ಸಂಗಾತಿ ಬಿಟ್ಟು ಮತ್ಯಾರ ಬಳಿಯೂ ಈ ವಿಚಾರ ಹಂಚಿಕೊಳ್ಳದಿರಿ ಅಂತಾನೆ ಚಾಣಾಕ್ಯ!

By Suvarna News  |  First Published Oct 9, 2023, 12:45 PM IST

ಚಾಣಾಕ್ಯ ಆಡೋ ಒಂದೊಂದು ಮಾತೂ ಎಲ್ಲಾ ಕಾಲಕ್ಕೂ ಹೊಂದುವಂಥಾದ್ದು. ಇಂಥಾ ಕೌಟಿಲ್ಯ ಕೆಲವೊಂದು ಸಂಗತಿಯನ್ನ ನಂಬಿಕೆ ಇರುವ ಹೆಂಡತಿ ಹತ್ರ ಬಿಟ್ಟು ಮತ್ಯಾರ ಬಳಿಯೂ ಹಂಚಿಕೊಳ್ಳಬೇಡಿ ಅಂದಿದ್ದಾರೆ.


ಗಂಡ ಹೆಂಡತಿಯ ಸಂಸಾರ ಸುಖವಾಗಿರಬೇಕಾದರೆ ಪರಸ್ಪರ ಕೆಲವೊಂದು ವಿಷ್ಯಗಳನ್ನು ಮುಚ್ಚಿಡಬೇಕು, ಅದರಲ್ಲೂ ಪುರುಷರು ಈ ಕೆಲವೊಂದು ವಿಷ್ಯಗಳನ್ನು ಪತ್ನಿಯಲ್ಲಿ ಹೇಳಬಾರದು ಎಂದು ಚಾಣಕ್ಯ ನೀತಿಯಲ್ಲಿ ಚಾಣಕ್ಯ ತಿಳಿಸಿದ್ದಾರೆ. ಆದರೆ ಪತ್ನಿ ನಿಜಕ್ಕೂ ನಂಬಿಕೆಗೆ ಅರ್ಹಳಾಗಿದ್ದರೆ ಅವಳ ಬಳಿ ಮಾತ್ರ ಹೇಳಬಹುದಾದ ಕೆಲವೊಂದು ಸಂಗತಿಗಳನ್ನೂ ಹೇಳಿದ್ದಾರೆ.

ಹಣದ ಸಮಸ್ಯೆ
ಜಾಸ್ತಿ ದುಡ್ಡಿರೋದನ್ನು ಹೇಳಿದರೂ ಕಷ್ಟ. ಹಣದ ಕೊರತೆ ಬಗ್ಗೆ ಹೇಳಿದರೂ ಕಷ್ಟ. ಹೀಗಾಗಿ ಹಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಚಾಣಕ್ಯ ತನ್ನ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಶ್ರೀಮಂತರನ್ನು ಸಮಾಜದಲ್ಲಿ ಪ್ರಭಾವಿ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಜನರು ಹಣದ ಕೊರತೆಯಿಂದಾಗಿ ವ್ಯಕ್ತಿಯನ್ನು ಅಗೌರವಿಸುತ್ತಾರೆ. ಅಂತಹ ವ್ಯಕ್ತಿಗೆ ಯಾರೂ ಸಹಾಯ ಮಾಡುವುದಿಲ್ಲ. ಜೀವನದಲ್ಲಿ ಅನೇಕ ಬಾರಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಬಹುದು. ಸಾಲ ತೆಗೆದುಕೊಳ್ಳಬೇಕಾಗಿ ಬರಬಹುದು. ಇಂತಹ ಸಮಸ್ಯೆ ಎದುರಾದರೆ ಯಾರಿಗೂ ಹೇಳಬೇಡಿ. ನಿಮ್ಮಲ್ಲಿ ಹಣದ ಕೊರತೆ ಇದೆ ಎಂದಾದರೆ ಜನ ನಿಮ್ಮಿಂದ ದೂರವಾಗುತ್ತಾರೆ. ಆದರೆ ಹೆಂಡತಿಯ ಬಳಿ ಇಂಥಾ ವಿಚಾರಗಳನ್ನು ಚರ್ಚಿಸಬಹುದಂತೆ.

Tap to resize

Latest Videos

ನೋವು ಹಂಚಿಕೊಳ್ಳೋದು ಹೆಂಡ್ತಿ ಜೊತೆ ಮಾತ್ರ
ಜೀವನ ಸಂಗಾತಿ ಬಿಟ್ಟರೆ ಬೇರೆ ಯಾರ ಬಳಿಯೂ ನೋವನ್ನು ಹಂಚಿಕೊಳ್ಳೋದು ಒಳ್ಳೆಯದಲ್ಲ. ಚಾಣಕ್ಯರ ಪ್ರಕಾರ, ನಿಮಗೆ ಏನಾದರೂ ಕೆಟ್ಟದಾದರೆ, ಅದನ್ನು ನಿಮ್ಮ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಮ್ಮ ನೋವಿನ ಗುಟ್ಟನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ಅಪಹಾಸ್ಯಕ್ಕೆ ಒಳಗಾಗುತ್ತೇವೆ. ನಮ್ಮ ನೋವುಗಳನ್ನು ಯಾರೊಂದಿಗಾದರೂ ಹಂಚಿಕೊಂಡರೆ ಮುಂದೆ ಅವರೊಡನೆ ಘರ್ಷಣೆಯಾದರೆ ಅವರು ನಮ್ಮ ನೋವು, ಗುಟ್ಟುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಅವಕಾಶವಿರುತ್ತದೆ.

