ಹೆಸರು ಬರೀ ಕರೆಯಲು, ಗುರುತಿಸಲು ಮಾತ್ರ ಸೀಮಿತವಲ್ಲ. ಹೆಸರಿನಲ್ಲಿ ಎಲ್ಲವೂ ಅಡಗಿದೆ. ನಮ್ಮ ಹೆಸರಿನ ಮೂಲಕವೇ ನಮ್ಮ ಸ್ವಭಾವವನ್ನು ಹೇಳಬಹುದು. ಹೆಸರು ಶುರುವಾಗುವ ಮೊದಲ ಅಕ್ಷರಕ್ಕೆ ಹೆಚ್ಚಿನ ಮಹತ್ವವಿದೆ.
ಪ್ರತಿಯೊಬ್ಬರಿಗೂ ನಾಮಕರಣ ಶಾಸ್ತ್ರ ನಡೆಯುತ್ತದೆ. ಈಗ ಅದೆಷ್ಟೇ ಹೆಸರು ಬಂದಿದ್ರೂ ಬಹುತೇಕ ಜನರು ಹುಟ್ಟಿದ ದಿನ, ಸಮಯ ನೋಡಿ, ಅದಕ್ಕೆ ಹೊಂದಿಕೆಯಾಗುವ ಹೆಸರನ್ನು ಇಡುವ ಪ್ರಯತ್ನ ನಡೆಸುತ್ತಾರೆ. ಹುಟ್ಟಿದ ಗಳಿಗೆ ಆಧಾರದ ಮೇಲೆ ಯಾವ ಅಕ್ಷರ ಬಂದಿದೆ ಎಂಬುದನ್ನು ಪತ್ತೆ ಮಾಡಲಾಗುತ್ತದೆ.
ಪ್ರತಿಯೊಬ್ಬರ ಸ್ವಭಾವ (Nature) ವು ವಿಭಿನ್ನವಾಗಿರುತ್ತದೆ. ಆದ್ರೆ ಜಾತಕ (Horoscope) ವನ್ನು ಆಧಾರವಾಗಿಟ್ಟುಕೊಂಡು ಹೆಸರಿಟ್ಟುಕೊಂಡವರ ಸ್ವಭಾವದಲ್ಲಿ ಕೆಲ ಹೋಲಿಕೆಯನ್ನು ನೀವು ನೋಡಬಹುದು. ಅಂದ್ರೆ ಆರಂಭದಲ್ಲಿ ಎ ಅಕ್ಷರ (Character) ಬರುವ ವ್ಯಕ್ತಿಗಳ ಸ್ವಭಾವ ಸ್ವಲ್ಪ ಹೋಲುತ್ತದೆ. ಬಿ ಅಕ್ಷರ ಬರುವ ವ್ಯಕ್ತಿ ಸ್ವಭಾವ ಹೋಲುತ್ತದೆ. ಶಾಸ್ತ್ರದ ಪ್ರಕಾರ ಜನರ ಸ್ವಭಾವವನ್ನು ಅವರ ಹೆಸರಿನ ಮೊದಲ ಅಕ್ಷರದಿಂದ ಕಂಡುಹಿಡಿಯಬಹುದು. ಅವರ ಪ್ರೇಮ ಜೀವನ ಹೇಗಿರುತ್ತದೆ, ಅವರು ಯಾವುದರಲ್ಲಿ ಆಸಕ್ತಿ ಹೊಂದಿರುತ್ತಾರೆ ಎಂಬುದನ್ನೆಲ್ಲ ಹೇಳಬಹುದು. ಇಂದು ನಾವು ಜೆ (J) ಹೆಸರಿನ ಹುಡುಗಿಯರ ಸ್ವಭಾವದ ಬಗ್ಗೆ ನಿಮಗೆ ಹೇಳ್ತೆವೆ.
ಜೆ ಅಕ್ಷರದ ಹುಡುಗಿಯರ ಸ್ವಭಾವ ಹೇಗಿರುತ್ತೆ ಗೊತ್ತಾ? :
ಅದೃಷ್ಟವಂತರು (Lucky) ಜೆ ಅಕ್ಷರದ ಹುಡುಗಿಯರು : ಹೆಣ್ಣು ಮಕ್ಕಳನ್ನು ಲಕ್ಷ್ಮಿ ಎಂದೇ ಪರಿಗಣಿಸಲಾಗುತ್ತದೆ. ಪ್ರತಿ ಹುಡುಗಿಯೂ ಅದೃಷ್ಟವಂತರೇ ಆಗಿರ್ತಾರೆ. ಆದರೆ ಜೆ ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು ತುಂಬಾ ಅದೃಷ್ಟವಂತರು. ಅವರು ಗಂಡನ ಜೀವನದಲ್ಲಿ ಎಂದಿಗೂ ಸಂತೋಷವನ್ನು ತುಂಬುತ್ತಾರೆ. ಇದಲ್ಲದೆ ಅವರು ಕುಟುಂಬದ ಹೆಸರನ್ನು ಬೆಳಗಿಸುತ್ತಾರೆ.
ನಿಮಗೂ ನಿಮ್ಮ ಸಂಸ್ಥೆಗೂ ಅದೃಷ್ಟ ತರೋ Alphabets ಇವು..
