ತಿರುವನಂತಪುರಂನಲ್ಲಿರುವ ಅನಂತ ಪದ್ಮನಾಭನನ್ನು ನೋಡಲು ಪ್ರತಿ ದಿನ ಸಾವಿರಾರು ಭಕ್ತರು ಹೋಗ್ತಾರೆ. ಪದ್ಮನಾಭನ ದರ್ಶನವಾದ್ರೆ ಜೀವನ ಪಾವನ ಎಂದುಕೊಳ್ತಾರೆ. ಆ ಮೂರ್ತಿಯನ್ನೇ ಹೋಲುವ ಮೂರ್ತಿಯೊಂದು ಬಂಗಾರ, ವಜ್ರಗಳಿಂದ ನಿರ್ಮಾಣವಾಗಿದ್ದು, ಗಿನ್ನಿಸ್ ದಾಖಲೆಗೆ ಸಿದ್ಧವಾಗಿದೆ.
ದೇಶದಲ್ಲಿ 8 ಗಿನ್ನಿಸ್ ದಾಖಲೆಯನ್ನು ಹೆಮ್ಮೆಯ ಶಿವನಾರಾಯಣ ಜ್ಯುವೆಲರ್ಸ್ ಪ್ರೈ.ಲಿಮಿಡೆಟ್ ಮತ್ತೊಂದು ಸಾಧನೆ ಮಾಡಲು ಮುಂದಾಗಿದೆ. 9ನೇ ಗಿನ್ನಿಸ್ ದಾಖಲೆ ಮಾಡುವತ್ತ ತನ್ನ ದಾಪುಗಾಲಿಟ್ಟಿದೆ. ಶಿವನಾರಾಯಣ ಜ್ಯುವೆಲರ್ಸ್ ಸಾಮಾನ್ಯವಾಗಿ ಎಲ್ಲರಿಗಿಂತ ಭಿನ್ನ ಕೆಲಸವನ್ನು ಮಾಡುವ ಮೂಲಕ ಸುದ್ದಿಯಲ್ಲಿರುತ್ತದೆ. ಜ್ಯುವೆಲರಿ ಶೋಗಳಲ್ಲಿ, ಶಿವನಾರಾಯಣ ಜ್ಯುವೆಲರ್ಸ್ ಪ್ರೈ.ಲಿಮಿಡೆಟ್ ಆಕರ್ಷಕ ವಸ್ತುವನ್ನು ಅನಾವರಣ ಮಾಡುತ್ತದೆ. ಈ ಬಾರಿ ಕೂಡ ಶಿವನಾರಾಯಣ ಜ್ಯುವೆಲರ್ಸ್ ಪ್ರೈ.ಲಿಮಿಡೆಟ್ ಎಲ್ಲರ ಗಮನ ಸೆಳೆದಿದೆ.
ಇಂಡಿಯಾ ಇಂಟರ್‌ನ್ಯಾಶನಲ್ ಜ್ಯುವೆಲ್ಲರಿ ಶೋ 2023 ರಲ್ಲಿ, ಶಿವನಾರಾಯಣ ಜ್ಯುವೆಲರ್ಸ್ (Shiv Narayan Jewellers) ಪ್ರೈ.ಲಿಮಿಡೆಟ್ ಶ್ರೀ ಅನಂತ ಪದ್ಮನಾಭಸ್ವಾಮಿ (Ananth Padmanabhaswamy) ಮೂರ್ತಿಯನ್ನ ಅನಾವರಣಗೊಳಿಸಿದೆ. ಅತ್ಯಧ್ಬುತವಾಗಿರುವ ಈ ಅನಂತ ಪದ್ಮನಾಭ ಸ್ವಾಮಿ ಮೂರ್ತಿ ನೋಡಲು ಎರಡು ಕಣ್ಣು ಸಾಲದು ಅಂದ್ರೆ ಅತಿಶಯೋಕ್ತಿ ಏನಿಲ್ಲ.
