ಸತತ 24ನೇ ತಿಂಗಳು ತಿರುಪತಿ ಹುಂಡಿಯಲ್ಲಿ ಶತಕೋಟಿಗೂ ಅಧಿಕ ಕಾಣಿಕೆ ಸಂಗ್ರಹ

By Kannadaprabha News  |  First Published Mar 4, 2024, 9:46 AM IST

ಫೆಬ್ರವರಿ ತಿಂಗಳಲ್ಲಿ ತಿರುಪತಿ ತಿರುಮಲ ದೇಗುಲದ ಹುಂಡಿಯಲ್ಲಿ 111.71 ಕೋಟಿ ರು. ಹಣ ಸಂಗ್ರಹವಾಗಿದೆ. ಇದರೊಂದಿಗೆ ಸತತ 24ನೇ ತಿಂಗಳು ಹುಂಡಿಯಲ್ಲಿ 110 ಕೋಟಿ ರು.ಗಿಂತ ಹೆಚ್ಚು ಹಣ ಸಂಗ್ರಹವಾದಂತೆ ಆಗಿದೆ.


ತಿರುಮಲ: ಫೆಬ್ರವರಿ ತಿಂಗಳಲ್ಲಿ ತಿರುಪತಿ ತಿರುಮಲ ದೇಗುಲದ ಹುಂಡಿಯಲ್ಲಿ 111.71 ಕೋಟಿ ರು. ಹಣ ಸಂಗ್ರಹವಾಗಿದೆ. ಇದರೊಂದಿಗೆ ಸತತ 24ನೇ ತಿಂಗಳು ಹುಂಡಿಯಲ್ಲಿ 110 ಕೋಟಿ ರು.ಗಿಂತ ಹೆಚ್ಚು ಹಣ ಸಂಗ್ರಹವಾದಂತೆ ಆಗಿದೆ.. ಈ ಕುರಿತು ಮಾಹಿತಿ ನೀಡಿರುವ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ, ‘ಫೆಬ್ರವರಿಯಲ್ಲಿ 19.06 ಲಕ್ಷ ಭಕ್ತರ ದೇವರ ದರ್ಶನ ಪಡೆದಿದ್ದು, ಹುಂಡಿಯಿಂದ 111.71 ಕೋಟಿ ರು. ಆದಾಯ ಸಂಗ್ರಹವಾಗಿದೆ. 2022ರ ಫೆಬ್ರವರಿಯಿಂದಲೂ ದೇವಾಲಯದ ಹುಂಡಿ ಆದಾಯದಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ ಎಂದು ಹೇಳಿದರು.

ಬೇಸಿಗೆ ತಿಂಗಳಾದ ಏಪ್ರಿಲ್‌ನಿಂದ ಜೂನ್‌ವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ವಿಶೇಷ ದರ್ಶನ, ವಿಐಪಿ ದರ್ಶನ, ಪ್ರವಾಸ್ಯೋದ್ಯಮ ಕೋಟಾ ಟಿಕೆಟ್‌ಗಳನ್ನುಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಲು ಸೂಚಿಸಲಾಗಿದೆ.

Tap to resize

Latest Videos

ಬಿಜೆಪಿ ಟಿಕೆಟ್‌ ತಿರಸ್ಕರಿಸಿದ ವಿವಾದಿತ ಗಾಯಕ ಪವನ್‌ ಸಿಂಗ್‌

ನವದೆಹಲಿ/ಕೋಲ್ಕತಾ: ಮಹಿಳೆಯರ ಕುರಿತು ದ್ವಂದ್ವಾರ್ಥ ಬರುವಂತಹ ಹಾಡುಗಳನ್ನು ಹಾಡುವ ಮೂಲಕ ವಿವಾದ ಸೃಷ್ಟಿಸಿದ್ದ ಬಿಜೆಪಿ ನಾಯಕ ಪವನ್‌ ಸಿಂಗ್‌ ಪಶ್ಚಿಮ ಬಂಗಾಳ ಕ್ಷೇತ್ರದ ಅಸಾನ್ಸೋಲ್‌ ಕ್ಷೇತ್ರದಿಂದ ನೀಡಿದ್ದ ಬಿಜೆಪಿ ಚುನಾವಣಾ ಟಿಕೆಟ್‌ ನಿರಾಕರಿಸಿದ್ದು, ಲೋಕಸಭಾ ಕಣದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದಾರೆ.

ತಿರುಪತಿಯಿಂದ ಧೋತಿ ತರಿಸ್ಕೊಂಡು ಉಟ್ಟು ತೋರಿಸಿದ ದಕ್ಷಿಣ ಕೊರಿಯಾ ಹುಡುಗ!

ಕಣದಿಂದ ಹಿಂದಕ್ಕೆ ಸರಿಯಲು ಯಾವುದೇ ನಿರ್ದಿಷ್ಟ ಕಾರಣಗಳನ್ನು ಅವರು ನಮೂದಿಸಿಲ್ಲ, ಆದರೆ ಅವರು ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುವ ಹಾಗೂ ಹಾಡು ಹಾಡುವ ಕುರಿತು ಟಿಎಂಸಿ ಟೀಕೆ ಮಾಡಿತ್ತು. ಇಂಥವವರಿಗೆ ಟಿಕೆಟ್‌ ನೀಡುವುದು ಮಹಿಳೆಯರಿಗೆ ನೀಡುವ ಗೌರವವೇ ಎಂದು ಕಿಡಿಕಾರಿತ್ತು. ಈ ಹಿನ್ನೆಲೆಯಲ್ಲಿ ಅವರು ಕಣದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಈ ಬೆನ್ನಲ್ಲೇ ಟಿಎಂಸಿ ವಾಗ್ದಾಳಿ ನಡೆಸಿದ್ದು, ಚುನಾವಣಾ ಪ್ರಚಾರಕ್ಕೆ ಮುನ್ನವೇ ಹಾಲಿ ಟಿಎಂಸಿ ಸಂಸದ, ನಟ ಶತ್ರುಘ್ನ ಸಿನ್ಹಾ ಅವರ ವಿರುದ್ಧ ಸೊಲೊಪ್ಪಿಕೊಂಡು ಕ್ಷೇತ್ರ ಬಿಟ್ಟುಕೊಟ್ಟಿದೆ ಎಂದು ಟೀಕೆ ಮಾಡಿದೆ. ಬಿಜೆಪಿಯು ಶನಿವಾರವಷ್ಟೇ ಪವನ್‌ ಸಿಂಗ್‌ ಅವರಿಗೆ ಅಸನ್ಸೋಲ್‌ ಕ್ಷೇತ್ರದಿಂದ ಟಿಕೆಟ್‌ ನೀಡಿತ್ತು. ಇಲ್ಲಿ ಟಿಎಂಸಿಯ ಶತ್ರುಘ್ನ ಸಿನ್ಹಾ ಮತ್ತೆ ಕಣಕ್ಕಿಳಿಯುವ ಸಾಧ್ಯತೆ ಇದೆ.

ಮುಸ್ಲಿಮರಿಗೂ ತಿರುಪತಿ ದರ್ಶನಕ್ಕೆ ಅವಕಾಶದ ಬಗ್ಗೆ ಟಿಟಿಡಿ ಪರಿಶೀಲನೆ

click me!