ಭಾನುವಾರದ ದಿನ ಈ ಸೂರ್ಯ ಮಂತ್ರಗಳನ್ನು ಪಠಿಸಿ, ಬಯಸಿದ್ದು ಗಳಿಸಿ

By Suvarna News  |  First Published Sep 18, 2022, 11:37 AM IST

ಭಾನುವಾರವನ್ನು ಸೂರ್ಯ ದೇವರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ, ಸೂರ್ಯನ ಕೆಲವು ಮಂತ್ರಗಳ ಪಠಣದಿಂದ ಆತ ವ್ಯಕ್ತಿಯ ಎಲ್ಲಾ ಆಸೆಗಳನ್ನು ಪೂರೈಸುತ್ತಾನೆ. ಈ ಮಂತ್ರಗಳನ್ನು ಸರಿಯಾಗಿ ಪಠಿಸಿ.


ಸೂರ್ಯ ದೇವರು ಋಗ್ವೇದದಲ್ಲಿ ಉಲ್ಲೇಖಿಸಲಾದ ದೇವತೆಗಳಲ್ಲಿ ಒಬ್ಬ. ಅವನನ್ನು ಅಪೌರುಷೇಯ ಎಂದು ಕರೆಯಲಾಗುತ್ತದೆ, ಅಂದರೆ ಮನುಷ್ಯನಿಂದ ಸೃಷ್ಟಿಯಾಗದವನು. ಅವನು ಸೌರವ್ಯೂಹದ ಮುಖ್ಯಸ್ಥನಾಗಿರುವುದರಿಂದ ಅವನು ತಂದೆಯನ್ನು ಸಂಕೇತಿಸುತ್ತಾನೆ. ಉಳಿದೆಲ್ಲ ಗ್ರಹಗಳು ಅವನನ್ನು ಸುತ್ತುತ್ತವೆ. ಜೊತೆಗೆ, ಆತ್ಮ, ವೈಭವ, ಶಿಕ್ಷಣ, ಜ್ಞಾನ ಮತ್ತು ಖ್ಯಾತಿಯನ್ನು ಪ್ರತಿನಿಧಿಸುತ್ತಾನೆ. ಸೂರ್ಯನಿಲ್ಲದೆ ಭೂಮಿ ಮೇಲೆ ಬದುಕಿಲ್ಲ. ಸೂರ್ಯನು ಶಾಶ್ವತ ಮತ್ತು ಅವನಿಂದ ಪಡೆದ ಶಕ್ತಿಯು ಅಪರಿಮಿತವಾಗಿದೆ. ಸೂರ್ಯದೇವನನ್ನು ಪ್ರಪಂಚದ ಆತ್ಮ ಮತ್ತು ಸಾಧಕ ಎಂದು ಪರಿಗಣಿಸಲಾಗಿದೆ. ರವಿವಾರ ಅವನದು. ಈ ದಿನ ಸೂರ್ಯ ಸ್ಮರಣೆ ಮಾಡಿ ಕೃತಜ್ಞತೆ ಸಲ್ಲಿಸಬೇಕು. ಈ ಮೂಲಕ ಕಣ್ಣಿಗೆ ಕಾಣುವ ಏಕೈಕ ದೇವರಾದ ಆತನ ಆಶೀರ್ವಾದ ಪಡೆಯಲು ಸಾಧ್ಯವಿದೆ. 

ಒಂದು ದಂತಕಥೆಯ ಪ್ರಕಾರ, ಸೂರ್ಯ ದೇವರು(Sun God) ಋಷಿ ಕಶ್ಯಪ ಮತ್ತು ಅದಿತಿಗೆ ಮಾಘ, ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಜನಿಸಿದನು. ಅವನ ಮಲಸಹೋದರನಾದ ಅರುಣನು ಹನ್ನೆರಡು ಚಕ್ರಗಳು ಮತ್ತು ಏಳು ಕುದುರೆಗಳನ್ನು ಹೊಂದಿರುವ ಅವನ ರಥವನ್ನು ಓಡಿಸುತ್ತಾನೆ. ಹನ್ನೆರಡು ಚಕ್ರಗಳು ಸೂರ್ಯನು ವಾರ್ಷಿಕವಾಗಿ ಆವರಿಸುವ ಪ್ರತಿಯೊಂದು ರಾಶಿಚಕ್ರ ಚಿಹ್ನೆಯನ್ನು ಪ್ರತಿನಿಧಿಸುತ್ತವೆ ಮತ್ತು ಏಳು ಕುದುರೆಗಳು ಮಳೆಬಿಲ್ಲಿನ ಏಳು ಬಣ್ಣಗಳನ್ನು ಸಂಕೇತಿಸುತ್ತವೆ. ಮತ್ತು ಇನ್ನೊಂದು ವಿಶ್ಲೇಷಣೆಯ ಪ್ರಕಾರ, ಏಳು ಕುದುರೆಗಳು ವಾರದ ಏಳು ದಿನಗಳನ್ನು ಸೂಚಿಸುತ್ತವೆ.

Tap to resize

Latest Videos

Cinnamon Remedies: ಹಣ ಗಳಿಸೋಕೆ ದಾಲ್ಚೀನಿಯ ಈ 3 ಅದ್ಭುತ ತಂತ್ರ ಬಳಸಿ..

