ವ್ಯಕ್ತಿಯ ಧನ ಯೋಗ, ಅದೃಷ್ಟದ ಬಗ್ಗೆ ಗ್ರಹಗಳಿಂದ ತಿಳಿಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ, ನಕ್ಷತ್ರ, ದಿನಾಂಕ, ವಾರ, ಗ್ರಹ ಮುಂತಾದ ಮುಖ್ಯ ವಿಚಾರಗಳಿಂದ ಜಾತಕವನ್ನು ರಚಿಸಲಾಗುತ್ತದೆ. ಆ ಜಾತಕದಿಂದ ವ್ಯಕ್ತಿಗಿರುವ ವಿಶೇಷ ಯೋಗಗಳ ಬಗ್ಗೆ ತಿಳಿಯೋಣ....
ಜಾತಕದಲ್ಲಿ (Astrology) ಗ್ರಹಗಳ ಸ್ಥಾನ ಮತ್ತು ಸ್ಥಿತಿಯು ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಸುತ್ತದೆ. ಜಾತಕದಲ್ಲಿ (Horoscope) ಐದು ಗ್ರಹಗಳ (Planet) ಯೋಗವಿರುತ್ತದೆ. ಅದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಈ ಯೋಗಗಳಿಗೆ ಪಂಚ ಮಹಾಪುರುಷ ಯೋಗವೆಂದು ಹೇಳಲಾಗುತ್ತದೆ. ಈ ಐದು ಯೋಗಗಳಲ್ಲಿ ಒಂದು ಯೋಗ ವ್ಯಕ್ತಿಯ ಜಾತಕದಲ್ಲಿದ್ದರೂ ಅಂತಹ ವ್ಯಕ್ತಿಯ ಜೀವನವು (life) ಸುಲಭವಾಗಿ ಸಾಗುತ್ತದೆ. ಯಾವುದೇ ರೀತಿಯ ಸಂಘರ್ಷದಿಂದ ಜೀವನ ನಡೆಸುವ ಅನಿವಾರ್ಯತೆ ಬರುವುದಿಲ್ಲ. ಪಂಚ ಮಹಾಪುರುಷ ಯೋಗಗಳಾದ ಗುರು, ಮಂಗಳ, ಬುಧ, ಶುಕ್ರ ಮತ್ತು ಶನಿ ಈ ಎಲ್ಲ ಗ್ರಹಗಳಿಂದ ಯೋಗ ಉಂಟಾಗುತ್ತದೆ. ಈ ಐದು ಗ್ರಹಗಳಲ್ಲಿ ಯಾವುದೇ ಗ್ರಹವು ಮೂಲ ತ್ರಿಕೋನ ಅಥವಾ ಕೇಂದ್ರ ಸ್ಥಾನದಲ್ಲಿ ಸ್ಥಿತವಾಗಿದ್ದರೆ ಅಂತಹ ಸಂದರ್ಭದಲ್ಲಿ ವ್ಯಕ್ತಿಯ ಅದೃಷ್ಟ ಖುಲಾಯಿಸುತ್ತದೆ.
ಪಂಚ ಮಹಾಪುರುಷ ಯೋಗವು ಈ ಗ್ರಹಗಳು ಕೇಂದ್ರ ಸ್ಥಾನದಲ್ಲಿದ್ದರೆ ಮಾತ್ರ ಯೋಗಕ್ಕೆ ಸಾರ್ಥಕ್ಯ ಬರುತ್ತದೆ. ಶ್ರೀರಾಮ ಮತ್ತು ಶ್ರೀ ಕೃಷ್ಣರ ಜಾತಕದಲ್ಲೂ ಸಹ ಈ ಪಂಚ ಮಹಾಪುರುಷ ಯೋಗವಿತ್ತು. ಆ ಪಂಚ ಮಹಾಪುರುಷ ಯೋಗಗಳು ಯಾವುದು ಎಂಬುದನ್ನು ತಿಳಿಯೋಣ...
