Astrology Tips: ಈ ಐದು ರಾಶಿಗಳ ಜನ ಪರಿಶುದ್ಧ ಮನಸ್ಸು ಹೊಂದಿರ್ತಾರೆ

Published : Sep 29, 2023, 04:30 PM IST
Astrology Tips: ಈ ಐದು ರಾಶಿಗಳ ಜನ ಪರಿಶುದ್ಧ ಮನಸ್ಸು ಹೊಂದಿರ್ತಾರೆ

ಸಾರಾಂಶ

ಯಾರಿಗೂ ಕೇಡನ್ನು ಬಯಸದ, ಯಾರಿಗೂ ನೋವುಂಟು ಮಾಡಲು ಇಷ್ಟಪಡದ, ಅಂತರಾಳದಿಂದ ಪರಿಶುದ್ಧರಾಗಿರುವ ಜನ ಈ ಐದು ರಾಶಿಗಳಲ್ಲಿ ಕಂಡುಬರುತ್ತಾರೆ. ಮೌಲ್ಯಗಳು, ಸಹಾನುಭೂತಿ, ಕರುಣೆ, ಪ್ರೀತಿ, ಉತ್ಸಾಹಗಳೆಂಬ ವಿವಿಧ ಉತ್ತಮ ಗುಣಗಳೊಂದಿಗೆ ಇವರು ಶುದ್ಧಾತ್ಮರಾಗಿರುತ್ತಾರೆ.   

ರಾಶಿ, ನಕ್ಷತ್ರಗಳು ನಮ್ಮ ಜೀವನದ ಮೇಲೆ ಅಗಾಧ ಪ್ರಭಾವ ಬೀರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ನಾವು ಜನಿಸಿದ ರಾಶಿ, ಗ್ರಹಗಳ ಪ್ರಭಾವದಿಂದಲೇ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಮೇಲ್ನೋಟಕ್ಕೆ ಹನ್ನೆರಡೇ ರಾಶಿಗಳಿದ್ದರೂ ಅವುಗಳಲ್ಲೂ ನಾಲ್ಕು ಪಾದಗಳಿವೆ. ಅಲ್ಲೂ ಪ್ರತಿಯೊಂದಕ್ಕೂ ವ್ಯತ್ಯಾಸವಿದೆ. ಹೀಗಾಗಿಯೇ, ನಿರ್ದಿಷ್ಟ ರಾಶಿಯಲ್ಲಿ ಜನಿಸಿದ ನಾಲ್ಕು ಜನರಿದ್ದರೆ ಅವರು ನಾಲ್ಕು ರೀತಿಯಲ್ಲೇ ಇರುತ್ತಾರೆ, ಒಂದೇ ರೀತಿ ಇರುವುದಿಲ್ಲ. ಆದರೂ ಆ ಜನರ ಅಂತರಂಗದ ಭಾವನೆಯ ಮೂಲ ಅಂಶ ಒಂದೇ ಆಗಿರುವ ಸಾಧ್ಯತೆ ಹೆಚ್ಚು. ಉದಾಹರಣೆಗೆ, ಸಹಾನುಭೂತಿ, ದಯೆ, ಕರುಣೆಗಳನ್ನು ಹೊಂದಿರುವ ಜನರು ಕೆಲವೇ ನಿರ್ದಿಷ್ಟ ರಾಶಿಗೆ ಸೇರಿರುವ ಸಾಧ್ಯತೆ ಅಧಿಕ. ಏಕೆಂದರೆ, ಇವರ ರಾಶಿಗಳಲ್ಲೇ ಈ ಗುಣ ಅಡಕವಾಗಿರುತ್ತದೆ. ಹಾಗೆಯೇ, ಕೆಲ ಜನ ಅಂತರಾಳದಿಂದ ಭಾರೀ ಶುದ್ಧರಾಗಿರುತ್ತಾರೆ. ಇವರ ಅಂತರಂಗದ ಭಾವನೆಗಳು ಶುದ್ಧವಾಗಿರುತ್ತವೆ, ಯಾರಿಗೂ ಕೇಡನ್ನು ಬಯಸುವುದಿಲ್ಲ. ಇಂತಹ ಜನರನ್ನು ನಿರ್ದಿಷ್ಟವಾಗಿ ಐದು ರಾಶಿಗಳಲ್ಲಿ ಗುರುತಿಸಬಹುದು.