ಪದ್ಮನಾಭನ ಮೂರ್ತಿ ತಯಾರಿಸೋದು, ಭೀಮ್ ಜ್ಯುವೆಲರ್ಸ್ ತಿರುವನಂತಪುರಂ ಅಧ್ಯಕ್ಷ ಡಾ.ಬಿ. ಗೋವಿಂದನ್ ಅವರ ಕನಸಾಗಿತ್ತು. ಅದನ್ನು ಶಿವನಾರಾಯಣ ಜ್ಯುವೆಲರ್ಸ್ ಪ್ರೈ.ಲಿಮಿಡೆಟ್ ಪೂರ್ಣಗೊಳಿಸಿದೆ. ಈ ಮೂರ್ತಿಯನ್ನು ಅವರಿಗೆ ಅರ್ಪಣೆ ಮಾಡಿದೆ. ಪದ್ಮನಾಭ ಸ್ವಾಮಿ ಮೂರ್ತಿಯ ಕರಕುಶಲತೆ ಎಲ್ಲರ ಗಮನ ಸೆಳೆಯುತ್ತಿದೆ. ಕೇರಳದ ತಿರುವನಂತಪುರಂನಲ್ಲಿರುವ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯದಲ್ಲಿರುವ ಅದ್ಭುತ ವಿಗ್ರಹದಿಂದ ಪ್ರೇರಿತವಾಗಿ, ಮೂಲ ಮೂರ್ತಿಗೆ ಹೋಲುವಂತೆ ಈ ಮೂರ್ತಿಯನ್ನು ತಯಾರಿಸಲಾಗಿದೆ.
ಕಾಗೆ ಕಂಡ್ರೆ ಶುಭವೋ, ಅಶುಭವೋ ಗೊತ್ತು, ಶ್ರಾವಣ ಮಾಸದಲ್ಲಿ ನೀಲಕಂಠ ಪಕ್ಷಿ ಕಂಡ್ರೆ?
ಹೊಳೆಯುತ್ತಿದ್ದಾನೆ ಪದ್ಮನಾಭ : ಭಗವಂತ ವಿಷ್ಣುವನ್ನು ಅದೇ ಯೋಗ ನಿದ್ರಾ ಭಂಗಿಯಲ್ಲಿ ತಯಾರಿಸಲಾಗಿದೆ. ಅವನ ಕೈಯನ್ನು ಜ್ಯೋತಿರ್ಲಿಂಗದ ಮೇಲೆ ಭಗವಂತ ಶಿವ ಮತ್ತು ಹೊಕ್ಕುಳಿನ ಮೇಲೆ ಕಮಲದ ಹೂವಿನ ಮೇಲೆ ಕುಳಿತಿರುವ ಬ್ರಹ್ಮ ದೇವರನ್ನು ಕೆತ್ತಲಾಗಿದೆ. ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ನೀಡಲಾದ ಸೊಗಸಾದ ವಿವರಣೆಯಂತೆ ಈ ಮೂರ್ತಿ ನಿರ್ಮಾಣವಾಗಿದೆ. ತಿರುವನಂತಪುರಂನಲ್ಲಿರುವ ಅನಂತ ಪದ್ಮನಾಭ ಮೂರ್ತಿ 18 ಇಂಚು ಎತ್ತರವಿದೆ. ಆದ್ರೆ ಈ ಮೂರ್ತಿಯನ್ನು 8 ಇಂಚು ಎತ್ತರ ಮತ್ತು 18 ಇಂಚು ಉದ್ದದಲ್ಲಿ ತಯಾರಿಸಲಾಗಿದೆ. 2 ತಿಂಗಳ ಕಾಲ ದಿನಕ್ಕೆ 16 ಗಂಟೆಗಳ ಕಾಲ ಕೆಲಸ ಮಾಡಿದ 32 ಮಂದಿ ಇದನ್ನು ತಯಾರಿಸಿದ್ದಾರೆ. ಇದು 2.8 ಕೆಜಿ ತೂಕವನ್ನು ಹೊಂದಿದೆ. ಸರಿಸುಮಾರು 75,000 ಉತ್ತಮ ಗುಣಮಟ್ಟದ ವಜ್ರಗಳಿಂದ ಆವೃತವಾಗಿದ್ದು, ಒಟ್ಟು 500 ಕ್ಯಾರಟ್ ಬಂಗಾರ ಹೊಂದಿದೆ. ಅತ್ಯುತ್ತಮವಾದ ಜಾಂಬಿಯನ್ ಪಚ್ಚೆಗಳು ಮತ್ತು ನೈಸರ್ಗಿಕ ಬರ್ಮೀಸ್ ಮಾಣಿಕ್ಯ ಇದ್ರಲ್ಲಿದೆ. ಮೂರ್ತಿಗೆ ದೈವಿಕ ಕಳೆ ಬಂದಿದ್ದು, ಪ್ರತಿಯೊಬ್ಬರಿಗೂ ಕೈ ಎತ್ತಿ ನಮಸ್ಕರಿಸಬೇಕೆಂಬ ಭಾವನೆ ಬರದೆ ಇರದು.
