Zodiac Sign: ಸಂಗಾತಿಯನ್ನ ಅಮ್ಮನಂತೆ ಕಾಳಜಿ, ಪ್ರೀತಿ ಮಾಡೋ ರಾಶಿಗಳಿವು

By Suvarna News  |  First Published Mar 2, 2023, 4:36 PM IST

ಕೆಲವು ರಾಶಿಗಳ ಜನರ ಸ್ನೇಹ-ಪ್ರೀತಿಯನ್ನು ಎಂದಿಗೂ ಕಳೆದುಕೊಳ್ಳಬಾರದು. ಇವರ ಸಾಂಗತ್ಯದಲ್ಲಿ, ಇವರ ಸಹಯೋಗದಲ್ಲಿ ನಿಮ್ಮ ಗಾಯಗಳು ಮಾಯುತ್ತವೆ. ಇವರ ಸ್ಪರ್ಶ ಅರ್ಥಾತ್ ಪ್ರೀತಿ ಹಾಗಿರುತ್ತದೆ, ಅಮ್ಮನಂತಹ ಪ್ರೀತಿ ಇವರ ದೊಡ್ಡ ಗುಣ.
 


ಅಮ್ಮನ ಪ್ರೀತಿಗೆ ಸರಿಸಮನಾದುದು ಯಾವುದಿದೆ? ಮಕ್ಕಳು ಏನು ಮಾಡಿದರೂ ಅದನ್ನು ಹೆಮ್ಮೆಯಿಂದ ನೋಡುವ, ಏನು ಮಾಡದಿದ್ದರೂ ಪ್ರೀತಿಸುವ, ವಯಸ್ಸಾದಾಗ ನೆಗ್ಲೆಕ್ಟ್ ಮಾಡಿದರೂ ಅವರ ಏಳ್ಗೆಯನ್ನೇ ಬಯಸುವ ಅಮ್ಮನ ಮುಂದೆ ಬೇರೆ ಯಾರೂ ಸಾಟಿಯಲ್ಲ. ಆಕೆಯ ಪ್ರೀತಿಯೇ ಹಾಗೆ, ಮಕ್ಕಳನ್ನು ಸಂತಸದಿಂದ ಇಡುತ್ತದೆ. ಚಿಕ್ಕ ಮಗುವೇ ಆದರೂ ಅಮ್ಮನ ಭಾವನೆಗಳನ್ನು ಸಲೀಸಾಗಿ ಅರ್ಥೈಸಿಕೊಳ್ಳುತ್ತದೆ. ಆಕೆ ಭಾವನಾತ್ಮಕವಾಗಿ ಅಸ್ಥಿರವಾಗಿದ್ದರೆ ಮಗುವಿನ ಮೇಲೂ ಪರಿಣಾಮ ಕಂಡುಬರುತ್ತದೆ. ಅಮ್ಮನ ಖುಷಿ, ಮನೋಧೈರ್ಯ ಮಗುವನ್ನು ಚೇತೋಹಾರಿಯನ್ನಾಗಿಡುತ್ತದೆ. ಹೀಗಾಗಿ, ಅಮ್ಮನ ಪ್ರೀತಿ ಬೇರೆ ಯಾರಿಂದಲೂ ದೊರಕದ ಪ್ರೀತಿ. ಆದರೆ, ಕೆಲವು ರಾಶಿಚಕ್ರದ ಜನ ಅಮ್ಮನಂತಹ ಪ್ರೀತಿಯನ್ನು ಜನ್ಮಜಾತವಾಗಿ ಹೊಂದಿರುತ್ತಾರೆ. ತಮ್ಮ ಸಂಗಾತಿಯ ಕಡೆಗೆ ಇವರು “ಮದರ್ಲಿ ಲವ್’ ವ್ಯಕ್ತಪಡಿಸುವುದು ಇದೇ ಕಾರಣಕ್ಕೆ. ಇವು ತಮ್ಮ ಸಂಗಾತಿಯನ್ನು ಕಷ್ಟಕರ ಸನ್ನಿವೇಶಗಳಲ್ಲಿ ರಕ್ಷಿಸುತ್ತಾರೆ. ತಾಯಿ ನೀಡುವಂತಹ ಕಂಫರ್ಟ್ ನೀಡುತ್ತಾರೆ. ಅಷ್ಟೇ ಸಹಾನುಭೂತಿ ತೋರುತ್ತಾರೆ. ತೀರ ಎಲ್ಲ ವಿಚಾರದಲ್ಲೂ ಅಮ್ಮನಂತೆ ಅಲ್ಲದಿದ್ದರೂ ಕೆಲವು ಅಂಶಗಳಲ್ಲಿ ಇವರು ಅಮ್ಮನಂಥದ್ದೇ ಕಾಳಜಿಯನ್ನೂ ಹೊಂದಿರುತ್ತಾರೆ. ಅಂತಹ ಕೆಲವು ರಾಶಿಚಕ್ರ ಯಾವುದು ನೋಡಿ.