ವಿಶ್ವಾಸದಲ್ಲಿ (Confidence) ನಂಬರ್ ಒನ್ : ಜೆ ಅಕ್ಷರದ ಹುಡುಗಿಯರು ಸ್ನೇಹಕ್ಕೆ ಮಹತ್ವ ನೀಡುತ್ತಾರೆ. ಅವರು ಮೋಸದಿಂದ ದೂರವಿರುತ್ತಾರೆ. ಅನೇಕ ಸ್ನೇಹಿತರನ್ನು ಹೊಂದಿರುವ ಅವರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ. ಈ ಹುಡುಗಿಯರು ಬೇಗ ಸಂತೋಷಪಡುತ್ತಾರೆ. ಎಲ್ಲ ವಿಷ್ಯದಲ್ಲೂ ಸಂತೋಷ ಕಾಣುವ ಗುಣ ಅವರಲ್ಲಿರುತ್ತದೆ. ಬಬ್ಲಿ ಸ್ವಭಾವ ಹೊಂದಿರುವ ಅವರು ಸುಲಭವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ.
ಈ ಹುಡುಗಿಯರಲ್ಲಿ ಇರುತ್ತೆ ಪ್ರಾಮಾಣಿಕತೆ (Honest) : ಜೆ ಹೆಸರಿನ ಹುಡುಗಿಯರು ಪ್ರಾಮಾಣಿಕತೆಯಲ್ಲೂ ಮುಂದಿರುತ್ತಾರೆ. ಪ್ರೇಮ ವಿವಾಹಕ್ಕೆ ಅವರು ಆದ್ಯತೆ ನೀಡ್ತಾರೆ. ಅರೇಂಜ್ಡ್ ಮ್ಯಾರೇಜ್ ಆದ್ರೂ ತಮ್ಮ ಸಂಬಂಧವನ್ನು ಉತ್ತಮವಾಗಿಡಲು ಸಮರ್ಥರಾಗಿರುತ್ತಾರೆ. ಮದುವೆಯ ನಂತರ ಜೆ ಹೆಸರಿನ ಹುಡುಗಿ ತನ್ನ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಇರುತ್ತಾಳೆ. ಸಂಗಾತಿಯ ದುಃಖದ ಸಮಯದಲ್ಲಿ ಅವರನ್ನು ಕೈ ಬಿಡುವುದಿಲ್ಲ. ಹಾಗೆಯೇ ಸಂತೋಷದ ಸಮಯದಲ್ಲಿ ಅವರ ಜೊತೆ ಇವರೂ ಸಂಭ್ರಮಿಸುತ್ತಾರೆ. ಜೆ ಹೆಸರಿನ ಅಕ್ಷರದ ಹುಡುಗಿಯರು ಸಾಕಷ್ಟು ತಾಳ್ಮೆಯನ್ನು ಹೊಂದಿರುತ್ತಾರೆ. ಇದು ಅವರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ಶ್ರಮ ಜೀವನಕ್ಕೆ ಮಹತ್ವ : ಜೆ ಹೆಸರಿನ ಹುಡುಗಿಯರು ತುಂಬಾ ಶ್ರಮಜೀವಿಗಳು. ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಎಲ್ಲವನ್ನೂ ಸಾಧಿಸುತ್ತಾರೆ.
ಆಲೋಚಿಸಿ ಹೆಜ್ಜೆಯಿಡುವ ಸ್ವಭಾವ : ಜೆ ಅಕ್ಷರದ ಹುಡುಗಿಯರು ದುಡುಕಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಎಲ್ಲ ಸಂದರ್ಭದಲ್ಲಿಯೂ ಅವರು ಶಾಂತವಾಗಿರುತ್ತಾರೆ. ಮನಸ್ಸು ತಿಳಿಯಾದ್ಮೇಲೆ ಆಲೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ವಿದೇಶಕ್ಕೆ ಪ್ರಯಾಣಿಸುವ ಮೊದಲು ಈ ದೇಶಗಳ ಹೆಸರನ್ನು ಸರಿಯಾಗಿ ಹೇಳೋದು ಕಲೀರಿ
ಆಕರ್ಷಕ ನೋಟ (Attractive Look) : ಮನಸ್ಸಿನ ಸೌಂದರ್ಯದ ಜೊತೆಗೆ ಜೆ ಹೆಸರಿನ ಹುಡುಗಿಯರು ನೋಟದಲ್ಲಿಯೂ ತುಂಬಾ ಆಕರ್ಷಕವಾಗಿರುತ್ತಾರೆ. ಇದರಿಂದಾಗಿ ಅವರು ಎಲ್ಲರ ಹೃದಯವನ್ನು ಗೆಲ್ಲುತ್ತಾರೆ.
ಜೀವನವನ್ನು ಆನಂದಿಸುವ ಸ್ವಭಾವ (Enjoy Life) : ಜೆ ಅಕ್ಷರದ ಹೆಸರಿನ ಹುಡುಗಿಯರು ಜೀವನದ ಪ್ರತಿ ಕ್ಷಣವನ್ನು ಆನಂದಿಸಲು ಪ್ರಯತ್ನಿಸುತ್ತಾರೆ.
ಇವರನ್ನು ಕಾಡುತ್ತೆ ಆರೋಗ್ಯ ಸಮಸ್ಯೆ (Health Issue) : ಪ್ರೀತಿಪಾತ್ರರನ್ನು ತುಂಬಾ ಪ್ರೀತಿಸುವ ಜೆ ಅಕ್ಷರದ ಹುಡುಗಿಯರನ್ನು ಕಾಡುವ ಸಮಸ್ಯೆ ಅಂದ್ರೆ ಅನಾರೋಗ್ಯ. ಇವರಲ್ಲಿ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಸದಾ ಇರುತ್ತದೆ.