ತಾವು ಹೇಳಿದ್ದೇ ಆಗಬೇಕು, ಜೊತೆಗಿರುವವರು ತಮ್ಮಂತೆಯೇ ನಡೆಯಬೇಕು ಎಂದು ಎಲ್ಲರ ಮೇಲೆ ನಿಯಂತ್ರಣ ಸಾಧಿಸುವ ಜನರು ಯಾವ ರಾಶಿಯವರಾಗಿರುತ್ತಾರೆ ಗೊತ್ತಾ?
ಮತ್ತೊಬ್ಬರ ಸಲಹೆ ಕೇಳೋರು ಇವರಲ್ಲ. ತಮ್ಮ ತಪ್ಪುಗಳನ್ನು ಹೇಳಿದ್ರೆ ಒಪ್ಪಿಕೊಳ್ಳೋರೂ ಅಲ್ಲ. ಎಲ್ಲ ತಾವು ಹೇಳಿದಂತೆಯೇ ಆಗಬೇಕು, ತಾನು ಮಾತ್ರ ಯಾರ ಮಾತನ್ನೂ ಕೇಳೋದಿಲ್ಲ. ತಾವು ಹೇಳಿದ್ದಕ್ಕೇ ಎಲ್ಲಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ತಮಗೆ ಅಪಾರ ಗೌರವ ಕೊಡಬೇಕು ಅನ್ನೋರು ನಮ್ಮ ಮಧ್ಯೆಯಲ್ಲಿ ಒಬ್ಬೊಬ್ಬರಿರುತ್ತಾರೆ. ಅಥವಾ ಅದು ನಾವೇ ಆಗಿರಬಹುದು. ಇಂಥ ಸ್ವಭಾವಕ್ಕೇ bossy ಎನ್ನುವುದು. ಸದಾ ತಮ್ಮ ಅಧಿಕಾರ(authority), ಶಕ್ತಿ ಪ್ರದರ್ಶನಕ್ಕೆ ಸಿದ್ಧರಿರೋರು ಇವರು.
ಯಾವುದೇ ಗೆಳೆಯರ ಗುಂಪಿನಲ್ಲೂ ಇಂಥವರೊಬ್ಬರನ್ನು ಕಾಣಬಹುದು. ತಮ್ಮ ಜೊತೆಗಿರುವವರನ್ನು ಪಪ್ಪೆಟ್ಸ್‌ನಂತೆ ಆಡಿಸಬಲ್ಲರು. ಮತ್ತೆ ಕೆಲ ಹುಡುಗಿಯರು ತಾವು ಪ್ರೀತಿಸಿದ ಹುಡುಗನನ್ನೇ ತಮ್ಮ ತಾಳಕ್ಕೆ ಕುಣಿಸಬಲ್ಲರು. ಎಲ್ಲಿ ಸಿಗಬೇಕು, ಎಲ್ಲಿ ತಿನ್ನಬೇಕು ಅಷ್ಟೇ ಏಕೆ, ನೀವೇನು ಧರಿಸಬೇಕು ಎಂಬುದನ್ನೂ ನಿರ್ಧರಿಸುವ ಸ್ವಭಾವ ಇವರದು. ಇದನ್ನು ಓದುವಾಗ ನಿಮ್ಮ ಪರಿಚಿತರಲ್ಲಿ ಹೀಗಿರುವವರ ನೆನಪಾಗುತ್ತಿದೆ ಅಲ್ಲವೇ? ಮತ್ತೊಬ್ಬರನ್ನು ಅತಿಯಾಗಿ ನಿಯಂತ್ರಿಸಬಲ್ಲ ಬಾಸಿ ಸ್ವಭಾವ ಯಾವ ರಾಶಿಯವರಲ್ಲಿ ಹೆಚ್ಚು ನೋಡೋಣ.
ಕುಂಭ ರಾಶಿ(Aquarius)
ಉದ್ಯೋಗದ ವಿಷಯಕ್ಕೆ ಬಂದಾಗ, ಕುಂಭ ರಾಶಿಯು ಮೇಲಧಿಕಾರಿಯಂತೆ ವರ್ತಿಸುತ್ತದೆ. ಇವರು ಎಲ್ಲವನ್ನೂ ತಾವು ಬಯಸಿದ ರೀತಿಯಲ್ಲಿಯೇ ಇರಬೇಕೆಂದು ನಿರೀಕ್ಷಿಸುತ್ತಾರೆ. ಹಾಗಂಥ ಎಂದಿಗೂ ತಾವೇ ಆ ಬದಲಾವಣೆಗಳನ್ನು ಮಾಡಲು ಸಿದ್ಧರಿರುವುದಿಲ್ಲ. ಅವರು ತಾವು ಹೇಳುವುದೆಲ್ಲ ಸಂಪೂರ್ಣ ಸತ್ಯ ಎಂದೇ ನಂಬಿರುತ್ತಾರೆ. ಕೆಲವೊಮ್ಮೆ ಅವರೆಷ್ಟು ಮಿತಿ ಮೀರುತ್ತಾರೆಂದರೆ ಮತ್ತೊಬ್ಬರಿಗೆ ಅವರ ಸ್ವಾತಂತ್ರ್ಯವನ್ನು ಆನಂದಿಸಲು ಬಿಡುವುದಿಲ್ಲ.
