ಈ Zodiac Signs ಜನ ಭರವಸೆ ಈಡೇರಿಸ್ತಾರೆ ಅನ್ನೋ ನಿರೀಕ್ಷೆ ಬಿಟ್ಬಿಡಿ

By Suvarna NewsFirst Published Nov 21, 2022, 10:38 AM IST
Highlights

ಈ ರಾಶಿಗಳ ಜನರ ತಾವು ಯಾರಿಗಾದರೂ ನೀಡಿರುವ ಭರವಸೆ ಈಡೇರಿಸಲು ವಿಫಲರಾಗುತ್ತಾರೆ. ಒಬ್ಬೊಬ್ಬರದು ಒಂದೊಂದು ಉದ್ದೇಶ. ಒಟ್ಟಿನಲ್ಲಿ ಈ ಗುಣ ಅವರಲ್ಲಿ ಜನ್ಮಜಾತವಾಗಿ ಬಂದಿರುತ್ತದೆ. ಹೀಗಾಗಿ, ಇವರಿಂದ ನೀವೇನಾದರೂ ಪ್ರಾಮಿಸ್ ಪಡೆದಿದ್ದರೆ ಅವು ನೆರವೇರುತ್ತವೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳದಿರುವುದೇ ಒಳ್ಳೆಯದು.
 

ಒಂದಲ್ಲ ಒಂದು ಬಾರಿ ಯಾರಿಗಾದರೂ ಏನಾದರೂ ಪ್ರಾಮಿಸ್ ಮಾಡುತ್ತೇವೆ. ಮಕ್ಕಳಿಗಾದರೆ, “ಇದನ್ನ ತಂದುಕೊಡುತ್ತೇನೆ, ಅದು ತರುತ್ತೇನೆ’ ಎಂದೋ, ದೊಡ್ಡವರಿಗಾದರೆ “ಇಷ್ಟೊತ್ತಿಗೆ ಫೋನ್ ಮಾಡುತ್ತೇನೆ’ ಎಂದೋ, “ಜತೆಯಾಗಿ ಸೇರಿ ಎಲ್ಲಾದರೂ ಹೋಗೋಣ’ ಎಂದೋ ಪ್ರಾಮಿಸ್ ಮಾಡಿರುತ್ತೇವೆ. ಕೆಲವೊಮ್ಮೆ ಮಾತಿನ ಭರದಲ್ಲಿ ಯಾವುದೋ ಭರವಸೆ ನೀಡಿರಬಹುದು ಅಥವಾ ಆ ಸಮಯಕ್ಕೆ ಕೆಲಸ ಮಾಡಿಸಿಕೊಳ್ಳಲು ಏನೋ ಹೇಳಿರಬಹುದು. ಕಾರಣ ಏನೇ ಇರಲಿ, ಅವುಗಳನ್ನು ಈಡೇರಿಸಲು, ಹೇಳಿದಂತೆ ನಡೆದುಕೊಳ್ಳಲು ಸಾಮಾನ್ಯವಾಗಿ ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ, ಹೇಳಿದಂತೆ ನಡೆದುಕೊಳ್ಳುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಕೆಲವು ಜನ ತಮ್ಮ ಪ್ರಾಮಿಸ್ ಈಡೇರಿಸಲು ಪದೇ ಪದೆ ಸೋಲುತ್ತಾರೆ. ಮಾತಿನಂತೆ ನಡೆದುಕೊಳ್ಳಲು ಕಷ್ಟಪಡುತ್ತಾರೆ. ಇದೂ ಸಹ ಕೆಲವು ರಾಶಿಗಳನ್ನು ಅವಲಂಬಿಸಿದೆ. ಈ ರಾಶಿಗಳಿಗೆ ಸೇರಿದ ಜನ ತಮ್ಮ ಕುಟುಂಬ, ಸ್ನೇಹಿತರು ಯಾರಿಗಾದರೂ ಭರವಸೆ ನೀಡಿದರೆ ಅದನ್ನು ಈಡೇರಿಸಿಬಿಡುತ್ತಾರೆ ಎಂದು ಅಂದುಕೊಳ್ಳುವಂತಿಲ್ಲ. ಹಾಗೆಂದು ಅವರು ಎಲ್ಲ ಬಾರಿಯೂ ಉದ್ದೇಶಪೂರ್ವಕವಾಗಿ ಮಾತಿಗೆ ತಪ್ಪುತ್ತಾರೆ ಎಂದಲ್ಲ. ಈ ಗುಣ ಅವರಿಗೆ ಜನ್ಮಜಾತವಾಗಿ ಬಂದಿರುತ್ತದೆ ಅಷ್ಟೇ. ಆ ರಾಶಿಗಳು ಯಾವುವು ಎಂದು ನೋಡಿಕೊಳ್ಳಿ.