1. ಮಂಗಳ ಗ್ರಹದ ರುಚಕ ಯೋಗ
2. ಬುಧ ಗ್ರಹದ ಭದ್ರ ಯೋಗ
3. ಗುರು ಗ್ರಹದ ಹಂಸ ಯೋಗ
4. ಶುಕ್ರ ಗ್ರಹದ ಮಾಲವ್ಯ ಯೋಗ
5. ಶನಿ ಗ್ರಹದ ಶಶ ಯೋಗ
ಮಂಗಳ ಗ್ರಹದ ರುಚಕ ಯೋಗ
ಜಾತಕದಲ್ಲಿ ಮಂಗಳ (Mars) ಗ್ರಹವು ಲಗ್ನದಿಂದ ಅಥವಾ ಚಂದ್ರನಿಂದ ಕೇಂದ್ರ ಭಾವದಲ್ಲಿ ಸ್ಥಿತವಾಗಿದ್ದರೆ, ಅಂದರೆ ಒಂದೊಮ್ಮೆ ಮಂಗಳ ಗ್ರಹವು ಲಗ್ನ ಅಥವಾ ಚಂದ್ರನಿಂದ 1, 4, 7 ಅಥವಾ 10ನೇ ಮನೆಯಲ್ಲಿ ಮೇಷ, ವೃಶ್ಚಿಕ (Scorpio) ಅಥವಾ ಮಕರ (Capricorn) ರಾಶಿಯಲ್ಲಿ ಸ್ಥಿತವಾಗಿದ್ದರೆ ಅಂತಹ ಜಾತಕದಲ್ಲಿ ರುಚಕ ಯೋಗವಿದೆ ಎಂದು ಹೇಳಲಾಗುತ್ತದೆ. ಈ ಯೋಗವುಳ್ಳ ಜಾತಕದವರು ಸಾಹಸಿ ಮತ್ತು ಪರಾಕ್ರಮಿಗಳು ಆಗಿರುತ್ತಾರೆ. ಹೆಚ್ಚಿನ ಶಾರಿರೀಕ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಮಾನಸಿಕವಾಗಿ ತುಂಬಾ ಸ್ಥಿರತೆಯನ್ನು ಹೊಂದಿರುತ್ತಾರೆ, ಯಾವುದೇ ವಿಷಯದಲ್ಲಾದರೂ ಬಹುಬೇಗ ಉತ್ತಮ ನಿರ್ಣಯವನ್ನು ಕೈಗೊಳ್ಳುತ್ತಾರೆ. ಈ ವ್ಯಕ್ತಿಗಳಿಗೆ ಉದ್ಯಮ ಮತ್ತು ಉದ್ಯೋಗ ಎರಡರಲ್ಲೂ ಯಶಸ್ಸು (Success) ಸಿಗುತ್ತದೆ.
ಬುಧ (Mercury) ಗ್ರಹದ ಭದ್ರ ಯೋಗ
ಈ ಯೋಗವು ಬುಧ ಗ್ರಹಕ್ಕೆ ಸಂಬಂಧಿಸಿದ್ದಾಗಿದೆ.ಜಾತಕದಲ್ಲಿ ಬುಧ ಗ್ರಹವು ಲಗ್ನ ಅಥವಾ ಚಂದ್ರನಿಂದ ಕೇಂದ್ರ ಸ್ಥಾನದಲ್ಲಿ ಸ್ಥಿತವಾಗಿದ್ದರೆ ಅಂದರೆ 1, 4, 7, ಅಥವಾ 10ನೇ ಮನೆಯಲ್ಲಿ ಮಿಥುನ ಮತ್ತು ಕನ್ಯಾ ರಾಶಿಯಲ್ಲಿ ಸ್ಥಿತವಾಗಿದ್ದರೆ ಭದ್ರ ಯೋಗವೆಂದು ಹೇಳಲಾಗುತ್ತದೆ. ಈ ಯೋಗವುಳ್ಳವರು ಬುದ್ಧಿ, ಚತುರತೆ ಮತ್ತು ಉತ್ತಮ ವಾಕ್ಚಾತುರ್ಯವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಬರವಣಿಗೆ (Writing), ಗಣಿತ ಮ್ತತು ವ್ಯಾಪರಗಳಂಥಹ ಕ್ಷೇತ್ರದಲ್ಲಿ ಹೆಚ್ಚಿನ ಸಫಲತೆಯನ್ನು ಪಡೆಯುತ್ತಾರೆ. ವಿಷಯವನ್ನು ಚೆನ್ನಾಗಿ ವಿಶ್ಲೇಷಣೆ ಮಾಡುವ ಕಲೆ ಇವರಿಗೆ ಚೆನ್ನಾಗಿ ತಿಳಿದಿರುತ್ತದೆ.