ನವೆಂಬರ್‌ನಲ್ಲಿ ಈ ರಾಶಿಗೆ ಲಾಟರಿ,ಶನಿ ನೀಡಲಿದ್ದಾನೆ ಸಕಲ ಸಂಪತ್ತು

ಗಂಡ ಹೆಂಡತಿ ಜಗಳ ಮೂರನೆಯವರಿಗೆ ಬೇಡ
ಹೆಂಡತಿ ಜೊತೆಗೆ ಜಗಳವಾಡಿದ್ದು, ಸರಸವಾಡಿದ್ದು, ಕೆಲವೊಂದು ವ್ಯವಹಾರಗಳು .. ಈ ಬಗ್ಗೆ ಯಾರಿಗೂ ಹೇಳಬೇಡಿ. ನಿಮ್ಮ ಹತ್ತಿರದ ಸ್ನೇಹಿತರಿಗೂ ಈ ವಿಷಯಗಳನ್ನು ಹೇಳಬೇಡಿ. ಇದು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಜೊತೆಗೆ ನಿಮಗೆ ಮುಜುಗರ ಉಂಟು ಮಾಡಬಹುದು. ಇದು ನಿಮ್ಮ ವೈವಾಹಿಕ ಜೀವನದಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಯಾವುದೇ ವ್ಯಕ್ತಿ ತನ್ನ ಸಂಗಾತಿಯ ಸ್ವಭಾವದ ಬಗ್ಗೆ ಇತರರಿಗೆ ಹೇಳಬಾರದು. ಸಂಗಾತಿಯನ್ನು ಗೌರವಿಸದ ವ್ಯಕ್ತಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಅವರ ದಾಂಪತ್ಯ ಜೀವನ ಸುಖಮಯವಾಗಿಲ್ಲ ಅಂದರೆ ಎಲ್ಲರೂ ಅವಮಾನಿಸುತ್ತಾರೆ.

ಸ್ವಾಭಿಮಾನಿಗಳಾಗಿ..
ಗೌರವಿಸಿದಾಗ ಹೆಮ್ಮೆ ಪಡಬಾರದು ಎಂದು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಇತರರ ಮುಂದೆ ತನಗಾದ ಅವಮಾನದ ಬಗ್ಗೆ ಮಾತನಾಡಬಾರದು ಎಂದು ಅವರು ಹೇಳುತ್ತಾರೆ. ಈ ಕಾರಣದಿಂದಾಗಿ ನೀವು ನಿಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳುತ್ತೀರಿ. ಇತರರು ನಿಮ್ಮನ್ನು ಗೌರವಿಸುವುದನ್ನು ನಿಲ್ಲಿಸುತ್ತಾರೆ.

ಮೋಸದ ಬಗ್ಗೆ ಹೇಳಿದರೆ ಮತ್ತೆ ಮೋಸ ಹೋಗುವಿರಿ
ಚಾಣಕ್ಯನ ಪ್ರಕಾರ, ಯಾರಾದರೂ ನಿಮಗೆ ಮೋಸ ಮಾಡಿದರೆ, ತಪ್ಪಾಗಿಯೂ ಇತರರಿಗೆ ಹೇಳಬೇಡಿ. ಹೀಗೆ ಮಾಡುವುದರಿಂದ ಇತರರು ನಿಮ್ಮನ್ನು ಮೂರ್ಖರೆಂದು (Foolish) ಭಾವಿಸುತ್ತಾರೆ ಮತ್ತು ನಿಮ್ಮನ್ನು ಗೇಲಿ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಯಾರಾದರೂ ನಿಮ್ಮನ್ನು ಮತ್ತೆ ಮೋಸಗೊಳಿಸಲು ಪ್ರಯತ್ನಿಸಬಹುದು.

ಕನಸು ನನಸಾಗಲು ಸಾಧ್ಯವೇ..? ಯಾವ ಸಮಯದಲ್ಲಿ ಬಿದ್ದರೆ ಸೂಪರ್ ಲಕ್, ಧನಲಾಭ ಗೊತ್ತಾ..!

ಆಲೋಚನೆಗಳನ್ನ ಮನಸ್ಸಿನಲ್ಲೇ ಇರಿಸಿಕೊಳ್ಳಿ
ಒಬ್ಬ ವ್ಯಕ್ತಿಯು ತನ್ನ ಆಲೋಚನೆಗಳು (thought)  ಮತ್ತು ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಚಾಣಕ್ಯ ನೀತಿ ಹೇಳುತ್ತದೆ. ಚಾಣಕ್ಯ ತನ್ನ ಯೋಜನೆಗಳನ್ನು ಯಾವಾಗಲೂ ರಹಸ್ಯವಾಗಿಡಬೇಕು (secret)  ಎಂದು ವಿವರಿಸಿದರು. ಏಕೆಂದರೆ ಇತರರು ನಿಮ್ಮ ಯೋಜನೆಗಳನ್ನು (plan) ತಿಳಿದುಕೊಂಡು ಅವುಗಳನ್ನು ನಿಮ್ಮ ವಿರುದ್ಧ ಬಳಸಲು ಪ್ರಯತ್ನಿಸಬಹುದು, ಹಾಗಾಗಿ ಈ ವಿಚಾರದಲ್ಲಿ ಎಚ್ಚರವಾಗಿರಬೇಕು ಎಂದು ಚಾಣಕ್ಯ ಹೇಳುತ್ತಾರೆ.

click me!