·        ಮಕರ (Capricorn)
ಮಕರ ರಾಶಿಯ (Zodiac Sign) ಜನ ಹೆಚ್ಚು ಸ್ವಾರ್ಥಿಗಳಾಗಿರುತ್ತಾರೆ. ಇವರು ಕೆಲವೊಮ್ಮೆ ಸುಳ್ಳೇ ಸುಳ್ಳು ಪ್ರಾಮಿಸ್ (Promise) ಮಾಡಿಬಿಡುತ್ತಾರೆ. ಇವರು ನಿಮ್ಮಿಂದ ಏನಾದರೂ ಕೆಲಸವಾಗಬೇಕು ಎಂದಾದರೆ ಅತ್ಯಂತ ಸಿಹಿಯಾಗಿ ಮಾತನಾಡುತ್ತಾರೆ. ತಮ್ಮ ಉದ್ದೇಶ (Intention) ಈಡೇರಿದ ಬಳಿಕ, ತಾವು ನೀಡಿದ ಭರವಸೆಗಳನ್ನು ಮರೆತುಬಿಡುತ್ತಾರೆ.

Zodiac Sign: ಈ ರಾಶಿಗಳ ಜನರಿಗೆ ಸಂಬಂಧ ಬಹುಬೇಗ ಬೋರೆನಿಸುತ್ತೆ

·        ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನ ಭಾವನಾತ್ಮಕವಾಗಿರುತ್ತಾರೆ (Emotion) ಹಾಗೂ ಸೂಕ್ಷ್ಮತೆ (Sensitive) ಹೊಂದಿರುತ್ತಾರೆ. ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ (Helping Nature) ಇವರಲ್ಲಿರುತ್ತದೆ. ಈ ಸ್ವಭಾವದಿಂದಾಗಿ ಅವರು ಮತ್ತೊಬ್ಬರ ನೆರವಿಗೆ ಧಾವಿಸುತ್ತಾರೆ. ಅಥವಾ ಇನ್ನೊಬ್ಬರ ಕೆಲಸದಲ್ಲಿ ನಿರತರಾಗುತ್ತಾರೆ. ಈ ಸಂದರ್ಭದಲ್ಲಿ ತಾವು ಯಾರಿಗಾದರೂ ನೀಡಿರುವ ಭರವಸೆಯನ್ನು ಈಡೇರಿಸುವಲ್ಲಿ (Fulfil) ಸೋಲುತ್ತಾರೆ. ಹೀಗಾಗಿ, ಸಂಬಂಧದಲ್ಲಿ (Relationship) ಅಪನಂಬಿಕೆಗೆ ಪಾತ್ರರಾಗುತ್ತಾರೆ.

·        ತುಲಾ (Libra)
ಜನರನ್ನು ಸಂಪ್ರೀತಿಗೊಳಿಸಲು (People Pleaser) ಯತ್ನಿಸುವ ತುಲಾ ರಾಶಿಯ ಜನ, ಇತರರನ್ನು ಯಾವತ್ತೂ ನಿರಾಸೆಗೊಳಿಸಲು (Disappoint) ಬಯಸುವುದಿಲ್ಲ. ಹೀಗಾಗಿ, ಆ ಸಮಯದಲ್ಲಿ ಇನ್ನೊಬ್ಬರನ್ನು ಖುಷಿಯಾಗಿಡಲು ಸುಲಭವಾಗಿ ಭರವಸೆ ನೀಡುತ್ತಾರೆ. ಮಾತು ಕೊಡುವ ಸಮಯದಲ್ಲಿ ಹೆಚ್ಚು ಯೋಚನೆ ಮಾಡುವುದಿಲ್ಲ, ಏಕೆಂದರೆ, ಇವರು ತಮ್ಮ ಮಾತುಗಳ ಬಗ್ಗೆ ಹೆಚ್ಚು ಬದ್ಧತೆ (Commit) ಹೊಂದಿರುವುದಿಲ್ಲ. ತಮ್ಮ ಅತ್ಯಂತ ಪ್ರೀತಿಪಾತ್ರರಿಗೂ ಖಚಿತವಲ್ಲದ ಅಥವಾ ಗೊಂದಲದ ಭರಸವೆ ನೀಡುವುದು ಇವರ ಗುಣ. ಹೀಗಾಗಿ, ಬಹಳ ಸುಲಭವಾಗಿ ಮೋಸಗಾರರು (Cheater) ಎನಿಸಿಕೊಳ್ಳುತ್ತಾರೆ.