ಇದನ್ನು ಓದಿ: ದುಡ್ಡು ಮಾಡೋದಷ್ಟೇ ಈ ರಾಶಿಯವರ ಟಾರ್ಗೆಟ್, ಧನಯೋಗ ಯಾರಿಗಿದೆ?
ಗುರು (Jupiter) ಗ್ರಹದ ಹಂಸ ಯೋಗ
ಜಾತಕದಲ್ಲಿ ಗುರು ಗ್ರಹವು ಧನು ರಾಶಿಯ ಲಗ್ನದಲ್ಲಿ ಅಥವಾ ಮೀನ ರಾಶಿಯಲ್ಲಿ ಎಲ್ಲಾದರೂ ಸ್ಥಿತವಾಗಿದ್ದರೆ ಈ ಯೋಗ ಉಂಟಾಗುತ್ತದೆ. ಯಾವ್ಯಾವ ಸಮಯದಲ್ಲಿ ಗುರು ಗ್ರಹವು ಉಚ್ಛ ಸ್ಥಿತಿಯಲ್ಲಿ, ಮೂಲ ತ್ರಿಕೋನದಲ್ಲಿ ತನ್ನದೇ ಸ್ಥಾನದಲ್ಲಿ ಅಥವಾ ಕೇಂದ್ರ ಸ್ಥಾನದಲ್ಲಿ ಸ್ಥಿತವಾಗಿದ್ದರೆ ಈ ಯೋಗ ಉಂಟಾಗುತ್ತದೆ. ಈ ಯೋಗವುಳ್ಳ ಜಾತಕದವರು ಸುಖ, ಸಮೃದ್ಧಿ ಮತ್ತು ಅಧ್ಯಾತ್ಮಿಕ ಶಕ್ತಿಯಿಂದ ಜಗತ್ತನ್ನೇ ಆಳುವ ಸಾಮರ್ಥ್ಯವನ್ನು (Capacity) ಹೊಂದುತ್ತಾರೆ.
ಶುಕ್ರ (Venus) ಗ್ರಹದ ಮಾಲವ್ಯ ಯೋಗ
ಶುಕ್ರ ಗ್ರಹವು ಚಂದ್ರನಿಂದ ಅಥವಾ ಲಗ್ನದಿಂದ 1, 4, 7 ಅಥವಾ 10ನೇ ಮನೆಯಲ್ಲಿ ವೃಷಭ (Taurus), ತುಲಾ (Libra) ಮತ್ತು ಮೀನ (Pisces) ರಾಶಿಯಲ್ಲಿ ಸ್ಥಿತವಾಗಿದ್ದರೆ ಜಾತಕದಲ್ಲಿ ಮಾಲವ್ಯ ಯೋಗ ಉಂಟಾಗುತ್ತದೆ. ಈ ವ್ಯಕ್ತಿಗಳು ಕಾವ್ಯ, ಗೀತೆ, ಸಂಗೀತ ಮತ್ತು ಕಲೆಯ ಕ್ಷೇತ್ರದಲ್ಲಿ ಹೆಚ್ಚಿನ ಸಫಲತೆಯನ್ನು ಕಾಣುತ್ತಾರೆ.
ಇದನ್ನು ಓದಿ: ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಿದರೆ ಸಿಗುತ್ತೆ ಆಶೀರ್ವಾದ!
ಶನಿ (Saturn) ಗ್ರಹದ ಶಶ ಯೋಗ
ಶನಿ ಗ್ರಹವು ಚಂದ್ರನಿಂದ ಅಥವಾ ಲಗ್ನದಿಂದ 1, 4, 7 ಅಥವಾ 10ನೇ ಮನೆಯಲ್ಲಿ ತುಲಾ ಅಥವಾ ಕುಂಭ ರಾಶಿಯಲ್ಲಿ ಸ್ಥಿತವಾಗಿದ್ದರೆ ಜಾತಕದಲ್ಲಿ ಶಶ ಯೋಗ ಉಂಟಾಗುತ್ತದೆ. ಈ ಯೋಗವುಳ್ಳವರು ನ್ಯಾಯ (Justice) ಪ್ರಿಯರಾಗಿರುತ್ತಾರೆ. ದೀರ್ಘಾಯಸ್ಸನ್ನು ಹೊಂದುತ್ತಾರೆ. ಯಾವುದೇ ಕ್ಷೇತ್ರದಲ್ಲಾದರೂ ಯಶಸ್ಸನ್ನು ಪಡೆಯುತ್ತಾರೆ.