Negative Stress: ಋಣಾತ್ಮಕ ಒತ್ತಡಕ್ಕೂ, ಇವರಿಗೂ ಭಾರೀ ನಂಟು!

By Suvarna News  |  First Published Oct 17, 2022, 3:17 PM IST

ಕೆಲವು ಜನ ಅತಿಯಾಗಿ ಒತ್ತಡ ಮಾಡಿಕೊಳ್ಳುತ್ತಾರೆ. ಚಿಕ್ಕಪುಟ್ಟದಕ್ಕೆಲ್ಲ ಒತ್ತಡ ಮಾಡಿಕೊಂಡು ಇನ್ನೊಬ್ಬರಿಗೂ ಹಿಂಸೆ ನೀಡುತ್ತಾರೆ. ಇವರದ್ದು ಋಣಾತ್ಮಕ ಒತ್ತಡ. ಈ ಗುಣ ಕೆಲವು ರಾಶಿಯ ಜನರಲ್ಲಿ ಸಹಜವಾಗಿ ಇರುತ್ತದೆ. 
 


ಒಂದು ಒತ್ತಡದ ಸನ್ನಿವೇಶ, ಇಬ್ಬರು ವ್ಯಕ್ತಿಗಳಿದ್ದರೆ, ಇಬ್ಬರೂ ಬೇರೆ ಬೇರೆಯದೇ ರೀತಿಯಲ್ಲಿ ಸ್ಪಂದಿಸುತ್ತಾರೆ. ಒಬ್ಬರು ಧನಾತ್ಮಕವಾಗಿ ತೆಗೆದುಕೊಂಡರೆ ಇನ್ನೊಬ್ಬರು ಕುಸಿದುಹೋಗಬಹುದು. ಯಾವುದೇ ಘಟನೆಯನ್ನಾದರೂ ನೋಡುವ ದೃಷ್ಟಿಕೋನ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ನೀವು ನೋಡಿರಬಹುದು, ಕೆಲವರು ಅತಿಯಾಗಿ ಚಿಂತಿಸುತ್ತಾರೆ. ಹಿಂದಿನ ನೋವಿನ ಘಟನೆಗಳನ್ನು ಪದೇ ಪದೆ ನೆನಪಿಸಿಕೊಂಡು ಬೇಯುತ್ತಾರೆ. ಭವಿಷ್ಯದ ಬಗ್ಗೆ ಸುಖಾಸುಮ್ಮನೆ ಆತಂಕ ಪಡುತ್ತಾರೆ. ವಾಸ್ತವದ ಪರಿಸ್ಥಿತಿಯಲ್ಲಿ ಋಣಾತ್ಮಕ ಒತ್ತಡ ಅನುಭವಿಸುತ್ತಾರೆ. ಒತ್ತಡದಲ್ಲೂ ಎರಡು ವಿಧ. ಋಣಾತ್ಮಕ ಒತ್ತಡ ಹಾಗೂ ಇನ್ನೊಂದು ಧನಾತ್ಮಕ ಒತ್ತಡ. ಧನಾತ್ಮಕ ಒತ್ತಡ ಎಲ್ಲೆಡೆಯೂ ಇರುವಂಥದ್ದು, ಯಾವುದೇ ಕೆಲಸ, ಜವಾಬ್ದಾರಿಗಳಲ್ಲಿ ಇದು ಇದ್ದೇ ಇರುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ನಮ್ಮ ಮಾನಸಿಕ ಸ್ಪಂದನೆ ಹೇಗಿರುತ್ತದೆ ಎನ್ನುವುದು ಮುಖ್ಯ. ಮೊದಲೇ ಹೇಳಿದಂತೆ ಕೆಲವರು ಸುಲಭವಾಗಿ ಸೋತುಹೋದರೆ, ಕೆಲವರು ಧನಾತ್ಮಕವಾಗಿ ಜೀವನವನ್ನು ಎದುರಿಸಿ ಗೆಲ್ಲುತ್ತಾರೆ. ಒತ್ತಡವನ್ನೂ ತಮ್ಮ ಸಾಧನೆಗೆ ಅನುಕೂಲವಾಗುವಂತೆ ನೋಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳ ಜನ ಅನಾರೋಗ್ಯಕರ ನೆಗೆಟಿವ್‌ ಒತ್ತಡಕ್ಕೆ ಸುಲಭವಾಗಿ ಬಲಿಯಾಗುತ್ತಾರೆ. ಆ ರಾಶಿಗಳು ಯಾವುವು ಎಂದು ನೋಡಿಕೊಳ್ಳಿ.

