ಎಲ್ಲಿಗೇ ಹೋಗಲಿ ಈ ರಾಶಿಯವರಿಗೆ ಸಿಗಬೇಕಾದ ಗೌರವ ಸಿಕ್ಕೇ ಸಿಗುತ್ತೆ!

By Suvarna NewsFirst Published Oct 2, 2023, 4:49 PM IST
Highlights

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳ ಜನ ತಮ್ಮ ವಲಯದಲ್ಲಿ ಜನಮನ್ನಣೆ ಗಳಿಸುತ್ತಾರೆ. ತಮ್ಮಲ್ಲಿರುವ ಉತ್ತಮ ಗುಣ ಹಾಗೂ ಸಾಮರ್ಥ್ಯದಿಂದಾಗಿ ಇತರರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. 
 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಗಳಿಗೂ ಅದರದ್ದೇ ಆದ ಸಾಮರ್ಥ್ಯ, ದೌರ್ಬಲ್ಯಗಳಿವೆ. ಪ್ರತಿಯೊಬ್ಬರೂ ವಿಶಿಷ್ಟ ಗುಣ, ವ್ಯಕ್ತಿತ್ವ ಹೊಂದಿರುವುದು ಇದೇ ಕಾರಣಕ್ಕೆ. ರಾಶಿಚಕ್ರಗಳು ನಮ್ಮ ವರ್ತನೆ ಹಾಗೂ ಸಾಮರ್ಥ್ಯದ ಮೇಲೆ ಗಾಢ ಪ್ರಭಾವ ಬೀರುತ್ತವೆ. ಆದರೆ, ಎಷ್ಟೇ ಸಾಮರ್ಥ್ಯವಿದ್ದರೂ ಕೆಲವು ರಾಶಿಗಳ ಜನರಿಗೆ ಹೆಚ್ಚಿನ ಮನ್ನಣೆ ಸಿಗುವುದಿಲ್ಲ. ಅವರಲ್ಲಿ ಎಂಥದ್ದೇ ಜ್ಞಾನವಿದ್ದರೂ ಗುರುತಿಸಿಕೊಳ್ಳುವುದಿಲ್ಲ. ಆದರೆ, ಕೆಲವರು ಹಾಗಲ್ಲ, ಅವರು ಬಹುಬೇಗ ಎಲ್ಲರ ಮನ್ನಣೆ ಗಳಿಸಿಕೊಳ್ಳುತ್ತಾರೆ. ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳಿಗೆ ಈ ಆಕರ್ಷಣೆ ಹೆಚ್ಚಿರುತ್ತದೆ. ಇವರು ತಮ್ಮ ಸುತ್ತಲಿನವರಿಂದ ಹೆಚ್ಚು ಮನ್ನಣೆ ಗಳಿಸುತ್ತಾರೆ. ಇನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರಂತೂ ಅಪಾರ ಕೀರ್ತಿ ಗಳಿಸಬಲ್ಲರು. ಇಂಥವರು ಮುಖ್ಯವಾಗಿ 5 ರಾಶಿಗಳಲ್ಲಿ ಕಂಡುಬರುತ್ತಾರೆ.