ಗಿನ್ನಿಸ್ ದಾಖಲೆಗೆ ಹೆಸರು ನೋಂದಾವಣೆ : ಈ ಅನಂತ ಪದ್ಮನಾಭ ಮೂರ್ತಿಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗೆ ನೋಂದಾಯಿಸಲಾಗಿದೆ. ಅಧ್ಯಕ್ಷ ಕಮಲ್ ಕಿಶೋರ್ ಅಗರ್ವಾಲ್ ಮತ್ತು ವ್ಯವಸ್ಥಾಪಕ ನಿರ್ದೇಶಕ ತುಷಾರ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಈ ಮೂರ್ತಿಯನ್ನು ರಚಿಸಲಾಗಿದೆ. ಮೂರ್ತಿ ತಯಾರಿಗೂ ಮುನ್ನ ತಿರುವನಂತಪುರಂಗೆ ಭೇಟಿ ನೀಡಿದ್ದ ವ್ಯವಸ್ಥಾಪಕ ನಿರ್ದೇಶಕ ತುಷಾರ್ ಅಗರ್ವಾಲ್, ದೇವರ ಮೂರ್ತಿಯನ್ನು ಕೂಲಂಕುಶವಾಗಿ ಪರೀಕ್ಷೆ ಮಾಡಿ, ಅದ್ರಂತೆ ಮೂರ್ತಿ ನಿರ್ಮಾಣದ ಪ್ರಯತ್ನ ನಡೆಸಿದ್ದಾರೆ.
ಸರ್ಕಾರಕ್ಕೆ 45 ಸಾವಿರ ಕೋಟಿ ರೂ. ಉಳಿಸಿದ ಸರ್ಕಾರಿ ಇ-ಮಾರುಕಟ್ಟೆ, ಹೇಗೆ? ಇಲ್ಲಿದೆ ಮಾಹಿತಿ
ಈಗಾಗಲೇ 8 ಗಿನ್ನಿಸ್ ದಾಖಲೆ ನಿರ್ಮಾಣ : ಸಾಟಿಯಿಲ್ಲದ ಕರಕುಶಲತೆ ಮತ್ತು ವಿಶಿಷ್ಟ ವಿನ್ಯಾಸಗಳಿಗೆ ಜಾಗತಿಕವಾಗಿ ಹೆಸರುವಾಸಿಯಾದ ಶಿವನಾರಾಯಣ್ ಜ್ಯುವೆಲರ್ಸ್ ತನ್ನ 4 ಮೇರುಕೃತಿಗಳಿಗಾಗಿ 8 ಗಿನ್ನೆಸ್ ವಿಶ್ವ ದಾಖಲೆಗಳನ್ನು ಹೊಂದಿರುವ ಏಕೈಕ ಭಾರತೀಯ ಆಭರಣ ಬ್ರ್ಯಾಂಡ್ ಆಗಿದೆ. ಗಣೇಶ ಪೆಂಡೆಂಟ್, ದಿ ರಾಮ್ ದರ್ಬಾರ್, ದಿ ಸತ್ಲಾಡಾ ನೆಕ್ಲೇಸ್ ಮತ್ತು ದಿ ಮ್ಯಾಗ್ನಿಫೈಯಿಂಗ್ ಗ್ಲಾಸ್ ಗಿನ್ನಿಸ್ ದಾಖಲೆ ಬರೆದಿವೆ.