Zodiac Sign: ಪ್ರಾಮಾಣಿಕವಾಗಿ ಭಾವನೆ ಹಂಚ್ಕೊಳೋಕೆ ಸೋಲ್ತಾರೆ ಈ ಜನ

By Suvarna News  |  First Published Mar 29, 2023, 4:57 PM IST

ಪ್ರಾಮಾಣಿಕವಾಗಿ ಭಾವನೆಗಳನ್ನು ವ್ಯಕ್ತಪಡಿಸುವುದು ತಮ್ಮ ಜವಾಬ್ದಾರಿ ಎಂದು ಕೆಲವು ಜನ ಭಾವಿಸಿದರೆ, ಕೆಲವರು ಅದನ್ನೊಂದು ದೌರ್ಬಲ್ಯ ಎಂದು ಹಿಂದೇಟು ಹಾಕುತ್ತಾರೆ. ಯಾರನ್ನೂ ನೋಯಿಸಲು ಇಷ್ಟಪಡದ ಹಲವು ಮಂದಿ ಮುಕ್ತವಾಗಿ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಸೋಲುತ್ತಾರೆ. ಅಂತಹ ಕೆಲವು ರಾಶಿಗಳು ಇವು.
 


ಪ್ರಾಮಾಣಿಕ ವ್ಯಕ್ತಿಗಳು ನೈತಿಕವಾಗಿ ಭಾರೀ ಸದೃಢರಾಗಿರುತ್ತಾರೆ. ಪ್ರಾಮಾಣಿಕತೆಯ ಮೌಲ್ಯವನ್ನು ತಮ್ಮ ಜೀವಿತವಿಡೀ ಕಾಪಾಡಿಕೊಂಡು ಬರುವವರಿದ್ದಾರೆ. ಅವರಲ್ಲಿ ಪ್ರಾಮಾಣಿಕತೆ ಎನ್ನುವುದು ಮೈಗೂಡಿರುತ್ತದೆ. ಸಂಬಂಧಗಳು ಚೆನ್ನಾಗಿರಲು ಸಹ ಭಾವನೆಗಳು ಪ್ರಾಮಾಣಿಕವಾಗಿರಬೇಕು. ಕೆಲವು ಜನ ಭಾವನಾತ್ಮಕವಾಗಿ ಮುಕ್ತವಾದ ನಿಲುವನ್ನು ಹೊಂದಿರುವುದು ಹಾಗೂ ಅದನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವುದು ಕಂಡುಬರುತ್ತದೆ. ಪ್ರಾಮಾಣಿಕವಾಗಿ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಅವರಲ್ಲಿ ಯಾವ ಮುಜುಗರವೂ ಇರುವುದಿಲ್ಲ. ಹಾಗೂ ಇಂಥದ್ದೊಂದು ಮುಕ್ತತೆ ಸಂಬಂಧ ಚೆನ್ನಾಗಿರಲು ಅತ್ಯಗತ್ಯ ಎಂದು ಅವರು ನಂಬುತ್ತಾರೆ. ಆದರೆ, ಕೆಲ ಜನ ಮಾತ್ರ ಪ್ರಾಮಾಣಿಕವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಿಂದೇಟು ಹಾಕುತ್ತಾರೆ. ಪ್ರಾಮಾಣಿಕವಾಗಿರುವುದರಿಂದ ಅವರಲ್ಲಿ ಏನೋ ಒಂದು ರೀತಿಯ ಮುಜುಗರ ಇರುತ್ತದೆ. ಜನ ಏನಂದುಕೊಳ್ಳುತ್ತಾರೋ ಎನ್ನುವ ಭಯ ಇರುತ್ತದೆ. ಇಂತಹ ವ್ಯಕ್ತಿಗಳು ತಮ್ಮ ಭಾವನೆಗಳನ್ನು ನೇರವಾಗಿ, ಮುಕ್ತವಾಗಿ ವ್ಯಕ್ತಪಡಿಸುವುದು ದೌರ್ಬಲ್ಯ ಎಂದು ತಿಳಿಯುತ್ತಾರೆ. ಪ್ರೀತಿಪಾತ್ರರು ತಮ್ಮನ್ನು ತಿರಸ್ಕರಿಸಿದರೆ ಎನ್ನುವ ಭಯ ಅವರಲ್ಲಿರುತ್ತದೆ. ಹಾಗೂ ಕೆಲವರು ಮತ್ತೊಬ್ಬರಿಗೆ ನೋವಾಗಬಾರದು ಎಂದು ನೇರವಾಗಿ ಹೇಳಲು ಹಿಂಜರಿಯುತ್ತಾರೆ. ಒಟ್ಟಿನಲ್ಲಿ ಇಂತಹ ಗುಣ ಹಲವು ರಾಶಿಗಳಲ್ಲಿ ಕಂಡುಬರುತ್ತದೆ. 

