2022ರಲ್ಲಿ ಅತಿ ಹೆಚ್ಚು ಭಕ್ತರ ಭೇಟಿ ಕಂಡ 2ನೇ ದೇವಾಲಯ ತಿರುಪತಿ! ಅಚ್ಚರಿ ಹುಟ್ಟಿಸುತ್ತೆ ಭಕ್ತರ ಸಂಖ್ಯೆ!

By Suvarna NewsFirst Published Dec 28, 2022, 4:39 PM IST
Highlights

ಜಗತ್ತಿನ ಎರಡನೇ ಅತಿ ಶ್ರೀಮಂತ ದೇವಾಲಯ ಎನಿಸಿಕೊಂಡಿರುವ ತಿರುಪತಿ ವೆಂಕಟೇಶ್ವರ ಸನ್ನಿಧಿಯು 2022ರಲ್ಲಿ ಎರಡನೇ ಅತಿ ಹೆಚ್ಚು ಭಕ್ತರ ಸೆಳೆದ ದೇವಾಲಯವಾಗಿ ಗುರುತಿಸಿಕೊಂಡಿದೆ. 

ಭಾರತದಲ್ಲಿ ದೇವಾಲಯಗಳಿಗೆ ಕೊರತೆಯಿಲ್ಲ. ಹೆಜ್ಜೆಹೆಜ್ಜೆಗೂ ದೇವಾಲಯಗಳಿವೆ. ಪ್ರತಿ ದೇವಾಲಯಕ್ಕೂ ದೊಡ್ಡ ಇತಿಹಾಸವಿದೆ. ಅಷ್ಟೇ ದೊಡ್ಡ ಭಕ್ತಗಣವಿದೆ. ಸುಮಾರು 20 ಲಕ್ಷ ಹಿಂದೂ ದೇವಾಲಯಗಳ ನಡುವೆಯೂ ಕೇವಲ ಭಾರತವಷ್ಟೇ ಅಲ್ಲ, ಜಗತ್ತಿನಾದ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿರುವ ದೇವಾಲಯವೆಂದರೆ ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ದೇವಾಲಯವಾಗಿರುವ ತಿರುಪತಿ ವೆಂಕಟೇಶ್ವರ ಸನ್ನಿಧಾನ. 

ಅತಿ ಹೆಚ್ಚು ಭಕ್ತರ ಸೆಳೆದ ಎರಡನೇ ದೇವಾಲಯ
ತಿರುಮಲ ವೆಂಕಟೇಶ್ವರ ದೇವಸ್ಥಾನ(Tirumala Venkateshwara Temple)ವು ಅತ್ಯಂತ ಶ್ರೀಮಂತ ದೇವರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮತ್ತು ಭಗವಾನ್ ವಿಷ್ಣುವಿನ ಅವತಾರವೆಂದು ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ಕೃಷ್ಣದೇವರಾಯನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು ಮತ್ತು ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ಇದು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ದೇವಾಲಯಗಳಲ್ಲಿ ಒಂದಾಗಿದೆ. 

OYO ಕಲ್ಚರಲ್ ಟ್ರಾವೆಲ್ ರಿಪೋರ್ಟ್ ಪ್ರಕಾರ, ಈ ವರ್ಷ ವೆಂಕಟೇಶ್ವರನ ದೇವಾಲಯವು ಭಾರತದಲ್ಲಿ ಅತಿ ಹೆಚ್ಚು ಭಕ್ತರನ್ನು ಸೆಳೆದ ದೇವಾಲಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ(second most visited temple in India 2022). ದೇಶಾದ್ಯಂತ ಭಕ್ತರು ಭೇಟಿ ನೀಡುವ ವಿವಿಧ ಜನಪ್ರಿಯ ಯಾತ್ರಾ ಸ್ಥಳಗಳನ್ನು ಓಯೋ ಸಂಸ್ಥೆ ಸಮೀಕ್ಷೆ ಮಾಡಿದೆ.

3 ರಾಶಿಗಳಿಗೆ ಮಕರ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗದ ಅದೃಷ್ಟ

ಮೊದಲ ಸ್ಥಾನ ಯಾವ ದೇವಾಲಯಕ್ಕೆ?
ಸಮೀಕ್ಷೆಯಲ್ಲಿ ವಾರಣಾಸಿ ಮೊದಲ ಸ್ಥಾನದಲ್ಲಿದ್ದು, ತಿರುಮಲ ಕ್ಷೇತ್ರ ಎರಡನೇ ಸ್ಥಾನದಲ್ಲಿದೆ. ಶಿರಡಿಯ ಸಾಯಿಬಾಬಾ ದೇವಾಲಯ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸರ್ಕಾರ ಕೊರೋನಾ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ, ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಪ್ರಕಾರ, ತಿರುಪತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಯಾತ್ರಿಕರು ಕಾಯ್ದಿರಿಸಿದ ಕೊಠಡಿಗಳಲ್ಲಿ ಶೇಕಡಾ 238ರಷ್ಟು ಹೆಚ್ಚಳವಾಗಿದೆ.