ಭಾನುವಾರದಂದು ಸೂರ್ಯದೇವನನ್ನು ಪೂಜಿಸುವುದರಿಂದ ಯಾರ ಜಾತಕ(Horoscope)ದಲ್ಲಿ ಸೂರ್ಯನ ಸ್ಥಾನವು ಬಲವಾಗಿದೆಯೋ, ಅವನು  ಗೌರವದ ಲಾಭವನ್ನು ಪಡೆಯುತ್ತಾನೆ. ಆ ವ್ಯಕ್ತಿಯ ಭವಿಷ್ಯವು ಸೂರ್ಯನಂತೆ ಹೊಳೆಯುತ್ತದೆ ಮತ್ತು ಅವನು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾನೆ. ಭಾನುವಾರದಂದು ಸೂರ್ಯನನ್ನು ಪೂಜಿಸುವುದರಿಂದ ಸೂರ್ಯ ದೇವರ ಆಶೀರ್ವಾದ ಇರುತ್ತದೆ.

ಭಾನುವಾರದ ಮಂತ್ರಗಳು(Surya Mantras)
ಭಾನುವಾರದಂದು ಕೆಲವು ಮಂತ್ರಗಳನ್ನು ಪಠಿಸುವ ಮೂಲಕ ಸೂರ್ಯ ದೇವರ ಮನಸ್ಸನ್ನು ಸುಲಭವಾಗಿ ಗೆಲ್ಲಬಹುದು. ಭಾನುವಾರದಂದು, ಸೂರ್ಯ ದೇವರಿಗೆ ನೀರನ್ನು ಅರ್ಪಿಸಿದ ನಂತರ, ಸೂರ್ಯ ದೇವರ ಈ ಮಂತ್ರಗಳನ್ನು 108 ಬಾರಿ ಜಪಿಸಬೇಕು. ಸೂರ್ಯನ ಈ ಮಂತ್ರಗಳನ್ನು ಪಠಿಸುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಈ ಮಂತ್ರಗಳನ್ನು ಅತ್ಯಂತ ನಿಖರವಾದ ರೀತಿಯಲ್ಲಿ ಪಠಿಸಬೇಕು ಎಂಬುದನ್ನು ನೆನಪಿನಲ್ಲಿಡಿ.

ನಮಃ ಸೂರ್ಯಾಯ ಶಾಂತಾಯ ಸರ್ವರೋಗ ನಿವಾರಿಣೇ
ಆಯುರಾರೋಗ್ಯಮೈಶ್ವೈರ್ಯಂ ದೇಹಿ ದೇವಃ ಜಗತ್ಪತೇ ॥

Weekly Love Horoscope: ಮೂರನೇ ವ್ಯಕ್ತಿಯಿಂದ ಈ ರಾಶಿಯ ಪ್ರೇಮಜೀವನದಲ್ಲಿ ಬಿರುಗಾಳಿ!

ಸೂರ್ಯ ಗಾಯತ್ರಿ ಮಂತ್ರ
ಓಂ ಭಾಸ್ಕರಾಯ ವಿದ್ಮಹೇ ಮಹಾದುತ್ಯಾತಿಕರಾಯ ಧೀಮಹೇ ತನ್ನೋ ಆದಿತ್ಯ ಪ್ರಚೋದಯಾತ್||
ಓಂ ಭಾಸ್ಕರಾಯ ವಿದ್ಮಹೇ ಮಹಾದುತ್ಯತಿಕರಾಯ ಪರಮ ಪುರುಷ
ಓಂ ಸಪ್ತ-ತುರಂಗಾಯ ವಿದ್ಮಹೇ ಸಹಸ್ರ-ಕಿರಣಾಯ ವಿದ್ಮಹೇ ರವಿಃ ಪ್ರಚೋದಯಾತ್||
ಓಂ ಸಪ್ತ ತುರಂಗಾಯ ವಿಧ್ಮಹೇ ಸಹಸ್ರ ಕೀರ್ಣಯ ಧೀಮಹಿ ತನ್ನೋ ರವಿ ಪ್ರಚೋದಯಾತ್||

ಓಂ ಐಹಿ ಸೂರ್ಯ ಸಹಸ್ರಾಂಶೋಂ ತೇಜೋ ರಾಶಿ ಜಗತ್ಪತೇ, ಅನುಕಂಪಯಾಮ ಭಕ್ತ್ಯಾ, ಗೃಹಾಣಾರ್ಘ್ಯ ದಿವಾಕರಃ
ಹ್ರೀಂ ಘೃಣಿಃ ಸೂರ್ಯ ಆದಿತ್ಯಃ ಕ್ಲೀಂ
ಓಂ ಹ್ರೀಂ ಹ್ರೀಂ ಸೂರ್ಯಾಯ ನಮಃ
ಓಂ ಸೂರ್ಯಾಯ ನಮಃ
ಓಂ ಭಾಸ್ಕರಾಯೈ ನಮಃ
ಓಂ ಅರ್ಕೇ ನಮಃ
ಓಂ ಸವಿತ್ರೇ ನಮಃ

click me!