Zodiac Sign: ಈ ರಾಶಿಗಳ ಜನರಿಗೆ ಸಂಬಂಧ ಬಹುಬೇಗ ಬೋರೆನಿಸುತ್ತೆ

·        ಮೇಷ (Aries)
ಈ ರಾಶಿಯಲ್ಲಿ ಜನಿಸಿದ ಜನರಿಗೆ ಮಾತಿಗೆ ತಪ್ಪುವುದೆಂದರೆ ಆಗುವುದಿಲ್ಲ. ಆದರೆ, ಇವರು ತಮ್ಮ ಬಗ್ಗೆ ಮಾತ್ರ ಅತಿಯಾಗಿ ಫೋಕಸ್ (Focus) ಮಾಡುತ್ತಾರೆ. ತಮ್ಮ ಕೆಲಸವಾಗಲು ಬಹಳ ಬೇಗ ಏನಾದರೂ ಭರವಸೆ ನೀಡುತ್ತಾರೆ. ಹಾಗೆಯೇ, ನೀವೇನಾದರೂ ಭರವಸೆ ನೀಡಿದ್ದರೆ ಅದನ್ನು ನೆನಪಿಸಿಯಾದರೂ ಈಡೇರಿಸಿಕೊಳ್ಳುತ್ತಾರೆ. ತಮ್ಮ ಒಳಿತಿಗಾಗಿ ಇವರು ಇತರರಿಗೆ ಏನಾದರೂ ಪ್ರಾಮಿಸ್ ಮಾಡುತ್ತಾರೆ. ಆದರೆ, ಮತ್ತೆ ತಮ್ಮದೇ ಕೆಲಸಕ್ಕಾಗಿ, ಸ್ವಾರ್ಥಕ್ಕಾಗಿ (Selfish) ಭರವಸೆಯನ್ನು ಈಡೇರಿಸಲು ಬದ್ಧತೆ ತೋರುವುದಿಲ್ಲ.

·        ಧನು (Sagittarius)
ಧನು ರಾಶಿಯ ಜನ ಸುಗಮವಾದ (Flow) ಜೀವನ ಸಾಗಿಸಲು ಇಷ್ಟಪಡುತ್ತಾರೆ. ಈ ಹರಿವಿನಲ್ಲಿ ಅವರು ಇತರರಿಗೆ ಭರವಸೆ ನೀಡುತ್ತಾರೆ. ಇವರ ಉದ್ದೇಶದಲ್ಲಿ ಖಂಡಿತವಾಗಿ ತಪ್ಪು (Bad) ಇರುವುದಿಲ್ಲ. ದುರುದ್ದೇಶಪೂರ್ಣ ನಿಲುವೂ ಇರುವುದಿಲ್ಲ. ತಮ್ಮ ಮಾತುಗಳಿಗೆ ಬದ್ಧವಾಗಲು ಇಷ್ಟಪಡುತ್ತಾರೆ. ಆದರೆ, ವಿವಿಧ ಕಾರ್ಯಗಳನ್ನು ಏಕಕಾಲದಲ್ಲಿ ಮಾಡಲು ಯತ್ನಿಸುವ ಗುಣದಿಂದಾಗಿ ತಮ್ಮ ಮಾತನ್ನು ಈಡೇರಿಸಲು ಸೋಲುತ್ತಾರೆ. ತಮ್ಮದೇ ಕಷ್ಟದಲ್ಲಿ ಮುಳುಗುತ್ತಾರೆ. 

click me!