ಮೀನ (Pisces): ಮೀನ ರಾಶಿಯಲ್ಲಿ ಜನಿಸಿದ ಜನರು ಕಂಪ್ಯಾಷನೇಟ್‌ (Compassionate) ಗುಣಕ್ಕೆ ಹೆಸರು. ಇವರು ಆಳವಾದ ಸಹಾನುಭೂತಿ (Empathy) ಹೊಂದಿರುತ್ತಾರೆ. ನೆಪ್ಚೂನ್‌ ಗ್ರಹಾಧಿಪತಿಯಾಗಿದ್ದು, ಇದು ಕನಸು (Dream) ಮತ್ತು ಆಧ್ಯಾತ್ಮಿಕತೆಯನ್ನು (Spirituality) ಬಿಂಬಿಸುತ್ತದೆ. ಮತ್ತೊಬ್ಬರ ಭಾವನೆಗಳನ್ನು ತುಂಬ ಚೆನ್ನಾಗಿ ಅರಿತುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಅವರ ನೋವುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಮುಕ್ತ ಮನಸ್ಸನ್ನು ಹೊಂದಿದ್ದು, ನೆರವಿಗೆ ಕೈಚಾಚುತ್ತಾರೆ. ಮೀನ ರಾಶಿಯ ಜನರು ನಿಮ್ಮ ಸಮೀಪವಿದ್ದರೆ ಅದರ ಅರಿವಾಗಬಹುದು. ಎಲ್ಲರಿಗಿಂತ ಮೊದಲು ಅವರೇ ನಿಮ್ಮ ನೆರವಿಗೆ (Help) ಧಾವಿಸುತ್ತಾರೆ. ನಿಸ್ವಾರ್ಥದಿಂದ ದಯೆ ತೋರುತ್ತಾರೆ.

ಯಾವ ಜನ್ಮರಾಶಿಯವರು ಹೇಗೆ ಡೇಟಿಂಗ್ ಮಾಡ್ತಾರೆ? ನಿಮ್ಮ ರಾಶಿಯನ್ನು ನೋಡಿ

ಕರ್ಕಾಟಕ (Cancer): ಕರ್ಕಾಟಕ ರಾಶಿಯ ಜನ ಆರೈಕೆ ಮಾಡುವಲ್ಲಿ, ಕಾಳಜಿ (Care) ತೋರುವಲ್ಲಿ ಹೆಸರು. ತಮ್ಮವರನ್ನು ರಕ್ಷಿಸಿಕೊಳ್ಳುವುದರಲ್ಲಿ ಇವರು ಮುಂದು. ಚಂದ್ರ ಗ್ರಹಾಧಿಪತಿಯಾಗಿದ್ದು, ಭಾವನೆ (Feelings) ಮತ್ತು ಅಂತಃಪ್ರಜ್ಞೆಯನ್ನು ಹೊಂದಿರುತ್ತಾರೆ. ತಮ್ಮವರ ಭಾವನೆಗಳು, ಅವರ ಅಗತ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಆಳವಾಗಿ ಅದನ್ನು ಅನುಭವಿಸುತ್ತಾರೆ. ಇವರನ್ನು ಶುದ್ಧಾತ್ಮರನ್ನಾಗಿ (Pure Soul) ನಿರ್ಮಿಸುವುದು ಇದೇ ಗುಣ. ಪ್ರೀತಿಪಾತ್ರರಿಗಾಗಿ ದೃಢವಾದ ಬದ್ಧತೆ ಹೊಂದಿರುತ್ತಾರೆ. ಅವರಿಗಾಗಿ ಸುರಕ್ಷಿತ ಹಾಗೂ ಪ್ರೀತಿದಾಯಕ ಪರಿಸರ ನಿರ್ಮಿಸುತ್ತಾರೆ. ಭಾವನಾತ್ಮಕ ಬೆಂಬಲ (Emotional Support) ಹಾಗೂ ನಿಮ್ಮೊಂದಿಗೆ ನಾನಿದ್ದೇನೆ ಎನ್ನುವ ಭಾವನೆ ಮೂಡಿಸುತ್ತಾರೆ.