•    ಮಕರ (Capricorn)
ಮಕರ ರಾಶಿಯ ಜನ ಅತ್ಯಂತ ಸ್ಪಷ್ಟವಾದ ನಿರ್ಧಾರ (Decision) ಮತ್ತು ದೃಢವಾದ ವೃತ್ತಿ ಮೌಲ್ಯಗಳಿಗೆ (Value) ಹೆಸರಾಗಿದ್ದಾರೆ. ಗುರಿಯತ್ತ ಅವರ ಬದ್ಧತೆ ಅಚಲವಾದದ್ದು. ಅಡೆತಡೆಗಳನ್ನು (Obstacle) ನಿವಾರಿಸಿಕೊಂಡು ಮುನ್ನುಗ್ಗುವ ಇವರ ಛಾತಿ ಇವರಲ್ಲಿ ಗಾಢವಾಗಿರುತ್ತದೆ. ಈ ಗುಣವೇ ಇವರ ಸಹೋದ್ಯೋಗಿಗಳು ಮತ್ತು ಸುತ್ತಮುತ್ತವರಿಂದ ಅಪಾರ ಶ್ಲಾಘನೆಗೆ (Admire) ಕಾರಣವಾಗುತ್ತದೆ. ಯಾವುದೇ ಸನ್ನಿವೇಶದಲ್ಲಾದರೂ ಜವಾಬ್ದಾರಿಯಿಂದ ವರ್ತಿಸುತ್ತಾರೆ. ನಂಬಿಕಸ್ಥರಾಗಿರುತ್ತಾರೆ. ಪ್ರಾಯೋಗಿಕ (Practical) ಹಾಗೂ ಶಿಸ್ತುಬದ್ಧ ಗುಣದಿಂದಾಗಿ ಇವರ ಕುರಿತ ಗೌರವ ಸಮಾಜದಲ್ಲಿ ಹೆಚ್ಚುತ್ತದೆ. ಸಂಗೀತಗಾರ ಎ.ಆರ್.‌ ರೆಹಮಾನ್‌, ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಬಾಲಿವುಡ್‌ ನಲ್ಲಿ ಮಕರ ರಾಶಿಯ ಹಲವು ಜನ ತಮ್ಮದೇ ವರ್ಚಸ್ಸು (Charm) ಹೊಂದಿರುವುದಕ್ಕೆ ಇದು ಸಾಕ್ಷಿ.

Latest Videos

ಪ್ರೀತಿಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿರುವವರು ಈ ರಾಶಿಯವರು..!

•    ಕನ್ಯಾ (Virgo)
ಕನ್ಯಾ ರಾಶಿಯ ಜನ ಹೃದಯದಲ್ಲಿ ಪರಿಪೂರ್ಣತೆ (Perfectionist) ಬಯಸುವವರು. ವಿಸ್ತಾರವಾದ ಮಾಹಿತಿಯ ಕಡೆಗೆ ಇವರ ಆಸಕ್ತಿ ಅಪೂರ್ವ. ವೃತ್ತಿ ಜೀವನದಲ್ಲಿ ಈ ಗುಣದಿಂದ ಇವರು ಸಾಕಷ್ಟು ಮೆಚ್ಚುಗೆ, ಮನ್ನಣೆ (Respect) ಪಡೆಯುತ್ತಾರೆ. ಮೌಲ್ಯಯುತ ಸ್ಥಳಗಳಲ್ಲಿ ಇವರು ಗೌರವ ಗಳಿಸುತ್ತಾರೆ. ಅತ್ಯಂತ ದೃಢವಾದ ಕರ್ತವ್ಯಪರತೆ ಹೊಂದಿದ್ದು, ಇತರರಿಗೆ ಸಹಾಯ ಮಾಡುವ ಗುಣವೂ ಇವರಿಗೆ ಹೆಚ್ಚಿನ ಮೆರುಗು ನೀಡುತ್ತದೆ. ಕನ್ಯಾ ರಾಶಿಯ ಪ್ರಭಾವಿ ವ್ಯಕ್ತಿಗಳಿಗೆ ಸಾಕ್ಷಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಇದ್ದಾರೆ. 