ವೃಷಭದಲ್ಲಿ ಬುಧ ವಕ್ರಿ; ನಿಮ್ಮ ರಾಶಿಯ ಮೇಲೇನು ಪರಿಣಾಮವಾಗಲಿದೆ?
ಕರ್ಕಾಟಕ(Cancer)
ಸಂಬಂಧಗಳ ವಿಷಯಕ್ಕೆ ಬಂದರೆ, ಕರ್ಕಾಟಕ ರಾಶಿಯವರೇ ಬಾಸ್. ಅವರು ಆಗಾಗ್ಗೆ ತಮ್ಮ ಸಂಗಾತಿಯ ಮೇಲೆ ನಿಯಂತ್ರಣವನ್ನು ಹೇರುತ್ತಾರೆ. ತಮ್ಮ ಪರವಾಗಿ ಯೋಚಿಸಲು ಮತ್ತು ಕೆಲಸ ಮಾಡಲು ಒತ್ತಾಯಿಸುತ್ತಾರೆ. ತಾವು ಹೇಳಿದಂತೆ ಕೇಳುವವರೊಂದಿಗಿನ ಸಂಬಂಧದಲ್ಲಿ ಹೆಚ್ಚಿನ ಸಂತೋಷ ಕಾಣುತ್ತಾರೆ. ಎಂದಿಗೂ ಇತರಿಗಾಗಿ ಬದಲಾಗಲು ಇವರು ಸಿದ್ಧರಿರುವುದಿಲ್ಲ ಜೊತೆಗೆ ಉತ್ತಮ ಚರ್ಚೆಗಳನ್ನು ನಡೆಸಲು ಆಸಕ್ತಿ ಹೊಂದಿರುವುದಿಲ್ಲ.
ಕನ್ಯಾ ರಾಶಿ(Virgo)
ಎಲ್ಲದರಲ್ಲೂ ಕನ್ಯಾ ರಾಶಿಯವರು ಬಾಸ್ ಆಗಲು ಬಯಸುತ್ತಾರೆ. ಅವರು ತಮ್ಮ ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ಅಧಿಕಾರಯುತ ವ್ಯಕ್ತಿ ಎಂದು ತೋರಿಸಿಕೊಳ್ಳಲು ಬಯಸುತ್ತಾರೆ. ಕನ್ಯಾ ರಾಶಿಯವರು ಸಂಬಂಧಗಳಲ್ಲಿ ಪ್ರಾಬಲ್ಯ ತೋರಿಸುತ್ತಾರೆ ಮತ್ತು ಅವರ ಪ್ರಾಬಲ್ಯದ ವ್ಯಕ್ತಿತ್ವವು ಯಾವಾಗಲೂ ಎಲ್ಲರಿಂದ ಟೀಕೆಗೊಳಗಾಗುತ್ತದೆ. ಹಾಗಿದ್ದೂ, ಅವರು ಅದರಿಂದ ಬದಲಾಗಲು ಬಯಸುವುದಿಲ್ಲ ಮತ್ತು ತಮ್ಮ ಸ್ವಭಾವವನ್ನೇ ಮುಂದುವರಿಸುತ್ತಾರೆ.
Weekly Horoscope: ಕಟಕಕ್ಕೆ ಧನನಷ್ಟ, ಮಿಥುನಕ್ಕೆ ಸಿಗದು ಮನಃಶಾಂತಿ
ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯವರು ಸಹ ಮೇಲಧಿಕಾರಿ ಮನೋಭಾವವನ್ನು ಹೊಂದಿರುತ್ತಾರೆ. ವೃಶ್ಚಿಕ ರಾಶಿಯವರು ಜನರ ಮೇಲೆ ಪ್ರಾಬಲ್ಯ ಸಾಧಿಸಲು ಇಷ್ಟಪಡುತ್ತಾರೆ ಮತ್ತು ಅವರ ಮೇಲಧಿಕಾರಿ ವರ್ತನೆ ಈ ಪ್ರಯತ್ನದಲ್ಲಿ ಅವರಿಗೆ ಸಹಾಯ ಮಾಡುತ್ತದೆ. ವೃಶ್ಚಿಕ ರಾಶಿಯವರಿಗೆ ಅಧಿಕಾರ ಬೇಕು. ಅವರ ಪ್ರಾಬಲ್ಯದ ವರ್ತನೆಯು ಅವರ ಅಭದ್ರತೆಯ ಪ್ರತಿಬಿಂಬವಾಗಿದೆ. ಸುತ್ತಲಿನ ವಿಷಯಗಳ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುವುದು ಮತ್ತು ತಮ್ಮನ್ನು ಇತರರು ಗಂಭೀರವಾಗಿ ಪರಿಗಣಿಸದಿರುವುದು ಅವರ ದೊಡ್ಡ ಚಿಂತೆ. ಪರಿಣಾಮವಾಗಿ, ಅವರು ತಮ್ಮ ಇರುವಿಕೆಯನ್ನು ಹೆಚ್ಚು ಅತರರ ಅನುಭವಕ್ಕೆ ತರುವ ಸಲುವಾಗಿ ಬಾಸಿ ಆ್ಯಟಿಟ್ಯೂಡ್ ಬೆಳೆಸಿಕೊಳ್ಳುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.