•    ಮೀನ (Pisces)
ಮೀನ ರಾಶಿಯವರು ಯಾವಾಗಲೂ ಗಡಿಬಿಡಿ (Hurry)ಯಲ್ಲಿರುತ್ತಾರೆ. ಕ್ರಿಯಾಶೀಲ(Creative)ರಾಗಿರುವುದರಿಂದ ಕೌಶಲದ (Skills) ಬಳಕೆ ಮಾಡುತ್ತಿರುತ್ತಾರೆ. ಹೀಗಾಗಿ, ಇವರ ಕಾರ್ಟಿಸೋಲ್‌ ಹಾರ್ಮೋನ್‌ (Cortisol Hormone) ಮಟ್ಟ ಯಾವತ್ತೂ ಮೇಲ್ಮಟ್ಟದಲ್ಲಿಯೇ ಇರುತ್ತದೆ. ಅತ್ಯಂತ ಕಲ್ಪನಾಶೀಲ (Imaginative) ಜನರಾಗಿರುವುದರಿಂದ ಕೆಟ್ಟ ಅಥವಾ ಸುಳ್ಳಿನ ಸನ್ನಿವೇಶವನ್ನು ಯಾವುದೇ ರೀತಿಯಲ್ಲಿ ಯೋಚಿಸುತ್ತಾರೆ. ಇವರ ಈ ಸ್ವಭಾವ ನೆಗೆಟಿವ್‌ ಒತ್ತಡವನ್ನು (Negative Stress) ಹೆಚ್ಚಿಸುತ್ತದೆ.

Latest Videos

undefined

Shani Margi 2022: ಅಂತೂ ಬದುಕು ಟ್ರ್ಯಾಕ್‌ಗೆ ಬಂತು! ಈ ಐದು ರಾಶಿಗಳಿನ್ನು ನಿರಾಳರಾಗಬಹುದು..

•    ಕುಂಭ (Aquarius)
ಚಿಕ್ಕಪುಟ್ಟ (Small) ವಿಚಾರಕ್ಕೂ ತಲೆಕೆಡಿಸಿಕೊಳ್ಳುವ ಗುಣ ಕುಂಭ ರಾಶಿಯವರದ್ದು. ಹೀಗಾಗಿ, ಪ್ರತಿದಿನ ಏನಾದರೊಂದು ಚಿಂತೆ ಮಾಡುತ್ತಲೇ ಇರುತ್ತಾರೆ. ಭವಿಷ್ಯದ (Future) ಬಗ್ಗೆ ಅತಿಯಾಗಿ ಯೋಚಿಸುತ್ತಾರೆ. ತಮ್ಮ ಕೈಮೀರಿದ ವಿಚಾರಗಳ ಬಗ್ಗೆಯೂ ಅತಿಯಾಗಿ ಯೋಚಿಸುತ್ತಾರೆ. ಇದೇ ಇವರ ಋಣಾತ್ಮಕ ಒತ್ತಡಕ್ಕೆ ಕಾರಣವಾಗುತ್ತದೆ. ಹೆಚ್ಚು ಕೆಲಸ (Work) ಅಂಟಿಸಿಕೊಂಡು ಅದನ್ನು ಮುಂಚಿತವಾಗಿಯೇ ಮುಗಿಸಲು ಹೆಣಗಾಡುತ್ತಾರೆ. 