•    ವೃಷಭ (Taurus)
ಬದ್ಧತೆ (Commitment) ಮತ್ತು ದೃಢತೆಗೆ ಹೆಸರುವಾಸಿ ವೃಷಭದ ಜನ. ಗುರಿಯಡೆಗೆ ಅಚಲವಾದ ಆದ್ಯತೆ ಹೊಂದಿರುತ್ತಾರೆ. ಪ್ರಾಯೋಗಿಕವಾಗಿರುತ್ತಾರೆ ಜತೆಗೆ, ವಿನಯ ಗುಣ (Down to Earth) ಇವರಲ್ಲಿರುತ್ತದೆ. ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಈ ಗುಣದಿಂದ ವಿಮುಖರಾಗುವುದಿಲ್ಲ. ಇದರಿಂದಾಗಿ ಎಲ್ಲರ ಮನ್ನಣೆ ಗಳಿಸುತ್ತಾರೆ. ವೃತ್ತಿ ಮತ್ತು ಖಾಸಗಿ (Personal) ಜೀವನದಲ್ಲಿ ಇವರ ಬದ್ಧತೆಯೇ ಪ್ರಮುಖ ಗುಣವಾಗಿ ಗುರುತಿಸಿಕೊಳ್ಳುತ್ತಾರೆ. ಎಂಥದ್ದೇ ಸನ್ನಿವೇಶದಲ್ಲಿ ಶಾಂತ (Calm) ಗುಣ ತೋರುವುದರಿಂದ ಮೆಚ್ಚುಗೆ ಪಡೆಯುವುದರಲ್ಲಿ ಹಿಂದೆ ಬೀಳುವುದಿಲ್ಲ. ಸಚಿನ್‌ ತೆಂಡೂಲ್ಕರ್‌, ಮಾಧುರಿ ದೀಕ್ಷಿತ್‌ ಮುಂತಾದ ಖ್ಯಾತನಾಮರು ವೃಷಭ ರಾಶಿಯವರು.

2024ರ ತನಕ ಈ ರಾಶಿಯವರ ಮೇಲೆ ಗುರು ಕೃಪೆ,ಹಣದ ಮಳೆ

•    ಸಿಂಹ (Leo)
ಸಿಂಹ ರಾಶಿಯ ಜನರಿಗೆ ಎಲ್ಲರ ಕೇಂದ್ರಬಿಂದುವಾಗುವುದೆಂದರೆ ಭಾರೀ ಇಷ್ಟ. ನೈಸರ್ಗಿಕವಾದ ವರ್ಚಸ್ಸು ಹೊಂದಿದ್ದು, ಎಲ್ಲರ ಮನ್ನಣೆಗೆ ಪಾತ್ರರಾಗುತ್ತಾರೆ. ಇವರಲ್ಲಿ ನಾಯಕತ್ವದ (Leadership) ಗುಣ ಧಾರಾಳವಾಗಿರುತ್ತದೆ. ಸೌಹಾದರ್ತೆಯಿಂದ ವರ್ತಿಸುತ್ತಾರೆ. ಧೈರ್ಯ (Bold) ಇವರಲ್ಲಿ ತುಂಬಿರುತ್ತದೆ.

•    ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನ ಆಳ ಹಾಗೂ ತೀವ್ರತೆಯುಳ್ಳ ಜನ. ಅಚಲ ಬದ್ಧತೆ (Strong COmmitment) ಮತ್ತು ಆಳವಾದ (Intense) ವ್ಯಕ್ತಿತ್ವದಿಂದಾಗಿ (Personality) ಗುರುತಿಸಿಕೊಳ್ಳುತ್ತಾರೆ. ಗುಟ್ಟುಗಳನ್ನು ಕಾಪಾಡಿಕೊಳ್ಳುತ್ತಾರೆ. ಸವಾಲುಗಳನ್ನು ಎದುರಿಸುವಲ್ಲಿ ಇವರು ತೋರುವ ಗುಣ ಇವರನ್ನು ಸಮರ್ಥರನ್ನಾಗಿಸುತ್ತದೆ. ಆಕರ್ಷಕ ವ್ಯಕ್ತಿತ್ವ ಮತ್ತು ಭಾವನಾತ್ಮಕ ಸಂಪರ್ಕದಿಂದಾಗಿ (Emotional Contact) ತಮ್ಮ ವಲಯದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗುತ್ತಾರೆ. 
 

click me!