಿದೆ. ಭಕ್ತಾದಿಗಳು ಬಾಡಿಗೆಯೊಂದಿಗೆ ಠೇವಣಿಯನ್ನು ಕೂಡ ಪಾವತಿಸಬೇಕಾಗಿದೆ.

click me!