ಕೆಲವರು ನಿದ್ರೆ ಬಿಟ್ಟು ಓದುತ್ತಾರೆ, ಬರೆಯುತ್ತಾರೆ, ಕೆಲಸ ಮಾಡುತ್ತಾರೆ. ಮತ್ತೆ ಕೆಲವರಿಗೆ ಅವೆಲ್ಲಕ್ಕಿಂತಲೂ ನಿದ್ರೆಯೇ ಮುಖ್ಯ. ಹಣ, ಹವ್ಯಾಸ, ಪ್ರೀತಿ, ನಿದ್ರೆ ಎಂದು ಆಯ್ಕೆ ಕೊಟ್ಟರೆ ನಿದ್ರೆಯನ್ನೇ ಮೊದಲು ಆರಿಸುವವರು ಅವರು. ಇಂಥವರು ಈ 5 ರಾಶಿಗೆ ಸೇರಿರುತ್ತಾರೆ.
ನಮ್ಮ ದೈನಂದಿನ ಕಾರ್ಯ ನಿರ್ವಹಣೆ ಮತ್ತು ವಿವೇಕಕ್ಕೆ ನಿದ್ರೆ(Sleep) ಬಹಳ ಮುಖ್ಯ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ 7-8 ಗಂಟೆಗಳ ನಿದ್ರೆ ಅವಶ್ಯಕ. ಆದರೆ, ಕೆಲವರು ಮಾತ್ರ ಎಂಟಲ್ಲ, 10-15 ಗಂಟೆ ಬೇಕಾದರೂ ನಿದ್ರಿಸಬಲ್ಲರು. ನಿದ್ರೆಗೆ ಸಮಯ ಸಿಕ್ಕಿತೆಂದರೆ ಅದಕ್ಕಿಂತ ಸುಖ ಇಲ್ಲ ಎಂದವರು ತಿಳಿಯುತ್ತಾರೆ. ಕುಂಭಕರ್ಣನ ವಂಶಸ್ಥರು ಇವರು. ಒಂದು ವೇಳೆ ಇಡೀ ದಿನ ಮಲಗದಿದ್ದರೂ ಮಧ್ಯೆ ಮಧ್ಯೆ ನ್ಯಾಪ್ ತೆಗೆದುಕೊಳ್ಳಲು ಇಷ್ಟ ಪಡುತ್ತಾರೆ. ವಿಶ್ರಾಂತಿ ಚೆನ್ನಾಗಾದರೆ ಸಾಕಷ್ಟು ಕೆಲಸ ಮಾಡಬಹುದೆನ್ನುವುದು ಇವರ ತಿಳಿವಳಿಕೆ. ಇಂಥವರು ಈ 5 ರಾಶಿಗಳಿಗೆ ಸೇರಿರುತ್ತಾರೆ.
ಮೇಷ ರಾಶಿ(Aries)
ಈ ರಾಶಿಚಕ್ರದ ಬಹಳ ವಿಶೇಷವಾಗಿರುತ್ತಾರೆ. ಅದೇ ಸಮಯದಲ್ಲಿ ಅವರು ಹಗಲಿಡೀ ನಿದ್ರಿಸಲು ಇಷ್ಟಪಡುತ್ತಾರೆ. ಒಂದು ವೇಳೆ ರಾತ್ರಿ ನಿದ್ರೆಗೆಡಬೇಕಾಗಿ ಬಂದರೆ, ತಾವು ಆ ನಿದ್ದೆಯನ್ನು ಹಗಲಿನಲ್ಲಿ ಕಾಂಪೆನ್ಸೇಟ್ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಏನೇ ಪ್ರವಾಸ ಯೋಜಿಸಿದರೂ, ಅದರಲ್ಲಿ ನಿದ್ರೆಯ ಸಮಯ ಹಾಳು ಮಾಡಿಕೊಳ್ಳದೆ ಯೋಜನೆ ರೂಪಿಸುತ್ತಾರೆ. ತಾವೇ ಡ್ರೈವಿಂಗ್ ಮಾಡುವುದಾದರೆ ಸಮಯ ಸಿಕ್ಕಲೆಲ್ಲ ಸಣ್ಣದಾಗಿ ನಿದ್ರೆ ತೆಗೆಯುತ್ತಾರೆ. ಕೆಲಸ ಮಾಡುವಾಗಲೂ ಶಕ್ತಿ ಮೀರಿ ಪೂರ್ಣ ಪ್ರಮಾಣದಲ್ಲಿ ಮಾಡುತ್ತಾರೆ. ನಂತರ ದೇಹಕ್ಕೆ ಅಷ್ಟೇ ವಿಶ್ರಾಂತಿ ಒದಗಿಸಲು ಬಯಸುತ್ತಾರೆ. ನಿದ್ರೆಯನ್ನು ತ್ಯಾಗ ಮಾಡದ ಸ್ವಭಾವ ಇವರದು.
