Saturnಗೆ ಇವು ಮಿತ್ರ ಗ್ರಹಗಳು, ಈ ರಾಶಿಯ ಮೇಲಿರುತ್ತೆ ಶನಿಕೃಪೆ

By Suvarna NewsFirst Published Apr 24, 2022, 11:33 AM IST
Highlights

ಶನಿ ಗ್ರಹ ಎಂದರೆ ಎಲ್ಲರಿಗೂ ಭಯ ಭಕ್ತಿ ಹೆಚ್ಚು. ಶನಿ ಗ್ರಹವು ಎಲ್ಲರಿಗೂ ಶುಭವನ್ನೇ ಉಂಟು ಮಾಡುವುದಿಲ್ಲ. ಶನಿಗ್ರಹದ ಫಲಾಫಲಗಳು ಮಿತ್ರ ಮತ್ತು ಶತ್ರು ಗ್ರಹಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯೋಣ..

ಶನಿ (Saturn) ಗ್ರಹವೆಂದರೆ ಎಲ್ಲರಿಗೂ ವಿಶೇಷ ಶ್ರದ್ಧೆ. ಶನಿ ಗ್ರಹದ ಶಕ್ತಿಯೇ ಅಂಥದ್ದು. ಕರ್ಮಕ್ಕೆ ತಕ್ಕ ಫಲ ನೀಡುವ ಶನಿದೇವರ ನ್ಯಾಯದಿಂದ ನಡೆಯುವ ಅವರಿಗೆ ಮಾತ್ರ ಶುಭ ಫಲ ನೀಡುವವನಾಗಿದ್ದಾನೆ. ಆದರೆ, ಜಾತಕದಲ್ಲಿ (Horoscope) ಶನಿ ಗ್ರಹದ ಸ್ಥಿತಿ ಮತ್ತು ರಾಶಿ (Zodiac sign) ಪರಿವರ್ತನೆ ಹೊಂದಿದ ಶನಿ ಗ್ರಹದ ಶತ್ರು (Enemy) ರಾಶಿಯಾದ  ಕಷ್ಟಗಳು ಉಂಟಾಗುತ್ತವೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ನವಗ್ರಹಗಳ ಪಾತ್ರ ಮಹತ್ವದ್ದು. ಜಾತಕದಲ್ಲಿ ಯಾವ ಗ್ರಹ ಯಾವ ಮನೆಯಲ್ಲಿದೆ ಎಂಬುದರ ಆಧಾರದ ಮೇಲೆಯೇ ವ್ಯಕ್ತಿಯ ಇಡೀ ಭವಿಷ್ಯವನ್ನೇ ಹೇಳಬಹುದಾಗಿದೆ. ಗ್ರಹಗಳು ಯಾವ ಮನೆಯಲ್ಲಿದೆ ಎಂಬುದರ ಆಧಾರದ ಮೇಲೆ ಶುಭ ಅಶುಭ ಫಲಗಳು ನಿರ್ಧರಿತವಾಗಿರುತ್ತವೆ. ಗ್ರಹಗಳಲ್ಲಿಯೂ ಮಿತ್ರ (Friend ) ಗ್ರಹ ಮತ್ತು  ಶತ್ರು ಗ್ರಹ ಎಂಬುದಿದೆ. ಹಾಗಾಗಿ ಎಲ್ಲ ಗ್ರಹಗಳು ಜಾತಕದ ಯಾವ ಸ್ಥಾನದಲ್ಲಿದೆ ಎಂಬುದು ಮುಖ್ಯವಾಗುತ್ತದೆ. ಹಾಗಾದರೆ ಶನಿ ಗ್ರಹದ ಮಿತ್ರ ಮತ್ತು ಶತ್ರು ಗ್ರಹ ರಾಶಿಗಳ ಬಗ್ಗೆ ತಿಳಿಯೋಣ ...