ಭಕ್ತರು ತಿರುಮಲದಲ್ಲಿರುವ ಪೀಠಾಧಿಪತಿ ವೆಂಕಟೇಶ್ವರ ಸ್ವಾಮಿಯನ್ನು ತಮ್ಮ ಕುಲದೇವರೆಂದು ಪರಿಗಣಿಸಿ ಅತ್ಯಂತ ಭಕ್ತಿಯಿಂದ ಗೌರವ ಸಲ್ಲಿಸುತ್ತಿದ್ದಾರೆ. 1950ರಿಂದೀಚೆಗೆ ಬೆಟ್ಟದ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಅಧಿಕೃತ ವರದಿಗಳ ಪ್ರಕಾರ ಪ್ರತಿದಿನ 30,000 ರಿಂದ 40,000 ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ಈಗ ಈ ಸಂಖ್ಯೆಯು ಪ್ರತಿನಿತ್ಯ 80,000ದಿಂದ ಒಂದು ಲಕ್ಷ ಯಾತ್ರಾರ್ಥಿಗಳು ಬೆಟ್ಟಕ್ಕೆ ಭೇಟಿ ನೀಡುವುದನ್ನು ದಾಖಲಿಸಿದೆ. ತಿರುಪತಿ ಬಾಲಾಜಿ ದೇವಸ್ಥಾನವು ಭಕ್ತರಿಂದ ಪಡೆಯುವ ದೇಣಿಗೆಯ ಕಾರಣದಿಂದಾಗಿ ಭಾರತದ ಎರಡನೇ ಶ್ರೀಮಂತ ದೇವಾಲಯವಾಗಿದೆ. ಮೊದಲ ಸ್ಥಾನದಲ್ಲಿ ಕೇರಳದ ಅನಂತ ಪದ್ಮನಾಭ ದೇವಾಲಯವಿದೆ.

ಭಕ್ತರು ಸಮಯಾವಕಾಶ, ಸರ್ವ ದರ್ಶನ, ಶಿಫಾರಸ್ಸಿನ ಆಧಾರದ ಮೇಲೆ ದರ್ಶನ ಮತ್ತು ವಿಶೇಷ ಪ್ರವೇಶ ದರ್ಶನದ ಮೂಲಕ ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅದರ ವಾರ್ಷಿಕ ಉತ್ಸವ, ಸೆಪ್ಟೆಂಬರ್‌ನಲ್ಲಿ ನಡೆಯುವ ಬ್ರಹ್ಮೋತ್ಸವ. ಆಚರಣೆಯು ಒಂಬತ್ತು ದಿನಗಳವರೆಗೆ ಮುಂದುವರಿಯುತ್ತದೆ ಮತ್ತು ಇದು ದೇಶಾದ್ಯಂತದ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಏತನ್ಮಧ್ಯೆ, ಕಳೆದ ಒಂಬತ್ತು ತಿಂಗಳಲ್ಲಿ ಬೆಟ್ಟದ ಹುಂಡಿ ಸಂಗ್ರಹ ಬರೋಬ್ಬರಿ 100 ಕೋಟಿ ರೂ. ಅಂದ ಹಾಗೆ ಈ ದೇವಾಲಯದ ನಿವ್ವಳ ಮೌಲ್ಯ 2.53 ಲಕ್ಷ ಕೋಟಿ!

Sabarimala Income: 39 ದಿನಗಳಲ್ಲಿ ಶಬರಿಮಲೆ ದೇಗುಲಕ್ಕೆ 223 ಕೋಟಿ ಆದಾಯ ಸಂಗ್ರಹ

ತಿರುಪತಿಗೆ ಭಕ್ತರು ಹೆಚ್ಚು ಕಾಣಿಕೆ ಕೊಡಲು ಕಾರಣ
ದಂತಕಥೆಗಳ ಪ್ರಕಾರ, ಬಾಲಾಜಿಯು ಪದ್ಮಾವತಿಯೊಂದಿಗಿನ ವಿವಾಹಕ್ಕಾಗಿ ಕುಬೇರನಿಂದ ಒಂದು ಕೋಟಿ ಮತ್ತು 11.4 ಮಿಲಿಯನ್ ಚಿನ್ನದ ನಾಣ್ಯಗಳನ್ನು ಸಾಲವಾಗಿ ಪಡೆದಿದ್ದಾರೆ. ಈ ಸಾಲದ ಮರುಪಾವತಿಗೆ ವೆಂಕಟೇಶ್ವರನಿಗೆ ನೆರವಾಗಲು ದೇಶಾದ್ಯಂತದ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ಕೈಲಾದಷ್ಟು ಕಾಣಿಕೆ ನೀಡುತ್ತಾರೆ. 

click me!