ವೃಷಭ ರಾಶಿ(Taurus)
ಅವರು ಕೆಲಸ ಮಾಡಲು ಇಷ್ಟಪಡುತ್ತಾರೆ. ಆದರೆ, ಅದರ ನಂತರ ಅವರು ಉತ್ತಮವೆಂದು ಭಾವಿಸುವ ಮುಂದಿನ ಚಟುವಟಿಕೆಯಿದ್ದರೆ ಅದು ನಿದ್ರಿಸುವುದು! ಅವರು ಕೆಲವೊಮ್ಮೆ ತಮ್ಮ ವಾರವನ್ನು ಕೆಲಸದ ದಿನಗಳು ಮತ್ತು ನಿದ್ರೆಯ ದಿನಗಳಾಗಿ ವರ್ಗೀಕರಿಸುತ್ತಾರೆ. ಇದು ಅವರಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ನಿದ್ರೆಯ ನಂತರ ಅವರು ಚೈತನ್ಯವನ್ನು ಅನುಭವಿಸುತ್ತಾರೆ. ಎಲ್ಲಿ ಬೇಕಾದರೂ ನಿದ್ರಿಸುವ ಸಾಮರ್ಥ್ಯ ಇವರದು. ವೀಕೆಂಡ್‌ಗಳಲ್ಲಿ ಹೊರಗೆ ಸುತ್ತಾಡುವುದಕ್ಕಿಂತಾ ಸುಮ್ಮನೆ ನಿದ್ರಿಸುತ್ತಾ ಕಳೆಯುವುದು ಇವರಿಗಿಷ್ಟ.
ಕರ್ಕಾಟಕ ರಾಶಿ(Cancer)
ಕರ್ಕಾಟಕ ರಾಶಿಯವರು ಬಹಳಷ್ಟು ಯೋಚಿಸುತ್ತಾರೆ ಮತ್ತು ಹೆಚ್ಚು ಚಿಂತಿಸುತ್ತಾರೆ. ಆದ್ದರಿಂದ ಅವರು ಸಾಮಾನ್ಯವಾಗಿ ಹಗಲಿನ ವೇಳೆಯಲ್ಲಿ ಮಲಗುತ್ತಾರೆ. ಚಿಕ್ಕನಿದ್ರೆಯು ಅವರಿಗೆ ಉತ್ತಮ ಭಾವನೆಯನ್ನು ನೀಡುತ್ತದೆ ಮತ್ತು ಅವರು ತಮ್ಮ ನಿದ್ರೆಯಲ್ಲಿ ಚಿಂತೆಯನ್ನು ಮುಚ್ಚಿ ಹಾಕಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ಚಿಂತೆಯ ಕಾರಣಕ್ಕೆ ರಾತ್ರಿ ನಿದ್ರೆ ಬರದೆ ಹೊರಳಾಡಿದರೂ, ಹಗಲಿನಲ್ಲಿ ಆ ನಿದ್ರೆ ಸಂಪೂರ್ಣಗೊಳಿಸಿಕೊಳ್ಳಲು ಇಷ್ಟ ಪಡುತ್ತಾರೆ. ನಿದ್ರೆಯು ಇವರಿಗೆ ಸಮಾಧಾನದ ಸಮಯ.
Shukra Gochar 2022: ಈ ಮೂರು ರಾಶಿಗಳ ಕಷ್ಟಗಳೆಲ್ಲ ಇನ್ನು 7 ದಿನದಲ್ಲಿ ತೀರಲಿದೆ!
ಧನು ರಾಶಿ(Sagittarius)
ಧನು ರಾಶಿಯವರು ಸಾಹಸಿಗಳಾದರೂ ನಿದ್ರೆಯ ವಿಷಯದಲ್ಲಿ ರಾಜಿಯಾಗುವವರಲ್ಲ. ಸಮಯ ಸಿಕ್ಕಾಗೆಲ್ಲ ನಿದ್ರಿಸಿಕೊಳ್ಳುತ್ತಾರೆ. ಅದೊಂದು ಚೆನ್ನಾಗಿ ಆಗಿದೆ ಎಂದರೆ ಬಹಳ ಚೈತನ್ಯಭರಿತವಾಗಿರುತ್ತಾರೆ. ಸೊಂಪಾದ ನಿದ್ರೆಯು ಇವರಿಗೆ ಜೀವನದ ಇತರ ವಿಷಯಗಳನ್ನು ಆನಂದಿಸಲು ಅನುವು ಮಾಡಿ ಕೊಡುತ್ತದೆ.
ಮೀನ ರಾಶಿ(Pisces)
ಮೀನ ರಾಶಿಯವರು ತುಂಬಾ ನಿದ್ದೆ ಮಾಡಲು ಇಷ್ಟಪಡುತ್ತಾರೆ! ನಿದ್ರೆಯ ಕಾರಣಕ್ಕಾಗಿ ಬೇರೆಲ್ಲ ಪ್ರೋಗ್ರಾಂಗಳನ್ನು ಮುಂದೂಡಲೂ ಹಿಂದೆ ಮುಂದೆ ನೋಡುವವರಲ್ಲ. ಮೀನ ರಾಶಿಗೆ ನಿದ್ರಿಸುವುದೆಂದರೆ ಕನಸು ಕಾಣುವ ಸುಖ. ಕೆಲವೊಮ್ಮೆ ನಿದ್ರಿಸದಿದ್ದರೂ ಸುಮ್ಮನೇ ಮಲಗಿ ಹಗಲುಗನಸು ಕಾಣಲು ಇಷ್ಟ ಪಡುತ್ತಾರೆ.
Feng Shui Tips: ಅದೃಷ್ಟ ಕೈ ಕೊಡುತ್ತಿದೆಯೇ? ಈ ಐದು ಮೀನುಗಳನ್ನು ಅಕ್ವೇರಿಯಂನಲ್ಲಿರಿಸಿ..
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.