•    ಮಿಥುನ (Gemini)
ಮಿಥುನ ರಾಶಿಯ ಜನ ಪ್ರಾಮಾಣಿಕರು (Honest), ವಿಶ್ವಸನೀಯ (Reliable) ಗುಣವುಳ್ಳವರು. ಬದ್ಧತೆಯುಳ್ಳ ಪ್ರಾಮಾಣಿಕವಾದ ಭಾವನೆಗಳು ಇವರಲ್ಲಿರುತ್ತವೆ. ಆದರೆ, ಇವರು ಹೆಚ್ಚು ಆವೇದನೆ (Impulsive) ಉಳ್ಳವರು, ಹಠಾತ್ತಾಗಿ ವರ್ತಿಸುವ (Spontaneous) ಸ್ವಭಾವ ಹೊಂದಿರುವವರು. ಹೀಗಾಗಿ, ಪ್ರಾಮಾಣಿಕವಾಗಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಸಾಕಷ್ಟು ಬಾರಿ ಸೋಲುತ್ತಾರೆ. ಉದ್ದೇಶಪೂರ್ವಕವಾಗಿ ತಮ್ಮ ಭಾವನೆಗಳನ್ನು ಅಡಗಿಸುವುದಿಲ್ಲ. ಆದರೆ, ಇವರ ಗಮನ ಸುಲಭವಾಗಿ ಬೇರೆಯದರತ್ತ ಹರಿಯುವುದರಿಂದ ಹಾಗೂ ಕಡಿಮೆ ಏಕಾಗ್ರತೆಯ (Lack of Attention) ಕಾರಣದಿಂದ ಇವರು, ಭಾವನಾತ್ಮಕವಾಗಿ (Emotionally) ಮಾತನಾಡುವುದಕ್ಕಿಂತ ತರ್ಕಬದ್ಧವಾಗಿ (Logically) ಮಾತನಾಡುವುದು ಹೆಚ್ಚು. ಇವರು ಸಂಘರ್ಷಗಳನ್ನು (Conflicts) ಇಷ್ಟಪಡುವುದಿಲ್ಲ. ಎಲ್ಲವೂ ಸೌಹಾರ್ದತೆಯಿಂದ ಸಾಗಬೇಕು ಎನ್ನುವ ಭಾವನೆ ಹೊಂದಿರುತ್ತಾರೆ. ಸಂಘರ್ಷ, ಕಿರಿಕಿರಿಯ ಸನ್ನಿವೇಶಗಳನ್ನು ಅವಾಯ್ಡ್ ಮಾಡಲು ತಮ್ಮ ಭಾವನೆಗಳನ್ನು ಮುಚ್ಚಿಡಬಹುದು. ಇದರಿಂದಾಗಿ, ಇವರು ಯಾರಲ್ಲೂ ನಂಬಿಕೆ ಹೊಂದಿಲ್ಲದ ವ್ಯಕ್ತಿಯಂತೆ ಗೋಚರಿಸಬಹುದು.

Tap to resize

Latest Videos

ಈ ಐದು ರಾಶಿಯವರ ಲವ್ ತುಂಬಾ ಸ್ಟ್ರಾಂಗ್.., ನೀವು ಇವರಲ್ಲಿ ಒಬ್ಬರಾ ?

•    ಕರ್ಕಾಟಕ (Cancer)
ಕರ್ಕಾಟಕ ರಾಶಿಯ ಜನ ಗಾಢವಾಗಿ ಪ್ರೀತಿ (Love) ಬಯಸುತ್ತಾರೆ ಹಾಗೂ ಯಾರನ್ನೂ ನೋಯಿಸಲು (Hurt) ಬಯಸುವುದಿಲ್ಲ. ಸುರಕ್ಷಿತವಾದ ಪ್ರೀತಿಯಲ್ಲಿರಲು ಇಷ್ಟಪಡುವ ಇವರು, ಜಂಟಿ ಯಶಸ್ಸಿಗೆ ಸಾಕಷ್ಟು ಪ್ರಯತ್ನಿಸುವ ಧೋರಣೆ ಹೊಂದಿರುತ್ತಾರೆ. ಹೀಗಾಗಿ, ಯಾರನ್ನೂ ಬೇಸರ ಪಡಿಸದ, ಯಾರಿಗೂ ನೋವುಂಟು ಮಾಡದ, ಯಾರಿಗೂ ಹೊರೆಯಾಗದಂತೆ (Burden) ಇರಲು ಯತ್ನಿಸುತ್ತಾರೆ. ಯಾವತ್ತೂ ಹಗುರವಾದ ಮನಸ್ಥಿತಿಯಲ್ಲಿರಲು ಇಷ್ಟಪಡುತ್ತಾರೆ. ಜತೆಗಿರುವವರಿಗೆ ತಮಗಿಂತ ಹೆಚ್ಚು ಆದ್ಯತೆ ನೀಡುವ ಮೂಲಕ ಅವರನ್ನು ಸಂತಸಪಡಿಸಲು ನೋಡುತ್ತಾರೆ. ಹೀಗಾಗಿ, ಪ್ರಾಮಾಣಿಕ ಭಾವನೆಗಳನ್ನು (True Feelings) ವ್ಯಕ್ತಪಡಿಸಲು ಹಿಂದೇಟು ಹಾಕುತ್ತಾರೆ. ಇತರರಿಂದ ತಮ್ಮ ಬದುಕನ್ನು ಮುಚ್ಚಿಡುವುದು ಇವರ ಸ್ವಭಾವ.