ಶನಿ ಗ್ರಹದ ದೃಷ್ಟಿ ಬಿತ್ತೆಂದರೆ ಎಲ್ಲವೂ ಕಷ್ಟಮಯ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಶನಿಗ್ರಹದ ಪ್ರಭಾವದ ಬಗ್ಗೆ ಭಯವೇ ಹೆಚ್ಚಾಗಿರುತ್ತದೆ. ಹಾಗಾಗಿ ಶನಿ ಗ್ರಹವು ಎಲ್ಲರಿಗೂ ಅಶುಭವನ್ನೇ ಮಾಡುವುದಿಲ್ಲ. ಶನಿ ಗ್ರಹಕ್ಕೆ ಮಿತ್ರರಾಗಿದ್ದ ವರೆಗೆ ಶುಭ ಫಲಗಳು ಸಿಗುತ್ತವೆ. ಶನಿ ಗ್ರಹಕ್ಕೆ ಬುಧ (Mercury) ಮತ್ತು ಶುಕ್ರ (Venus) ಗ್ರಹಗಳು ಮಿತ್ರ ಗ್ರಹಗಳಾಗಿವೆ. ಒಂದೊಮ್ಮೆ ಈ ಮೂರೂ ಗ್ರಹಗಳು ಜಾತಕದ ಒಂದೇ ಮನೆಯಲ್ಲಿದ್ದರೆ ಶುಭ ಫಲವನ್ನೇ ನೀಡುತ್ತವೆ. 

ಗುರು (Jupiter) ಗ್ರಹ ಮತ್ತು  ಶನಿ ಗ್ರಹ ಸಮಾನವೆಂದು ಹೇಳಲಾಗುತ್ತದೆ. ಅಂದರೆ ಗುರು ಮತ್ತು ಶನಿ ಗ್ರಹದ ನಡುವೆ ಮಿತೃತ್ವವು ಇಲ್ಲ ಶತ್ರುತ್ವವೂ ಇಲ್ಲ ಎಂಬುದಾಗಿದೆ. 

ಶನಿಗ್ರಹದ ಶತ್ರು ಗ್ರಹಗಳ ಬಗ್ಗೆ ಹೇಳುವುದಾದರೆ ಸೂರ್ಯ (Sun), ಚಂದ್ರ (Moon) ಮತ್ತು ಮಂಗಳ (Mars) ಗ್ರಹಗಳು ಶತ್ರು ಗ್ರಹಗಳಾಗಿವೆ. ಹಾಗಾಗಿ ಜಾತಕದಲ್ಲಿ ಈ ಮೂರು ಗ್ರಹಗಳಲ್ಲಿ ಯಾವುದಾದರೂ ಗ್ರಹದ ಜತೆ ಶನಿ ಗ್ರಹವಿದ್ದಾಗ ಕ್ರೂರ ಪರಿಣಾಮವನ್ನೇ ನೀಡುತ್ತದೆ. 

ಶನಿಗ್ರಹದ ಕಾರಕ ವಸ್ತುಗಳ ಬಗ್ಗೆ ಹೇಳುವುದಾದರೆ, ಶನಿ ಗ್ರಹದ ಶತ್ರು  ಶನಿ ಗ್ರಹದ ಕಾರಕ ವಸ್ತುಗಳ ಜತೆ ಇಡಬಹುದಾಗಿದೆ. ಗುರು (Jupiter) ಗ್ರಹದ ಬಗ್ಗೆ ಹೇಳುವುದಾದರೆ ಗುರುಗ್ರಹದ ಕಾರಕ ವಸ್ತುಗಳನ್ನು ಶನಿಗ್ರಹದ ಕಾರಕ ವಸ್ತುಗಳನ್ನು ಒಂದು ನಿಶ್ಚಿತ ಅಂತರದ ದೂರದಲ್ಲಿ ಜತೆಗೇ ಇಡಬಹುದಾಗಿದೆ. 

ಇದನ್ನು ಓದಿ: Solar Eclipse 2022: ಸೂರ್ಯಗ್ರಹಣದಂದು ಮಾಡಬೇಕಾದ್ದು, ಮಾಡಬಾರದ್ದು ಏನು?