•    ಕರ್ಕಾಟಕ (Cancer)
ಕರ್ಕಾಟಕ ರಾಶಿಯ (Zodiac Sign) ಜನರ ರಕ್ಷಣಾತ್ಮಕ (Protective) ಹಾಗೂ ಆಶ್ರಯ ನೀಡುವಂತಹ ಗುಣವನ್ನು ಯಾರು ತಾನೇ ಅನುಭವಿಸಿರುವುದಿಲ್ಲ?  ಜಲತತ್ವದ ಈ ರಾಶಿಯ ಜನರ ಸೂಕ್ಷ್ಮವಾಗಿದ್ದು, ಜನ್ಮಜಾತ ಪೋಷಣೆ (Nurturing) ಮಾಡುವವರಾಗಿದ್ದಾರೆ. ತಮ್ಮ ಸಂಗಾತಿಗೆ (Partner) ಸದಾಕಾಲ ಕಾಳಜಿ (Care), ಆರೈಕೆ ಮಾಡುತ್ತಿರುತ್ತಾರೆ. ಸಂಗಾತಿಗೆ ಇಷ್ಟವಾದ ಅಡುಗೆ ಮಾಡುವುದರಿಂದ ಹಿಡಿದು ಯಾವುದೇ ಸಹಕಾರ (Help) ಬೇಕಾದರೂ ನೀಡುತ್ತಾರೆ. ಇವರ ಸೇವೆ ನಿಸ್ವಾರ್ಥವಾಗಿರುತ್ತದೆ. 

Latest Videos

undefined

Attractive girls: ಈ ರಾಶಿಯ ಹುಡುಗಿಯರು ಮೊದಲ ಭೇಟಿಯಲ್ಲೇ ಹುಡುಗರನ್ನು ಹುಚ್ಚರಾಗಿಸುತ್ತಾರೆ!

•    ಮೀನ (Pisces)
ಮೀನ ರಾಶಿಯ ಜನ ಈಸಿ ಗೋಯಿಂಗ್ ಧೋರಣೆ ಹೊಂದಿದ್ದು, ನೈಜವಾದ ಪ್ರೀತಿಗೆ (True Love) ಸಿಲುಕಿದರೆ ಸಂಗಾತಿಯ ಬಗ್ಗೆ ಮಿತಿಯಿಲ್ಲದ ಸಹಾನುಭೂತಿ (Compassion) ಹೊಂದಿರುತ್ತಾರೆ. ಅಂತಃಪ್ರಜ್ಞೆ (Intuition) ಹೊಂದಿರುವ ಇವರು ಸಂಗಾತಿಯ ಭಾವನೆಗಳನ್ನು ಬಾಯಿಬಿಟ್ಟು ಹೇಳದೆಯೂ ಅರ್ಥ ಮಾಡಿಕೊಳ್ಳಬಲ್ಲರು. ಸಂಗಾತಿಯ ಮುಖವನ್ನು ನೋಡಿಯೇ ಅವರ ಮನಸ್ಥಿತಿ (Mood) ಹಾಗೂ ದುಗುಡವನ್ನು ಅರಿತುಕೊಳ್ಳುವ ವಿದ್ಯೆ ಇವರಿಗೆ ಕರಗತವಾಗಿರುತ್ತದೆ. ಕಷ್ಟಕರ (Tough) ಸಮಯದಲ್ಲಿ ಸಂಗಾತಿಯನ್ನು ತಾಯಿಯಂತೆ (Motherly) ಕಾಳಜಿ ವಹಿಸಿ ಬೆಂಬಲ ನೀಡಬಲ್ಲರು.