ವೃಷಭ (Taurus): ಸಂಶಯಕ್ಕೆ ಆಸ್ಪದವೇ ಇಲ್ಲದ ಬದ್ಧತೆ, ಸ್ಥಿರವಾಗಿ (Stability) ನಿಲ್ಲುವ ಗುಣ ಹೊಂದಿರುವ ವೃಷಭ ರಾಶಿಯ ಅಧಿಪತಿ ಶುಕ್ರಗ್ರಹ. ಇದು ಪ್ರೀತಿ (Love) ಮತ್ತು ಸೌಂದರ್ಯದ (Beauty) ಪ್ರತೀಕ. ಸಂಬಂಧಗಳಲ್ಲಿ ಇವರು ಅತ್ಯಂತ ಶುದ್ಧತೆ ಹೊಂದಿದ್ದು, ತಮ್ಮ ಮೌಲ್ಯಗಳಿಗೆ ಬದ್ಧರಾಗಿರುತ್ತಾರೆ. ಇದೇ ಇವರನ್ನು ಶುದ್ಧಾತ್ಮರನ್ನಾಗಿ ರೂಪಿಸುತ್ತದೆ. ಅತ್ಯಂತ ಸದೃಢ ನೈತಿಕ ಚೌಕಟ್ಟನ್ನು ಹೊಂದಿರುವ ಇವರು, ತಾವೇನು ನಂಬುತ್ತೇವೋ ಅದಕ್ಕಾಗಿ ಎದ್ದು ನಿಲ್ಲುತ್ತಾರೆ. 

ಕನ್ಯಾ (Virgo): ನಿಸ್ವಾರ್ಥಿ ಹೀಲರ್‌ (Healer) ಎನಿಸಿಕೊಳ್ಳುವವರು ಕನ್ಯಾ ರಾಶಿಯ ಜನ. ವಿಸ್ತಾರವಾಗಿ ಮಾಹಿತಿ ಕಲೆ ಹಾಕುವ, ವಿಮರ್ಶಾ ಬುದ್ಧಿಯ ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ. ಇದು ಸಂವಹನ ಮತ್ತು ಸೇವೆಯನ್ನು (Service) ಪ್ರತಿನಿಧಿಸುತ್ತದೆ. ಹೀಗಾಗಿ, ಕನ್ಯಾ ರಾಶಿಯ ಜನ ಸಹಜವಾಗಿ ಕಾಳಜಿ ವಹಿಸುವ ಹಾಗೂ ಚಿಕಿತ್ಸಾದಾಯಕ ಗುಣ ಹೊಂದಿರುತ್ತಾರೆ. ಅಗತ್ಯವುಳ್ಳವರಿಗೆ ನಿಸ್ವಾರ್ಥದಿಂದ ಬದ್ಧತೆಯಿಂದ ಸಹಾಯ ಮಾಡುವ ಗುಣವೇ ಇವರನ್ನು ಶುದ್ಧಾತ್ಮರನ್ನಾಗಿ ನಿರ್ಮಿಸುತ್ತದೆ.

ಅಕ್ಟೋಬರ್‌ನಲ್ಲಿ ಪ್ರಮುಖ ಗ್ರಹಗಳ ಸಂಚಾರ, ಈ 5 ರಾಶಿಗಳಿಗೆ ಅನಿರೀಕ್ಷಿತ ಧನಲಾಭ

ಧನು (Sagittarius): ಅನ್ವೇಷಣಾ ಬುದ್ಧಿಯ ಧನು ರಾಶಿಯ ಜನ ಆಶಾವಾದಿಗಳು (Optimistic). ಗುರು ಗ್ರಹಾಧಿಪತಿಯಾಗಿದ್ದು. ಇದು ವಿಸ್ತಾರ ಮತ್ತು ಬೆಳವಣಿಗೆಯನ್ನು (Development) ತೋರುವ ಗ್ರಹ. ಹೀಗಾಗಿ, ಈ ಜನ ಎಂದಿಗೂ ಕುಂದದ ಜೀವನೋತ್ಸಾಹ ಹೊಂದಿರುತ್ತಾರೆ. ಧನಾತ್ಮಕ ನಿಲುವು, ಜೀವನದ ಸಾಹಸಗಳನ್ನು ಸ್ವೀಕರಿಸುವಂತೆ ಪ್ರೇರೇಪಿಸುತ್ತಾರೆ. ತಾವು ಹೋದಲ್ಲೆಲ್ಲ ಖುಷಿ (Joy) ಮತ್ತು ಉತ್ಸಾಹ ಹರಡುತ್ತಾರೆ. 

PREV
Read more Articles on
click me!

Recommended Stories

2026 ರಲ್ಲಿ ಶುಕ್ರ ತನ್ನ ಉತ್ತುಂಗ ರಾಶಿಯಲ್ಲಿ 2 ಬಾರಿ ಚಲನೆ, ಈ 3 ರಾಶಿಗೆ ಸಮೃದ್ಧಿ, ರಾಜಯೋಗ
ಬುಧ ಗ್ರಹ ಮಿತ್ರ ಶನಿ ರಾಶಿಯಲ್ಲಿ, 3 ರಾಶಿಗೆ ಹಣ, 2026 ರಲ್ಲಿ ಅದೃಷ್ಟವೋ ಅದೃಷ್ಟ