ಶನಿ ಗ್ರಹದ ಬಗ್ಗೆ ಹೇಳುವುದಾದರೆ ಮಕರ (Capricorn) ಮತ್ತು ಕುಂಭ (Aquarius) ರಾಶಿಗಳ ಅಧಿಪತಿ ದೇವರು ಶನಿಗ್ರಹ ವಾಗಿದೆ. ಶನಿ ಗ್ರಹವು ತನ್ನ ಶತ್ರು ಗ್ರಹದ ರಾಶಿಗಳ ಮೇಲೆ ಕೆಟ್ಟ ಪರಿಣಾಮವನ್ನೇ ಉಂಟುಮಾಡುತ್ತದೆ. 

ಮೇಷ (Aries) ಮತ್ತು ವೃಶ್ಚಿಕ (Scorpio) ರಾಶಿಗೆ ಅಧಿಪತಿ ಗ್ರಹ  ಮಂಗಳ ಗ್ರಹವಾಗಿದೆ. ಹಾಗಾಗಿ ಈ ರಾಶಿಯ ವ್ಯಕ್ತಿಗಳು ಶನಿಗ್ರಹದ ಅಶುಭ ಪ್ರಭಾವಗಳನ್ನು ಎದುರಿಸಬೇಕಾಗುತ್ತದೆ. 

ವೃಷಭ (Taurus) ರಾಶಿಯ ಅಧಿಪತಿ ಗ್ರಹ ಶುಕ್ರ ಗ್ರಹವಾಗಿದೆ. ಹಾಗಾಗಿ ಈ ರಾಶಿಯವರಿಗೆ ಶನಿ ಗ್ರಹದ ಶುಭ ಫಲ ಪ್ರಾಪ್ತವಾಗುತ್ತದೆ.

ಕರ್ಕಾಟಕ (Cancer) ರಾಶಿಯ ಅಧಿಪತಿ ಗ್ರಹ ಚಂದ್ರ (Moon) ಗ್ರಹವಾದರೆ ಸಿಂಹ (Leo) ರಾಶಿಗೆ ಅಧಿಪತಿ ದೇವರು ಸೂರ್ಯ (Sun) ಗ್ರಹವಾಗಿದೆ. ಹಾಗಾಗಿ ಕರ್ಕಾಟಕ ಮತ್ತು ಸಿಂಹ ರಾಶಿಯವರು ಶನಿ ಗ್ರಹದ ನಕಾರಾತ್ಮಕ ಪ್ರಭಾವ ಎದುರಿಸಬೇಕಾಗುತ್ತದೆ.

ಕನ್ಯಾ ಮತ್ತು ಮಿಥುನ (Gemini) ರಾಶಿಯ ಅಧಿಪತಿ ಶನಿ ಗ್ರಹ ಬುಧ ಗ್ರಹವಾಗಿದೆ. ಆದರೆ ಬುಧಗ್ರಹವು ಸೂರ್ಯ ಗ್ರಹಕ್ಕೆ ಸಮ ಗ್ರಹವಾಗಿದೆ. ಹಾಗಾಗಿ ಈ ರಾಶಿಗೆ ಶನಿಗ್ರಹವು ಹೆಚ್ಚು ಕೃಪೆಯನ್ನೇನೂ ತೋರುವುದಿಲ್ಲ. 

ಧನು ಮತ್ತು ಮೀನ (Pisces) ರಾಶಿಯ ಅಧಿಪತಿ ಗ್ರಹ ಗುರು ಗ್ರಹವಾಗಿದೆ. ಹಾಗಾಗಿ ಈ ರಾಶಿಯವರಿಗೆ ಶನಿ ಗ್ರಹದಿಂದ ಸಮಭಾವದ ಫಲ ದೊರಕುತ್ತದೆ. 

ಇದನ್ನು ಓದಿ: Solar Eclipse 2022 ಪ್ರಭಾವ ಯಾವ ರಾಶಿಗೆ ಏನು?

ಮಕರ ಮತ್ತು ಕುಂಭ ರಾಶಿಯ ಅಧಿಪತಿ ದೇವರು ಶನಿಗ್ರಹವಾಗಿರುವ ಕಾರಣ,  ಈ ರಾಶಿಗಳಿಗೆ ಶುಭ ಫಲವೇ ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತದೆ. 

click me!