•    ಕನ್ಯಾ (Virgo)
ಕನ್ಯಾ ರಾಶಿಯ ಜನ ಯಾವತ್ತೂ ಅರ್ಥಪೂರ್ಣವಾಗಿರುತ್ತಾರೆ. ಯಾರಿಗೂ ಮೋಸ ಮಾಡುವುದಿಲ್ಲ. ಭಾವುಕತೆಗಿಂತ ಹೆಚ್ಚಾಗಿ ತರ್ಕಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ. ಮಾತುಕತೆ (Conversation) ಹೆಚ್ಚು ಆಕರ್ಷಕವಾಗಿರಲು ತಂತ್ರಗಳನ್ನು ಬಳಸುತ್ತಾರೆ. ತಮ್ಮ ಹೃದಯ ಒಂದು ವಿಚಾರವನ್ನು ಸರಿ ಎಂದು ಹೇಳುತ್ತಿದ್ದರೂ ಅದನ್ನು ಇಗ್ನೋರ್ ಮಾಡಿ ಜವಾಬ್ದಾರಿಯುತವಾಗಿ ವರ್ತನೆ ಮಾಡಲು ಯತ್ನಿಸುತ್ತಾರೆ ಹಾಗೂ ಬುದ್ಧಿವಂತಿಕೆಯಿಂದ (Intelligently) ಉತ್ತರಿಸುತ್ತಾರೆ. ಈ ಮೂಲಕ ತಮ್ಮ ಸ್ಥಾನದ ಗೌರವ ಉಳಿಸಿದೆ ಎಂದುಕೊಳ್ಳುತ್ತಾರೆ. ಆದರೆ, ತನ್ಮೂಲಕ ಒಂಟಿಯಾಗುತ್ತ ಹೋಗುತ್ತಾರೆ. 

ಶನಿಯ ನಕ್ಷತ್ರ ಗೋಚಾರದಿಂದ 6 ರಾಶಿಗಳಿಗೆ 7 ತಿಂಗಳು ಲಾಭ

•    ವೃಶ್ಚಿಕ (Scorpio)
ಈ ರಾಶಿಯ ಜನ ಸೂಕ್ಷ್ಮಮತಿಗಳು. ತಮ್ಮ ಸುತ್ತಲಿನ ಜನರ ಬಗ್ಗೆ ಧನಾತ್ಮಕವಾಗಿ (Positive) ಯೋಚಿಸುತ್ತಾರೆ. ಸೌಹಾರ್ದತೆ, ಶಿಸ್ತು, ನೈಜತೆ, ನೈತಿಕ ಬಲ ಎಲ್ಲ ಗುಣವನ್ನೂ ಹೊಂದಿರುತ್ತಾರೆ. ಇವರು ಸುಳ್ಳು (Lie) ಹೇಳುವುದನ್ನು ಸಹಿಸಲಾರರು. ಕದಿಯುವುದು, ಅಪ್ರಾಮಾಣಿಕತೆಯನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಆದರೆ, ವ್ಯಕ್ತಿಗಳ ಮಾನಸಿಕ ನಿಲುವು, ಅವರ ಭಾವನೆಗಳ ನೈಜತೆಯ ಬಗ್ಗೆ ಗಮನಕ್ಕೆ ಬಂದರೂ ಅದನ್ನು ಮುಕ್ತವಾಗಿ (Open) ಹೇಳುವುದಿಲ್ಲ. ಇತರರನ್ನು ನೋಯಿಸಲು ಇಷ್ಟಪಡುವುದಿಲ್ಲ. 
 

click me!