•    ತುಲಾ (Libra)
ತಮಗೆ ಎಷ್ಟೇ ಕಷ್ಟವಿರಲಿ, ಇತರರನ್ನು ತೃಪ್ತಿ ಪಡಿಸಲು ಮುಂದಾಗುವ ಗುಣ ತುಲಾ ರಾಶಿಯವರದ್ದು. ಸಂಗಾತಿಯನ್ನು ಖುಷಿಯಾಗಿಡಲು, ತೃಪ್ತಿಪಡಿಸಲು (Satisfy) ಸದಾ ಹೆಣಗಾಡುತ್ತಾರೆ. ಹಣಕಾಸು (Financial) ವಿಚಾರದಲ್ಲೇ ಆಗಲಿ, ಬೇರ್ಯಾವುದೇ ಕಷ್ಟದ ಸನ್ನಿವೇಶಗಳಲ್ಲಾಗಲೀ, ನಿಮಗೆ ತೊಂದರೆಯಾಗಿದೆ ಎನ್ನುವುದು ತಿಳಿದಾಕ್ಷಣ ಸ್ಪಂದಿಸುವುದು (Respond) ತುಲಾ ರಾಶಿಯ ಜನರ ಗುಣ. ಇದಕ್ಕಾಗಿ ತಮಗೆ ಎಷ್ಟು ಸಾಧ್ಯವೋ ಅಷ್ಟೂ ಪ್ರಯತ್ನ ಹಾಕುತ್ತಾರೆ. ಕುಟುಂಬಕೇಂದ್ರಿತ ರಾಶಿಚಕ್ರ ಇದು. ಮುಕ್ತ ಮನದಿಂದ ಪ್ರೀತಿಪಾತ್ರರಿಗೆ ಅಪಾರ ಸಹಾಯ ಮಾಡುತ್ತಾರೆ.

Shukra Gochar 2023: ಹೋಳಿ ಬಳಿಕ ಶುರುವಾಗುತ್ತೆ 5 ರಾಶಿಗಳಿಗೆ ಶುಕ್ರ ದೆಸೆ

•    ಧನು (Sagittarius) 
ಧನು ರಾಶಿಯ ಜನ ತಮ್ಮ ಭಾವನಾತ್ಮಕ (Emotional) ಭಾವನೆಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಧನು ರಾಶಿಯ ಸಂಗಾತಿ ಜತೆಗಿದ್ದರೆ ಅವರ ಸಹೃದಯತೆ ಮತ್ತು ಬೆಂಬಲದ (Supportive) ಗುಣದಿಂದಾಗಿ ಜೀವನದಲ್ಲಿ ಎಷ್ಟೇ ಕಷ್ಟವನ್ನಾದರೂ ಜಯಿಸಬಹುದು. ಕಷ್ಟದ ಸನ್ನಿವೇಶಗಳಲ್ಲಿ ಧನು ರಾಶಿಯ ಸಂಗಾತಿ ತಮ್ಮ ಪ್ರೀತಿಪಾತ್ರರ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ತಾವು ಪ್ರೀತಿಸುವವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಸಂಗಾತಿಯ ಸಿಲ್ಲಿ (Silly) ಸಮಸ್ಯೆಗಳನ್ನೂ ಸಹ ಆಲಿಸುತ್ತಾರೆ. ಅದರಿಂದ ಹೊರಬರಲು ತಮ್ಮ ಗಮನಾರ್ಹ ಕೊಡುಗೆ ನೀಡುತ್ತಾರೆ. ಉತ್ತಮ ಸಲಹೆಗಳನ್ನು ನೀಡುತ್ತಾರೆ. ಜೀವನದಲ್ಲಿ ದುಃಖ (Pain) ಇಲ್ಲದಂತೆ ಮಾಡಲು ಯತ್ನಿಸುತ್ತಾರೆ. 

click me!