•    ಮೇಷ (Ares)
ಮೇಷ ರಾಶಿಯ ಜನರೊಂದಿಗೆ ಒತ್ತಡ ಜತೆಯಲ್ಲೇ ಇರುತ್ತದೆ ಅಂದರೆ ಇವರು ಎಷ್ಟರ ಮಟ್ಟಿಗೆ ಒತ್ತಡದಲ್ಲಿ ಇರುತ್ತಾರೆ ಎನ್ನುವುದು ಅರ್ಥವಾಗಬಹುದು. ಇವರ ಒತ್ತಡಕ್ಕೆ ಸರಿಯಾದ ಕಾರಣವೇ ಬೇಕಿಲ್ಲ. ಇನ್ನೊಬ್ಬರ ಯಾವುದೋ ಒಂದು ಮಾತಿಗೆ ಹತ್ತು ವಿಧದಲ್ಲಿ ಚಿಂತಿಸುತ್ತಾರೆ. ಇವರು ಸದೃಢರಾಗಿದ್ದರೂ (Strong) ಒಂದೇ ವಿಚಾರವನ್ನು ಅತಿಯಾಗಿ ಯೋಚಿಸಿ ಅದನ್ನು ಕ್ಲಿಷ್ಟಕರವನ್ನಾಗಿ ಮಾಡಿಕೊಳ್ಳುತ್ತಾರೆ. ಅತಿ ಸಾಮಾನ್ಯ ಕೆಲಸವೂ (Common Work) ಇವರಿಗೆ ಕೆಲವೊಮ್ಮೆ ಭಾರಿಯಾಗಿ ಕಾಣಿಸುತ್ತದೆ. ಚಿಕ್ಕ ವಿಚಾರಕ್ಕೂ ಭಾರೀ ಚಿಂತಿಸುತ್ತಾರೆ. ಈ ರಾಶಿಯ ಜನ ನಿರ್ಧಾರ (Decision) ಕೈಗೊಳ್ಳಲು ಅಸಮರ್ಥರಾಗಿರುತ್ತಾರೆ. ಪರಿಣಾಮವಾಗಿ, ಹೆಚ್ಚು ಒತ್ತಡಕ್ಕೆ ತುತ್ತಾಗುತ್ತಾರೆ. 

Mangal Gochar 2022: ಮೇಷ, ಮಿಥುನ ಸೇರಿ ಈ 4 ರಾಶಿಗಳಿಗೆ ಕಾದಿದೆ ತೊಂದರೆಗಳ ಸರಮಾಲೆ..

•    ಸಿಂಹ (Leo)
ಸಿಂಹ ರಾಶಿಯ ಜನ ಉನ್ನತ ಮಟ್ಟದ ಜೀವನ ಹೊಂದಿದ್ದರೂ ಋಣಾತ್ಮಕ ಒತ್ತಡ ಹೊಂದಿರುತ್ತಾರೆ. ಯಾವತ್ತೂ ಗಡಿಬಿಡಿಯಲ್ಲಿ ಇರುತ್ತಾರೆ. ತಮ್ಮ ಕಾರ್ಯ ಕ್ಷೇತ್ರದಲ್ಲಿ (Work) ಬದಲಾವಣೆ  ಸಹಿಸಿಕೊಳ್ಳುವುದಿಲ್ಲ. ತಾವು ಯೋಚಿಸಿದಂತೆಯೇ ಆಗಬೇಕು ಎನ್ನುವ ಇವರ ಹಠವೇ ಇವರಲ್ಲಿ ನೆಗೆಟಿವ್‌ ಒತ್ತಡವನ್ನು ಹೆಚ್ಚು ಮಾಡುತ್ತದೆ. ತಮ್ಮ ಯೋಜನೆಯಲ್ಲಿ ಸಣ್ಣ ಬದಲಾವಣೆಯಾದರೂ (Change) ಇವರ ಮೂಡು ಸಿಕ್ಕಾಪಟ್ಟೆ ಹಾಳಾಗುತ್ತದೆ. ಮನಸ್ಸು ಮುರಿದಂತೆ ವರ್ತಿಸುತ್ತಾರೆ. ಅಷ್ಟೇ ಅಲ್ಲ, ಏನು ಬೇಕಾದರೂ ಮಾತನಾಡಿ ಇನ್ನೊಬ್ಬರಿಗೂ ಬೇಸರ ಮಾಡುತ್ತಾರೆ. ಇವರು ತಮ್ಮ ಉದ್ಯೋಗ ಅಥವಾ ಉದ್ಯಮದಲ್ಲಿ, ವೃತ್ತಿಯಲ್ಲಿ (Career), ಗುರಿ (Goal) ಹಾಗೂ ಸಾಧನೆ ವಿಚಾರದಲ್ಲಿ ಯಾವತ್ತೂ ಕೇಂದ್ರಬಿಂದು (Centre Point) ವಾಗಿರಲು ಯತ್ನಿಸುತ್ತಾರೆ. ಅದು ಸಾಧ್ಯವಾಗದೆ ಇರುವ ಸಮಯದಲ್ಲಿ ತೀರ ಋಣಾತ್ಮಕ ಒತ್ತಡಕ್ಕೆ ಬೀಳುತ್ತಾರೆ. 

click me!